ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಭಾರತದ ರಸ್ತೆಗಳಲ್ಲಿ ಗುಂಡಿಗಳು ಕಾಮನ್. ಗುಂಡಿಗಳು ಇಲ್ಲದಿದ್ದರೇ ಅದೇ ದೊಡ್ಡ ವಿಷಯ. ನಮ್ಮ ಬೆಂಗಳೂರು ಸಹ ರಸ್ತೆ ಗುಂಡಿಗಳಿಂದ ಹೊರತಾಗಿಲ್ಲ. ರಸ್ತೆ ಗುಂಡಿಯಲ್ಲಿ ಬಿದ್ದು ಹಲವು ಸಾರ್ವಜನಿಕರು ಪ್ರಾಣ ಕಳೆದು ಕೊಂಡ ಘಟನೆಗಳು ಈ ಹಿಂದೆ ವರದಿಯಾಗಿದ್ದವು.

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಕರ್ನಾಟಕ ಹೈಕೋರ್ಟ್ ಇತ್ತೀಚಿಗೆ ಬೆಂಗಳೂರಿನ ರಸ್ತೆಗಳಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿ‍‍ಬಿ‍ಎಂಪಿಗೆ ಗಡುವು ನೀಡಿತ್ತು. ಬಿ‍‍ಬಿ‍ಎಂಪಿಯವರೂ ಸಹ ಈಗಾಗಲೇ ಹಲವೆಡೆ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ರಸ್ತೆ ಗುಂಡಿಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಯುವ ದಂಪತಿಗಳು ಗುಂಡಿ ಬಿದ್ದ ರಸ್ತೆಗಳಲ್ಲಿಯೇ ಫೋಟೊ ಶೂಟ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ಈ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಯುವ ದಂಪತಿಗಳ ಈ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ರಸ್ತೆ ಅಪಘಾತಗಳು ಕೇವಲ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದರಿಂದ ಮಾತ್ರವೇ ಉಂಟಾಗುವುದಿಲ್ಲ.

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಕೆಟ್ಟ ರಸ್ತೆಗಳು ಹಾಗೂ ರಸ್ತೆ ಗುಂಡಿಗಳಿಂದಲೂ ಉಂಟಾಗುತ್ತವೆ. ಕೆಲ ಪ್ರದೇಶಗಳಲ್ಲಿರುವ ಹದಗೆಟ್ಟ ರಸ್ತೆಗಳಿಂದ ಯಾವುದೇ ತೊಂದರೆಯಾಗದಿದ್ದರೂ, ಬೇರೆ ಪ್ರದೇಶಗಳಲ್ಲಿರುವ ಹದಗೆಟ್ಟ ರಸ್ತೆಗಳು ಜನರ ಜೀವನವನ್ನು ನರಕವನ್ನಾಗಿಸುತ್ತವೆ.

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವುದು ಸರ್ಕಾರದ ಹಾಗೂ ಸಂಬಂಧಪಟ್ಟ ಪ್ರಾಧಿಕಾರದ ಜವಾಬ್ದಾರಿಯಾಗಿದೆ. ಆದರೆ ಸಂಬಂಧಪಟ್ಟವರು ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರಣಕ್ಕೆ ಸಾರ್ವಜನಿಕರೇ ಸಂಬಂಧಪಟ್ಟವರ ಗಮನ ಸೆಳೆಯಲು ನಾನಾ ರೀತಿಯ ತಂತ್ರಕ್ಕೆ ಮೊರೆ ಹೋಗುತ್ತಾರೆ.

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಬೆಂಗಳೂರಿನಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಗಮನ ಸೆಳೆಯಲು ಅಂತರಿಕ್ಷಾ ಯಾತ್ರಿಕರ ಉಡುಪು ಧರಿಸಿ ಅಲ್ಲಿ ಚಂದ್ರ ಲೋಕದ ಮೇಲೆ ನಡೆದಂತೆ ನಡೆಯಲಾಗಿತ್ತು. ಈ ತಂತ್ರವು ಸಾಕಷ್ಟು ಜನರ ಗಮನ ಸೆಳೆದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ನಂತರ ಆ ರಸ್ತೆಯನ್ನು ಸರಿಪಡಿಸಲಾಯಿತು.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಈಗ ಹೊಸ ರೀತಿಯ ತಂತ್ರಕ್ಕೆ ಹಾವೇರಿ ಜಿಲ್ಲೆಯ ಬ್ಯಾಡಗಿಯ ದಂಪತಿ ಮುಂದಾಗಿದ್ದಾರೆ. ಹದಗೆಟ್ಟ ರಸ್ತೆಗಳ ಗಮನ ಸೆಳೆಯಲು ಹಾಳಾದ ರಸ್ತೆಗಳಲ್ಲಿಯೇ ಫೋಟೊಶೂಟ್ ಮಾಡಿದ್ದಾರೆ. ಈ ಫೋಟೊಶೂಟ್ ಅನ್ನು ತಾವು ವಾಸಿವಿದ್ದ ಪ್ರದೇಶದಲ್ಲಿ ಸಂಪೂರ್ಣವಾಗಿ ಹಾಳಾಗಿರುವ ರಸ್ತೆಯಲ್ಲಿ ಮಾಡಿದ್ದಾರೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಹಾಳಾಗಿರುವ ರಸ್ತೆಯ ಮೇಲೆ ಕುಳಿತು ಅದರಲ್ಲಿಯೇ ಫೋಟೊಶೂಟ್ ಮಾಡಿದ್ದಾರೆ. ಈ ಫೋಟೊಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೊಗಳಿಗೆ ವ್ಯಾಪಕವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರಂತೂ ಆಕ್ರೋಶ ವ್ಯಕ್ತಪಡಿಸಿ ಈ ರೀತಿಯ ಕೆಟ್ಟ ರಸ್ತೆಗಳು ಎಲ್ಲಾ ಕಡೆಯು ಹೆಚ್ಚಾಗಿವೆ ಎಂದು ಹೇಳಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರಸ್ತೆ ಗುಂಡಿಗಳಲ್ಲಿ ಫೋಟೊ ಶೂಟ್ ಮೂಲಕ ಫೇಮಸ್ ಆದ ದಂಪತಿ..!

ಈ ಫೋಟೊಗಳು ಸಂಬಂಧಪಟ್ಟವರಿಗೆ ತಲುಪಿ ಈಗಲಾದರೂ ಈ ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವರೆಂಬ ಅಭಿಪ್ರಾಯ ಸಾರ್ವಜನಿಕರದ್ದು. ಯಾವುದಾದರೂ ಅನಾಹುತ ಸಂಭವಿಸಿದ ನಂತರವಷ್ಟೇ ಸಂಬಂಧಪಟ್ಟವರು ರಸ್ತೆಗಳನ್ನು ಸರಿಪಡಿಸುತ್ತಿರುವುದು ವಿಪರ್ಯಾಸ.

Article Published On: Saturday, November 16, 2019, 18:17 [IST]
English summary
Karnataka couple photoshoot on potholed roads - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+