ಹೊಸ ಕಾರು ಖರೀದಿಸಿ ತನ್ನ ಪುಟ್ಟ ಆನೆ ಎಂದ ಚಂದನ್ ಶೆಟ್ಟಿ: ಸೊಂಡಿಲು ಎಲ್ಲಿ ಕೇಳಿ ಕಾಲೆಳೆದ ಕಿರಿಕ್ ಕೀರ್ತಿ!

ನಾಲ್ಕು ವರ್ಷದ ಮದುವೆ ಬಂದಕ್ಕೆ ಈ ವರ್ಷದ ಮಧ್ಯದದಲ್ಲಿ ಚಂದನ್‌ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ ಈ ವರ್ಷ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಕೊನೆ ಮಾಡಿದ್ದರು. ಇಬ್ಬರೂ ವಿಚ್ಛೇದನ ಪಡೆದುಕೊಳ್ಳುವ ಮುನ್ನ ಕ್ಯಾಂಡಿಕ್ರಶ್‌ ಹೆಸರಿನ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಇದರ ಚಿತ್ರೀಕರಣ ಕೂಡ ಮುಗಿದು, ಬಿಡುಗಡೆಯಾಗುವ ಸನಿಹದಲ್ಲಿದ್ದಾಗ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದು ಸುದ್ದಿಯಾಗಿತ್ತು. ಈಗ ಸಿನಿಮಾ ತಂಡ ಚಿತ್ರದ ಹೆಸರನ್ನೇ ಬದಲಾವಣೆ ಮಾಡುವ ನಿರ್ಧಾರ ಮಾಡಿದೆ. ಕ್ಯಾಂಡಿಕ್ರಶ್‌ ಎನ್ನುವ ಬದಲಿಗೆ ಸಿನಿಮಾಗೆ 'ಮುದ್ದುರಾಕ್ಷಸಿ' ಎನ್ನುವ ಹೆಸರನ್ನು ನೀಡಿದೆ.

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಕೂಡ ಸಿನಿಮಾದ ಪೋಸ್ಟರ್‌ಗಳನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ. ಈ ನಡುವೆ ಚಂದನ್ ಶೆಟ್ಟಿ ಅವರು ಹೊಸ ಟೊಯೊಟಾ ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ತನ್ನ ಹೊಸ ಕಾರಿನ ಜೊತೆ ಪೋಸ್ ಕೊಟ್ಟಿರುವ ಪೋಟೋವನ್ನು ಚಂದನ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಇದು ನನ್ನ ಸಣ್ಣ ಆನೆಯ ಮೊದಲ ಚಿತ್ರ ಎಂದು ಬರೆದುಕೊಂಡಿದ್ದಾರೆ.

Kannada Rapper Chandan Shetty

ಚಂದನ್‌ ಶೆಟ್ಟಿ ಹೊಸ ಕಾರಿನ ನಂಬರ್ KA 04NC 1414 ಆಗಿದೆ. ಅವರ ಮಾಡಿದ ಪೋಸ್ಟ್ ಕೆಳಕಡೆ ಹಲವರು ಅಭಿನಂದನೆಗಳು ಸಲ್ಲಿಸಿ ಕಾಮೆಂಟ್ ಮಾಡಿದ್ದಾರೆ. ಚಂದನ್ ಶೆಟ್ಟಿ ಸ್ನೇಹಿತ ಕಿರಿಕ್ ಕೀರ್ತಿ ಅವರು ಸೊಂಡಿಲು ಎಲ್ಲಿ ಬ್ರೋ‌..? ಎಂದು ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ. ಚಂದನ್ ಶೆಟ್ಟಿ ಅವರು ಖರೀದಿಸಿದ ಟೊಯೊಟಾ ಫಾರ್ಚುನರ್ ಲೆಜೆಂಡರ್ (Toyota Fortuner Legender) ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.43.66 ಲಕ್ಷದಿಂದ ರೂ.47.64 ಲಕ್ಷದವರೆಗೆ ಬೆಲೆಯಿದೆ.

ಜನಪ್ರಿಯ ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಟಾಪ್ ವೆರಿಯೆಂಟ್ ಲೆಜೆಂಡರ್ ಆಗಿದೆ. ಫಾರ್ಚುನರ್ ಲೆಜೆಂಡರ್ 4X4 ವೆರಿಯೆಂಟ್ ಡ್ಯುಯಲ್ ಟೋನ್ ಪರ್ಲ್ ವೈಟ್ ಜೊತೆಗೆ ಬ್ಲಾಕ್ ರೂಫ್ ಕಲರ್ ಸ್ಕೀಮ್ ನಲ್ಲಿ ನೀಡಲಾಗುತ್ತಿದೆ. ಟೊಯೊಟಾ ಫಾರ್ಚುನರ್ ಲೆಜೆಂಡರ್ 4X2 ಮಾದರಿಗೆ ಹೋಲಿಸಿದರೆ 4X4 ವೆರಿಯೆಂಟ್ ಯಾವುದೇ ವಿಶೇಷ ಬಾಹ್ಯ ಬಿಟ್‌ಗಳನ್ನು ಪಡೆಯುವುದಿಲ್ಲ. ಫಾರ್ಚುನರ್ ಲೆಜೆಂಡರ್ ಎಸ್‍ಯುವಿಯು ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ.

ಈ ಎಸ್‍ಯುವಿ ಹೆಡ್‌ಲ್ಯಾಂಪ್‌ಗಳ ಕೆಳಗೆ ಫಾಗ್ ಲ್ಯಾಂಪ್ ಗಳಿವೆ. ಇನ್ನು ಡೈನಾಮಿಕ್ ಟರ್ನ್ ಸಿಗ್ನಲ್ ಇಂಡೀಕೆಟರ್ ಗಳಿವೆ. ಫಾರ್ಚೂನರ್ ಲೆಜೆಂಡರ್ ಸುತ್ತಲೂ ಎಲ್ಇಡಿ ಲೈಟಿಂಗ್ ಹೊಂದಿದೆ. ಇನ್ನು ಇದರ ಸೈಡ್ ಪ್ರೊಫೈಲ್‌ ಬಗ್ಗೆ ಹೇಳುವುದಾದರೆ, ಇದರಲ್ಲಿ 18 ಇಂಚಿನ ಮೆಷಿನ್-ಕಟ್ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ. ಇನ್ನು ಡೋರಿನ ಹ್ಯಾಂಡಲ್‌ಗಳಲ್ಲಿ ಕೆಲವು ಕ್ರೋಮ್ ಇದೆ ಮತ್ತು ಉದ್ದಕ್ಕೂ ಸ್ಟ್ರಿಪ್ ಅನ್ನು ಸಹ ಕ್ರೋಮ್‌ನಿಂದ ಮಾಡಲಾಗಿದೆ.

ಇನ್ನು ಈ ಲೆಜೆಂಡರ್ ವೆರಿಯೆಂಟ್ ಮಾದರಿಯ ಹಿಂಭಾಗದಲ್ಲಿ ನಯವಾದ-ಕಾಣುವ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಅದನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದು ಬ್ಲ್ಯಾಕ್ ಸ್ಟ್ರಿಪ್ ಸಹ ಪಡೆಯುತ್ತದೆ, ಅದು ಎರಡೂ ಟೈಲ್ ಲೈಟ್‌ಗಳನ್ನು ಅದರ ಉದ್ದಕ್ಕೂ 'ಫೋರ್ಟೂನರ್' ಬ್ರ್ಯಾಂಡಿಂಗ್‌ನೊಂದಿಗೆ ಸಂಪರ್ಕಗೊಂಡಿದೆ.

ಲೆಜೆಂಡರ್ ವೆರಿಯೆಂಟ್ ಒಳಭಾಗದಲ್ಲಿಯು ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ. ಫಾರ್ಚೂನರ್ ಲೆಜೆಂಡರ್ ಇಂಟಿರಿಯರ್ ಅಥವಾ ಒಳಭಾಗದಲ್ಲಿ ಡ್ಯುಯಲ್-ಟೋನ್ (ಬ್ಲ್ಯಾಕ್ ಮತ್ತು ಮರೂನ್) ಅಂಶಗಳನ್ನು ಹೊಂದಿದೆ, ಇದರಲ್ಲಿ ಸುತ್ತಲೂ ವೈಟ್ ಅಬೈಂಡ್ ಲೈಟ್ ಅನ್ನು ಹೊಂದಿದೆ. ಇದರೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಒಳಗೊಂಡಿರುವ ದೊಡ್ಡ ಇನ್ಫೋಟೈನ್ಮೆಂಟ್ ಸಿಸ್ಟಂ ಹೊಂದಿದೆ.

ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ನಲ್ಲಿ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬ್ರೇಕ್ ಅಸಿಸ್ಟ್, 360 ಡಿಗ್ರಿ ಕ್ಯಾಮೆರಾ, ಸ್ಟೆಬಿಲಿಟಿ ಕಂಟ್ರೋಲ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಮೌಂಟಡ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ (ಆಟೋ ಎಮರ್ಜೆನ್ಸಿ ಅನ್‌ಲಾಕ್‌) ಮತ್ತು ಎಮರ್ಜನ್ಸಿ ಬ್ರೇಕ್ ಸಿಗ್ನಲ್‌ನಂತಹ ಸಾಕಷ್ಟು ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

More from DriveSpark

Article Published On: Tuesday, September 3, 2024, 13:39 [IST]
English summary
Kannada rapper chandan shetty buys toyota fortuner legender
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+