KSRTC: ಅಶ್ವಮೇಧ ಬಸ್‌ಗಳಿಗೆ ಚಾಲನೆ, ಮಹಿಳೆಯರಿಗೆ ಉಚಿತ ಪ್ರಯಾಣ.. ಅತ್ಯಾಧುನಿಕ ಸೌಕರ್ಯ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ - KSRTC), ತನ್ನ ಪ್ರಯಾಣಿಕರಿಗಾಗಿ ಹೊಚ್ಚ ಹೊಸ 100 ಅಶ್ವಮೇಧ (Ashwamedha) ಹೆಸರಿನ ಬಸ್‌ಗಳನ್ನು ಪರಿಚಯಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಈ ಬಸ್‌ಗಳಿಗೆ ಚಾಲನೆ ನೀಡಿದರು.
ಈ ಬಗ್ಗೆ 'ಸಿಎಂ ಕರ್ನಾಟಕ' 'ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 100 ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಅಶ್ವಮೇಧ (ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್) ಬಸ್‌ಗಳನ್ನು ಲೋಕಾರ್ಪಣೆ ಮಾಡಿದರು' ಎಂದು ಬರೆಯಲಾಗಿದೆ.

ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎಸ್ ಆರ್ ಶ್ರೀನಿವಾಸ್ ಸೇರಿದಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ನೂತನ ಅಶ್ವಮೇಧ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಅಶ್ವಮೇಧ ಕ್ಲಾಸಿಕ್ (Ashvamedha Classic) ಎಂಬ ಹೆಸರನ್ನು ಹೊಂದಿರುವ ಈ ಬಸ್‌ಗಳು, 'ಪ್ರಯಾಣದ ಮರುಕಲ್ಪನೆ' ಎಂಬ ಘೋಷ ವಾಕ್ಯವನ್ನು ಹೊಂದಿವೆ. ರಾಜಧಾನಿ ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳ ನಡುವೆ ಸಂಚರಿಸಲಿವೆ.
ನಾನ್-ಎಸಿ ಬಸ್‌ಗಳಾಗಿರುವ ಅಶ್ವಮೇಧ ಕ್ಲಾಸಿಕ್, 52 ಆಸನಗಳನ್ನು ಒಳಗೊಂಡಿವೆ. ಮುಂಭಾಗ & ಹಿಂಭಾಗದ ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳನ್ನು ಪಡೆದಿರುತ್ತವೆ. ಜೊತೆಗೆ ಸೆನ್ಸರ್ ಚಾಲಿತ ನ್ಯೂಮ್ಯಾಟಿಕ್ ಡೋರ್ (ಬಾಗಿಲು), ಜಿಪಿಎಸ್, ರೇರ್ (ಹಿಂಭಾಗ) ಕ್ಯಾಮೆರಾ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಮರ್ಜೆನ್ಸಿ ಬಟನ್, ಮ್ಯಾಗಜೀನ್ & ವಾಟರ್ ಬಾಟಲ್ ಇಡಲು ಪೌಚ್ ಅನ್ನು ಸಹ ಹೊಂದಿವೆ.

ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಶ್ವಮೇಧ ಬಸ್‌ಗಳ ಬಗ್ಗೆ ವಿಡಿಯೊಯೊಂದನ್ನು ಪೋಸ್ಟ್ ಮಾಡಿ, 'ನಾಳೆಯಿಂದ ರಸ್ತೆಗಿಳಿಯಲು ಸಿದ್ಧಗೊಂಡಿರುವ ನಾಡಿನ ಹೆಮ್ಮೆಯ ಕೆಎಸ್‌ಆರ್‌ಟಿಸಿ ಸಂಸ್ಥೆಯ 'ಅಶ್ವಮೇಧ' ಬಸ್‌ಗಳಿವು. ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸುಖಕರ ಪ್ರಯಾಣದ ಅನುಭವ ಒದಗಿಸುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಅಶ್ವಮೇಧ ನಮ್ಮ ಇನ್ನೊಂದು ವಿನೂತನ ಪ್ರಯತ್ನವಾಗಿದೆ' ಎಂದು ಬರೆದುಕೊಂಡಿದ್ದರು.
ಇನ್ನು, ಜನವರಿಯಲ್ಲಿ ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಅಶೋಕ್ ಲೇಲ್ಯಾಂಡ್ (Ashok Leyland), ಏಪ್ರಿಲ್ 2024 ರೊಳಗೆ 1,225 ವೈಕಿಂಗ್ ಬಸ್‌ಗಳನ್ನು (Viking buses) ಪೂರೈಸಲು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳಿಂದ ಬೃಹತ್ ಆರ್ಡರ್ ಪಡೆದುಕೊಂಡಿತ್ತು. ಇದರ ಅಂದಾಜು ವೆಚ್ಚ ರೂ.522 ಕೋಟಿಯಾಗಿದೆ ಎಂದು ವರದಿಯಾಗಿತ್ತು.
ಅಶೋಕ್ ಲೇಲ್ಯಾಂಡ್, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ (STUs) ಮೆಚ್ಚಿನ ಬ್ರಾಂಡ್ ಆಗಿದ್ದು, ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಸೇರಿದಂತೆ ವಿವಿಧ ನಿಗಮಗಳಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯ 11,680 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ವೈಕಿಂಗ್ ಬಸ್‌ಗಳು ಎಐಎಸ್153 ಮಾನದಂಡಗಳಿಗೆ ಅನುಗುಣವಾಗಿದ್ದು, ಸಾರ್ವಜನಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸಲು ಯೋಗ್ಯವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications