ಪುರುಷರಿಗೆ ಪ್ರವೇಶ ನಿಷೇಧ; ಮಹಿಳೆಯರಿಗಾಗಿ ವಿಶ್ವದ ಮೊದಲ ಐಷಾರಾಮಿ ವಿಹಾರ ನೌಕೆ
ಈ ವಿಶೇಷ ಲೇಖನ ಓದಿದರೆ ಖಂಡಿತ ನಿಮ್ಮಲ್ಲೂ ಆಶ್ಚರ್ಯವುಂಟಾಗಬಹದು. ಮಹಿಳೆಯರ ಸಬೀಲಿಕರಣದ ಬಗ್ಗೆ ನೀವು ಕೇಳಿರಬಹುದು. ಇದಕ್ಕಾಗಿ ಅವಿರತ ಪ್ರಯತ್ನವೂ ನಡೆಯುತ್ತಿದೆ. ಆದರೆ ಇವೆಲ್ಲಕ್ಕಿಂತಲೂ ವಿಭಿನ್ನವಾಗಿ ನಾವು ಮಾತನಾಡುತ್ತಿರುವುದು ಪ್ರಪಂಚದ ಮೊತ್ತ ಮೊದಲ ಮಹಿಳೆಯರ ಐಷಾರಾಮಿ ಹಡಗಿನ ಬಗ್ಗೆ.
ಇಲ್ಲಿ ಪುರುಷರಿಗೆ ಪ್ರವೇಶ ಸಂಪೂರ್ಣ ನಿಷಿದ್ಧ. ಸಾಮಾನ್ಯವಾಗಿ ಲಿಂಗ ಭೇದವಿಲ್ಲದೇ ಐಷಾರಾಮಿ ನೌಕಾ ದೋಣಿಗಳನ್ನು ತಯಾರಿಸಲಾಗುತ್ತದೆ. ಆದರೆ ಲಿಡಿಯಾ ಬೆರ್ಸಾನಿ (Lidia Bersani) ವಿನ್ಯಾಸಗೊಳಿಸಿರುವ ಸೂಪರ್ ಯಾಚ್ಟ್ 'ಲಾ ಬೆಲ್ಲೆ' (La Belle) ವಿಹಾರ ನೌಕೆ ಸಂಪೂರ್ಣವಾಗಿ ಮಹಿಳೆಯರಿಗಾಗಿ ಮೀಸಲು. ಅಷ್ಟಕ್ಕೂ ಈ ಹಡಗಿನಲ್ಲಿ ಅಂಥದ್ದೇನಿದೆ? ಎಂಬುದನ್ನು ತಿಳಿದುಕೊಳ್ಳಲು ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಶ್ವೇತ ಹಾಗೂ ಚಿನ್ನದ ಲೇಪನದ ಈ 262 ಅಡಿ ಉದ್ದದ ಐಷಾರಾಮಿ ವಿಹಾರ ನೌಕೆ ಸಂಪೂರ್ಣವಾಗಿಯೂ ಮಹಿಳೆಯರಿಗಾಗಿ ಮೀಸಲಾಗಿದ್ದು, ಸ್ಫಟಿಕ, ಚಿನ್ನ, ರತ್ನ, ಹವಳ ಮತ್ತು ಹೂಗಳಿಂದ ರಚಿಸಲಾಗಿದೆ.

ಇದೇ ಕಾರಣಕ್ಕಾಗಿ ಲಾ ಬೆಲ್ಲೆ ಎಂಬ ಹೆಸರನ್ನು ಇದಕ್ಕೆ ಇಡಲಾಗಿದೆ. ಫ್ರಾನ್ಸ್ ಪದವಾಗಿರುವ ಲಾ ಬೆಲ್ಲೆ ಮಹಿಳೆಯ ಸೌಂದರ್ಯದ ಸೂಚಕವಾಗಿದೆ.

ಸಕಲ ಐಷಾರಾಮಿ ಸೌಕರ್ಯಗಳಿಂದಲೂ ಕೂಡಿರುವ ಇದರ ಮಾಸ್ಟರ್ ಕ್ಯಾಬಿನ್ ಡಬಲ್ ಬೆಡ್ ರೂಂ, ಮೇಲ್ಮಾಳಿಗೆ ಹಾಗೂ ಪ್ಯಾನರಾಮಿಕ್ ವೀಕ್ಷಣೆಯ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಇದು ಭವ್ಯವಾದ ಚಿನ್ನದ ಮೊಸಾಯಿಕ್ಸ್, ಮುತ್ತು, ಹರಳಿನ ಗೊಂಚಲು, ರತ್ನಗಲ್ಲುಗಳು ಮತ್ತು ಬೆಳೆ ಬಾಳುವ ಪೀಠೋಪಕರಣ ಸೌಲಭ್ಯಗಳನ್ನು ಹೊಂದಿದೆ.

ವಿಹಾರ ದೋಣಿಯ ವಿನ್ಯಾಸದ ಬಗ್ಗೆ ಮಾತಾಡುವುದಾದರೆ ಮೃದುವಾದ ಅಂಚುಗಳು, ನಯಗೊಳಿಸಿದ ರೇಖೆಗಳು, ಹೂಗಳ ಮಾದರಿಗಳು ಹಾಗೂ ದೊಡ್ಡ ಪ್ರಮಾಣದ ಗಾಜು, ಸ್ಪಟಿಕ ಹಾಗೂ ಪ್ರಕಾಶಮಾನ ಬಿಳಿ ಬಣ್ಣದಿಂದ ಸುತ್ತುವರಿಯಲ್ಪಟ್ಟಿದೆ.

ವಿನ್ಯಾಸಗಾರ್ತಿ ಲಿಡಿಯಾ ಹೇಳುವ ಪ್ರಕಾರ "ಪ್ರಸ್ತುತ ವಿಹಾರ ನೌಕೆಯು ಪ್ರೇಮದ ಸಂಕೇತವನ್ನು ಸೂಚಿಸುತ್ತದೆ". ಬಿಳಿ, ದಂತ ಹಾಗೂ ಚಿನ್ನದ ಬಣ್ಣಗಳನ್ನು ಪ್ರಮುಖವಾಗಿಯೂ ಬಳಸಲಾಗಿದೆ. ಇನ್ನು ಒಳಮೈಯಲ್ಲಿ ಹೆಚ್ಚಿನ ಅನುಕೂಲತೆಗೆ ಆದ್ಯತೆ ಕೊಡಲಾಗಿದೆ.

ಆರು ಡಿಲಕ್ಸ್ ಕ್ಯಾಬಿನ್‌ಗಳನ್ನು ಹೊಂದಿರುವ ಈ ಐಷಾರಾಮಿ ವಿಹಾರ ನೌಕೆಯಲ್ಲಿ 12 ಆತಿಥಿಗಳಿಗೆ ಹಾಯಾಗಿ ಮಲಗಬಹುದಾಗಿದೆ.

ಹಾಗೊಂದು ವೇಳೆ ನಿಮಗೆ ಬೋರಿಂಗ್ ಅಥವಾ ಬೇಸರ ತರಿಸಿದರೆ ಲೈವ್ ಮ್ಯೂಸಿಕ್ ವ್ಯವಸ್ಥೆಯು ಇದರಲ್ಲಿದೆ. ಇನ್ನು ಡೈನಿಂಗ್ ಟೇಬಲ್ ಜೊತೆಗೆ ಖಾಸಗಿ ಮೇಲ್ಮಾಳಿಗೆ ವ್ಯವಸ್ಥೆಯು ಸಿಗುತ್ತದೆ.

ಇನ್ನು ಮಹಿಳೆಯರ ಮೇಕಪ್ ಹೇಗೆ ಮರೆಯಲು ಸಾಧ್ಯ? ಇದರಲ್ಲಿ ವಿಶೇಷ ಸ್ಪಾ ಪ್ರದೇಶ, ಮಸಾಜ್, ಈಜುಕೊಳ, ಹಿಮ ಕೊಠಡಿ ಐಸ್ ಕಾರಂಜಿ, ಫಿಟ್ನೆಸ್ ಕ್ಲಬ್, ಬ್ಯೂಟಿ ಸೆಂಟರ್, ಸಿನೆಮಾ ಮತ್ತು ಕಂಪ್ಯೂಟರ್ ಗೇಮ್ ವ್ಯವಸ್ಥೆಯೂ ಇದೆ.

ಇವೆಲ್ಲದಕ್ಕಿಂತಲೂ ಮಿಲಿಗಾಗಿ ಹೆಲಿಕಾಪ್ಟರ್ ಬಂದಿಳಿಯಲು ಹೆಲಿ ಪ್ಯಾಡ್ ವ್ಯವಸ್ಥೆಯನ್ನು ಒದಗಿಸಲಾಗಿದೆ. ಚಿತ್ರದಲ್ಲಿ ಹಡಗಿನ ಮೇಲೆ ಚಿನ್ನದ ಹೆಲಿಕಾಪ್ಟರ್ ನೀವು ನೋಡಬಹುದಾಗಿದೆ.

ಅಷ್ಟಕ್ಕೂ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿರುವ ಈ ಐಷಾರಾಮಿ ವಿಹಾರ ನೌಕೆ ಎಷ್ಟು ದುಬಾರಿಯಾಗಲಿದೆ ಎಂಬುದು ಇನ್ನು ತಿಳಿದು ಬಂದಿಲ್ಲ. ಇಲ್ಲಿ ವಿನ್ಯಾಸಗಾರ್ತಿಯ ಪ್ರಕಾರ "ವಿಶ್ವದ ಅತ್ಯಂತ ಐಷಾರಾಮಿ ಯಾಚ್ಟ್ ನಿರ್ಮಾಣ ಮಾಡುವುದೇ ಗುರಿಯಾಗಿದೆ" ಎಂದಿದ್ದಾರೆ.


Click it and Unblock the Notifications








