ಕಲ್ಯಾಣ ಕರ್ನಾಟಕ ಜನರಿಗೆ ಸಿಹಿಸುದ್ದಿ: ಕಲಬುರಗಿಯಿಂದ ಬೆಂಗಳೂರಿಗೆ ವಂದೇ ಭಾರತ್.. ಮಾ.12ರಂದು ಚಾಲನೆ!
ಕಲ್ಯಾಣ ಕರ್ನಾಟಕದ ಜನರ ಕನಸು ಕಡೆಗೂ ನನಸಾಗಲಿದೆ. ಕೆಲವೇ ದಿನಗಳಲ್ಲಿ ಕಲಬುರಗಿ (Kalaburagi) ಮತ್ತು ಕೆಎಸ್‌ಆರ್ ಬೆಂಗಳೂರು (KSR Bengaluru) ನಡುವೆ ಪ್ರೀಮಿಯಂ ಹೈಸ್ವೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಸಂಚಾರ ಪ್ರಾರಂಭವಾಗಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕಲಬುರಗಿ ಸಂಸದ ಉಮೇಶ್ ಜಾಧವ್ ಗುರುವಾರ ಮಾತನಾಡಿದ್ದು, 'ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ, ಈ ರೈಲು ಕಲಬುರಗಿಯಿಂದ ಬೆಳಗ್ಗೆ 5.30ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಬರಲಿದೆ. ಇಲ್ಲಿಂದ ಮಧ್ಯಾಹ್ನ 2.30ಕ್ಕೆ ಸಂಚಾರವನ್ನು ಶುರು ಮಾಡಿ, ರಾತ್ರಿ 11 ಗಂಟೆಗೆ ಕಲಬುರಗಿಯನ್ನು ತಲುಪಲಿದೆ.

ಕಲಬುರಗಿ ಹಾಗೂ ಕೆಎಸ್‌ಆರ್ ಬೆಂಗಳೂರು ಮಧ್ಯೆ ಕಾರ್ಯಾಚರಣೆ ನಡೆಸುವ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆ ನಿಲ್ದಾಣ ಹಾಗೂ ವೇಳಾಪಟ್ಟಿಯ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿಯಿಲ್ಲ. ಬಹುತೇಕ ರಾಯಚೂರು, ಗುಂತಕಲ್, ಅನಂತಪುರ ಹಾಗೂ ಧರ್ಮಾವರಂ ನಿಲ್ದಾಣಗಳಲ್ಲಿ ನಿಲ್ಲುವ ಸಾಧ್ಯತೆಯಿದೆ. ಟಿಕೆಟ್ ದರಗಳು ರೂ.1,500 ಶುರುವಾಗುವ ನಿರೀಕ್ಷೆಯಿದೆ.
ಮಾ.12 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭ ಸಂಬಂಧ ಉದ್ಘಾಟನಾ ಸಮಾರಂಭಕ್ಕೆ ಸಿದ್ಧತೆಯನ್ನು ನಡೆಸಲು ಸೂಚನೆಗಳು ಬಂದಿದ್ದು, ಹೆಚ್ಚಿನ ವಿವರಗಳಿಗೆ ಕಾಯಲಾಗುತ್ತಿದೆ ಎಂದು ಸೋಲಾಪುರ ವಿಭಾಗದ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಲಬುರಗಿ ನಿಲ್ದಾಣದಲ್ಲಿ ಅಗತ್ಯವಾದ ಸೌಲಭ್ಯಗಳಿಲ್ಲದ ಹಿನ್ನೆಲೆ, ಈ ರೈಲನ್ನು ಬೆಂಗಳೂರಿನಲ್ಲಿಯೇ ನಿರ್ವಹಣೆ ಮಾಡಲಾಗುತ್ತದೆ ಎನ್ನಲಾಗಿದೆ.

ಕಲಬುರಗಿ ಹಾಗೂ ಬೆಂಗಳೂರು ನಡುವೆ ಅತ್ಯಂತ ವೇಗದ ರೈಲಾಗಿ ಸೋಲಾಪುರ ಹಾಸನ ಎಕ್ಸ್‌ಪ್ರೆಸ್ ಸಂಚಾರಿಸುತ್ತದೆ. ಇವೆರೆಡು ನಗರಗಳ ಮಧ್ಯೆಯಿರುವ 543 ಕಿಲೋಮೀಟರ್ ಅಂತರವನ್ನು ಕ್ರಮಿಸಲು 9.10 ಗಂಟೆ ತೆಗೆದುಕೊಳ್ಳುತ್ತದೆ. ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ ಆರಂಭಿಸುರುವುದರಿಂದ ಪ್ರಯಾಣದ ಅವಧಿ ಒಂದಷ್ಟು ಮಟ್ಟಿಗೆ ಇಳಿಕೆಯಾಗಲಿದ್ದು, ವ್ಯಾಪಾರ ವಹಿವಾಟು ಹಾಗೂ ಪ್ರವಾಸೋದ್ಯಮ ವೃದ್ಧಿಸಲು ನೆರವಾಗಲಿದೆ.
ಶೀಘ್ರದಲ್ಲಿ ಬೆಂಗಳೂರು (Bengaluru) - ಮಧುರೈ (Madurai) ಮಧ್ಯೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ನಡೆಸುವ ನಿರೀಕ್ಷೆಯಿದೆ. ಈ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಬಹುದು ಎಂದು ಮೂಲಗಳು ಹೇಳಿವೆ. ಪ್ರಸ್ತುತ ಇವೆರೆಡು ನಗರಗಳ ನಡುವಿನ 435 ಕಿಲೋಮೀಟರ್ ದೂರವನ್ನು ಕ್ರಮಿಸಲು ಸಾಮಾನ್ಯ ರೈಲುಗಳಿಗೆ 7 ಗಂಟೆ ಬೇಕಾಗಿದ್ದು, ಮುಂಬರುವ ವಂದೇ ಭಾರತ್ 6 ಅಥವಾ 5.30 ಗಂಟೆಗಳಲ್ಲಿ ನಿರ್ದಿಷ್ಟ ಗಮ್ಯ ಸ್ಥಾನವನ್ನು ತಲುಪುತ್ತದೆ.
ಮಧುರೈ - ಬೆಂಗಳೂರು ನಡುವೆ ದಿಂಡಗಲ್, ಕರೂರ್, ಸೇಲಂ, ಧರ್ಮಪುರಿ ಹಾಗೂ ಹೊಸೂರಿನಲ್ಲಿ ನಿಲುಗಡೆಯಾಗಲಿದ್ದು, ಮಧುರೈ ಮೀನಾಕ್ಷಿ ತಾಯಿಯ ದರ್ಶನಕ್ಕೆ ತೆರಳುವ ಭಕ್ತರಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಟಿಕೆಟ್ ದರಗಳು ರೂ.1,300ರಿಂದ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರೀಮಿಯಂ ಹೈಸ್ವೀಡ್ ರೈಲಾಗಿರುವುದರಿಂದ ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯವನ್ನು ಒದಗಿಸಲಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








