-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಜಪಾನ್‌ನ ಖ್ಯಾತ ಐಷಾರಾಮಿ ಕಾರು ಕಂಪನಿಯಾದ ಲೆಕ್ಸಸ್ ಇತ್ತೀಚೆಗೆ ತನ್ನ ಸ್ಪೋರ್ಟ್ಸ್ ಕಾರಿನ ಫ್ರೀಜ್ ಪರೀಕ್ಷೆಯನ್ನು ಮಾಡಿದೆ. ಈ ಪರೀಕ್ಷೆಯಲ್ಲಿ ಈ ಸ್ಪೋರ್ಟ್ಸ್ ಕಾರು ಅದ್ಭುತ ಪರ್ಫಾಮೆನ್ಸ್ ತೋರಿದೆ.

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಈ ಕಾರನ್ನು ನಿರ್ಮಿಸಿದ ಎಂಜಿನಿಯರ್‌ಗಳು ಕಾರಿನ ಬಾಳಿಕೆಯನ್ನು ಪರೀಕ್ಷಿಸಲು ಕಾರನ್ನು 12 ಗಂಟೆಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಇಟ್ಟಿದ್ದರು ಎಂದು ಹೇಳಲಾಗಿದೆ. ಈ ಕಾರು ಲೆಕ್ಸಸ್ ಕಂಪನಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸುಲಭವಾಗಿ ಈ ಪರೀಕ್ಷೆಯನ್ನು ಜಯಿಸಿದೆ.

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಲೆಕ್ಸಸ್ ಎಲ್‌ಸಿ ಕನ್ವರ್ಟಿಬಲ್ ಕಾರನ್ನು ವಿನ್ಯಾಸಗೊಳಿಸಿದ ಹಿರಿಯ ಎಂಜಿನಿಯರ್ ಗ್ರೆಗ್ ಫ್ಲೆಮಿಂಗ್, ಈ ಕಾರನ್ನು ವಿಪರೀತ ತಾಪಮಾನವನ್ನು ತಡೆದುಕೊಳ್ಳುವರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಈ ಕಾರನ್ನು ಬಿಡುಗಡೆಗೊಳಿಸುವ ಮುನ್ನ 12 ಗಂಟೆಗಳ ಕಾಲ ಕೈಗಾರಿಕಾ ಫ್ರೀಜರ್‌ನಲ್ಲಿಡಲಾಗಿತ್ತು. ಅಲ್ಲಿನ ತಾಪಮಾನವು -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿತ್ತು. ಹೆಚ್ಚಿನ ಸಾಮಾನ್ಯ ಕಾರುಗಳು ಕಡಿಮೆ ತಾಪಮಾನದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಈ ತಾಪಮಾನದಲ್ಲಿ ಅವುಗಳ ಉಪಕರಣಗಳು ಕ್ಷೀಣಿಸುತ್ತವೆ ಎಂದು ಗ್ರೆಗ್ ವಿವರಿಸಿದರು. ಆದರೆ ಲೆಕ್ಸಸ್ ಎಲ್‌ಸಿ ಕನ್ವರ್ಟಿಬಲ್ ಕಾರಿನಲ್ಲಿರುವ ಉಪಕರಣಗಳನ್ನು ಅತಿ ಕಡಿಮೆ ತಾಪಮಾನವನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾಗಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಕಾರನ್ನು ಸಂಪೂರ್ಣವಾಗಿ ತಂಪಾಗಿಸಲು, ಕಾರಿನ ಮೇಲ್ಮೈಯಲ್ಲಿದ್ದ ಐಸ್ ಪದರವನ್ನು ಹೆಪ್ಪುಗಟ್ಟಲು ಕಾರಿನ ಮೇಲೆ ಹಲವಾರು ಬಾರಿ ನೀರನ್ನು ಸಿಂಪಡಿಸಲಾಯಿತು. ಸಂಪೂರ್ಣ 12 ಗಂಟೆಗಳ ಕಾಲ ಕಾರನ್ನು -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಇರಿಸಿದ ನಂತರ ಕಾರ್ ಅನ್ನು ಹೊರತೆಗೆದು ಸ್ಟಾರ್ಟ್ ಮಾಡಲಾಯಿತು.

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ನಂತರ ಕಾರಿನ ಎಂಜಿನ್ ಯಾವುದೇ ತೊಂದರೆಯಿಲ್ಲದೆ ಆರಂಭವಾಯಿತು. ರೇಸಿಂಗ್ ಟ್ರ್ಯಾಕ್'ನಲ್ಲಿ ಈ ಕಾರ್ ಅನ್ನು ಚಾಲನೆ ಮಾಡಿ ಪರೀಕ್ಷಿಸಲಾಯಿತು. ಟ್ರ್ಯಾಕ್'ನಲ್ಲಿ ಕಾರು ಸಾಮಾನ್ಯ ಕಾರಿನಂತೆ ಪ್ರದರ್ಶನ ನೀಡಿತು.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಕಾರನ್ನು ಹೆಚ್ಚು, ಕಡಿಮೆ ಹಾಗೂ ಡಯಾಗ್ನಲ್ ಹಾದಿಗಳಲ್ಲಿ ಪರೀಕ್ಷಿಸಲಾಯಿತು. ಅಲ್ಲಿ ಕಾರಿನ ಪರ್ಫಾಮೆನ್ಸ್ ಸಾಮಾನ್ಯ ತಾಪಮಾನದ ಕಾರಿನಂತೆಯೇ ಇರುತ್ತದೆ.ಗ್ರೆಗ್ ಫ್ಲೆಮಿಂಗ್ ಅವರು ಈ ಕಾರಿನಲ್ಲಿ ವಿಶೇಷ ಹವಾಮಾನ ನಿಯಂತ್ರಣ ತಂತ್ರಜ್ಞಾನವನ್ನು ಬಳಸಿದ್ದಾರೆ.

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಈ ತಂತ್ರಜ್ಞಾನವು ಅತ್ಯಂತ ಕಡಿಮೆ ತಾಪಮಾನದಲ್ಲಿಯೂ ಸಹ ತನ್ನ ಉಪಕರಣಗಳನ್ನು ಕೆಲಸ ಮಾಡುವಂತೆ ಮಾಡುತ್ತದೆ. ಈ ಕಾರು ಕಡಿಮೆ ಹಾಗೂ ಹೆಚ್ಚಿನ ತಾಪಮಾನವನ್ನು ಬದಲಿಸುವ ಏರ್ ಕಂಡಿಷನ್ ವ್ಯವಸ್ಥೆಯನ್ನು ಹೊಂದಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಇದರ ಜೊತೆಗೆ ಈ ಕಾರು ಹೀಟಿಂಗ್ ಸಿಸ್ಟಂ ಹೊಂದಿದ್ದು, ಕಡಿಮೆ ತಾಪಮಾನದಲ್ಲಿ ಸಕ್ರಿಯಗೊಳ್ಳುತ್ತದೆ ಹಾಗೂ ಅತ್ಯಂತ ಕಡಿಮೆ ತಾಪಮಾನದಲ್ಲಿ ಎಂಜಿನ್ ಅನ್ನು ಹಾನಿಯಿಂದ ರಕ್ಷಿಸುತ್ತದೆ.

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಕಾರ್ ಸೀಟ್ ಹಾಗೂ ಸ್ಟೀಯರಿಂಗ್ ವ್ಹೀಲ್ ಹೀಟಿಂಗ್ ಸಿಸ್ಟಂ ಹೊಂದಿದ್ದು, ಚಾಲಕನ ದೇಹವನ್ನು ಬೆಚ್ಚಗಿರಿಸುತ್ತದೆ. ಇದರಿಂದ ಕಡಿಮೆ ತಾಪಮಾನದಲ್ಲಿಯೂ ಚಾಲಕ ಕಾರನ್ನು ಆರಾಮವಾಗಿ ಚಾಲನೆ ಮಾಡಬಹುದು.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಲೆಕ್ಸಸ್ ಎಲ್‌ಸಿ ಕನ್ವರ್ಟಿಬಲ್ ಕಾರಿನಲ್ಲಿ ಅಳವಡಿಸಿರುವ ವಿ 8 ಎಂಜಿನ್ 457 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಈ ಫ್ರೀಜಿಂಗ್ ಟೆಸ್ಟ್ ಅನ್ನು ಇಂಗ್ಲೆಂಡಿನ ಮಿಲ್‌ಬ್ರೂಕ್ ಪ್ರೂವಿಂಗ್ ಮೈದಾನದಲ್ಲಿ ಆಯೋಜಿಸಲಾಗಿತ್ತು.

-18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಾರಿನ ಪರೀಕ್ಷೆ ನಡೆಸಿದ ಲೆಕ್ಸಸ್

ಈ ಮೈದಾನದಲ್ಲಿ ಮಿಲಿಟರಿ ದರ್ಜೆಯ ವಾಹನಗಳ ತಾಪಮಾನ ಪರೀಕ್ಷೆಗಳನ್ನು ಚೇಂಬರ್'ನಲ್ಲಿ ನಡೆಸಲಾಗುತ್ತದೆ. 85 ಡಿಗ್ರಿಗಳಿಂದ -60 ಡಿಗ್ರಿ ವರೆಗಿನ ತಾಪಮಾನ ಹೊಂದಿರುವ ಮಿಲಿಟರಿ ವಾಹನಗಳನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಹೇಳಲಾಗಿದೆ.

Most Read Articles

Kannada
English summary
Lexus company tests LC convertible car in deep freeze. Read in Kannada.
Story first published: Monday, May 31, 2021, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X