ಬಿಜೆಪಿ ನಾಯಕ ಎಂಟಿಬಿ ನಾಗರಾಜ್‌ರಿಂದ ಬಹುಕೋಟಿಯ BMW ಕಾರು ಖರೀದಿ.. ಮೈಲೇಜ್‌ನಲ್ಲಿ ಬೆಂಕಿ
ಹೊಸಕೋಟೆಯ ಪ್ರಭಾವಿ ನಾಯಕ ಎಂಟಿಬಿ ನಾಗರಾಜ್ (MTB Nagaraj), ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಕಾರುಗಳ ಮೇಲೆ ವಿಶೇಷ ಆಸಕ್ತಿಯಿದ್ದು, ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಪೋರ್ಷೆ ಕೇಯೆನ್ನೆ, ಲ್ಯಾಂಡ್ ರೋವರ್, ಫೆರಾರಿ ಎಫ್8ನಂತಹ ವಿವಿಧ ಕಾರುಗಳನ್ನು ಹೊಂದಿದ್ದಾರೆ.
ಸದ್ಯ, ಎಂಟಿಬಿ ನಾಗರಾಜ್ ಹೊಚ್ಚ ಹೊಸ ಬಿಎಂಡಬ್ಲ್ಯೂ ಎಕ್ಸ್ಎಂ (BMW XM) ಕಾರನ್ನು ಖರೀದಿಸಿದ್ದು, ಅವರ ನಿವಾಸದಲ್ಲಿ ವಿತರಣೆ ಪಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿವೆ. ಈ ಬಿಎಂಡಬ್ಲ್ಯೂ ಎಕ್ಸ್ಎಂ ಎಸ್‌ಯುವಿ, ರೂ.2.60 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ತೆರಿಗೆ ಎಲ್ಲವು ಸೇರಿ ಬೆಂಗಳೂರಿನಲ್ಲಿ ರೂ.3.24 ಕೋಟಿ ಆನ್-ರೋಡ್ ಬೆಲೆಯಾಗುತ್ತದೆ.

ನೂತನ ಬಿಎಂಡಬ್ಲ್ಯೂ ಎಕ್ಸ್ಎಂ ಪವರ್ ಟ್ರೇನ್ ಬಗ್ಗೆ ಮಾತನಾಡುವುದಾದರೆ, ಇದು 4.4 - ಲೀಟರ್ ಟ್ವಿನ್ ಟರ್ಬೊ ವಿ8 ಹೈಬ್ರಿಡ್ (ಎಲೆಕ್ಟ್ರಿಕ್ + ಪೆಟ್ರೋಲ್) ಎಂಜಿನ್ ಹೊಂದಿದ್ದು, 653 PS ಪವರ್ ಮತ್ತು 800 Nm ಪೀಕ್ ಟಾರ್ಕ್ ಹೊರಕಹುವ ಸಾಮರ್ಥ್ಯವನ್ನು ಒಳಗೊಂಡಿದೆ. 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಎಸ್‌ಯುವಿ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, ಹೈಬ್ರಿಡ್ ಎಂಜಿನ್ ಹೊಂದಿರುವುದರಿಂದ 61.9 kmpl ಮೈಲೇಜ್ ನೀಡುತ್ತದೆ. 5 - 7 ಆಸನ ಆಯ್ಕೆಯನ್ನು ಒಳಗೊಂಡಿದ್ದು, ಕೇವಲ 4.3 ಸೆಕೆಂಡುಗಳಲ್ಲಿ 0 -100 km/h ವೇಗವನ್ನು ಪಡೆಯಲಿದೆ. 249 kmph ಟಾಪ್ ಸ್ವೀಡ್ ಹೊಂದಿದೆ.

ನೂತನ ಬಿಎಂಡಬ್ಲ್ಯೂ ಎಕ್ಸ್ಎಂ ಮಾದರಿ, 14.9 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 12.3 - ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಆಂಬಿಯೆಂಟ್ ಲೈಟಿಂಗ್, 4 - ಝೋನ್ ಕ್ಲೈಮೇಟ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುತ್ತಳತೆ ವಿಚಾರವಾಗಿ ಹೇಳುವುದಾದರೆ, 3,105 ಎಂಎಂ ವೀಲ್‌ಬೇಸ್ ಹೊಂದಿದ್ದು, ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಇದೆ.
ಸುರಕ್ಷತೆ ವಿಚಾರದಲ್ಲಿ ಈ ಕಾರಿಗೆ ಸರಿಸಾಟಿಯೇ ಇಲ್ಲ ಎಂದು ಹೇಳಬಹುದು. 6 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), DSC (ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್), 360 - ಡಿಗ್ರಿ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಇವೆ.
ಎಂಟಿಬಿ ನಾಗರಾಜ್ ಅವರ ಸಮೀಪ, ಭಾರೀ ಬೆಲೆಯ 'ರೋಲ್ಸ್ ರಾಯ್ಸ್ ಫ್ಯಾಂಟಮ್' ಕಾರು ಸಹ ಇದೆ. ರೂ.8.99 ಕೋಟಿಯಿಂದ ರೂ.10.48ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, 6.75 - ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ12 ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. ಖ್ಯಾತ ಉದ್ಯಮಿಗಳು, ಸಿನಿ ತಾರೆಯರಂತೆ ಎಂಟಿಬಿ ಅವರು, ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರಿನ ಮಾಲೀಕರೂ ಆಗಿದ್ದಾರೆ. ಇದು ರೂ.2.39 ಕೋಟಿಯಿಂದ ರೂ.4.17 ಕೋಟಿ ದರವನ್ನು ಹೊಂದಿದೆ.
ಎಂಟಿಬಿ ಅವರ ಗ್ಯಾರೇಜ್‌ನಲ್ಲಿ ಸೂಪರ್‌ಕಾರ್ ಫೆರಾರಿ ಎಫ್8 ಟ್ರಿಬ್ಯೂಟೊ ಕೂಡ ಇದ್ದು, ನೀಲಿ ಬಣ್ಣದ ಈ ಕಾರು ರೂ.4.02 ಕೋಟಿ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಲ್ಯಾಂಡ್ ರೋವರ್ ಡಿಫೆಂಡರ್ ಸಹ ಎಂಟಿಬಿ ನಾಗರಾಜ್ ಮನೆಯಲಿದ್ದು, ರೂ.93.55 ಲಕ್ಷದಿಂದ ರೂ.2.30 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಇದಿಷ್ಟೇ ಅಲ್ಲದೆ, ಪೋರ್ಷೆ ಕೇಯೆನ್ನೆ, ಟೊಯೋಟಾ ಫಾರ್ಚುನರ್, ಇನ್ನೋವಾ ಕ್ರಿಸ್ಟಾ ಎಂಪಿವಿಯನ್ನು ಸಹ ಅವರು ಹೊಂದಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications