Kia car accident: ಭೀಕರ ಅಪಘಾತ.. ಗಾಳಿಯಲ್ಲಿ 10 ಅಡಿ ಎಗರಿ, ನಜ್ಜುಗುಜ್ಜಾದ ಕಿಯಾ ಕಾರು, ಡ್ರೈವರ್ ಸೇಫ್

ಪ್ರತಿದಿನ ಒಂದಿಲ್ಲೊಂದು ಅಪಘಾತದ ಸುದ್ದಿಯನ್ನು ನಾವು ಕೇಳುತ್ತಲೇ ಇರುತ್ತವೆ. ಅದರಲ್ಲಿ ಬಹುತೇಕ ಆಕ್ಸಿಡೆಂಟ್ ಚಾಲಕ ಅಜಾಗರೂಕತೆಯಿಂದ ಸಂಭವಿಸುತ್ತವೆ. ಮತ್ತೆ ಕೆಲವು ರಸ್ತೆ ಸರಿ ಇಲ್ಲದಿರುವುದು. ವಾಹನಗಳಲ್ಲಿರುವ ತಾಂತ್ರಿಕ ಸಮಸ್ಯೆಯಿಂದ ನಡೆಯುತ್ತವೆ. ಇಲ್ಲೊಂದು ಭೀಕರ ಅಪಘಾತ ವರದಿಯಾಗಿದ್ದು, ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಆದರೆ, ಯಾವ ಸ್ಥಳದಲ್ಲಿ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಹೆದ್ದಾರಿಯನ್ನು ಗಮನಿಸಿದಾಗ ಅಮೆರಿಕದಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಟ್ವಿಟರ್ ಬಳಕೆದಾರ ಅನೂಪ್ ಖತ್ರಾ, ಆಟೊಪೈಲಟ್‌ನಲ್ಲಿದ್ದ ಟೆಸ್ಲಾ ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಸೆರೆಯಾದ ಕಿಯಾ ಕಾರಿನ ಭೀಕರ ಅಪಘಾತದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Kia car accident: ಭೀಕರ ಅಪಘಾತ.. ಗಾಳಿಯಲ್ಲಿ 10 ಅಡಿ ಎಗರಿ, ನಜ್ಜುಗುಜ್ಜಾದ ಕಿಯಾ ಕಾರು, ಡ್ರೈವರ್ ಸೇಫ್

ವಿಡಿಯೋದಲ್ಲಿ ರೆಕಾರ್ಡ್ ಆಗಿರುವ ದೃಶ್ಯಗಳನ್ನು ಗಮನಿಸಿದಾಗ 'ಕಿಯಾ ಸೋಲ್' ಕಾರು ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿರುವುದು ಕಂಡುಬಂದಿದೆ. ಪಕ್ಕದ ಲೇನ್‌ನಲ್ಲಿ ಪೀಕ್ಅಪ್ ಟ್ರಕ್ ವೊಂದು ಹೋಗುತ್ತಿರುತ್ತದೆ. ಕೆಲವೇ ನಿಮಿಷಗಳಲ್ಲಿ ಅದರ ಮುಂಭಾಗದ ಲೆಫ್ಟ್ (ಎಡ) ವೀಲ್ ಇದಕ್ಕಿದ್ದಂತೆ ಕಳಚಿಕೊಂಡು, ಕಿಯಾ ಕಾರಿನಡಿಗೆ ಬರುತ್ತದೆ. ಇದರಿಂದಾಗಿ ಮೊದಲೇ ಸ್ವೀಡ್ ನಲ್ಲಿದ್ದ ಕಿಯಾ ಕಾರು, ಗಾಳಿಯಲ್ಲಿ 10 ಅಡಿ ಎಗರಿ, 2 ಬಾರಿ ಪಲ್ಟಿಯಾಗುತ್ತದೆ.

ಕಿಯಾ ಹಿಂಬದಿಯಲ್ಲಿ ಚಲಿಸುತ್ತಿದ್ದ ಟೆಸ್ಲಾ ಕಾರಿಗೂ ಈ ವೀಲ್ ತಗಲಬೇಕಿತ್ತು. ಇದರಲ್ಲಿರುವ ಆಟೋಪೈಲಟ್ ಸಿಸ್ಟಮ್ ನಿಂದ ಕಾರು ಸುರಕ್ಷಿತವಾಗಿ ನಿಂತಿದೆ. ಇಷ್ಟೇ ಅಲ್ಲದೆ, ದೊಡ್ಡ ಮಟ್ಟದಲ್ಲಿ ಅಪಘಾತವಾಗಿ ಕಿಯಾ ಕಾರು ಸಂಪೂರ್ಣ ನಜ್ಜುಗುಜ್ಜಾದರೂ ಚಾಲಕನ ಜೀವ ಉಳಿದಿದೆ. ಅದಕ್ಕೆ ಕಾರಣವೂ ಇದೆ. ಆ ಸಮಯದಲ್ಲಿ ಆತ ಸೀಟ್‌ಬೆಲ್ಟ್ ಧರಿಸಿದ್ದನು. ಇಂತಹ ಅಪಘಾತದ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸೀಟ್‌ಬೆಲ್ಟ್ ತುಂಬಾ ಮುಖ್ಯವಾಗುತ್ತದೆ.

ಪ್ರತಿಯೊಬ್ಬರು ಚಾಲಕರು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೈಸಿಕಲ್, ಬೈಕ್, ಸ್ಕೂಟರ್ ಹಾಗೂ ಕಾರುಗಳನ್ನು ಓಡಿಸುವ ಮುನ್ನ ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸಿರಿ. ಸಂಚಾರಿ ನಿಯಮ ಪಾಲಿಸಿ. ಈ ಮೂಲಕ ದೊಡ್ಡ ಮಟ್ಟದ ಅಪಘಾತ ಸಂಭವಿಸುವುದನ್ನು ತಪ್ಪಿಸಬಹುದು. ಜೊತೆಗೆ ಮೊಬೈಲ್ ಫೋನ್/ ಇಯರ್ ಫೋನ್ ಗಳನ್ನು ಬಳಸಬೇಡಿ. ದೂರದ ಪ್ರಯಾಣ ಮಾಡುವಾಗ ವಿಶ್ರಾಂತಿ ತೆಗೆದುಕೊಳ್ಳಿರಿ.

ಇನ್ನು, ಮಾರ್ಚ್ 2018ರ ನಂತರ ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಎಲ್ಲ ಟೆಸ್ಲಾ ಕಾರುಗಳು ಡ್ಯಾಶ್‌ಕ್ಯಾಮ್ ಫೀಚರ್ ಹೊಂದಿದ್ದು, ಇದರಿಂದ ಪ್ರಯಾಣದ ವಿಡಿಯೋಗಳನ್ನು ಸುಲಭವಾಗಿ ರೆಕಾರ್ಡ್ ಮಾಡಬಹುದು. ದಕ್ಷಿಣ ಕೊರಿಯಾದ ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಕಿಯಾ ತಯಾರಿಸುವ ಸೋಲ್ ಕಾರಿನ ಬಗ್ಗೆ ಹೇಳುವುದಾದರೆ, ಇದೊಂದು ಎಲೆಕ್ಟ್ರಿಕ್ ಕಾಯಾಗಿದ್ದು, ಸಂಪೂರ್ಣ ಚಾರ್ಜಿನಲ್ಲಿ 280 ಮೈಲಿ ರೇಂಜ್ ನೀಡಲಿದೆ. ಆದರೆ, ಭಾರತದಲ್ಲಿ ಸಿಗುವುದಿಲ್ಲ.

ವಿದೇಶಿ ಮಾರುಕಟ್ಟೆಯಲ್ಲಿ ಮಾರಟವಾಗುವ ಕಿಯಾ ಸೋಲ್ ಸರಿ ಸುಮಾರು ರೂ.27 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, 64 kWh ಲಿಥಿಯಂ ಐಯಾನ್ ಪಾಲಿಮರ್ ಬ್ಯಾಟರಿ ಪ್ಯಾಕ್ ಹೊಂದಿದೆ. ಜೊತೆಗೆ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಅವುಗಳೆಂದರೆ, 17 ಇಂಚಿನ ಅಲಾಯ್ ವೀಲ್ಸ್, 8 ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ರಿವರ್ಸಿಂಗ್ ಕ್ಯಾಮೆರಾ ಸಿಸ್ಟಮ್, ಡ್ಯುಯಲ್ ಫುಲ್ LED ಹೆಡ್‌ಲ್ಯಾಂಪ್ಸ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, March 29, 2023, 13:00 [IST]
English summary
Kia car accident 10 feet in air driver safe details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+