ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರ್ ಕಲೆಕ್ಷನ್..

ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವಾರು ದಾಖಲೆ ಬರೆದಿರುವ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್​ ಯುವರಾಜ್​ ಸಿಂಗ್ ಅವರಿಗೆ ಇಂದು 39ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಸಂಭ್ರಮದ ಹಿನ್ನಲೆಯಲ್ಲಿ ಯುವಿ ಕಾರು ಕಲೆಕ್ಷನ್ ಬಗೆಗೆ ಇಂಟ್ರಸ್ಟಿಂಗ್ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ವೃತ್ತಿ ಜೀವನದ ಆರಂಭದ ದಿನಗಳಿಂದ ಇತ್ತೀಚೆಗಿನ ಐಪಿಎಲ್ ಅಬ್ಬರದಲ್ಲೂ ಮಿಂಚಿದ್ದ ಯುವರಾಜ್​ ಸಿಂಗ್ ಸದ್ಯ ಕ್ರಿಕೆಟ್‌ನಿಂದ ನಿವೃತ್ತಿಗೊಂಡಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೂಲಕ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕ್ಯಾನ್ಸರ್ ಮಾರಕ ಪೀಡೆಯಿಂದ ಗೆದ್ದು ಬರುವ ಮೂಲಕ ವೃತ್ತಿ ಜೀವನದಲ್ಲಿ ಎರಡನೇ ಇನಿಂಗ್ಸ್ ಆರಂಭಿಸಿದ್ದ ಯುವರಾಜ್ ಸಿಂಗ್ ಅಪ್ಪಟ ಕಾರು ಪ್ರೇಮಿ ಕೂಡಾ ಹೌದು.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ಕ್ರಿಕೆಟ್ ಹೊರತಾಗಿ ಡ್ರೈವಿಂಗನ್ನು ಯುವಿ ಹೆಚ್ಚು ಇಷ್ಟಪಡುತ್ತಾರೆ. ಹೇಗೆ ಧೋನಿಗೆ ಬೈಕ್ ರೈಡಿಂಗ್ ಮೇಲೆ ಹೆಚ್ಚು ಪ್ರೀತಿಯಿದೆಯೇ ಹಾಗೆಯೇ ಯುವಿ ಕಾರಿನತ್ತ ಹೆಚ್ಚು ಒಲವು ತೋರುತ್ತಾರೆ. ಅಂದ ಹಾಗೆ ಈ ಸೆಲೆಬ್ರಿಟಿ ಕ್ರಿಕೆಟಿಗನ ಬಳಿ ಹಲವಾರು ಐಷಾರಾಮಿ ಕಾರುಗಳಿವೆ.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

2000ನೇ ಇಸವಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾಗ ತಂದೆ ಯೋಗರಾಜ್ ಸಿಂಗ್ ಗೋಲ್ಡ್ ಶೇಡ್ ಹೊಂದಿದ್ದ ಹೊಂಡಾ ಸಿಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದುವೇ ಯುವಿ ಅವರ ಮೊದಲ ಕಾರಾಗಿದೆ.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ಆ ಬಳಿಕ 2007ನೇ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದ ಯುವಿ ಎಲ್ಲ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದರಿಂದ ಪ್ರೇರಿತರಾಗಿದ್ದ ಬಿಸಿಸಿಐ ಉಪಾಧ್ಯಕ್ಷರು ಅದ್ದೂರಿ ಪೋರ್ಷೆ 911 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಪೊರ್ಷೆ ಬಳಿಕ ಯುವಿ ಕಾರುಗಳ ಪಟ್ಟಿ ದೊಡ್ಡದಾಗಿ ಬೆಳೆಯ ತೊಡಗಿತು.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ಆ ಬಳಿಕ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಎಂ5 ಹಾಗೂ ಎಂ3 ಕಾರುಗಳ ಹೆಮ್ಮೆಯ ಮಾಲೀಕರಾದರು. ಇದರಲ್ಲಿ ಎಂ5 ಕಾರಿನ ದರ ಸುಮಾರು 1.555 ಕೋಟಿ ರೂಪಾಯಿಗಳಗಾಗಿವೆ. ಹಾಗೆಯೇ ಎಂ3 ಕಾರಿನ ದರ ರೂ.1.15 ಕೋಟಿಯಾಗಿದೆ.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ಯುವಿ ಲಗ್ಷುರಿ ಕಾರುಗಳ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ. 2011ರ ಏಕದಿನ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ 23 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವಿ ಅವರಿಗೆ ಜರ್ಮನಿಯಲ್ಲಿನ ಭಾರತ ನಿವಾಸಿಗಳ ಘಟಕ ಐಷಾರಾಮಿ ಆಡಿ ಕ್ಯೂ5 ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ಹಾಗೆಯೇ ಫಾರ್ಮುಲಾ ಒನ್ ರೇಸ್ ಟ್ರ್ಯಾಕ್‌ನಲ್ಲೂ ಕಾಣಿಸಿಕೊಂಡಿದ್ದ ಯುವಿ ಲಂಬೊರ್ಗಿನಿ ಕಾರಿನಲ್ಲಿ ಸವಾರಿ ಮಾಡುವ ಮೂಲಕ ಗಮನಸೆಳೆದಿದ್ದರು. ರೇಸ್ ಕಾರ್‌ಗಳ ಬಗೆಗೆ ಈಗಲೂ ಕ್ರೇಜ್ ಹಾಗೆಯೇ ಉಳಿಸಿಕೊಂಡಿರುವ ಯುವಿ ಬಿಡುವಿನ ಸಂದರ್ಭಗಳಲ್ಲಿ ಪ್ರಮುಖ ರೇಸ್ ಟ್ರ್ಯಾಕ್‌ಗಳಲ್ಲಿ ತಮ್ಮ ನೆಚ್ಚಿನ ಸ್ಪೋರ್ಟ್ ಕಾರುಗಳನ್ನು ಡ್ರೈವ್ ಮಾಡುತ್ತಿರುತ್ತಾರೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ಯುವಿ ಕಾರ್ ಕಲೆಕ್ಷನ್‌ಗಳಲ್ಲಿ ಲಂಬೋರ್ಗಿನಿ ನಿರ್ಮಾಣದ ಮುರ್ಸಿಲಾಗೊ ಸೂಪರ್ ಕಾರು ಕೂಡಾ ಒಂದಾಗಿದೆ. ಲಂಬೋರ್ಗಿನಿ ಮುರ್ಸಿಲಾಗೊ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಇಲ್ಲವಾದರೂ ಆರಂಭದ ದಿನಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.60 ಕೋಟಿ ಬೆಲೆ ಹೊಂದಿದ್ದ ಲಂಬೋರ್ಗಿನಿ ಮುರ್ಸಿಲಾಗೊ ಕಾರು 6.5-ಲೀಟರ್ ವಿ12 ಪೆಟ್ರೋಲ್ ಎಂಜಿನ್‌ನೊಂದಿಗೆ 613-ಬಿಎಚ್‌ಪಿ ಉತ್ಪಾದನಾ ಗುಣಹೊಂದಿತ್ತು. ನೋಯ್ಡಾದಲ್ಲಿರುವ ಬುದ್ದಾ ಇಂಟರ್‌ನ್ಯಾಷನಲ್ ಸರ್ಕಿಟ್ ಟ್ರ್ಯಾಕ್‌ನಲ್ಲಿ ಯುವಿ ಹಲವಾರು ಬಾರಿ ಲಂಬೋರ್ಗಿನಿ ಮುರ್ಸಿಲಾಗೊದಲ್ಲಿ ಕಾಣಿಸಿಕೊಂಡಿದ್ದಾರೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಬರ್ತ್ ಡೇ ಸ್ಪೆಷಲ್: ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್..

ಇದರೊಂದಿಗೆ ತಮ್ಮ ಸ್ನೇಹಿತರ ಐಷಾರಾಮಿ ಕಾರುಗಳನ್ನು ಸಹ ಚಾಲನೆ ಮೂಲಕ ಕಾರ್ ಕ್ರೇಜ್ ವ್ಯಕ್ತಪಡಿಸುತ್ತಿರುವ ಯುವಿ ಸದ್ಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ದುಬಾರಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಹ್ಯಾಪಿ ಬರ್ತ್ ಡೇ ಯುವಿ..!

Most Read Articles

Kannada
English summary
Legendary Cricketer Yuvraj Singh And His Car Collection. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X