ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಗಸ್ತು ನಿರ್ವಹಣೆಗಾಗಿ ಅತ್ಯುತ್ತಮ ಆಫ್ ರೋಡ್ ಸಾಮರ್ಥ್ಯದ ಕಾರುಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಇಲಾಖೆ ಇತ್ತೀಚೆಗೆ ಗಸ್ತು ನಿರ್ವಹಣೆಯ ಉದ್ದೇಶಕ್ಕಾಗಿ ಫೋರ್ಸ್ ನಿರ್ಮಾಣದ ಹೊಸ ಗೂರ್ಖಾ ಎಸ್‌ಯುವಿ ಮಾದರಿಗಳನ್ನು ಖರೀದಿಸಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಹೊಸ ಫೋರ್ಸ್ ಗೂರ್ಖಾ ಆಫ್ ರೋಡ್ ಎಸ್‌ಯುವಿಗಳನ್ನು ಅರಣ್ಯ ಇಲಾಖೆಯು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಅರಣ್ಯ ವಿಭಾಗಕ್ಕೆ ಸೇರ್ಪಡೆ ಮಾಡಿದ್ದು, ಸದ್ಯ ಐದು ಹೊಸ ಫೋರ್ಸ್ ಗೂರ್ಖಾ ಕಾರುಗಳನ್ನು ಹಸ್ತಾಂತರ ಮಾಡಲಾಗಿದೆ. ಗೂರ್ಖಾ ಕಬ್ ಇಂಡಿಯಾ ಫೇಸ್‌ಬುಕ್ ಗ್ರೂಪ್‌ನಲ್ಲಿ ಹೊಸ ಕಾರು ವಿತರಣೆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನುಷ್ಟು ಹೊಸ ಕಾರುಗಳು ವಿತರಣೆಯಾಗುವ ಸಾಧ್ಯತೆಗಳಿವೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಅರಣ್ಯ ಪ್ರದೇಶಗಳಲ್ಲಿ ಗಸ್ತು ನಿರ್ವಹಣೆಗಾಗಿ ಮಾರುತಿ ಜಿಪ್ಸಿ, ಮಹೀಂದ್ರಾ ಥಾರ್, ಮಹೀಂದ್ರಾ ಬೊಲೆರೊದಂತಹ ಮಾದರಿಗಳನ್ನು ಬಳಸುತ್ತಿದ್ದ ಅರಣ್ಯ ಇಲಾಖೆಯು ಇದೀಗ ಹೊಸ ತಲೆಮಾರಿನ ಫೋರ್ಸ್ ಗೂರ್ಖಾ ಮಾದರಿಯನ್ನು ಗಸ್ತು ನಿರ್ವಹಣೆಗಾಗಿ ಆಯ್ಕೆ ಮಾಡಿಕೊಂಡಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಹೊಸ ಗೂರ್ಖಾ ಆಫ್ ರೋಡ್ ಎಸ್‌ಯುವಿ ಮಾದರಿಯು ಮಹೀಂದ್ರಾ ಥಾರ್ ಮಾದರಿಗೆ ಪೈಪೋಟಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಮಾದರಿಯು ಆಫ್ ರೋಡ್ ಗಸ್ತು ನಿರ್ವಹಣೆ ಅತ್ಯತ್ತಮ ಎಸ್‌ಯುವಿ ಮಾದರಿಯಾಗಲಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ನ್ಯೂ ಜನರೇಷನ್ ಫೋರ್ಸ್ ಗೂರ್ಖಾ ಆಫ್ ರೋಡ್ ಪ್ರಿಯರ ಮೆಚ್ಚುಗೆಗೆ ಕಾರಣವಾಗಿದ್ದು, ಇದೀಗ ರಾಜ್ಯ ಅರಣ್ಯ ಇಲಾಖೆಯು ಹೊಸ ಗೂರ್ಖಾ ಆಯ್ಕೆ ಮಾಡಿಕೊಳ್ಳುವ ಮೂಲಕ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಗಳನ್ನು ಸೇರ್ಪಡೆಗೊಳಿಸುವ ಸುಳಿವು ನೀಡಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಹೊಸ ಗೂರ್ಖಾ ಎಸ್‌ಯುವಿಯು 4X4 ಡ್ರೈವ್ ತಂತ್ರಜ್ಞಾನದೊಂದಿಗೆ ಸುಮಾರು 35-ಡಿಗ್ರಿ ಗ್ರೇಡ್‌ಬಿಲಿಟಿ, ಮುಂಭಾಗ ಮತ್ತು ಹಿಂಭಾಗದ ಯಾಂತ್ರಿಕವಾಗಿ ಡಿಫರೆನ್ಷಿಯಲ್ ಲಾಕ್‌ಗಳು ಮತ್ತು 700ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯದೊಂದಿಗೆ ಅತ್ಯುತ್ತಮ ಆಫ್ ರೋಡ್ ಮಾದರಿಯಾಗಿ ಹೊರಹೊಮ್ಮಿದ್ದು, ಕಠಿಣ ಭೂ ಪ್ರದೇಶಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಎಸ್‌ಯುವಿ ಮಾದರಿಯಾಗಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಸದ್ಯ ಮಾರುಕಟ್ಟೆಯಲ್ಲಿ ಒಂದೇ ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿರುವ ಹೊಸ ಫೋರ್ಸ್ ಗೂರ್ಖಾ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 14.49 ಲಕ್ಷ ಬೆಲೆ ಹೊಂದಿದ್ದು, ತ್ರಿ ಡೋರ್ ಸೌಲಭ್ಯ ಹೊಂದಿರುವ ಹೊಸ ಮಾದರಿಯು ವಿಶೇಷವಾಗಿ ಆಫ್ ರೋಡ್ ಪ್ರಯಾಣಕ್ಕಾಗಿಯೇ ಸಿದ್ದಗೊಂಡಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ನವೀಕರಣಗೊಂಡಿರುವ ಹೊಸ ತಲೆಮಾರಿನ ಗೂರ್ಖಾ ಕಾರು ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿದ್ದು, ಎಲ್ಇಡಿ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್, ಬ್ಲ್ಯಾಕ್ ಔಟ್ ಫ್ರಂಟ್ ಬಂಪರ್, ಎಂಜಿನ್ ಬಾಷ್ ಪ್ಲೇಟ್, ಫಾಗ್ ಲ್ಯಾಂಪ್, ಬಾಡಿ ಕ್ಲ್ಯಾಡಿಂಗ್, ಸ್ನೋರ್ಕಲ್ ಸೌಲಭ್ಯವಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಗೂರ್ಖಾ ಕಾರಿನ ಕ್ಯಾಬಿನ್ ಕೂಡಾ ಆಕರ್ಷಕವಾಗಿದ್ದು, ಡ್ಯಾಶ್‌ಬೋರ್ಡ್‌ನಲ್ಲಿ ಈ ಬಾರಿ ಸೆಂಟ್ರಲ್ 7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹೊಸದಾದ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಮಲ್ಟಿ ಇನ್‌ಫಾರ್ಮೆಷನ್ ಡಿಸ್‌ಪ್ಲೇ, ಪ್ರತ್ಯೇಕವಾದ ಆಸನ ಸೌಲಭ್ಯಗಳು, ಮ್ಯಾನುವಲ್ ಎಸಿ ವೆಂಟ್ಸ್ , 12V ಚಾರ್ಜಿಂಗ್ ಸಾಕೆಟ್ ಮತ್ತು ಡ್ಯುಯಲ್ ಯುಎಸ್‌ಬಿ ಸಾಕೆಟ್ ನೀಡಲಾಗಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಫೋರ್ಸ್ ಮೋಟಾರ್ಸ್ ಕಂಪನಿಯು ಕಾರು ಆಫ್ ರೋಡ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಿದ್ದು, ಚಾರ್ಸಿ ಬದಲಾವಣೆ ಸೇರಿದಂತೆ ಹಲವು ಸ್ಟ್ಯಾಂಡರ್ಡ್ ಸೆಫ್ಟಿ ಫೀಚರ್ಸ್‌ಗಳನ್ನು ಹೊಸ ಕಾರಿನಲ್ಲಿ ಸೇರ್ಪಡೆ ಮಾಡಲಾಗಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಕಾರಿನ ಸ್ಪೋರ್ಟಿ ಸ್ಟೈಲ್ ಹೆಚ್ಚಿಸುವುದಕ್ಕಾಗಿ 16-ಇಂಚಿನ ಅಲಾಯ್ ವೀಲ್ಹ್, 245/70 ವಿನ್ಯಾಸದ ಟೈರ್ ನೀಡಲಾಗಿದ್ದು, ಹೊಸ ಕಾರು ಆಫ್-ರೋಡ್ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಥಾರ್ ಮಾದರಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಹೊಸ ಗೂರ್ಖಾ ಆವೃತ್ತಿಯು 4116 ಎಂಎಂ ಉದ್ದ, 1812 ಎಂಎಂ ಎತ್ತರ, 2400 ವ್ಹೀಲ್ ಬೆಸ್ ಮತ್ತು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಕಾರು ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಖರೀದಿಸಬಹುದಾಗಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ನ್ಯೂ ಜನರೇಷನ್ ಗೂರ್ಖಾ ಆಫ್-ರೋಡ್ ಎಸ್‌ಯುವಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 2.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, ಇದು 90 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಸ್ಟ್ಯಾಂಡರ್ಡ್ ಆಗಿ 4X4 ಡ್ರೈವ್ ಟೆಕ್ನಾಲಜಿ ಬಳಕೆ ಮಾಡುತ್ತದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಫೋರ್ಸ್ ಮೋಟಾರ್ಸ್ ಕಂಪನಿಯು ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಕ್ಸೆಸರಿಸ್‌ಗಳನ್ನು ಹೊರತುಪಡಿಸಿ ಆಸಕ್ತ ಗ್ರಾಹಕರಿಗೆ ಹೆಚ್ಚುವರಿ ಮೌಲ್ಯದ ಆಕ್ಸೆಸರಿಸ್ ಪ್ಯಾಕೇಜ್ ಆಯ್ಕೆ ಸಹ ನೀಡಲಿದ್ದು, ಹೆಚ್ಚುವರಿ ಆಕ್ಸೆಸರಿಸ್‌ನಲ್ಲಿ ವಿಂಡ್ ಸ್ಕೀನ್ ಬಾರ್, ರೂಫ್ ಕ್ಯಾರಿಯರ್, ರಿಯರ್ ರ್ಯಾಡರ್, ಅಲಾಯ್ ವೀಲ್ಹ್ ಮತ್ತು ರಿಯರ್ ಸೈಡ್ ಫೇಸಿಂಗ್ ಚೈಲ್ಡ್ ಸೀಟ್ ಜೋಡಣೆ ಮಾಡಬಹುದಾಗಿದೆ.

ಗಸ್ತು ನಿರ್ವಹಣೆಗಾಗಿ ಫೋರ್ಸ್ ಗೂರ್ಖಾ ಆಫ್ ರೋಡ್ ಕಾರುಗಳನ್ನು ಖರೀದಿಸಿದ ರಾಜ್ಯ ಅರಣ್ಯ ಇಲಾಖೆ

ಇದರೊಂದಿಗೆ ಹೊಸ ಕಾರು ರೆಡ್, ಗ್ರಿನ್, ವೈಟ್, ಆರೇಂಜ್, ಗ್ರೆ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಕಾರಿನ ಸ್ಪೋರ್ಟಿ ವಿನ್ಯಾಸ ಮತ್ತು ಪ್ರೀಮಿಯಂ ಫೀಚರ್ಸ್‌ಗಳು ಆಫ್ ರೋಡ್ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿವೆ.

Most Read Articles

Kannada
English summary
Karanataka state forest department has taken delivery of five force gurkha suvs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X