ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಲಾಕ್ ಡೌನ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಸಾರ್ವಜನಿಕ ಸಾರಿಗೆ ಬಸ್ಸುಗಳು ಮತ್ತೆ ಸಂಚಾರವನ್ನು ಆರಂಭಿಸಿವೆ. ಆದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಪುನರಾರಂಭಿಸಿಲ್ಲ.

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ವೈರಸ್ ಹರಡಬಹುದೆಂಬ ಭೀತಿಯಿಂದಾಗಿ ಜನರು ಸಾರ್ವಜನಿಕ ಸಾರಿಗೆಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣಕ್ಕೆ ಕೆಲವು ರಾಜ್ಯಗಳಲ್ಲಿ ಸೀಮಿತ ಸಂಖ್ಯೆಯ ಬಸ್ಸುಗಳು ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿಯೇ ಯುವಕನೊಬ್ಬ ಸರ್ಕಾರಿ ಬಸ್ಸಿಗೆ ದಾರಿ ನೀಡದೆ ಅಡ್ಡಿಪಡಿಸಿದ ಘಟನೆ ನಡೆದಿದೆ.

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಈ ಘಟನೆ ನಡೆದಿರುವುದು ಕೇರಳ ರಾಜ್ಯದ ಪಯನೂರಿನಲ್ಲಿ. ಘಟನೆಯಲ್ಲಿ ಭಾಗಿಯಾಗಿದ್ದ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಿದ್ದಾರೆ ಎಂದು ವರದಿಯಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಪೊಲೀಸರು ವಶಕ್ಕೆ ಪಡೆದಿರುವ ಯುವಕನನ್ನು ಪ್ರಣವ್ ಎಂದು ಗುರುತಿಸಲಾಗಿದೆ. ಪ್ರಣವ್ ಕೇರಳದ ಸರ್ಕಾರಿ ಬಸ್ಸಿಗೆ ದಾರಿ ಕೊಡದೆ ಹಲವು ದೂರದವರೆಗೆ ಸಾಗಿದ್ದಾನೆ. ಬಸ್‌ನಲ್ಲಿದ್ದ ಪ್ರಯಾಣಿಕನೊಬ್ಬ ಈ ಘಟನೆಯನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಈ ವೀಡಿಯೊವನ್ನು ಹೆಚ್ಚಿನ ಸಂಖ್ಯೆಯ ಜನರು ಶೇರ್ ಮಾಡಿದ ಕಾರಣಕ್ಕೆ ವೈರಲ್ ಆಗಿ ಪೊಲೀಸರ ಗಮನಕ್ಕೂ ಬಂದಿದೆ. ವೀಡಿಯೊ ಆಧರಿಸಿ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಇದು ಮಾತ್ರವಲ್ಲದೇ ಆತನಿಗೆ ರೂ.10,500ಗಳ ದಂಡವನ್ನು ಸಹ ವಿಧಿಸಿದ್ದಾರೆ. ವೀಡಿಯೊದಲ್ಲಿ ಯುವಕನು ಬಸ್ಸಿಗೆ ದಾರಿ ಕೊಡದೇ ಅಡ್ಡ ಬರುತ್ತಿರುವುದನ್ನು ಕಾಣಬಹುದು.

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಪೊಲೀಸರು ವಾಹನದ ನೋಂದಣಿ ಸಂಖ್ಯೆಯ ಮೂಲಕ ಆತನನ್ನು ಪತ್ತೆಹಚ್ಚಿ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಪೊಲೀಸರು ಯುವಕನು ತನ್ನ ಜೀವನದಲ್ಲಿ ಮರೆಯಲಾಗದಂತಹ ಪಾಠವನ್ನು ಕಲಿಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಯುವಕನ ಈ ಕೃತ್ಯವು ಆತನಿಗೆ ಮಾತ್ರವಲ್ಲದೆ ಬಸ್‌ನಲ್ಲಿದ್ದವರಿಗೂ ಅಪಾಯವನ್ನುಂಟು ತಂದೊಡ್ಡುವ ಸಾಧ್ಯತೆಗಳಿದ್ದವು. ಆದರೆ ಇದ್ಯಾವುದರ ಬಗ್ಗೆಯೂ ಸ್ವಲ್ಪ ಚಿಂತಿಸದೇ ಬಸ್‌ಗೆ ದಾರಿ ಮಾಡಿಕೊಡದೆ ಹುಡುಗಾಟವಾಡಿದ್ದಾನೆ.

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಕೇರಳ ರಾಜ್ಯ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ದೊಡ್ಡ ವಾಹನಗಳ ಮುಂದೆ ಈ ರೀತಿ ಸಾಗುವುದು ನಿಜಕ್ಕೂ ಅಪಾಯಕಾರಿ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಬಸ್ಸು ಅಥವಾ ಟ್ರಕ್‌ಗಳನ್ನು ಒಂದೇ ಬಾರಿಗೆ ನಿಯಂತ್ರಿಸುವುದು ನಿಜಕ್ಕೂ ಕಷ್ಟಕರ ಸಂಗತಿ. ಈ ಕಾರಣಕ್ಕಾಗಿಯೇ ಭಾರೀ ವಾಹನಗಳ ನಡುವೆ ಕನಿಷ್ಠ ಅಂತರವನ್ನು ಬಿಡಬೇಕೆಂದು ಸೂಚಿಸಲಾಗಿದೆ.

ಈ ಹಿಂದೆ ಆಂಬುಲೆನ್ಸ್‌ ತಡೆದ ವಾಹನ ಚಾಲಕನನ್ನು ಪತ್ತೆ ಹಚ್ಚಿ ಆತನಿಗೆ ದಂಡ ವಿಧಿಸಲಾಗಿತ್ತು. ಹೊಸ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ತುರ್ತು ಸೇವೆ ನೀಡುವ ವಾಹನಗಳಿಗೆ ಅಡ್ಡಿಪಡಿಸಿದರೆ ರೂ.10 ಸಾವಿರಗಳವರೆಗೆ ದಂಡ ವಿಧಿಸಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿ ಭಾರೀ ಪ್ರಮಾಣದ ದಂಡ ತೆತ್ತ ಬೈಕ್ ಸವಾರ

ಆದರೆ ಸಾರ್ವಜನಿಕ ಸಾರಿಗೆ ಬಸ್ ಅಥವಾ ಸರ್ಕಾರದ ಇನ್ನಿತರ ವಾಹನಗಳಿಗೆ ಅಡ್ಡಿಪಡಿಸಿದರೆ ಗರಿಷ್ಠ ದಂಡವನ್ನು ವಿಧಿಸುವ ಬಗ್ಗೆ ಮೋಟಾರು ವಾಹನ ಕಾಯ್ದೆಯಲ್ಲಿ ಅವಕಾಶವಿಲ್ಲ. ಕೇರಳ ಪೊಲೀಸರು ಬೇರೆ ಯಾವುದಾದರೂ ಕಾರಣಗಳಿಗಾಗಿ ಯುವಕನಿಗೆ ರೂ.10,500 ದಂಡ ವಿಧಿಸಿರಬಹುದು ಎಂದು ಹೇಳಲಾಗಿದೆ.

Most Read Articles

Kannada
English summary
Kerala police imposes hefty penalty to biker for blocking government bus. Read in Kannada.
Story first published: Thursday, October 1, 2020, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X