ಮತ್ತೊಮ್ಮೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಮಾರ್ಬಲ್ ವ್ಯಾಪಾರಿ

ಅನೇಕ ರಾಜ್ಯಗಳಲ್ಲಿ ಇನ್ನೂ ಸಹ ಲಾಕ್‌ಡೌನ್‌ ಜಾರಿಯಲ್ಲಿದೆ. ಈ ಕಾರಣಕ್ಕೆ ಜನರ ಓಡಾಟದ ಮೇಲೆ ನಿರ್ಬಂಧ ವಿಧಿಸಲಾಗಿದೆ. ನಿರ್ಬಂಧವಿದ್ದರೂ ಹೊರಬರುವ ಕೆಲ ಜನರು ತಮ್ಮ ವಾಹನಗಳಲ್ಲಿ ಕರ್ಕಶ ಶಬ್ದ ಉಂಟು ಮಾಡುತ್ತಾ ಸಂಚರಿಸಿದರೆ, ಇನ್ನೂ ಕೆಲವರು ರೋಡ್ ಶೋ ನಡೆಸುತ್ತಾರೆ.

ಮತ್ತೊಮ್ಮೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಮಾರ್ಬಲ್ ಉದ್ಯಮಿ

ಇದೇ ರೀತಿಯಲ್ಲಿ ರೋಡ್ ಶೋ ನಡೆಸಿದ ಕೇರಳದ ಉದ್ಯಮಿ ರಾಯ್ ಕುರಿಯನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಯ್ ಕುರಿಯನ್ ತಾವು ಖರೀದಿಸಿದ್ದ 8 ಹೊಸ ಭಾರತ್ ಬೆಂಝ್ ಟ್ರಕ್‌ಗಳನ್ನು ರೋಡ್ ಶೋ ಮೂಲಕ ಕೊಂಡೊಯ್ಯುತ್ತಿದ್ದರು. ಇಷ್ಟು ಸಾಲದೆಂಬಂತೆ ತಮ್ಮ ಮರ್ಸಿಡಿಸ್ ಬೆಂಝ್ ಕಾರಿನ ರೂಫ್ ಮೇಲೆ ಕುಳಿತಿದ್ದರು. ರಾಯ್ ಕುರಿಯನ್ ಸೇರಿದಂತೆ 8 ಟ್ರಕ್ ಚಾಲಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮತ್ತೊಮ್ಮೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಮಾರ್ಬಲ್ ಉದ್ಯಮಿ

ರಾಯ್ ಕುರಿಯನ್ ರವರು ಮಂಗಳವಾರ ಈ 8 ಭಾರತ್ ಬೆಂಝ್ ಟ್ರಕ್ ಗಳ ವಿತರಣೆಯನ್ನು ಪಡೆದರು. ವಿತರಣೆ ಪಡೆದ ನಂತರ ರೋಡ್ ಶೋ ನಡೆಸಿದ್ದಾರೆ. ಈ ರೋಡ್ ಶೋನಲ್ಲಿ ರಾಯ್ ಕುರಿಯನ್ ತಮ್ಮ ಮರ್ಸಿಡಿಸ್ ಬೆಂಝ್ ಜಿಎಲ್ಇ ಕಾರಿನ ಸನ್ ರೂಫ್ ತೆರೆದು ರೂಫ್ ಮೇಲೆ ಕುಳಿತಿದ್ದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮತ್ತೊಮ್ಮೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಮಾರ್ಬಲ್ ಉದ್ಯಮಿ

ಟ್ರಕ್‌ನ ವಿತರಣೆಯನ್ನು ಸಂಭ್ರಮಿಸಲು ಈ ರೋಡ್ ಶೋ ನಡೆಸಲಾಗಿದೆ. ಅಣೆಕಟ್ಟಿನ ಬದಿಯಲ್ಲಿ ಟ್ರಕ್‌ಗಳ ಫೋಟೋಶೂಟ್ ಸಹ ನಡೆಸಲಾಗಿದೆ. ಪ್ರಕರಣ ದಾಖಲಿಸಿದ ನಂತರ ರಾಯ್ ಕುರಿಯನ್ ಅಥವಾ ಇನ್ನಿತರ ಚಾಲಕರ ವಿರುದ್ಧ ಪೊಲೀಸರು ಬೇರೆ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಮತ್ತೊಮ್ಮೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಮಾರ್ಬಲ್ ಉದ್ಯಮಿ

ಸ್ಥಳದಲ್ಲಿದ್ದಲ್ಲಿ ನೆರೆದಿದ್ದವರು ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ರೋಡ್ ಶೋ ನಡೆಸುತ್ತಿದ್ದ ರಾಯ್ ಕುರಿಯನ್ ಫೋಟೋಗಳನ್ನು ತೆಗೆದಿದ್ದಾರೆ. ಈ ಫೋಟೋಗಳ ಆಧಾರದ ಮೇಲೆ ಆತನನ್ನು ಜೈಲಿಗೆ ತಳ್ಳಬಹುದು. ಇಲ್ಲವೇ ದಂಡ ವಿಧಿಸಬಹುದು. ಇದಕ್ಕೂ ಮುನ್ನ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡಿದ ಕಾರಣಕ್ಕೆ ರಾಯ್ ಕುರಿಯನ್ ನನ್ನು ಬಂಧಿಸಲಾಗಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮತ್ತೊಮ್ಮೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಮಾರ್ಬಲ್ ಉದ್ಯಮಿ

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ, ಮತ್ತೊಮ್ಮೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದೇ ವೇಳೆ ಅವರು ತಮ್ಮ ಮರ್ಸಿಡಿಸ್ ಬೆಂಝ್ ಜಿಎಲ್ಇ ಕಾರನ್ನು ನೋಂದಾಯಿಸದೇ ಇರುವ ವಿಷಯವು ಸಹ ಬೆಳಕಿಗೆ ಬಂದಿದೆ. ಮೇ ತಿಂಗಳಿನಲ್ಲಿ ಆರ್‌ಟಿಒ ಅವರ ವಾಹನವನ್ನು ರಿಜಿಸ್ಟರ್ ಮಾಡಲು ನಿರಾಕರಿಸಿತ್ತು.

ಈ ಎಸ್ ಯುವಿಯನ್ನು ಬಿಎಸ್ 6 ವಾಹನವೆಂದು ಪರಿಗಣಿಸುವುದಿಲ್ಲವೆಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯ ಪರಿಹಾರವಾಗಿದೆಯೇ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ಕಾರಿನಲ್ಲಿರುವ ಹಳದಿ ನಂಬರ್ ಪ್ಲೇಟ್ ಗಮನಿಸಿದರೆ ಇನ್ನೂ ಸಹ ತಾತ್ಕಾಲಿಕ ನಂಬರ್ ಪ್ಲೇಟ್ ಬಳಸುತ್ತಿರುವುದು ಸ್ಪಷ್ಟ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮತ್ತೊಮ್ಮೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಮಾರ್ಬಲ್ ಉದ್ಯಮಿ

ಹೊಸ ನಿಯಮಗಳ ಅನ್ವಯ ತಾತ್ಕಾಲಿಕ ನಂಬರ್ ಪ್ಲೇಟ್ ಹೊಂದಿರುವ ವಾಹನವನ್ನು ಬಳಸುವುದು ಸಹ ಕಾನೂನುಬಾಹಿರ. ತಮ್ಮ ತಪ್ಪುಗಳಿಂದಾಗಿಯೇ ರಾಯ್ ಕುರಿಯನ್ ಸುದ್ದಿಯಾಗುತ್ತಿದ್ದಾರೆ. ಮಾರ್ಬಲ್ ವ್ಯಾಪಾರ ಮಾಡುವ ಅವರು ಈ ಟ್ರಕ್ ಗಳನ್ನು ತಮ್ಮ ವ್ಯವಹಾರದ ಸಲುವಾಗಿ ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

Most Read Articles

Kannada
English summary
Kerala businessman violates lockdown norms again does roadshow with Bharat Benz trucks. Read in Kannada.
Story first published: Thursday, July 30, 2020, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X