ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮಳೆ ಸೋರಿಕೆ?: ಕಾಂಗ್ರೇಸ್ ವಿಡಿಯೋ ಶೇರ್ ಮಾಡಿ ತೇಜೋವಧೆ
ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಓಡಾಟ ಆರಂಭಿಸಿದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇದೆ. ಹಲವಾರು ಸವಲತ್ತುಗಳೊಂದಿಗೆ ಬಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತದ ಅತೀ ವೇಗದ ರೈಲು ಎಂಬ ಖ್ಯಾತಿ ಪಡೆದಿದೆ. ಇದೀಗ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ನ ವಿಡಿಯೋ ಒಂದು ಸದ್ದು ಮಾಡುತ್ತಿದೆ.
ಕೇರಳ ಕಾಂಗ್ರೇಸ್‌ನ ಔದ್ಯೋಗಿಕ ಟ್ವಿಟ್ಟರ್ ಅಕೌಂಟ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಂಭಂಧಿಸಿದಂತೆ ವಿಡಿಯೋ ಒಂದನ್ನು ಶೇರ್ ಮಾಡಿದ್ದು ಇದರ ಕುರಿತಾಗಿ ಭಾರೀ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ವಿಡಿಯೋದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೇಳಲಾಗಿರುವ ರೈಲಿನ ಬೋಗಿ ಸೋರುತ್ತಿರುವುದನ್ನು ಕಾಣಬಹುದಾಗಿದೆ. ಬೋಗಿಯ ಮೇಲ್ಬಾಗದಿಂದ ನೀರು ಸೋರುತ್ತಿರುವುದನ್ನು ಕಾಣಬಹುದಾಗಿದೆ.

ಬ್ಲ್ಯಾಂಕೆಟ್‌ಗಳಿಗೆಲ್ಲಾ ವಿದಾಯ, ಕೊಡೆಗಳಿಗೆಲ್ಲಾ ಸ್ವಾಗತ ಎಂದು ತಲೆಬರಹವನ್ನು ಕಾಂಗ್ರೆಸ್ ಕೇರಳ ಪೇಜ್ ನೀಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳನ್ನು ಭುಗಿಲೆಬ್ಬಿಸಿದ್ದು, ಈ ವೈರಲ್ ವಿಡಿಯೋ ಕಾಮೆಂಟ್ ಕೆಳಗೆ ಬಿಜೆಪಿ ಮತ್ತು ಕಾಂಗ್ರೇಸ್ ಎರಡೂ ಪಕ್ಷದ ಅಭಿಮಾನಿಗಳಿಗಿಂದ ಯುದ್ದ ನಡೆಯುತ್ತಿರುವುದನ್ನು ನಾವು ಕಾಣಬಹುದು.
ಕಾಂಗ್ರೇಸ್ ಕೇರಳ ಟ್ವೀಟ್ ಮಾಡಿರುವುದು ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ನ ಬೋಗಿಯೊಳಗೆ ನೀರು ಹರಿಯುತ್ತಿದೆ ಎಂದು ಮನವರಿಕೆ ಮಾಡುವ ಹಾಗಿದೆ. ಆದರೆ ಕಾಮೆಂಟ್ ಸೆಕ್ಷನ್‌ನಲ್ಲಿ ಹಲವರ ಪ್ರಕಾರ ಇದು ವಂದೇ ಭಾರತ್ ರೈಲು ಅಲ್ಲ, ವಂದೇ ಭಾರತ್ ರೈಲಿನಲ್ಲಿ ಈ ರೀತಿಯ ಘಟನೆಯೇ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಕಾಣುವಂತೆ ರೈಲಿನ ಬೋಗಿಯೊಳಗೆ ಮೇಲ್ಚಾವಣಿಯಿಂದ ನೀರು ಹರಿಯುತ್ತಿದ್ದು, ಇದೇ ಸಂಧರ್ಭದಲ್ಲಿ ರೈಲಿನ ಕೆಲವು ಸಿಬ್ಬಂದಿಗಳು ಬೇಸಿನ್ ರೀತಿಯ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಅದರಲ್ಲಿ ನೀರನ್ನು ತೆಗೆಯುವ ಪ್ರಯತ್ನವನ್ನು ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಸೌತ್ ರೈಲ್ವೇಯು ಈ ಕುರಿತಾಗಿ ತಮ್ಮದೇ ಆದ ಸ್ಪಷ್ಟನೆ ನೀಡಿದೆ.
ಸೌತರ್ನ್ ರೈಲ್ವೇಯ ಪ್ರಕಾರ “ಈ ರೀತಿಯಾದ ಯಾವುದೇ ಘಟನೆಯೂ ಕೇರಳದಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ನಲ್ಲಿ ಸಂಭವಿಸಿಲ್ಲ. ದಕ್ಷಿಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡೂ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಈ ರೀತಿಯ ಘಟನೆಗಳು ಸಂಭವಿಸಿಲ್ಲ ಎಂದು ಸ್ಪಷ್ಟ ಪಡಿಸಿರುವುದು ಇದೇ ಸಮಯದಲ್ಲಿ ಗಮನ ಸೆಳೆಯುತ್ತದೆ.
ಕೇವಲ ಒಂದು ವಿಡಿಯೋ ಮಾತ್ರ ಶೇರ್ ಆಗಿದ್ದು ಇದರ ಕುರಿತಾಗಿ ಬೇರೆ ಯಾವುದೇ ರೀತಿಯ ಮಾಹಿತಿಗಳು ಹೊರಬಿದ್ದಿಲ್ಲ. ಆದರೆ ಕೇರಳ ಕಾಂಗ್ರೆಸ್ ಮಾತ್ರ ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಸ್ಪಷ್ಟವಾಗಿ ತಿಳಿಸಿದೆ. ಕಾಮೆಂಟ್‌ನಲ್ಲಿ ಸಹ ಇದರ ಕುರಿತಾಗಿ ಪರ ವಿರೋಧ ಚರ್ಚೆಯಾಗುತ್ತಿದ್ದು, ಸತ್ಯಾಸತ್ಯತೆ ಇನ್ನಷ್ಟೇ ತಿಳೀಯಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications