ಬಹುಕೋಟಿ ಬೆಲೆಯ ಕಾರು ಮಾಲೀಕ ಮಾಡಿದ ಕೆಲಸಕ್ಕೆ ಮನಸೋತ ಪೊಲೀಸ್! ವಿಡಿಯೋ ವೈರಲ್

ವಿದೇಶಗಳಲ್ಲಿ ಹೆಚ್ಚಾಗಿ ಕಾಣುವ ಲ್ಯಾಂಬೊರ್ಘಿನಿ ಸೂಪರ್ ಕಾರ್‌ಗಳು ಭಾರತದಲ್ಲಿ ಅತಿ ವಿರಳವಾಗಿ ಕಾಣುತ್ತವೆ. ಇಂತಹ ಕಾರುಗಳನ್ನು ಓಡಿಸುವ ಕನಸು ಎಲ್ಲರಿಗೂ ಇರುತ್ತದೆ, ಓಡಿಸದಿದ್ದರೂ ಅದರೊಳಗೆ ಕುಳಿತುಕೊಳ್ಳುವ ಅವಕಾಶ ಸಿಕ್ಕರೆ ಸಾಕೆಂದುಕೊಳ್ಳುವವರು ಹಲವರಿದ್ದಾರೆ. ಇಂತಹದೇ ಅವಕಾಶ ಇತ್ತೀಚೆಗೆ ಟ್ರಾಫಿಕ್ ಪೊಲೀಸ್ ಕಾನಿಸ್ಟೇಬಲ್ ಒಬ್ಬರಿಗೆ ಸಿಕ್ಕಿದ್ದು, ಅವರ ಖುಷಿಯನ್ನು ವರ್ಣಿಸಲಾಗುವುದಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೈದರಾಬಾದ್‌ನಲ್ಲಿ ಈ ವಿಡಿಯೋ ಚಿತ್ರಿಸಲಾಗಿದ್ದು, ನಿಶಾಂತ್ ಸಾಬೂ ಎಂಬುವರು ಕಾನಿಸ್ಟೇಬಲ್ ಕನಸನ್ನು ನನಸು ಮಾಡಿದ್ದಾರೆ.

ಹೈದರಾಬಾದ್ ಮೂಲದ ನಿಶಾಂತ್ ಸಾಬೂ ಅವರು ಜನಪ್ರಿಯ ಲ್ಯಾಂಬೊರ್ಘಿನಿ ಹುರಾಕನ್ ಮಾಲೀಕರಾಗಿದ್ದು, ಪೊಲೀಸ್‌ ಕಾನಿಸ್ಟೇಬಲ್ ಅವರಿಗೆ ತಮ್ಮ ಸೂಪರ್ ಕಾರ್‌ನಲ್ಲಿ ಕುಳಿತು ಅದರೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಿದ್ದಾರೆ. ಲ್ಯಾಂಬೊರ್ಘಿನಿ ಹುರಾಕನ್ ಜೊತೆ ಫೋಟೋ ತೆಗೆಸಿಕೊಳ್ಳುವ ವಿಡಿಯೋವನ್ನು ನಿಶಾಂತ್ ಸಾಬೂ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

lamborghini-owner-and-traffic-police-constable-viral-video

ನಿಶಾಂತ್ ಸಾಬೂ ತಮ್ಮ ಪೋಸ್ಟ್‌ನಲ್ಲಿ, "ಪೊಲೀಸರು ನನ್ನ ಲ್ಯಾಂಬೊರ್ಗಿನಿಯನ್ನು ತಡೆದಿದ್ದರು, ಆದರೆ ಎಲ್ಲವೂ ಸ್ಪಷ್ಟವಾಗಿದೆ ಎಂದು ಖಚಿತಪಡಿಸಿಕೊಂಡ ನಂತರ ಕಾರಿನೊಂದಿಗೆ ಫೋಟೋ ತೆಗೆಸಿಕೊಳ್ಳಲು ಅನುಮತಿ ಕೇಳಿದರು. ಯೂನಿಫಾರ್ಮ್‌ನಲ್ಲಿದ್ದರೂ ಸಹ ಸೂಪರ್ ಕಾರುಗಳ ಬಗ್ಗೆ ಒಲವು ಹೊಂದಿರುವುದನ್ನು ನೋಡುವುದು ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ.

ನಿಶಾಂತ್ ಸಾಬೂ ಔದಾರ್ಯ: ನಿಶಾಂತ್ ಸಾಬೂ ಅನೇಕ ಸಂದರ್ಭಗಳಲ್ಲಿ ತಮ್ಮ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಆಗಾಗ್ಗೆ ಕಾರುಗಳನ್ನು ನಿಜವಾಗಿಯೂ ಪ್ರೀತಿಸುವ ಜನರೊಂದಿಗೆ ಸೂಪರ್ ಕಾರ್ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈ ಹಿಂದೆಯೂ ನಿಶಾಂತ್ ಸಾಬೂ ಅವರು, ವಿಕಲಚೇತನರಿಗೆ ತಮ್ಮ ಹುರಾಕನ್‌ನಲ್ಲಿ ಸವಾರಿ ಮಾಡಲು ಅವಕಾಶ ನೀಡಿದ್ದರು.

lamborghini-owner-and-traffic-police-constable-viral-video

ಇದು ಮಾತ್ರವಲ್ಲದೇ ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ತಮ್ಮ ಶೋರೂಂ ಒಳಗೆ ಇಣುಕಿ ನೋಡುತ್ತಿದ್ದ, ಈ ದೃಷ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ವಿಡಿಯೋವನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿತ್ತು. ಆ ವೇಳೆ ಅನೇಕ ಜನರು ಇಣುಕಿ ನೋಡಿದ್ದ ವ್ಯಕ್ತಿಯನ್ನು ತಮ್ಮ ಸೂಪರ್ ಕಾರ್‌ನಲ್ಲಿ ಸವಾರಿಗೆ ಅವಕಾಶ ನೀಡುವಂತೆ ಕಮೆಂಟ್ ಮಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಹಲವರ ಬೇಡಿಕೆಯೊಂದಾಗಿ ಸಾಬೂ ಅವರು ಆ ವ್ಯಕ್ತಿಯನ್ನು ಹುಡುಕಾಡುವಲ್ಲಿ ಯಶಸ್ವಿಯಾಗಿದ್ದರು. ನಂತರ, ಅವರನ್ನು ಶೋರೂಂಗೆ ಕರೆತಂದು ಹುರಾಕನ್‌ನಲ್ಲಿ ರೌಂಡ್ ಹೊಡೆಸಿದ್ದರು. ನಿಜಕ್ಕೆ ಸಾಬೂ ಅವರು ಹೈದರಾಬಾದ್‌ನ ಅಸಂಖ್ಯಾತ ಯುವ ಉತ್ಸಾಹಿಗಳಿಗೆ ತಮ್ಮ ಹುರಾಕನ್‌ಲ್ಲಿ ಸವಾರಿ ಅನುಭವಿಸುವ ಅವಕಾಶವನ್ನು ನೀಡಿದ್ದಾರೆ.

ಕಾರಿನ ವಿಶೇಷತೆಗಳು: ನಿಶಾಂತ್ ಸಾಬೂ ಒಡೆತನದ ಲ್ಯಾಂಬೊರ್ಗಿನಿ ಹುರಾಕನ್ ಎಲ್‌ಪಿ 580-2 ಸೂಪರ್ ಕಾರು, 4.0-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ವಿ10 ಎಂಜಿನ್ ಹೊಂದಿದೆ. ಇದು 571 ಬಿಹೆಚ್‌ಪಿ ಪವರ್ ಹಾಗೂ 560 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಸಾಬೂ ತಮ್ಮ ಕಾರಿಗೆ ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ ಅನ್ನು ಸಹ ಸೇರಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 7, 2024, 13:55 [IST]
English summary
Lamborghini owner and traffic police constable viral video
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+