ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಕೆ‍ಎಸ್‍ಆರ್‍‍ಟಿಸಿ ಎಸಿ ಬಸ್‍‍ಗಳಲ್ಲಿ ಸಂಚಾರ ಮಾಡಲು ತೆರಳುವಾಗ ಇನ್ನೂ ಮುಂದೆ ನೀರಿನ ಬಾಟಲ್ ತೆಗೆದುಕೊಂಡು ಹೋಗಿ ಸೆಲ್ಪೀ ಕ್ಲಿಕ್ಕಿಸಿಕೊಂಡು ಉಚಿತ ಪ್ರಯಾಣ ಮಾಡಬಹುದು. ಕೆ‍ಎಸ್ಆರ್‍‍ಟಿಸಿ ಎಸಿ ಬಸ್ ಇನ್ನೂ ಮುಂದೆ ರಾತ್ರಿ ಸಮಯದಲ್ಲಿ ಬಸ್‍‍ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀರಿನ ಬಾಟಲ್ ನೀಡಲಾಗುದಿಲ್ಲ.

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಇದುವರೆಗೂ ಕೆಎಸ್​ಆರ್​ಟಿಸಿ ಎಸಿ ಬಸ್​ಗಳಲ್ಲಿ ಪ್ರಯಾಣಿಸುವವರಿಗೆ ನೀರಿನ ಬಾಟಲ್ ನೀಡಲಾಗುತ್ತಿತ್ತು. ಆದರೆ, ಇನ್ನೂ ಮುಂದೆ ಕೆಎಸ್​ಆರ್​ಟಿಸಿ ಐರಾವತ, ಎಸಿ ಸ್ಲೀಪರ್ ಬಸ್​ಗಳಲ್ಲಿ ನೀರಿನ ಬಾಟಲ್ ನೀಡದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಲು ಸಾರಿಗೆ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಇಷ್ಟು ದಿನಗಳ ಕಾಲ ದೂರದೂರಿಗೆ ಪ್ರಯಾಣಿಸುವಾಗ ನೀರಿನ ಬಾಟಲ್ ಬಸ್ ನಲ್ಲಿ ಕೊಡ್ತಾರೆ ಎಂದು ನಿರಾಳವಾಗಿ ಬಸ್ ನಲ್ಲಿ ಪ್ರಯಾಣಿಸಿದ್ದೀರ. ಆದರೆ ಇನ್ನೂ ಮುಂದೆ ಕೆಎಸ್​ಆರ್​ಟಿಸಿ ಐರಾವತ, ಎಸಿ ಸ್ಲೀಪರ್ ಬಸ್​ಗಳಲ್ಲಿ ಪ್ರಯಾಣಿಸುವಾಗ ನೀರಿನ ಬಾಟಲ್ ಕೊಂಡೊಯ್ಯುವುದನ್ನು ಮರೆಯಬೇಡಿ.

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಎಸಿ ಬಸ್‍‍ಗೆ ತೆರಳುವಾಗ ನೀರಿನ ಬಾಟಲ್ ತೆಗೆದುಕೊಂಡು ಹೋಗಿ ಸೆಲ್ಪೀ ಕ್ಲಿಕ್ಕಿಸಿಕೊಂಡು ಎಸಿ ಬಸ್‍‍ನಲ್ಲಿ ಉಚಿತ ಪ್ರಯಾಣ ಮಾಡಬಹುದು. ಪ್ರಯಾಣಿಕರು ತಮ್ಮದೇ ಬಾಟಲ್ ತಗೆದುಕೊಂಡು ಬರವುದಕ್ಕೆ ಉತ್ತೇಜಿಸಲು ಹೊಸ ಅಭಿಯಾನವೊಂದು ಪ್ರಾರಂಭವಾಗಿದೆ.

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಏನೀದು ಅಭಿಯಾನ

ನೀವು ಕೂಡ ಈ ಅಭಿಯಾನದಲ್ಲಿ ಪಾಲ್ಗೋಂಡು ಉಚಿತವಾಗಿ ಪ್ರಯಾಣಿಸಬಹುದು. ನೀವು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಪ್ರಯಾಣಿಸುವವರಾದರೆ ನಿಮ್ಮದೇ ನೀರಿನ ಬಾಟಲಿಯೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡು #NammaSarigeMyOwnWaterBottle ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಸೆಲ್ಫೀಯನ್ನು ಪೋಸ್ಟ್​ ಮಾಡಬಹುದು. ಸ್ವಂತ ನೀರಿನ ಬಾಟಲಿಗಳನ್ನು ತರುವುದನ್ನು ಉತ್ತೇಜಿಸಲು ಕೆಎಸ್​ಆರ್​ಟಿಸಿ ಈ ಅಭಿಯಾನವನ್ನು ನಡೆಸುತ್ತಿದೆ. ಈ ಹ್ಯಾಶ್​ಟ್ಯಾಗ್​ನೊಂದಿಗೆ ಯಾರು ಫೋಟೋ ಪೋಸ್ಟ್​ ಮಾಡುತ್ತಾರೋ ಅವರಿಗೆ ಕೆಎಸ್​ಆರ್​ಟಿಸಿಯ ಎಸಿ ಬಸ್​ನಲ್ಲಿ ಒಂದು ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗುವುದು.

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಈ ಅಭಿಯಾನದಲ್ಲಿ ಮಕ್ಕಳು, ಮಧ್ಯ ವಯಸ್ಸಿನವರು ಮತ್ತು ಹಿರಿಯ ನಾಗರಿಕರು ಎಂಬ 3 ವಿಭಾಗಗಳಲ್ಲಿ ನಡೆಸಲಾಗುವುದು. ಸೆಲ್ಫೀ ಸ್ಪರ್ಧೆಯಲ್ಲಿ ಗೆಲ್ಲುವ ಪ್ರತಿ ವಿಭಾಗದ ಮೂವರು ದೂರದೂರಿಗೆ ತೆರಳುವಾಗ ಅಥವಾ ವಾಪಾಸ್​ ಬರುವಾಗ ಒಮ್ಮೆ ಉಚಿತವಾಗಿ ಪ್ರಯಾಣಿಸಬಹುದು.

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ನೀವು ಸೆಲ್ಫೀ ಕ್ಲಿಕ್ಕಿಸಿಕೊಂಡು #NammaSarigeMyOwnWaterBottle ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಪರಿಸರವನ್ನು ಉಳಿಸುವಂತೆ ಆಕರ್ಷಕ ಟ್ಯಾಗ್‍‍ಲೈನ್ ಹಾಕಬೇಕಾಗಿರುವುದು ಕಡ್ಡಾಯವಾಗಿದೆ. ಆಕರ್ಷಕ ಟ್ಯಾಗ್‍ಲೈನ್ ನೊಂದಿಗೆ ನಿಮ್ಮ ಸೆಲ್ಫೀಯನ್ನು ಪೋಸ್ಟ್ ಮಾಡಬಹುದು.

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಇಂದಿನಿಂದ ಬಸ್​ನಲ್ಲಿ ನೀರಿನ ಬಾಟೆಲ್ ನೀಡುವುದಿಲ್ಲ. ಮರುಬಳಕೆ ಮಾಡುವ ನೀರಿನ ಬಾಟಲ್ ಅಥವಾ ಸ್ಟೀಲ್​ನ ನೀರಿನ ಬಾಟೆಲ್ ತರುವುದನ್ನು ಪ್ರಚೋದಿಸಲು ಸಾರಿಗೆ ಇಲಾಖೆ ಈ ರೀತಿ ಕ್ರಮ ಕೈಗೊಂಡಿದೆ. ಇದರೊಂದಿಗೆ ಕೆಲವರು ಇದೇ ನೀರಿನ ಬಾಟಲ್​ಗಳನ್ನು ಮತ್ತೆ ನೀರು ತುಂಬಿಟ್ಟುಕೊಳ್ಳಲು ಬಳಸುತ್ತಾರೆ. ಈ ಬಾಟಲ್​ಗಳನ್ನು ಬಿಸಾಡಿದರೂ ಅದು ಪರಿಸರಕ್ಕೆ ಹಾನಿಯುಂಟುಮಾಡುತ್ತದೆ. ಈ ದೃಷ್ಟಿಯಿಂದ ಪ್ಲಾಸ್ಟಿಕ್​ ಬಾಟಲ್​ಗಳ ನಿಯಂತ್ರಣಕ್ಕೆ ಕೆಎಸ್​ಆರ್​ಟಿಸಿ ಮುಂದಾಗಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಒಂದು ವರ್ಷಕ್ಕೆ ಕೆಎಸ್​ಆರ್​ಟಿಸಿಯಿಂದಲೇ 1.2 ಕೋಟಿ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಬಿಸಾಡಲಾಗುತ್ತಿತ್ತು. ಇನ್ನು ಮುಂದಿನ ದಿನಗಳಲ್ಲಿ ಕೆಎಸ್​ಆರ್​ಟಿಸಿಯ ಹೊಸ ನಿಯಮದ ಬಗ್ಗೆ ಪ್ರಯಾಣಿಕರ ಟಿಕೆಟ್​ನಲ್ಲಿಯೇ ನಮೂದಿಸಿ ಅವರಿಗೆ ಮಾಹಿತಿ ನೀಡಲಾಗುವುದು. ಇದರಿಂದ ಪ್ರಯಾಣಿಕರು ತಾವು ಬಳಸುವ ನೀರಿನ ಬಾಟಲ್​ಗಳನ್ನು ಜೊತೆಯಲ್ಲಿ ತಂದಿಟ್ಟುಕೊಳ್ಳಲು ಸಹಾಯವಾಗಲಿದೆ. ಈ ಬಗ್ಗೆ ಆನ್​ಲೈನ್ ಬುಕ್ಕಿಂಗ್​ನ ವೆಬ್​ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಾದ ಫೇಸ್‍‍ಬುಕ್ ,ಟ್ವಿಟರ್‍‍ನಲ್ಲಿಯು ಕೆಎಸ್​ಆರ್​ಟಿಸಿ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಬಿಎಂಟಿಸಿ ಬಸ್‍ನಲ್ಲಿಯೂ ಕೂಡ ಇನ್ನು ಮುಂದೆ ಪ್ರಯಾಣಿಕರು ಪ್ಲಾಸ್ಟಿಕ್ ಕವರ್, ವಸ್ತು ತರುವಂತಿಲ್ಲ ಎಂದು ಆಕ್ಟೋಬರ್ 1ರಂದು ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಆದೇಶ ಹೊರಡಿಸಿದ್ದರು. ಬಿಎಂಟಿಸಿ ಬಸ್‍ನಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ನಿಷೇಧಿಸಿರುವ ಬಿಎಂಟಿಸಿ ಅಡಳಿತ ಮಂಡಳಿ, ಪ್ಲಾಸ್ಟಿಕ್‍ನ್ನು ತರದಂತೆ ಪ್ರಯಾಣಿಕರಿಗೆ ಜಾಗೃತಿ ಮೂಡಿಸಲು ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸುತ್ತೋಲೆಯಲ್ಲಿ ತಿಳಿಸಿದೆ. ಬೆಂಗಳೂರು ವಿಭಾಗದ ಸೌತ್​ ವೆಸ್ಟರ್ನ್​ ರೈಲ್ವೇಸ್​ನಲ್ಲಿಯೂ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ನಿಷೇಧಿಸಲು ನಿರ್ಧರಿಸಲಾಗಿದೆ.

MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಇನ್ಮುಂದೆ ಕೆ‍ಎಸ್ಆರ್‍‍‍ಟಿಸಿ ಬಸ್‍‍ನಲ್ಲಿ ನೀರು ಸಿಗಲ್ಲ..!

ಪರಿಸರಕ್ಕೆ ಹಾನಿಯನ್ನು ಉಂಟು ಮಾಡುವ ಪ್ಲಾಸ್ಟಿಕ್ ಕವರ್ ಬಳಕೆಯನ್ನು ನಿಷೇಧಿಸಲು ಸಾರಿಗೆ ಸಂಸ್ಥೆಗಳ ಈ ನಿರ್ಧಾರ ಅಭಿನಂದನಾರ್ಹವಾಗಿದೆ. ಸಾರಿಗೆ ಸಂಸ್ಥೆಯೊಂದಿಗೆ ಸಾರ್ವಜನಿಕರ ಸಹಕಾರವು ಬಹಳ ಮುಖ್ಯವಾಗಿದೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಕೆಎಸ್ಆರ್‌ಟಿ ಸಂಸ್ಥೆಯು ಒಂದಡೆ ಪ್ಲಾಸ್ಟಿಕ್‌ ಬಳಕೆಯನ್ನು ತಗ್ಗಿಸಲು ನೀರು ಸರಬರಾಜು ಮಾಡುವುದನ್ನ ಸಿಲ್ಲಿಸಿದ್ದರೆ ಹೈದ್ರಾಬಾದ್ ಮೂಲದ ಎಂಜಿನಿಯರ್‌ರೊಬ್ಬರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ನಿಂದಲೇ ಪೆಟ್ರೋಲ್ ಉತ್ಪಾದನೆ ಮಾಡಿ ಪ್ಲಾಸ್ಟಿಕ್‌ನಿಂದಾಗುತ್ತಿರುವ ಸಮಸ್ಯೆಗಳಿಗೆ ಮುಕ್ತಿ ನೀಡುತ್ತಿದ್ದಾರೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಗಗನಮುಖಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಬಹುತೇಕ ವಾಹನ ಖರೀದಿದಾರರು ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿದ್ದು, ಹೀಗಿರುವಾಗ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ನಿಂದ ಪೆಟ್ರೋಲ್ ಸಿದ್ದಪಡಿಸಿರುವ ಎಂಜಿನಿಯರ್‌ ಒಬ್ಬರು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಅನ್ನೇ ಬಳಕೆ ಮಾಡಿಕೊಂಡು ಈ ಹೊಸ ಆವಿಷ್ಕಾರವನ್ನು ಮಾಡಲಾಗಿದೆ. ಹೈದ್ರಾಬಾದ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಪ್ರೋ. ಸತೀಶ್ ಎನ್ನುವರೇ ಇದರ ರೂವಾರಿಯಾಗಿದ್ದು, ನಗರದಲ್ಲಿ ದಿನಂಪ್ರತಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಪೆಟ್ರೋಲ್ ಸಿದ್ದಪಡಿಸುತ್ತಿದ್ದಾರೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಸಮಸ್ಯೆಯನ್ನು ತಗ್ಗಿಸುವುದು ಹೇಗೆ ಪ್ರಶ್ನೆ ಮುಂದಿಟ್ಟು ಹೊಸ ಪ್ರಯತ್ನ ನಡೆಸುತ್ತಿದ್ದಾಗಲೇ ಪೆಟ್ರೋಲ್ ಉತ್ಪಾದನೆ ಸಾಧ್ಯತೆ ಕುರಿತು ಎಂಜಿನಿಯರ್ ಸತೀಸ್ ಅವರು ಹೊಸ ಪ್ರಯೋಗ ಮಾಡಿ ಇಂತದೊಂದು ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತಾಜ್ಯವನ್ನು ಪ್ರಮುಖ ಮೂರು ಹಂತಗಳಲ್ಲಿ ರಸಾಯನಿಕ ಪ್ರಕ್ರಿಯೆಗಳ ಮೂಲಕ ಸಂಸ್ಕರಿಸಿ ಮಾಡಿದ ನಂತರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನವನ್ನು ಸಿದ್ದಪಡಿಸಲಾಗಿದ್ದು, ಪರಿಸರಕ್ಕೆ ಮಾರಕವಾಗದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಈ ಹೊಸ ಪೆಟ್ರೋಲ್ ಮಾದರಿಯನ್ನು ಸಿದ್ದಗೊಳಿಸಲಾಗಿದೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

2016ರಿಂದಲೇ ಎಂಜಿನಿಯರ್ ಸತೀಶ್ ಅವರು ಈ ಪ್ರಯೋಗ ಮಾಡುತ್ತಿದ್ದು, ಪ್ರತಿ ದಿನ ಕನಿಷ್ಠ 200 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಕನಿಷ್ಠ 200 ಲೀಟರ್ ಪೆಟ್ರೋಲ್ ಉತ್ಪಾದನೆ ಮಾಡುತ್ತಿದ್ದಾರೆ. ಕಳೆದ ಮೂರುವರೇ ವರ್ಷಗಳಲ್ಲಿ ಬರೋಬ್ಬರಿ 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಿರುವ ಪ್ರೋ. ಸತೀಸ್ ಅವರು, ಅತಿ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಪ್ರತಿ ಲೀಟರ್‌ಗೆ ರೂ. 40ರಿಂದ ರೂ. 50 ಮಾತ್ರ..!

ಸದ್ಯ ಪ್ರೋ. ಸತೀಶ್ ಅವರು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ ರೂ.40ರಿಂದ ರೂ.50ಕ್ಕೆ ಮಾರಾಟ ಮಾಡುತ್ತಿದ್ದು, ಸ್ಥಳೀಯ ಕೈಗಾರಿಕಾ ಕೇಂದ್ರಗಳೇ ಇದರ ಪ್ರಮುಖ ಗ್ರಾಹಕರಾಗಿದ್ದಾರೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ವಾಹನಗಳಲ್ಲಿ ಬಳಕೆಗೆ ಯೋಗ್ಯವೇ?

ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಲ್ಲಿ ಬಳಕೆ ಕುರಿತಂತೆ ಹಲವು ಪ್ರಯತ್ನಗಳು ನಡೆದಿದ್ದರೂ ಇದುವರೆಗೂ ಅಧಿಕೃತವಾದ ಟೆಸ್ಟಿಂಗ್ ನಡೆಸಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಕುರಿತು ಅಧಿಕೃತ ಟೆಸ್ಟಿಂಗ್ ನಡೆಸಿದ ನಂತರವಷ್ಟೇ ಇದು ವಾಹನಗಳಲ್ಲಿ ಬಳಕೆಗೆ ಯೋಗ್ಯವೇ ಎಂಬುದು ತಿಳಿದು ಬರಲಿದೆ.

ಪ್ಲಾಸ್ಟಿಕ್‌ನಿಂದ ಉತ್ಪಾದನೆ ಮಾಡಲಾದ ಈ ಪೆಟ್ರೋಲ್ ದರ ಎಷ್ಟು ಗೊತ್ತಾ?

ಸದ್ಯಕ್ಕೆ ಕೈಗಾರಿಕೊದ್ಯಮದಲ್ಲಿ ಮಾತ್ರವೇ ಈ ತೈಲ ಉತ್ಪನ್ನ ಬಳಕೆ ಮಾಡಲಾಗುತ್ತಿದ್ದು, ಒಂದು ವೇಳೆ ವಾಹನಗಳಲ್ಲಿಯೂ ಬಳಕೆಗೆ ಯೋಗ್ಯ ಎಂದಾದಲ್ಲಿ ಇದೊಂದು ಮಹತ್ವದ ಯೋಜನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ ದೇಶಾದ್ಯಂತ ದಿನಂಪ್ರತಿ ಉತ್ಪಾದನೆಯಾಗುವ ಸಾವಿರಾರು ಟನ್ ಪ್ಲಾಸ್ಟಿಕ್ ತ್ಯಾಜ್ಯಕ್ಕೂ ಮುಂದೊಂದು ದಿನ ಭಾರೀ ಬೇಡಿಕೆ ಬಂದರೂ ಅಚ್ಚರಿಯಿಲ್ಲ.

Most Read Articles

Kannada
English summary
KSRTC to stop water bottles in premium buses - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X