ಬಾಲಿವುಡ್‌ ಸ್ಟಾರ್‌ಗಳು ಈ ವರ್ಷ ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಬಾಲಿವುಡ್ ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ತುಸು ಹೆಚ್ಚೆ ಇದೆ. ಬಾಲಿವುಡ್ ಸೂಪರ್ ಸ್ಟಾರ್‌‍ಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ಅತಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ನಟಿಯರು ತಮ್ಮ ಮೆಚ್ಚಿನ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಈ ವರ್ಷ ಆನೇಕ ಬಾಲಿವುಡ್‌ ಸ್ಟಾರ್‌ಗಳು ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಸಾರಾ ಅಲಿ ಖಾನ್ - ಮರ್ಸಿಡಿಸ್ ಜಿ350ಡಿ

ನಟ ರಣಬೀರ್ ಕಪೂರ್ ನಂತರ ಸಾರಾ ಅಲಿ ಖಾನ್ ಕೂಡ ಮರ್ಸಿಡಿಸ್ ಜಿ350ಡಿ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಜಿ-ವ್ಯಾಗನ್ ತನ್ನ ವಿಶಿಷ್ಟವಾದ ಬಾಕ್ಸಿ ಆಕಾರಕ್ಕೆ ಹೆಸರುವಾಸಿಯಾಗಿದೆ, ಇದು ಮಿಲಿಟರಿ ವಾಹನದಿಂದ ಪಡೆಯಲ್ಪಟ್ಟಿರೊಂದಿಗೆ ರಗಡ್ ಲುಕ್ ಅನ್ನು ಹೊಂದಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ನಟಿ ಸಾರಾ ಅಲಿ ಖಾನ್ ಖರೀದಿಸಿದ ಮರ್ಸಿಡಿಸ್ ಜಿ350ಡಿ ಎಸ್‌ಯುವಿಯ ಬೆಲೆಯು ಸುಮಾರು ರೂ.1.3 ಕೋಟಿಯಾಗಿದೆ. ಈ ರೆಟ್ರೊ-ಲುಕ್ ಎಸ್‍ಯುವಿಯು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ 285 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಪೀಕ್ ಟಾರ್ಕ್ ಅನ್ನು ನೀಡುವ ಎಂಜಿನ್‌ನೊಂದಿಗೆ ಬರುತ್ತದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಕಾರ್ತಿಕ್ ಆರ್ಯನ್ - ಲ್ಯಾಂಬೊರ್ಗಿನಿ ಉರುಸ್

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಈ ವರ್ಷ ಲ್ಯಾಂಬೊರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಕಾರ್ತಿಕ್ ಆರ್ಯನ್‌ರವರು ಖರೀದಿಸಿರುವ ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯು ಕಪ್ಪು ಬಣ್ಣದಲ್ಲಿದ್ದು, ಆಕರ್ಷಕವಾಗಿ ಕಾಣುತ್ತದೆ. ಆಕರ್ಷಕ ವಿನ್ಯಾಸ, ಪರ್ಫಾಮೆನ್ಸ್ ಹಾಗೂ ಹೆಚ್ಚಿನ ಸ್ಪೇಸ್ ಹೊಂದಿರುವ ಕಾರಣಕ್ಕೆ ವಿಶ್ವದಾದ್ಯಂತವಿರುವ ಗ್ರಾಹಕರು ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿ ಖರೀದಿಗೆ ಆದ್ಯತೆ ನೀಡುತ್ತಾರೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಈ ಲ್ಯಾಂಬೊರ್ಗಿನಿ ಉರುಸ್ ಕಾರಿನಲ್ಲಿ 4.0 ಲೀಟರ್, 8-ಸಿಲಿಂಡರ್ ಟ್ವಿನ್-ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 850 ಎನ್‌ಎಂ ಹಾಗೂ 641 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಲ್ಯಾಂಬೊರ್ಗಿನಿ ಉರುಸ್ ಎಸ್‌ಯು‌ವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. ಲ್ಯಾಂಬೊರ್ಗಿನಿ ಕಂಪನಿಯು ಕರೋನಾ ಸಾಂಕ್ರಾಮಿಕದ ನಡುವೆಯೂ 52 ಯುನಿಟ್ ಉರುಸ್'ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ವಿಕ್ಕಿ ಕೌಶಲ್ - ರೇಂಜ್ ರೋವರ್

'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರು ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿ ಮಾದರಿಯನ್ನು ಖರೀದಿಸಿದ್ದಾರೆ. ನಟ ವಿಕ್ಕಿ ಕೌಶಲ್ ಅವರ ಬಳಿ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಮತ್ತು ಬಿಎಂಡಬ್ಲ್ಯು ಎಕ್ಸ್5 ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ನಟ ವಿಕ್ಕಿ ಕೌಶಲ್ ಅವರು ಇತ್ತೀಚೆಗೆ ಖರೀದಿಸಿದ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‍ಯುವಿಯು ಉತ್ತಮ ಪರ್ಫಾಮೆನ್ಸ್ ಎಸ್‍ಯುವಿಯಾಗಿದೆ.ಈ ಐಷಾರಾಮಿ ಎಸ್‍ಯುವಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಡೀಸೆಲ್ ಮಾದರಿಯಲ್ಲಿ 3.0-ಲೀಟರ್ ಇನ್-ಲೈನ್ ಆರು-ಸಿಲಿಂಡರ್ ಎಂಹೆಚ್‌ಇವಿ ಎಂಜಿನ್ ಅನ್ನು ಹೊಂದಿದೆ. ಇನ್ನು ಪೆಟ್ರೋಲ್ ಮಾದರಿಯಲ್ಲಿ 3.0-ಲೀಟರ್ ಆರು ಸಿಲಿಂಡರ್ ಎಂಹೆಚ್‌ಇವಿ ಎಂಜಿನ್ ಅನ್ನು ಹೊಂದಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಕೃತಿ ಸನೋನ್ - ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600

ಈ ಬಾಲಿವುಡ್ ನಟಿ ಕೃತಿ ಸನೋನ್ ಹೊಸ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರಿನ ಬೆಲೆಯು ರೂ,2.43 ಕೋಟಿಯಾಗಿದೆ. ಈ ಐಷಾರಾಮಿ ಮರ್ಸಿಡಿಸ್ ಕಾರು ಕ್ಯಾನಾಸೈಟ್ ಬ್ಲೂ ಶೇಡ್ ಬಣ್ಣವನ್ನು ಹೊಂದಿದೆ. ಈ ಐಷಾರಾಮಿ ಎಸ್‌ಯುವಿ 2021ಕ್ಕೆ ಕೇವಲ 50 ಯೂನಿಟ್‌ಗಳನ್ನು ನಿಗದಿಪಡಿಸಲಾಗಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಈ ಐಷಾರಾಮಿ ಎಸ್‌ಯುವಿ ಮಾದರಿಯು 4 ಮ್ಯಾಟಿಕ್ ಎನ್ನುವ ಒಂದೇ ಒಂದು ವೆರಿಯೆಂಟ್ ಹೊಂದಿದೆ. ಗ್ರಾಹಕರ ಬೇಡಿಕೆಯೆಂತೆ 4 ಸೀಟರ್ ಅಥವಾ 5 ಸೀಟರ್ ಮಾದರಿಯೊಂದಿಗೆ ಖರೀದಿ ಮಾಡಬಹುದಾಗಿದೆ.

ಬಾಲಿವುಡ್‌ ಸ್ಟಾರ್‌ಗಳು ಈ ವರ್ಷ ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಇನ್ನು ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಕಿಯಾರಾ ಅಡ್ವಾಣಿ - ಆಡಿ ಎ8 ಎಲ್

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಐಷಾರಾಮಿ ಆಡಿ ಎ8 ಎಲ್ ಕಾರನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಶೇರ್ ಷಾ' ಸಿನಿಮಾ ಬಹುದೊಡ್ಡ ಯಶಸ್ಸು ಗಳಿಸಿದ್ದಲ್ಲದ್ದೇ ಇದರಲ್ಲಿ ನಟಿಸಿದ ಕಿಯಾರಾ ಅಡ್ವಾಣಿ ವಿಮರ್ಶಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿತ್ತು

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಖರೀದಿಸಿದ ಹೊಸ ಆಡಿ ಎ8 ಎಲ್ ಕಾರಿನ ಬಗ್ಗೆ ಹೇಳುವುದಾದರೆ, ಬ್ರ್ಯಾಂಡ್‌ನ ಪ್ರಮುಖ ಐಷಾರಾಮಿ ಸಲೂನ್ ಆಗಿದೆ ಮತ್ತು ಹಲವಾರು ತಂತ್ರಜ್ಞಾನದ ಜೊತೆಗೆ ಪವರ್ ಫುಲ್ ಎಂಜಿನ್ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮಾದರಿಯಾಗಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಈ ಹೊಸ ಆಡಿ ಎ8 ಎಲ್ ಕಾರು 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 336 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಅನಿಲ್ ಕಪೂರ್ - ಮರ್ಸಿಡಿಸ್ ಬೆಂಝ್ ಜಿಎಲ್ಎಸ್

ಬಾಲಿವುಡ್ ಜನಪ್ರಿಯ ನಟ ಅನಿಲ್ ಕಪೂರ್ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರನ್ನು ಖರೀದಿಸಿದ್ದರು. ಇದನ್ನು ತಮ್ಮ ಪ್ರಿತಿಯ ಮಡದಿ ಸುನೀತಾ ಕಪೂರ್ ಅವರಿಗೆ ಹುಟ್ಟು ಹಬ್ಬಕ್ಕೆ ಗಿಫ್ಟ್ ಆಗಿ ಕೊಟ್ಟಿದ್ದಾರೆ.ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಎಸ್‍ಯುವಿಯು ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳು ಖರೀದಿಸಿದ ಅತಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಈ ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರಿನ 450 4 ಮ್ಯಾಟಿಕ್ ರೂಪಾಂತರ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಜಿಎಲ್ಎಸ್ 400 ಡಿ 4 ಮ್ಯಾಟಿಕ್ ರೂಪಾಂತರ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಕಾರಿನ 450 4 ಮ್ಯಾಟಿಕ್ ರೂಪಾಂತರದಲ್ಲಿ 3.0-ಲೀಟರ್ ಇನ್-ಲೈನ್ ಸಿಕ್ಸ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಬ್ರ್ಯಾಂಡ್ ನ ಇಕ್ಯೂ ಬೂಸ್ಟ್ ಸಿಸ್ಟಂಗೆ ಜೋಡಿಸಲಾಗಿದೆ.

Most Read Articles

Kannada
English summary
List of most expensive cars bought by famous hindi actors in 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X