ನಿಯೋಜಿತ ಸಿಎಂ ಸಿದ್ದು ಹೊಸ ಕಾರು 1 ಕೋಟಿ ಬೆಲೆಯ 'Toyota ವೆಲ್‌ಫೈರ್': ಅಂತಹದ್ದೇನು ವಿಶೇಷತೆ?
ಕರ್ನಾಟಕದ 33ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದು, ಈಗಾಗಲೇ ಭರದಿಂದ ಸಿದ್ಧತೆ ನಡೆದಿದೆ. ಇದೀಗ, ಅವರು ಬಳಕೆ ಮಾಡಲಿದ್ದಾರೆ ಎನ್ನಲಾಗಿರುವ ಸುಮಾರು ರೂ.1 ಕೋಟಿ ಬೆಲೆಯ ಟೊಯೊಟಾ ವೆಲ್‌ಫೈರ್ ಕಾರು ಭಾರೀ ಕ್ರೇಜ್ ಸೃಷ್ಟಿಸುತ್ತಿದೆ. ಆ ಕುರಿತ ವಿಡಿಯೋಗಳು ಇಂಟರ್ನೆಟ್ ನಲ್ಲಿ ಹರಿದಾಡುತ್ತಿವೆ.
ಮುಖ್ಯಮಂತ್ರಿ ಅಥವಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮೇಲೆಯೇ ಅವರಿಗೆ ಅಧಿಕೃತ ಸರ್ಕಾರಿ ವಾಹನ ದೊರೆಯುತ್ತದೆ. ನಾಳೆ ಸಿದ್ದರಾಮಯ್ಯ ಅವರ ಪ್ರತಿಜ್ಞಾ ವಿಧಿ ಸಮಾರಂಭವಿದ್ದು, ಅದಕ್ಕೂ ಮೊದಲೇ ಈ ಕಾರು, ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹಲವಾರು ನೂತನ ಟೊಯೊಟಾ ವೆಲ್‌ಫೈರ್ ಎಂಪಿವಿಯನ್ನು ಅವರೇ ಕೊಂಡುಕೊಂಡಿರಬಹುದು. ಇಲ್ಲವೇ ಉಡುಗೊರೆಯಾಗಿ ಬಂದಿರಬಹುದು ಎನ್ನುತ್ತಿದ್ದಾರೆ. ಮತ್ತೊಂದು ಮಾಹಿತಿ ಪ್ರಕಾರ, ಸರ್ಕಾರವೇ ಖರೀದಿಸಿದೆಯಂತೆ. ಆ ಬಗ್ಗೆ ಸ್ಪಷ್ಟ ವಿವರ ಲಭ್ಯವಾಗಿಲ್ಲ.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ವೆಲ್‌ಫೈರ್ (Toyota vellfire) ಎಂಪಿವಿ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2.5 ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 180 PS ಗರಿಷ್ಠ ಪವರ್ ಹಾಗೂ 235 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ CVT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಏಳು ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, FWD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಸುರಕ್ಷತೆ ದೃಷ್ಟಿಯಿಂದ ಜಪಾನ್ NCAP ನಡೆಸುವ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. 7 ಏರ್‌ಬ್ಯಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ.
ಟೊಯೊಟಾ ವೆಲ್‌ಫೈರ್ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಇದು, ಈ ಕಾರಿನಲ್ಲಿ ಪ್ರಯಾಣಿಸುವವರಿಗೆ ಸುಖಕರ ಪ್ರಯಾಣವನ್ನು ಒದಗಿಸುತ್ತದೆ. ಪ್ರಮುಖವಾಗಿ ಟ್ವಿನ್ ಸನ್‌ರೂಫ್, 3 ಜೋನ್ ಕ್ಲೇಮೇಟ್ ಕಂಟ್ರೋಲ್, 17-ಸ್ಪೀಕರ್ JBL ಸೌಂಡ್ ಸಿಸ್ಟಮ್ ಮತ್ತು ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಮರ್ಸಿಡಿಸ್ Benz V-ಕ್ಲಾಸ್ ಪ್ರತಿಸ್ಪರ್ಧಿಯಾಗಿದೆ.
ಮುಖ್ಯಮಂತ್ರಿಯಾಗಿ ಹೆಸರು ಘೋಷಣೆಯಾದ ಬಳಿಕ ಸಿದ್ದರಾಮಯ್ಯ, ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ವಾಪಾಸ್ ಆದಾಗ ವಿಮಾನ ನಿಲ್ದಾಣದಿಂದ ಅವರ ಮನೆವರೆಗೆ ಅಲ್ಲಿಂದ ಕಾಂಗ್ರೆಸ್ ಕಚೇರಿವರೆಗೆ ಶಾಸಕ ಬೈರತಿ ಸುರೇಶ್ ಅವರ ದುಬಾರಿ ಬೆಲೆಯ ಹಾಗೂ ಐಷಾರಾಮಿ ಮರ್ಸಿಡಿಸ್ ಜಿ ವ್ಯಾಗನ್ ಕಾರಿನಲ್ಲಿ ತೆರಳಿದರು. ಸ್ವತಃ ಶಾಸಕರೇ ಕಾರನ್ನು ಡ್ರೈವ್ ಮಾಡುತ್ತಿದ್ದರು. ದಾರಿಯುದ್ದಕ್ಕೂ ಅಭಿಮಾನಿಗಳಿಂದ ದೊಡ್ಡ ಮಟ್ಟದ ಸ್ವಾಗತ ದೊರೆಯಿತು.
ಮರ್ಸಿಡಿಸ್ ಜಿ ವ್ಯಾಗನ್ ರೂ.1.72 - 2.55 ಕೋಟಿ ಬೆಲೆಯನ್ನು ಹೊಂದಿದ್ದು, ಸಾಕಷ್ಟು ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದಿದೆ. ಇನ್ನು, 2019ರಲ್ಲಿ ಇದೇ ಬೈರತಿ ಸುರೇಶ್, ಸಿದ್ದರಾಮಯ್ಯ ಅವರಿಗೆ ಒಂದೂವರೆ ಕೋಟಿ ಬೆಲೆಯ ಮರ್ಸಿಡಿಸ್ ಬೆಂಜ್ ಕಾರು ಉಡುಗೊರೆಯಾಗಿ ನೀಡಿದರು. ಅದಕ್ಕೂ ಮೊದಲು 2018ರ ಜೂನ್‌ನಲ್ಲಿ ಬೆಂಗಳೂರು ನಗರದ ಶಾಸಕ ಕೆ.ಜೆ.ಜಾರ್ಜ್ ಟೊಯೊಟಾ ಲ್ಯಾಂಡ್ ಕ್ರೂಸರ್ ಗಿಫ್ಟ್ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.


Click it and Unblock the Notifications