Nayanthara: ಇದೇ ನೋಡಿ.. ನಟಿ ನಯನತಾರಾಗೆ ಪತಿ ಕೊಟ್ಟ 3 ಕೋಟಿ ಬೆಲೆಯ ಮರ್ಸಿಡಿಸ್ ಕಾರು
ನಟಿ ನಯನತಾರಾ (Nayanthara) ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಲೇಡಿ ಸೂಪರ್‌ಸ್ಟಾರ್ (Lady Superstar) ಆಗಿ ಗುರುತಿಸಿಕೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಎರಡು ದಶಕಗಳಿಂದ ಚಿತ್ರರಂಗದಲ್ಲಿರುವ ನಯನತಾರಾ, 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕೆಲವು ದಿನಗಳ ಹಿಂದೆ, ಪತಿ ವಿಘ್ನೇಶ್ ಶಿವನ್ (Vignesh Shivan), ನಯನತಾರಾ ಅವರ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಮರ್ಸಿಡಿಸ್ - ಮೇಬ್ಯಾಕ್ ಜಿಎಲ್ಎಸ್600 (Mercedes - Maybach GLS600) ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆ ಕಾರಿನ ಲೋಗೋವಿರುವ ಫೋಟೋವನ್ನು ನಯನತಾರಾ ತಮ್ಮ ಸಾಮಾಜಿಕ ಜಾಲತಾಣ ಹಂಚಿಕೊಂಡು, ಭಾರೀ ಸುದ್ದಿಯಾಗಿದ್ದರು.

ಇತ್ತೀಚೆಗೆ, ಮರ್ಸಿಡಿಸ್ - ಬೆಂಝ್ ಟೈಟಾನಿಯಂ ಮೋಟಾರ್ಸ್ (Mercedes - Benz Titanium Motors) ಡೀಲರ್‌ಶಿಪ್, ನಟಿ ನಯನಾತಾರಾಗೆ ಹೊಸ ಕಾರನ್ನು ವಿತರಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದೆ. 2021 ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಮರ್ಸಿಡಿಸ್ - ಮೇಬ್ಯಾಕ್ ಜಿಎಲ್ಎಸ್600 ಕಾರು, ಸದ್ಯ 3 ಕೋಟಿ ರೂಪಾಯಿ ಆಸುಪಾಸಿನಲ್ಲಿ ಖರೀದಿಗೆ ಲಭ್ಯವಿದೆ.
ಮರ್ಸಿಡಿಸ್ - ಮೇಬ್ಯಾಕ್ ಜಿಎಲ್ಎಸ್600 ಕಾರು 4 - 5 ಆಸನ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. 4 ಸೀಟ್ ಹೊಂದಿರುವ ಕಾರು, ಶಾಂಪೇನ್ ಬಾಟಲ್ ಇಡಲು ರೆಫ್ರಿಜರೇಟರ್ ಅನ್ನು ಪಡೆದಿದೆ. ಜೊತೆಗೆ ಫಿಕ್ಸೆಡ್ ಸೆಂಟ್ರಲ್ ಕನ್ಸೋಲ್, ನಪ್ಪಾ ಲೆದರ್ ಅಪ್ಹೋಲ್ಸ್ಟರಿ, ಎಲೆಕ್ಟ್ರಾನಿಕ್ ಪನೋರಮಿಕ್ ಸ್ಲೈಡಿಂಗ್ ಸನ್‌ರೂಫ್, ವೆಂಟಿಲೇಟೆಡ್ ಮಸಾಜ್ ಸೀಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಕಾರು, 4.0 - ಲೀಟರ್ ವಿ8 ಎಂಜಿನ್ ಹಾಗೂ 48ವಿ ಮೈಲ್ಡ್ - ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಗರಿಷ್ಠ 557 PS ಗರಿಷ್ಠ ಪವರ್ ಹಾಗೂ 730 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹೈಬ್ರಿಡ್ ಸಿಸ್ಟಮ್ ಹೆಚ್ಚುವರಿಯಾಗಿ 22 PS ಪವರ್ ಮತ್ತು 250 Nm ಪೀಕ್ ಹೊರಹಾಕಲಿದ್ದು, 9 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಮರ್ಸಿಡಿಸ್ - ಮೇಬ್ಯಾಕ್ ಜಿಎಲ್ಎಸ್600 AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಕೂಡ ಪಡೆದಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದ್ದು, 8 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್, ಅಡಾಪ್ಟಿವ್ ಎಲ್ಇಡಿ ಟೈಲ್ ಲ್ಯಾಂಪ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಫ್-ರೋಡ್ ಡ್ರೈವಿಂಗ್ ಮೋಡ್, ಪ್ರಿ-ಸೇಫ್ ಸಿಸ್ಟಮ್, ಕಾರ್‌ವಾಶ್ ಮೋಡ್ ಅನ್ನು ಒಳಗೊಂಡಿದೆ.
ಇನ್ನು, ನಟಿ ನಯನತಾರಾ ಹಲವು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿ, ಬಿಎಂಡಬ್ಲ್ಯೂ 7 ಸೀರಿಯಸ್ (BMW 7 Series), ಮರ್ಸಿಡಿಸ್ - ಬೆಂಝ್ ಜಿಎಲ್ಎಸ್350ಡಿ (Mercedes Benz GLS350D), ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta), ಬಿಎಂಡಬ್ಲ್ಯೂ 5 ಸೀರಿಯಸ್ (BMW 5 Series) ಸೇರಿದಂತೆ ವಿವಿಧ ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








