3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

Written By:

ದುಡ್ಡಿದ್ದವನೇ ದೊಡ್ಡಪ್ಪ! ಕಡಲಾಚೆಗಿನ ರಾಷ್ಟ್ರ ಸೌದಿ ಅರೇಬಿಯಾದಲ್ಲಿ ಈಗಲೂ ರಾಜ ಪರಂಪರೆಯನ್ನು ಕಾಪಾಡಿಕೊಂಡು ಬರಲಾಗಿದೆ. ಹೌದು ನಾವಿಂದು ಮಾತನಾಡುತ್ತಿರುವುದು ಸೌದಿ ಅರೇಬಿಯಾ ರಾಜಕುಮಾರ ಅಲ್-ವಾಲೀದ್ ಬಿನ್ ತಲಾಲ್ (al-Waleed bin Talal) ಬಗ್ಗೆ.

ಇವರು ತಮ್ಮ ಖಾಸಗಿ ಅಗತ್ಯಗಳಿಗಾಗಿ ಬಹುಕೋಟಿ ಬೆಲೆಬಾಳುವ ಏರ್ ಬಸ್ ಎ380 ವಿಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಹಾರುವ ಬಂಗಲೆಯಲ್ಲಿ ತಮ್ಮ ಖಾಸಗಿ ಪಯಣವನ್ನು ಮತ್ತಷ್ಟು ಆಡಂಬರಗೊಳಿಸಿದ್ದಾರೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಬೃಹತ್ ತೈಲ ನಿಕ್ಷೇಪ ಹೊಂದಿರುವ ಸೌದಿಯಲ್ಲಿ ದುಡ್ಡು ಸಂಪಾದನೆಗೆ ಯಾವುದೇ ಕೊರತೆಯಿಲ್ಲ. ಇಲ್ಲಿ ಸವಾಯ್ ಹೋಟೆಲ್ ಮಾಲಿಕರೂ ಆಗಿರುವ ಅಲ್ ವಾಲೀದ್ ತಮ್ಮ ಖಾಸಗಿ ವಿಮಾನವನ್ನು ತಮಗೆ ಬೇಕಾದ ರೀತಿಯಲ್ಲಿ ಮಾರ್ಪಾಡುಗೊಳಿಸಿದ್ದಾರೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ನಿಮಗಿದನ್ನು ಊಹಿಸಲು ಸಾಧ್ಯವೇ? ಸಾಮಾನ್ಯ ಏರ್ ಬಸ್ ವಿಮಾನದಲ್ಲಿ 600ರಷ್ಟು ಪ್ರಯಾಣಿಕರು ಸಂಚರಿಸಬಹುದಾಗಿದೆ. ಆದರೆ ಇಲ್ಲಿನ ರಾಜಕುಮಾರ ಈ ಎಲ್ಲ ಸೌಲಭ್ಯಗಳನ್ನು ತಮ್ಮ ಖಾಸಗಿ ಪ್ರಯಣಕ್ಕಾಗಿ ಮೀಸಲಿಟ್ಟಿದ್ದಾರೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಪಂಚತಾರಾ ಹೋಟೆಲ್ ಅಥವಾ ಅದಕ್ಕಿಂತಲೂ ಮೇಲ್ದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ ವಿಮಾನವನ್ನು ವಾರ್ಕ್ ಸ್ಟರ್ ಶೈರ್ ನ ಡಿಸೈನ್ ಕ್ಯೂ ಸಂಸ್ಥೆಯು ವಿನ್ಯಾಸಗೊಳಿಸಿದೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಇದರ ಮಗದೊಂದು ವೈಶಿಷ್ಟ್ಯವೆಂದರೆ ಪ್ರಸ್ತುತ ಏರ್ ಬಸ್ ವಿಮಾನದಲ್ಲಿ ಐಷಾರಾಮಿ ಕಾರೊಂದನ್ನು ಹೊತ್ತೊಯ್ಯಲಾಗುತ್ತದೆ. ಇದು ರಾಜಕುಮಾರನಿಗೆ ವಿಮಾನ ಯಾತ್ರೆಯ ಬಳಿಕ ಅಲ್ಲಿಂದ ಪಯಣ ಮುಂದುವರಿಸಲು ನೆರವಾಗುತ್ತದೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಅಂತೆಯೇ ಅತಿ ಐಷಾರಾಮಿ ಟರ್ಕಿಷ್ ಶೌಚಾಲಯದ ಜೊತೆಗೆ ವಿಶ್ರಾಂತಿ ಕೊಠಡಿ, ಐಷಾರಾಮಿ ಬೆಡ್ ರೂಂ ಮುಂತಾದ ಸೇವೆಗಳನ್ನು ನೀಡಲಾಗಿದೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಇನ್ನು ವಾಣಿಜ್ಯ ಅಗತ್ಯಗಳಿಗಾಗಿ ವಿಶೇಷ ಕಾನ್ಪೆರನ್ಸ್ ಹಾಲ್, ಕಚೇರಿ ಕೂಡಾ ಇದರಲ್ಲಿದೆ. ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಅಂತೆಯೇ ಆತಿಥಿಗಳಿಗೆ ಪಯಣಿಸಲು ವಿಶೇಷ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಮನರಂಜನೆಗಾಗಿ ಎಲ್ ಸಿಡಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಈಜುಕೊಳ, ರಾಯಲ್ ಲಾಂಗ್, ಡೈನಿಂಗ್ ಕೋಣೆ ಹಾಗೂ ಮಾಳಿಗೆ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಅಷ್ಟಕ್ಕೂ ಇದರ ಬೆಲೆ ಎಷ್ಟು ಗೊತ್ತೇ? ಸರಿ ಸುಮಾರು ಅಂದಾಜು 3000 ಕೋಟಿ ರುಪಾಯಿಗಿಂತಲೂ (£300m)ಹೆಚ್ಚು ಬೆಲೆ ಬಾಳುತ್ತಿದೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಒಟ್ಟಿನಲ್ಲಿ ಓರ್ವ ಕೋಟ್ಯಧಿಪತಿಗೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಕೊಡಲಾಗಿದೆ. ಅಂದ ಮಾತ್ರಕ್ಕೆ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯ ಬಳಿ ಐಷಾರಾಮಿ ವಿಮಾನ ಮಾತ್ರವಲ್ಲದೆ ಕೋಟಿಗಟ್ಟಲೆ ಬೆಲೆ ಬಾಳುವ ಲಗ್ಷುರಿ ಹಡಗು, ರೋಲ್ಸ್ ರಾಯ್ಸ್ ಕಾರು ಹಾಗೂ ಮಗದೊಂದು ವಿಮಾನದ ಒಡೆಯರೂ ಆಗಿದ್ದಾರೆ.

3000 ಕೋಟಿಯ ಸೌದಿ ರಾಜಕುಮಾರನ ಹಾರುವ ಬಂಗಲೆ

ಈಗ ಇಂತಹದೊಂದು ಖಾಸಗಿ ವಿಮಾನವನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

English summary
Here is private jet of Saudi Arabian Prince Alwaleed bin Talal al-Saud. You have never seen a luxurious interior like this. Check out some awesome pictures of this luxury private jet.
Story first published: Friday, May 22, 2015, 15:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark