ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಫುಟ್‌ಬಾಲ್ ದಂತಕಥೆ ರೂನಿ

Written By:

ಮದ್ಯಪಾನ ಮಾಡಿ ಕಾರು ಚಲಾಯಿಸಿದ ಕಾರಣದಿಂದಾಗಿ ಬ್ರಿಟಿಷ್ ಫುಟ್‌ಬಾಲ್ ದಂತಕಥೆ ವಾಯ್ನಿ ರೂನಿ ಅವರನ್ನು ಚೆಶೈರ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

To Follow DriveSpark On Facebook, Click The Like Button
ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಫುಟ್‌ಬಾಲ್ ದಂತಕಥೆ ರೂನಿ ಆಟೋ ನಿಜಾಂಶ

ರೂನಿ ಅವರನ್ನು ಗುರುವಾರ ರಾತ್ರಿ ಬ್ರಿಟಿಷ್ ಸಮಯದ ಪ್ರಕಾರ ಮಧ್ಯರಾತ್ರಿ 2 ಗಂಟೆಗೆ ಬಂಧಿಸಲಾಗಿದ್ದು, ರೂನಿ ಅವರು ಕಪ್ಪು ಬಣ್ಣದ ಫೋಕ್ಸ್‌ವ್ಯಾಗೆನ್ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ ಹಾಗು ಇವರ ಜೊತೆ ಒಬ್ಬ ಮಹಿಳೆಯೂ ಸಹ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಫುಟ್‌ಬಾಲ್ ದಂತಕಥೆ ರೂನಿ ಆಟೋ ನಿಜಾಂಶ

ಸದ್ಯದರಲ್ಲಿಯೇ 4ನೇ ಬಾರಿಗೆ ತಂದೆಯಾಗಲಿರುವ 31 ವರ್ಷದ ರೂನಿ ಮಿತಿಗಿಂತಲೂ ಮೂರು ಪಟ್ಟು ಹೆಚ್ಚಿಗೆ ಮದ್ಯವನ್ನು ಸೇವನೆ ಮಾಡಿದ್ದರು ಹಾಗು ಪಕ್ಕದಲ್ಲಿ ಕುಳಿತಿದ್ದ ಮಹಿಳೆಯು ಸಹ ಪಾನಮತ್ತರಾಗಿದ್ದರು ಎಂಬ ಮಾಹಿತಿಯನ್ನು ಪೊಲೀಸರು ತಿಳಿಸಿದ್ದಾರೆ.

ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಫುಟ್‌ಬಾಲ್ ದಂತಕಥೆ ರೂನಿ ಆಟೋ ನಿಜಾಂಶ

ರೂನಿ ಅವರು ಬೆಳ್ಳಂಬೆಳಗ್ಗೆ ಬೈಲ್ ಮೂಲಕ ಬಿಡುಗಡೆಯಾಗಿದ್ದು, ತನ್ನ ವಕೀಲರಾದ ಪಾಲ್ ಸ್ಟ್ರೆಟ್‌ಫೋರ್ಡ್ ಅವರು ಜೊತೆ ತನ್ನ ಓವರ್ಫಿಂಚ್-ಕಸ್ಟಮೈಸ್ಡ್ ರೇಂಜ್ ರೋವರ್ ಎಸ್‌ಯುವಿ ಕಾರಿನಲ್ಲಿ ಮನೆಗೆ ತೆರಳಿದ್ದಾರೆ.

ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಫುಟ್‌ಬಾಲ್ ದಂತಕಥೆ ರೂನಿ ಆಟೋ ನಿಜಾಂಶ

ಖ್ಯಾತ ಫುಟ್‌ಬಾಲ್ ಆಟಗಾರ ಮತ್ತು ಇಂಗ್ಲೆಂಡ್ ತಂಡದ ನಾಯಕತ್ವವಹಿಸಿರುವ ರೂನಿ ಅವರು 119 ಪಂದ್ಯಗಳಲ್ಲಿ 53 ಗೋಲುಗಳನ್ನು ಪಡೆದು ದೇಶದ ಅತ್ಯುನ್ನತ ಗೋಲ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

ಮದ್ಯಪಾನ ಮಾಡಿ ಸಿಕ್ಕಿ ಬಿದ್ದ ಫುಟ್‌ಬಾಲ್ ದಂತಕಥೆ ರೂನಿ ಆಟೋ ನಿಜಾಂಶ

ರೂನಿ ಅವರ ಗ್ಯಾರೇಜುನಲ್ಲಿ ಆಸ್ಟನ್ ಮಾರ್ಟಿನ್ ವ್ಯಾನ್ಕಿಶ್, ರೇಂಜ್ ರೋವರ್ ವೋಗ್, ಆಡಿ ಆರ್‌ಎಸ್ 6 ಅವಂತ್ ಸ್ಟೇಷನ್‌ವಿಂಗ್, ಮರ್ಸಿಡಿಸ್ ಜಿ55 ಎಎಮ್‌ಜಿ, ಬಿಎಂಡಬ್ಲ್ಯೂ ಎಕ್ಸ್5, ಮರ್ಸಿಡಿಸ್ ಸಿಎಲ್‌ಕೆ, ಕ್ಯಾಡಿಲಾಕ್ ಎಸ್ಕಲೇಡ್, ಕ್ರಿಸ್ಲರ್ 300ಸಿ, ಚೆವ್ರೊಲೆಟ್ ಕಾರ್ವೆಟ್ ಜೊತೆ ಲಂಬೋರ್ಘಿನಿ ಗಲ್ಲಾರ್ಡೊ ಸ್ಪೈಡರ್, ಆಡಿ ಟಿಟಿ, ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಮತ್ತು ಆಡಿ ಕ್ಯೂ7 ಕಾರುಗಳನ್ನು ಪಡೆದುಕೊಳ್ಳಲಿದೆ.

English summary
Mr. Rooney was arrested at about 2 AM British Standard Time on Thursday night. He was driving a black colour Volkswagen Beetle hatchback, with an unidentified lady in the passenger seat.
Story first published: Saturday, September 2, 2017, 18:20 [IST]
Please Wait while comments are loading...

Latest Photos