ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆಂಡ್ರ್ಯೂಸ್

ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಚಿತ್ರ ಕೆಜಿಎಫ್. ಈ ಚಿತ್ರವು ಪ್ರಪಂಚದ್ಯಾಂತ ಬಿಡುಗಡೆಯಾಗಿ ಅಬ್ಬರಿಸಿದೆ. ಕೆಜಿಎಫ್ ಮತ್ತು ಕೆಜಿಎಫ್ 2 ಚಿತ್ರಗಳು ನಿರ್ಮಿಸಿದ ದಾಖಲೆಗಳು ಒಂದಲ್ಲಾ ಎರಡಲ್ಲಾ. ಸಾಲು ಸಾಲು ದಾಖಲೆಗಳನ್ನು ಪುಡಿಗಟ್ಟಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಕೆಜಿಎಫ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟರಾಗಿ ಅಬ್ಬರಿಸಿದರೆ, ಅವರ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಕ್ಯಾಮರಾಮನ್ ಭುವನ್ ಗೌಡ ಭಾರೀ ಜನಪ್ರಿಯತೆಗಳಿಸಿದ್ದಾರೆ. ಇದರ ಜೊತೆಗೆ ಕೆಜಿಎಫ್ ಚಿತ್ರದ ಯಶಸ್ಸಿನ ಹಿಂದೆ ಇವರಗಳಷ್ಟೇ ಅಲ್ಲದೇ ಖಳನಟರೂ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅದರಲ್ಲಿಯೂ ಬಿಎಸ್ ಅವಿನಾಶ್ ವರ ಪಾತ್ರಕ್ಕೆ ಹಲವು ಜನರ ಮನ ಗೆದ್ದಿದೆ. ಈ ಈ ನಟ ಅವಿನಾಶ್ ಹೊಸ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಕೆಜಿಎಫ್ ಮತ್ತು 2ನೇ ಭಾಗದಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದ ಆ್ಯಡ್ರೂಸ್ ಅಲಿಯಾಸ್ ಅವಿನಾಶ್ ಅವರು ಹೆಚ್ಚು ಫಿಟ್ನೆಸ್ ಕ್ರೇಜ್ ಅನ್ನು ಹೊಂದಿದ್ದಾರೆ. ಅವರು ಹೆಚ್ಚು ಕಾಲ ಜಿಮ್​ ನಲ್ಲಿ ಸಖತ್ ಆಗಿ ಬೆವರು ಹರಿಸುತ್ತಾರೆ. ದಿನಿತ್ಯ ಜಿಮ್​ ಗೆ ಹೋಗುವ ಅವರು, ಹೀರೋಗಳಂತೆ 6 ಪ್ಯಾಕ್ ಮಾಡಿಕೊಂಡಿದ್ದಾರೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ನಟ ಅವಿನಾಶ್ ಅವರು ತಮ್ಮ ಜಿಮ್ ಪೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ನಟ ಅವಿನಾಶ್ ಸಹ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅವರ ಕಜಿಎಫ್ ನಲ್ಲಿನ ಆ್ಯಡ್ರೂಸ್ ಪಾತ್ರಕ್ಕೆ ಎಲ್ಲಡೆ ಉತ್ತಮ ಪ್ರತಿಕಿಯೆ ವ್ಯಕ್ತವಾಗಿತ್ತು.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಇತ್ತೀಚೆಗೆ ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಟ ಅವಿನಾಶ್ ಅವರ ಮರ್ಸಿಡಿಸ್ ಬೆಂಝ್ ಕಾರು ಅಪಘಾತವಾಗಿತ್ತು. ಅಪಘಾತದಲ್ಲಿ ನಟನ ಮರ್ಸಿಡಿಸ್ ಬೆಂಝ್ ಕಾರಿನ ಮುಂಭಾಗದ ಸಂಪೂರ್ಣವಾಗಿ ಜಖಂಗೊಂಡಿತ್ತು. ಇದೀಗ ನಟ ಅವಿನಾಶ್ ಅವರು ಹೊಸ ಬಿಎಂಡಬ್ಲ್ಯು ಎಕ್ಸ್5 ಕಾರನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ನಟ ಖರೀದಿಸಿದ ಈ ಬಿಎಂಡಬ್ಲ್ಯು ಎಕ್ಸ್5 ಕಾರಿನ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ ಪೆಟ್ರೋಲ್ ರೂಪಾಂತರವನ್ನು ಒಂದೇ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ, ಇದನ್ನು xDrive40i M-Sport ಟ್ರಿಮ್ ಎಂದು ಕರೆಯಲಾಗುತ್ತದೆ. ಇದೇ ವೆರಿಯೆಂಟ್ ಅನ್ನು ನಟ ಆಯ್ಕೆ ಮಾಡಿಕೊಂಡಿದ್ದಾರೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ನಾಲ್ಕನೇ ತಲೆಮಾರಿನ ಬಿಎಂಡಬ್ಲ್ಯು ಎಕ್ಸ್5 ಪೆಟ್ರೋಲ್ 3.0-ಲೀಟರ್, ಆರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ ಪ್ರಸರಣಕ್ಕೆ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಈ ಬಿಎಂಡಬ್ಲ್ಯು ಎಕ್ಸ್5 ಕಾರು 5.5 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಐಷಾರಾಮಿ ಕಾರು ಕಂಪನಿಯ CLAR ಆರ್ಕಿಟೆಕ್ಚರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಕಾರಿನಲ್ಲಿ ಪೆಟ್ರೋಲ್ ಲೇಸರ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟೈಲ್‌ಲೈಟ್‌ಗಳು ಮತ್ತು ಎಲ್ಇಡಿ ಫಾಗ್ ಲೈಟ್‌ಗಳನ್ನು ಹೊಂದಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಇನ್ನು ಈ ಕಾರಿನಲ್ಲಿ ಪನೋರಮಿಕ್ ಸನ್‌ರೂಫ್ ಮತ್ತು 20-ಇಂಚಿನ ಎಂ ನಿರ್ದಿಷ್ಟ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ. ಈ ಬಿಎಂಡಬ್ಲ್ಯು ಎಕ್ಸ್5 ಕಾರು ಆಕರ್ಷಕ ಲುಕ್ ಅನ್ನು ಹೊಂದಿದ್ದು, ನೋಡುಗರ ಗಮನ ತನ್ನತ ಸೆಳೆಯುವಂತಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಈ ಮಾದರಿಯಲ್ಲಿನ ಸುರಕ್ಷತಾ ವೈಶಿಷ್ಟ್ಯಗಳು ಆರು ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಬ್ರೇಕ್ ಅಸಿಸ್ಟ್ (ಬಿಎ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಆಟೋ ಹೋಲ್ಡ್ ಫಂಕ್ಷನ್‌ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹಿಲ್ ಡಿಸೆಂಟ್ ಕಂಟ್ರೋಲ್ ( HDC) ಮತ್ತು ರನ್-ಫ್ಲಾಟ್ ಟೈರ್‌ಗಳನ್ನು ಹೊಂದಿವೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಹೊಸ ಬಿಎಂಡಬ್ಲ್ಯು ಎಕ್ಸ್5 ಕಾರಿನಲ್ಲಿ 12.3-ಇಂಚಿನ ಲೈವ್ ಕಾಕ್‌ಪಿಟ್ ಡಿಸ್ ಪ್ಲೇ. ಕ್ರೂಸ್ ಕಂಟ್ರೋಲ್, ಮೂರು ಡ್ರೈವ್ ಮೋಡ್‌ಗಳು (ಇಕೋ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್), ನಾಲ್ಕು-ಜೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಇನ್ನು ಈ ಕಾರಿನಲ್ಲಿ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಈ ಕಾರಿನಲ್ಲಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟುಗಳು, ಡ್ರೈವರ್ ಸೀಟ್‌ಗಾಗಿ ಮೆಮೊರಿ ಫಂಕ್ಷನ್, ಗೆಸ್ಚರ್ ಕಂಟ್ರೋಲ್, ಹೆಡ್ಸ್-ಅಪ್ ಡಿಸ್‌ಪ್ಲೇ (HUD) ಮತ್ತು ಎಲೆಕ್ಟ್ರಿಕ್ ಚಾಲಿತ ಟೈಲ್‌ಗೇಟ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಬಿಎಂಡಬ್ಲ್ಯು ಕಾರು ಖರೀದಿಸಿದ ಕೆಜಿಎಫ್ ಆ್ಯಡ್ರೂಸ್

ಬಿಎಂಡಬ್ಲ್ಯು ಎಕ್ಸ್5 ಕಾರು X5 xDrive30d SportX Plus ಮತ್ತು X5 xDrive40i SportX Plus ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಈ ಈ ಎಸ್‍ಯುವಿಯು ದೊಡ್ಡ ಸಿಂಗಲ್ ಪೀಸ್ ಎಕ್ಸೊಜಿಕಲ್ ಕಿಡ್ನಿ ಗ್ರಿಲ್, ಬಾನೆಟ್ ಮತ್ತು ಶಾರ್ಟ್ ಓವರ್‌ಹ್ಯಾಂಗ್‌ಗಳನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಫಾಗ್ ಲ್ಯಾಂಪ್‌ಗಳು ಮತ್ತು 3ಡಿ ಸುತ್ತು ಎಲ್‌ಇಡಿ ಟೈಲ್-ಲೈಟ್‌ಗಳನ್ನು ಪಡೆಯುತ್ತದೆ.

More from DriveSpark

Article Published On: Wednesday, November 9, 2022, 14:05 [IST]
English summary
Kgf movie actor bs avinash buys bmw x5 suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+