ಪರಿಸರ ಪ್ರೇಮ ಮೆರೆದ ಕನ್ನಡದ ನಟಿ ನಮ್ರತಾ ಗೌಡ: ಕುಟುಂಬದೊಂದಿಗೆ ಅಗ್ಗದ ಎಂಜಿ ಕಾಮೆಟ್ ಇವಿ ಖರೀದಿ
ಕನ್ನಡದ 'ನಾಗಿಣಿ 2' ಸೀರಿಯಲ್‌ನಲ್ಲಿ ನಟಿಸುವ ಮೂಲಕ ನಟಿ ನಮ್ರತಾ ಗೌಡ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಗ್ ಬಾಸ್ ಸೀಸನ್ 10ರಲ್ಲಿ ಕಾಣಿಕೊಂಡ ಬಳಿಕ, ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಸದ್ಯ, ಹುಟ್ಟುಹಬ್ಬದ ಸೆಲೆಬ್ರೇಷನ್ ಮೋಡ್‌ನಲ್ಲಿರುವ ನಮ್ರತಾ ಹೊಚ್ಚ ಹೊಸ ಎಂಜಿ ಕಾಮೆಟ್ ಇವಿಯನ್ನು ಖರೀದಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಟಿ ನಮ್ರತಾ ಗೌಡ (Namratha Gowda) ಫೋಟೋಗಳನ್ನು ಹಂಚಿಕೊಂಡಿದ್ದು, ಕುಟುಂಬದೊಂದಿಗೆ ನೂತನ ಕಾರನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವುದನ್ನು ನೋಡಬಹುದು. ನಮ್ರತಾರ ಈ ಪೋಸ್ಟ್ 73 ಸಾವಿರಕ್ಕೂ ಹೆಚ್ಚಿನ ಲೈಕ್ ಪಡೆದುಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅವರು ಎಂಜಿ ಕಾಮೆಟ್ ಇವಿ (MG Comet EV)ಯ ಯಾವ ರೂಪಾಂತರವನ್ನು ಕೊಂಡುಕೊಂಡಿದ್ದಾರೆ ಎನ್ನುವುದರ ಕುರಿತು ಹೆಚ್ಚಿನ ವಿವರಗಳಿಲ್ಲ.

ಭಾರತದ ಮಾರುಕಟ್ಟೆಯಲ್ಲಿ ಎಂಜಿ ಕಾಮೆಟ್ ಇವಿ ರೂ.6.99 ಲಕ್ಷದಿಂದ ರೂ.9.24 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಎಕ್ಸಿಕ್ಯೂಟಿವ್, ಎಕ್ಸೈಟ್ ಮತ್ತು ಎಕ್ಸ್‌ಕ್ಲೂಸಿವ್ ಎಂಬ ಮೂರು ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. ವಿನ್ಯಾಸದ ವಿಚಾರದಲ್ಲೂ ಈ ಕಾರು ಅತ್ಯುತ್ತಮವಾಗಿದೆ. ಅರೋರಾ ಸಿಲ್ವರ್, ಕ್ಯಾಂಡಿ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ. ಜೊತೆಗೆ 2-ಡೋರ್ (ಬಾಗಿಲು) ಪಡೆದಿದ್ದು, 4 ಮಂದಿ ಪ್ರಯಾಣಿಸಬಹುದು.
ನೂತನ ಎಂಜಿ ಕಾಮೆಟ್ ಇವಿ (MG Comet EV), 17.3 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಪಡೆದಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರ್, 42 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 110 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್ ನಲ್ಲಿ 230 ಕಿ.ಮೀ ಓಡುತ್ತದೆ.

ಈ ಕಾರು ಸಣ್ಣದಾಗಿದ್ದು, ಪಾರ್ಕಿಂಗ್ ಮಾಡಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ. ಇದು 3.3 ಕೆಡಬ್ಲ್ಯೂ ಚಾರ್ಜರ್ ಉಪಯೋಗ ಮಾಡಿದಾಗ 0 - 100% ಬ್ಯಾಟರಿ ಚಾರ್ಜ್ ಆಗಲು ಬರೋಬ್ಬರಿ 7 ಗಂಟೆ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 7.4 ಕೆಡಬ್ಲ್ಯೂ ಚಾರ್ಜರ್ ಬಳಕೆಯಲ್ಲಿ 0 - 100% ಬ್ಯಾಟರಿ ಚಾರ್ಜ್ ಆಗುವುದಕ್ಕೆ ಕೇವಲ 3.5 ಗಂಟೆ ಸಾಕು.
ಹೊಸ ಎಂಜಿ ಕಾಮೆಟ್ ಇವಿ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಡುಯಲ್ 10.25-ಇಂಚಿನ ಸ್ಕ್ರೀನ್ (ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್), ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 55 ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಟೆಕ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆಗೂ ಎಂಜಿ ಕಾಮೆಟ್ ಇವಿ (MG Comet EV) ಹೆಸರುವಾಸಿಯಾಗಿದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್, ರೇರ್ ಡಿಸ್ಕ್ ಬ್ರೇಕ್ಸ್, ಹೋಲ್ಡ್ ಅಸಿಸ್ಟ್ ಅನ್ನು ಪಡೆದಿದೆ. ಈ ಕಾರಿಗೆ ಟಾಟಾ ಟಿಯಾಗೊ ಇವಿ ಹಾಗೂ ಸಿಟ್ರಸ್ ಇಸಿ3 ಕಾರುಗಳು ಪ್ರಬಲ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








