ಸಿಡಿದ ಬಾಂಬ್; ಮೋದಿ ಅಂದ್ರೆ ಇನ್ನು ಕೆಲವರಿಗೆ ಭಯ ಏಕೆ?
ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಚಾಂಪಿಯನ್ ಶಿಪ್ ಗೆ ಸಮಾನವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ ಶಿಪ್ ಹುಟ್ಟು ಹಾಕುವಲ್ಲಿ ಪ್ರಧಾನ ಸೂತ್ರಧಾರಿಯಾಗಿದ್ದ ಲಲಿತ್ ಮೋದಿ ಈಗ ವಿವಾದಗಳ ಕೇಂದ್ರ ಬಿಂದು.
ಅಲ್ವ ಸ್ವಲ್ಪ ವಿರಾಮದ ನಡುವೆ ಎಚ್ಚೆತ್ತುಕೊಳ್ಳುವ ಮೋದಿ, ಬಾಂಬ್ ಸಿಡಿಸಿದರೆ ಕ್ರಿಕೆಟ್ ಜಗತ್ತು ನಿಬ್ಬೇರವಾಗುತ್ತದೆ. ಈ ನಡುವೆ ಮೋಸದಾಟದ ಬಗ್ಗೆ ಸುರೇಶ್ ರೈನಾ, ರವೀಂದ್ರ ಜಡೇಜಾ ಹಾಗೂ ವೆಸ್ಟ್ ಇಂಡೀಸ್ ನ ಡ್ವೇನ್ ಬ್ರಾವೋ ಮೇಲೆ ನೇರ ಆರೋಪ ಮಾಡಿರುತ್ತಾರೆ. ಹಿಂದೊಮ್ಮೆ ಐಪಿಎಲ್ ಮುಖ್ಯಸ್ಥನ ಸ್ಥಾನ ಆಲಂಕರಿಸಿದ್ದ ಮೋದಿ ಬಿಸಿಸಿಐ ಕೆಂಗೆಣ್ಣಿಗೆ ಗುರಿಯಾಗಿದ್ದರು. ಆದರೆ ತಮ್ಮ ಕಾಲಾವಾಧಿಯಲ್ಲಿ ರಾಜನಂತೆ ಮೆರೆದಾಡಿದ್ದ ಮೋದಿ ಅಪಾರ ದುಡ್ಡು ಸಂಪಾದಿಸಿದ್ದರಲ್ಲದರೆ ಅತ್ಯಂತ ಬೆಲೆ ಬಾಳುವ ಕಾರುಗಳನ್ನು ತಮ್ಮದಾಗಿಸಿದ್ದರು. ಈ ಬಗ್ಗೆ ಇಲ್ಲಿ ಕಣ್ಣಾಯಿಸುವ ಪ್ರಯತ್ನ ಮಾಡಲಾಗಿದೆ.

ಬಿಎಂಡಬ್ಲ್ಯು 7 ಸಿರೀಸ್ 760 ಎಲ್ಐ ಲಗ್ಷುರಿ ಸೆಡಾನ್
ಭಾರತದಲ್ಲಿರುವಾಗ ಲಲಿತ್ ಮೋದಿ ಬಿಎಂಡಬ್ಲ್ಯು 7 ಸಿರೀಸ್ 760 ಎಲ್ಐ ಲಗ್ಷುರಿ ಸೆಡಾನ್ ಕಾರಿನಲ್ಲೇ ಓಡಾಡುತ್ತಿದ್ದರು. ಈ ಟಾಪ್ ಎಂಡ್ ಕಾರಿನಡಿಯಲ್ಲಿ 6 ಲೀಟರ್ ವಿ12 ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಗರಿಷ್ಠ 560 ಅಶ್ವಶಕ್ತಿ (760 ಎನ್ಎಂ ತಿರುಗುಬಲ) ಉತ್ಪಾದಿಸುತ್ತದೆ.

ಬಿಎಂಡಬ್ಲ್ಯು 7 ಸಿರೀಸ್ ಎಲ್ಐ ಲಗ್ಷುರಿ ಸೆಡಾನ್ ಕಾರು ಬರೋಬ್ಬರಿ ಎರಡು ಕೋಟಿ ರು.ಗಳಷ್ಟು ಬೆಲೆ ಬಾಳುತ್ತದೆ. ಇಷ್ಟೊಂದು ದುಡ್ಡು ಸಂಪಾದನೆಯನ್ನು ಮೋದಿ ಹೇಗೆ ಮಾಡಿದರು ಎಂಬ ಪ್ರಶ್ನೆಗೆ ಇಲ್ಲಿ ಅವಕಾಶವಿರುವುದಿಲ್ಲ.

ರೇಂಜ್ ರೋವರ್ ಆಟೋಬಯೋಗ್ರಾಫಿ ಲಗ್ಷುರಿ ಎಸ್ ಯುವಿ
ಐಷಾರಾಮಿ ಕ್ರೀಡಾ ಬಳಕೆಯನ್ನು ವಾಹನವನ್ನು ಇಷ್ಟಪಡದ ಶ್ರೀಮಂತರು ಯಾರಿದ್ದಾರೆ ಹೇಳಿ ನೋಡೋಣ? ಇಲ್ಲಿ ಬ್ರಿಟನ್ ನ ಈ ಸಂದರ ಚೆಲುವೆಗೆ ಲಲಿತ್ ಮೋದಿ ಕೂಡಾ ಮಾರು ಹೋಗಿದ್ದಾರೆ.

ಆದರೆ 2.7 ಕೋಟಿ ರು.ಗಳಷ್ಟು ದುಬಾರಿಯ ರೇಂಜ್ ರೋವರ್ ಕಾರು ದೋಷವುಂಟಾದಾಗ ಬೆಸೆತ್ತ ಮೋದಿ, ಅವರು ನೇರವಾಗಿ ಟ್ವಿಟರ್ ನಲ್ಲಿ ಟೀಕೆ ಮಾಡಿದ್ದರು.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ
ಟ್ವಿಟರ್ ಗಳಂತಹ ಸಾಮಾಜಿಕ ಜಾಲತಾಣಗಳನ್ನು ಪ್ರಮುಖ ಅಸ್ತ್ರವಾಗಿರಿಸಿಕೊಂಡಿರುವ ಲಲಿತ್ ಮೋದಿ, ಜರ್ಮನಿಯ ಮಗದೊಂದು ಐಷಾರಾಮಿ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ನ ದುಬಾರಿ ಜಿ63 ಎಎಂಜಿ ಮಾದರಿಯನ್ನು ತಮ್ಮದಾಗಿಸಿಕೊಂಡಿದ್ದರು.

ಪದವಿಗೆ ತಕ್ಕಂತೆ ಒಂದಕ್ಕಿಂತ ಹೆಚ್ಚು ಕಾರುಗಳನ್ನು ತಮ್ಮ ಬಳಿಯಲ್ಲಿರಿಸುವುದನ್ನು ಹವ್ಯಾಸ ಮಾಡಿಕೊಂಡಿರುವ ಮೋದಿ, ಜಿ63ರಲ್ಲಿ ಆಫ್ ರೋಡ್ ಪಯಣವನ್ನು ಇಷ್ಟಪಡುತ್ತಿದ್ದರು.

ಡಬ್ಲ್ಯು 222 ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಲಗ್ಷುರಿ ಸೆಡಾನ್
ಕಾರು ಮೇಲಿನ ಹೆಚ್ಚಿನ ಆಸಕ್ತಿಯು ಅವರ ಅಭಿರುಚಿಗಳನ್ನು ಪದೇ ಪದೇ ಬದಲಾಯಿಸುವಂತೆ ಮಾಡುತ್ತಿತ್ತು. ಒಮ್ಮೆ ರೇಂಜ್ ರೋವರ್ ನಲ್ಲಿ ಪತ್ತೆಯಾದರೆ ಅವರು ಮಗದೊಮ್ಮೆ ಡಬ್ಲ್ಯು 222 ಮರ್ಸಿಡಿಸ್ ಬೆಂಝ್ ನಲ್ಲಿ ಸುತ್ತಾಡುತ್ತಿದ್ದರು.

ತಮ್ಮ ಜೀವಕ್ಕೆ ಬೆದರಿಕೆಯುಂಟಾದಾಗ ಬೆಂಝ್ ನ ಈ ದುಬಾರಿ ಕಾರನ್ನು ನೆಚ್ಚಿಕೊಂಡಿದ್ದ ಅವರು ಪ್ರಯಾಣ ಪುನರಾರಂಭಿದ್ದರು. ಪ್ರಸ್ತುತ ಕಾರಿನಲ್ಲಿ ಆರ್ಮರ್ಡ್ ಗಾರ್ಡ್ ಗಳಂತಹ ಗರಿಷ್ಠ ಸುರಕ್ಷಾ ಕವಚಗಳನ್ನು ಒದಗಿಸಲಾಗಿದೆ.

ಫೆರಾರಿ ಕ್ಯಾಲಿಫೋರ್ನಿಯಾ
ಸೂಪರ್ ಕಾರುಗಳಲ್ಲಿ ಓಡಾಡುವುದು ಮೋದಿ ಪಾಲಿಗೆ ಒಂಥರ ಮಕ್ಕಳಾಟವಾಗಿತ್ತು. ಭಾರತದಲ್ಲಿನ ವಿವಾದ ಬಳಿಕ ಲಂಡನ್ ನಲ್ಲಿ ಬೀಡು ಬಿಟ್ಟಿರುವ ಮೋದಿ, ಫೆರಾರಿಯಲ್ಲಿ ವಿಶ್ರಾಂತಿ ಸಮಯ ಕಳೆಯುತ್ತಿದ್ದಾರೆ.

ಒಂದು ರೀತಿಯಲ್ಲಿ ಹೇಳುವುದಾದ್ದಲ್ಲಿ ಇಟಲಿಯ ಫೆರಾರಿ ಕಾರುಗಳನ್ನು ಇಷ್ಟಪಡದ ಕೋಟ್ಯಾಧಿಪತಿಗಳಿಲ್ಲ. ಲಲಿತ್ ಮೋದಿ ಸವಾರಿಯಲ್ಲೂ ಇದು ಕಾಣಬಹುದಾಗಿತ್ತು.

ಫೆರಾರಿ ಎಫ್12 ಬರ್ಲಿನೆಟ್ಟಾ
ಫೆರಾರಿ ಮೇಲಿನ ತಮ್ಮ ಪ್ರೀತಿಯನ್ನು ಮತ್ತಷ್ಟು ತೋರ್ಪಡಿಸಿದ್ದ ಮೋದಿ, ಎಫ್12 ಬರ್ಲೆನೆಟ್ಟಾವನ್ನು ತಮ್ಮದಾಗಿಸಿಕೊಂಡಿದ್ದರು. ಅಲ್ಲದೆ ಕ್ರಿಕೆಟ್ ಮೇಲಿನ ಹುಚ್ಚುತನವನ್ನು ಬಿಂಬಿಸಲು ತಮ್ಮ ಕಾರಿಗೆ 'CRI3KET' ಎಂಬ ನಾಮಕರಣವನ್ನು ಮಾಡಿದ್ದರು.

ಅಂದ ಹಾಗೆ ಭಾರತದಲ್ಲಿ ಫೆರಾರಿ ಬರ್ಲೆನೆಟ್ಟಾ ಐದು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ. ಇದು ಫೆರಾರಿಯ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ.

ಆಸ್ಟನ್ ಮಾರ್ಟಿನ್ ರಾಪಿಡ್
ಐಕಾನಿಕ್ ಕಾರುಗಳ ಸಾಲಿನಲ್ಲಿ ಆಸ್ಟನ್ ಮಾರ್ಟಿನ್ ಕೂಡಾ ಹಿಂದೆ ಬಿದ್ದಿಲ್ಲ. ಅಲ್ಲದೆ ತಮ್ಮ ಪತ್ನಿಗೆ ಆಸ್ಟನ್ ಮಾರ್ಟಿನ್ ರಾಪಿಡ್ ಕಾರನ್ನು ಮೋದಿ ಉಡುಗೊರೆಯಾಗಿ ನೀಡಿದ್ದರು.

3.5 ಕೋಟಿ ರು.ಗಳಷ್ಟು ದುಬಾರಿಯಾಗಿರುವ ಆಸ್ಟನ್ ಮಾರ್ಟಿನ್ ರಾಪಿಡ್ ಕಾರಿನಡಿಯಲ್ಲಿ 6 ಲೀಟರ್ ವಿ12 ನೈಸರ್ಗಿಕ ಚೋಷಿತ ಪೆಟ್ರೋಲ್ ಎಂಜಿನ್ ಬಳಕೆ ಮಾಡಲಾಗಿದ್ದು, 350 ಅಶ್ವಶಕ್ತಿ (600 ಎನ್ ಎಂ ತಿರುಗುಬಲ) ಉತ್ಪಾದಿಸುತ್ತದೆ. ಅಲ್ಲದೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.


Click it and Unblock the Notifications