ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಟಿಕ್‌ಟಾಕ್ ಆ್ಯಪ್ ಪ್ರಪಂಚದಾದ್ಯಂತ ಎಲ್ಲ ವಯಸ್ಸಿನವರಲ್ಲಿ ಜನಪ್ರಿಯವಾಗಿದೆ. ತಮ್ಮ ಸಣ್ಣ ವೀಡಿಯೊವೊಂದನ್ನು ಮಾಡಿ ಅದನ್ನು ಅಪ್‍‍ಲೋಡ್ ಮಾಡುತ್ತಾರೆ. ಇನ್ನೂ ಕೆಲವರು ಚಾಲನೆ ಮಾಡುವುದನ್ನು ಅಥವಾ ಸವಾರಿ ಮಾಡುವುದನ್ನು ವೀಡಿಯೊ ಮಾಡುತ್ತಾರೆ.

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಈ ವೀಡಿಯೊ ಕೇರಳದ ಬಸ್ ಚಾಲಕರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದಕ್ಕಾಗಿ ಕರ್ತವ್ಯದಲ್ಲಿದ್ದಾಗ ಈ ಆ್ಯಪ್ ಬಳಸುವ ಬಸ್ ಚಾಲಕರನ್ನು ಹಿಡಿಯಲು ಕೇರಳದ ಮೋಟಾರು ವಾಹನ ಇಲಾಖೆ ವಿಶೇಷ ಅಭಿಯಾನವನ್ನು ಆರಂಭಿಸಿದೆ.

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಕೇರಳದ ಮೋಟಾರು ವಾಹನ ಇಲಾಖೆಯು ಬಸ್ ಡ್ರೈವರ್‍‍ಗಳು ಆನ್‍‍ಲೈನ್‍‍ನಲ್ಲಿ ಪೋಸ್ಟ್ ಮಾಡುವ ವೀಡಿಯೊಗಳ ಮೇಲೆ ಕಣ್ಣಿಟ್ಟಿದೆ. ಈ ವೀಡಿಯೊಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡಿ ಅವುಗಳನ್ನು ರೆಕಾರ್ಡ್ ಮಾಡಿ ಇಂಟರ್‍‍ನೆಟ್‍‍ನಲ್ಲಿ ಹರಿದುಬಿಟ್ಟಿದ್ದ ಮೂವರು ಚಾಲಕರನ್ನು ಅಮಾನತುಗೊಳಿಸಲಾಗಿದೆ.

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಡ್ರೈವರ್‍‍ಗಳು ಈ ವೀಡಿಯೊಗಳನ್ನು ಟಿಕ್‍‍ಟಾಕ್ ಆ್ಯಪ್‍‍ನಲ್ಲಿ ಅಪ್‍‍ಲೋಡ್ ಮಾಡಿದ್ದರು. ಹೀಗೆ ಅಪ್‍‍ಲೋಡ್ ಮಾಡಲಾದ ವೀಡಿಯೊಗಳನ್ನು ಕೇರಳದ ಮೋಟಾರು ವಾಹನ ಇಲಾಖೆಯು ವೀಕ್ಷಿಸಿದೆ. ಒಂದು ವೀಡಿಯೊದಲ್ಲಿ ಬಸ್ಸಿನ ಡ್ರೈವರ್ ಒಬ್ಬ ಚಲಿಸುತ್ತಿರುವ ಬಸ್ಸಿನಿಂದ ಇಳಿದು ಅದರ ಪಕ್ಕದಲ್ಲಿ ಕೆಲವು ಮೀಟರ್‍‍ಗಳವರೆಗೆ ನಡೆಯುತ್ತಿರುವುದನ್ನು ಕಾಣಬಹುದು.

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಡ್ರೈವರ್ ಹೀಗೆ ಮಾಡುವಾಗ ಡ್ರೈವರ್ ಸೀಟಿನಲ್ಲಿ ಯಾರೂ ಇರಲಿಲ್ಲ. ಬಸ್ ತನ್ನಷ್ಟಕ್ಕೆ ತಾನೇ ಮುಂದೆ ಹೋಗುತ್ತಿದೆ. ಈ ಸ್ಟಂಟ್ ಅನ್ನು ಖಾಲಿ ಮೈದಾನದಲ್ಲಿ ಮಾಡಲಾಗಿದ್ದರೂ, ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೇ ಅಪಾಯ ಸಂಭವಿಸುವ ಸಾಧ್ಯತೆಗಳಿದ್ದವು.

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ವೀಡಿಯೊದ ಕೊನೆಯಲ್ಲಿ ಡ್ರೈವರ್ ಬಸ್ಸಿನೊಳಗೆ ಹೋಗುತ್ತಿರುವುದನ್ನು ಕಾಣಬಹುದು. ಡ್ರೈವರ್ ಬಸ್ಸಿನಿಂದ ಕೆಳಗೆ ಬಂದು ಬಸ್ ಮುಂದೆ ಹೋಗುತ್ತಿರುವಾಗ ಯಾವುದಾದರೂ ಹಂಪ್ ಅಥವಾ ದೊಡ್ಡ ಗಾತ್ರದ ಕಲ್ಲು ಅಡ್ಡ ಬಂದಿದ್ದರೆ ಬಸ್ಸಿನೊಳಗೆ ಬಸ್ ಅನ್ನು ನಿಯಂತ್ರಿಸುವವರು ಯಾರೂ ಇರದಿದ್ದ ಕಾರಣಕ್ಕೆ ಭಾರೀ ಅನಾಹುತ ಸಂಭವಿಸುತ್ತಿತ್ತು.

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಎರಡನೇ ವೀಡಿಯೊದಲ್ಲಿ ಡ್ರೈವರ್ ಬಸ್ ಡ್ರೈವ್ ಮಾಡುತ್ತಲೇ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೇ ಈ ವೀಡಿಯೊವನ್ನು ಫೇಸ್‍‍ಬುಕ್‍‍ನಲ್ಲಿ ಅಪ್‍‍ಲೋಡ್ ಮಾಡಲಾಗಿದೆ. ಅಪ್‍‍ಲೋಡ್ ಮಾಡಲಾದ ಈ ವೀಡಿಯೊಗೆ ಹೆಚ್ಚಿನ ಪ್ರತಿಕ್ರಿಯೆ ಸಹ ವ್ಯಕ್ತವಾಗಿತ್ತು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಮೋಟಾರು ವಾಹನ ಇಲಾಖೆಯು ಈ ಬಸ್ ಚಾಲನೆ ಮಾಡುತ್ತಿದ್ದ ಡ್ರೈವರ್‍‍ನ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಿದೆ. ಬಸ್ಸಿನೊಳಗೆ ಡಿಸ್ಕೊದಲ್ಲಿರುವಂತಹ ಫ್ಲಾಶಿಂಗ್ ಲೈಟ್ ಹಾಗೂ ಮ್ಯೂಸಿಕ್‍‍ಗಳಿದ್ದವು.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಈ ಬಸ್ಸಿನ ಚಾಲಕನು ನಂತರ ಈ ಬಸ್ ಮತ್ತೊಂದು ಬಸ್ಸಿನೊಂದಿಗೆ ಸ್ಟಂಟ್ ಮಾಡಲು ಯತ್ನಿಸಿದ್ದಾನೆ. ಮೋಟಾರು ವಾಹನ ಇಲಾಖೆಯು ಆ ಮತ್ತೊಂದು ಬಸ್ಸಿನ ಡ್ರೈವರ್‍‍ನ ಡ್ರೈವಿಂಗ್ ಲೈಸೆನ್ಸ್ ಅನ್ನು ಸಹ ವಶಕ್ಕೆ ಪಡೆದಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕೇರಳದ ಮೋಟಾರು ವಾಹನ ಇಲಾಖೆಯು ಬಸ್ಸುಗಳಲ್ಲಿ ಅಳವಡಿಸಲಾಗಿರುವ ಡಿಸ್ಕೊ ಲೈಟುಗಳನ್ನು ಕಿತ್ತೆಸೆಯುವ ಅಭಿಯಾನವನ್ನು ಶುರುಮಾಡಿದೆ. ಇದರ ಜೊತೆಗೆ ಬಸ್ಸುಗಳಲ್ಲಿ ಲೌಡ್‍‍ಸ್ಪೀಕರ್‍‍ಗಳನ್ನು ಸಹ ಅಳವಡಿಸುವಂತಿಲ್ಲವೆಂದು ಹೇಳಿದೆ.

ಟಿಕ್ ಟಾಕ್ ವೀಡಿಯೊ ಮಾಡಿ ಅಮಾನತುಗೊಂಡ ಡ್ರೈವರ್..!

ಕಳೆದ ತಿಂಗಳು ಶಾಲಾ ಮಕ್ಕಳಿದ್ದ ಬಸ್ಸಿನಲ್ಲಿ ಸ್ಟಂಟ್ ಮಾಡಿದ್ದ ಡ್ರೈವರ್‍‍ನ ಡ್ರೈವಿಂಗ್ ಲೈಸೆನ್ಸ್ ಅನ್ನು ಕೇರಳದ ಮೋಟಾರು ವಾಹನ ಇಲಾಖೆ ಅಮಾನತುಗೊಳಿಸಿತ್ತು. ಬಸ್ಸಿನ ಜೊತೆಗೆ ಸ್ಟಂಟ್ ಮಾಡಿದ್ದ ಕಾರು ಹಾಗೂ ಬೈಕ್‍‍ಗಳನ್ನೆಲ್ಲಾ ಪತ್ತೆ ಹಚ್ಚಿದ್ದ ಮೋಟಾರು ವಾಹನ ಇಲಾಖೆ ಎಲ್ಲಾ ಕಾರು, ಬೈಕ್‍‍ಗಳನ್ನು ವಶಕ್ಕೆ ಪಡೆದಿತ್ತು.

Article Published On: Friday, December 13, 2019, 18:00 [IST]
English summary
Kerala bus drivers using TikTok while driving suspended - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+