ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಕರೋನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಆರ್ಥಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂಬ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲು ಕೇಂದ್ರ ಸರ್ಕಾರವು ಹಿಂದೇಟು ಹಾಕುತ್ತಿದೆ.

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಇದೇ ವೇಳೆ ಕೆಲವು ರಾಜ್ಯ ಸರ್ಕಾರಗಳು ಸೋಂಕು ಹರಡುವುದನ್ನು ತಪ್ಪಿಸಲು ಹಾಗೂ ಪ್ರಾಣ ಹಾನಿಯಾಗುವುದನ್ನು ತಪ್ಪಿಸಲು ತಮ್ಮ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಿವೆ. ಕರ್ನಾಟಕ, ತಮಿಳುನಾಡು, ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ದೆಹಲಿ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಕರೋನಾ ವೈರಸ್'ನಿಂದ ಹೆಚ್ಚು ಬಾಧಿತವಾದ ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಲಾಕ್‌ಡೌನ್ ಜಾರಿಗೊಳಿಸಿರುವುದರಿಂದ ಈ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಇದರಿಂದ ದೇಶದ ಆರ್ಥಿಕತೆಯ ಬೆನ್ನೆಲುಬು ಎಂದು ಪರಿಗಣಿಸುವ ಆಟೋ ಮೊಬೈಲ್ ವಲಯದ ಮೇಲೆ ತೀವ್ರ ಪರಿಣಾಮ ಬೀರಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಲಾಕ್‌ಡೌನ್ ತೀವ್ರವಾಗಿರುವ ರಾಜ್ಯಗಳಲ್ಲಿ ಆಟೋ ಮೊಬೈಲ್ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಆಟೋ ಮೊಬೈಲ್ ಉದ್ಯಮದ ಮೇಲೆ ಅವಲಂಬಿತವಾಗಿರುವ ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ.

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಈ ಉದ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಲವಾರು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಈ ಉದ್ಯಮಗಳನ್ನೇ ನಂಬಿ ಕೊಂಡಿದ್ದ ಗುತ್ತಿಗೆ ಕಾರ್ಮಿಕರ ಬದುಕು ಅತಂತ್ರಕ್ಕೆ ಸಿಲುಕಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಈಗ ಜಾರಿಯಲ್ಲಿರುವ ಲಾಕ್‌ಡೌನ್ ಶೀಘ್ರದಲ್ಲೇ ಕೊನೆಗೊಳ್ಳುವ ನಿರೀಕ್ಷೆಗಳಿದ್ದರೂ ವೈರಸ್ ಸೋಂಕು ಹರಡುವಿಕೆ ಹೆಚ್ಚಾದರೆ ಲಾಕ್‌ಡೌನ್ ಅನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸುವ ಸಾಧ್ಯತೆಗಳು ದಟ್ಟವಾಗಿವೆ.

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಇದುವರೆಗೂ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಅಧಿಕೃತವಾಗಿ ಘೋಷಿಸದ ಕಾರಣ ಮಾರುತಿ ಸುಜುಕಿ ಇಂಡಿಯಾ ಹಾಗೂ ಹೋಂಡಾ ಮೋಟಾರ್‌ಸೈಕಲ್ ಕಂಪನಿಗಳು ಸೀಮಿತ ಸಂಖ್ಯೆಯ ಸಿಬ್ಬಂದಿಗಳೊಂದಿಗೆ ಉತ್ಪಾದನೆಯನ್ನು ಪುನರಾರಂಭಿಸಲು ನಿರ್ಧರಿಸಿವೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಕಳೆದ ಭಾನುವಾರ ಸೀಮಿತ ಸಂಖ್ಯೆಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಬಗ್ಗೆ ಮಾರುತಿ ಸುಜುಕಿ ಕಂಪನಿಯ ನೌಕರರ ಸಂಘದ ಸದಸ್ಯ ಕುಲದೀಪ್ ಜಂಗು ಮಾಹಿತಿ ನೀಡಿದ್ದಾರೆ. ತಮ್ಮ ಕಂಪನಿ ಜನರಿಗೆ ತಮ್ಮ ಊರುಗಳಿಗೆ ತೆರಳಿರುವ ಕಾರ್ಮಿಕರಿಗೆ ಮರಳಿ ಬರುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್'ನೊಂದಿಗೆ ಮಾತನಾಡಿದ ಅವರು, ಇತರೆ ರಾಜ್ಯಗಳಿಂದ ಬಂದು ಕೆಲಸ ಮಾಡುತ್ತಿರುವ ಕಾರ್ಮಿಕರು ಈಗ ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ಒಂದು ವೇಳೆ ಲಾಕ್‌ಡೌನ್ ಅವಧಿಯನ್ನು ಮತ್ತೆ ವಿಸ್ತರಿಸಿದರೆ ಅವರು ಊರಿಗೆ ಮರಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಕಾರ್ಮಿಕರು ಊರಿಗೆ ಮರಳಿದ ನಂತರ ವಾಹನ ತಯಾರಕ ಕಂಪನಿಗಳು ಕಾರ್ಮಿಕರ ಕೊರತೆಯನ್ನು ಎದುರಿಸಬೇಕಾಗುತ್ತದೆ. ಲಾಕ್‌ಡೌನ್'ನಿಂದಾಗಿ ಈಗ ವಾಹನಗಳ ಶೋರೂಂಗಳನ್ನು ಮುಚ್ಚಲಾಗಿದೆ.

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಆದರೆ ಈ ಪರಿಸ್ಥಿತಿ ತಾತ್ಕಾಲಿಕವಾಗಿದ್ದು, ಮತ್ತೆ ಚೇತರಿಕೆ ಕಾಣಲಿದೆ ಎಂಬುದು ವಾಹನ ತಯಾರಕ ಕಂಪನಿಗಳ ಅಭಿಪ್ರಾಯ. ಚಾಲ್ತಿಯಲ್ಲಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಉತ್ಪಾದನಾ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುವುದು ಎಂದು ವಾಹನ ತಯಾರಕ ಕಂಪನಿಯ ಅಧಿಕಾರಿಯೊಬ್ಬರು ಹೇಳಿದರು.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಕಾರ್ಮಿಕರ ಕೊರತೆ ಎದುರಾಗುವ ಭೀತಿಯಲ್ಲಿ ಆಟೋ ಮೊಬೈಲ್ ಕಂಪನಿಗಳು

ಕಾರ್ಮಿಕರ ವಲಸೆ ಸಮಸ್ಯೆಯು ಯಾವುದೋ ಒಂದೆರಡು ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Lockdown extension may force migrant workers to go back. Read in Kannada.
Story first published: Monday, May 17, 2021, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X