ಲಂಡನ್‌ನಲ್ಲಿ 42 ಕೀ.ಮೀ. ಉದ್ದದ ರೈಲು ಸುರಂಗ ಮಾರ್ಗ
ಯುರೋಪ್‌ನ ಬೃಹತ್ ನಿರ್ಮಾಣ ಪ್ರಕ್ರಿಯೆ ಎಂದೇ ವಿಶ್ಲೇಷಿಬಹುದಾದ ಕ್ರಾಸ್ ರೈಲ್ ಲಿಂಕ್ ಒಟ್ಟು 118 ಕೀ.ಮೀ. ದೂರವನ್ನು ಸಂಪರ್ಕಿಸುತ್ತದೆ. ಈ ಪೈಕಿ 42 ಕೀ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಿದೆ.
ಲಂಡನ್ ಹೃದಯ ಭಾಗದಲ್ಲಿ ಹಾದು ಹೋಗುವ ಕ್ರಾಸ್ ರೈಲ್ ಲಿಂಗ್ ಯೋಜನೆಗೆ ಎಂಜಿನಿಯರ್ ಹಾಗೂ ಕೆಲಸಗಾರರಿಗೆ ಎದುರಾದ ತೊಂದರೆಗಳು ಅಷ್ಟಿಷ್ಟಲ್ಲ. ಆದರೆ ಮೂರು ವರ್ಷಗಳ ನಿರಂತರ ಪ್ರಯತ್ನದ ಮೂಲಕ ಈಸ್ಟ್ ವೆಸ್ಟ್ ಬ್ರೇಕ್ ಥ್ರೂ ಯೋಜನೆಯನ್ನು ಪೂರೈಸಲು ಯಶಸ್ವಿಯಾಗಿದ್ದಾರೆ.

ಸುರಂಗ ಮಾರ್ಗದ ನಿರ್ಮಾಣವು 2012ರಲ್ಲಿ ಆರಂಭವಾಗಿತ್ತು. ಅಲ್ಲದೆ 40 ಕ್ಕೂ ಕೇಂದ್ರಗಳಲ್ಲಿ 10,000 ಕ್ಕೂ ಕೆಲಸಗಾರರು ದಿನದ 24 ಗಂಟೆಯೂ ಹಾಗೂ ವಾರದ ಏಳು ದಿನಗಳಲ್ಲೂ ಬಿಡುವಿಲ್ಲದೆ ಕೆಲಸ ಕಾರ್ಯದಲ್ಲಿ ತೊಡಗಿದ್ದರು.

6.2 ಮೀಟರ್ ವ್ಯಾಸದ ಈ ಸುರಂಗ ಮಾರ್ಗ ನಿರ್ಮಾಣಕ್ಕೆ ಎಂಟು ಬೃಹತ್ ಸುರಂಗ ಕೊರೆಯುವ ಯಂತ್ರಗಳನ್ನು ಬಳಕೆ ಮಾಡಲಾಗಿದೆ.

ಕ್ರಾಸ್ ರೈಲ್ ಸುರಂಗ ಮಾರ್ಗ ಯೋಜನೆಗಾಗಿ ಬರೋಬ್ಬರಿ 25,000 ಕಾಂಕ್ರೀಟ್ ವಿಭಾಗಗಳನ್ನು ಬಳಕೆ ಮಾಡಲಾಗಿದೆ.

ಅದೇ ರೀತಿ ಸರಿ ಸುಮಾರು ಏಳು ಮಿಲಿಯನ್ ಟನ್ ಗಳಷ್ಟು ವಸ್ತುಗಳನ್ನು ಖನನ ಮಾಡಲಾಗಿದೆ. ಈ ಪೈಕಿ ಶೇಕಡಾ 98ರನ್ನು ಮರುಬಳಕೆ ಮಾಡಲಾಗಿದೆ.

ಕ್ರಾಸ್ ರೈಲ್ ಸುರಂಗ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದೀಗ ಸೂಚನಾ ಫಲಕ ಲಗತ್ತಿಸುವುದು, ಬೆಳಕಿನ ಸೇವೆ ನೀಡುವುದು ಮುಂತಾದ ಕೆಲಸಗಳಲ್ಲಿ ತೊಡಗಿದ್ದಾರೆ.

ಈ ಮಹತ್ತರ ಕ್ರಾಸ್ ರೈಲು ಯೋಜನೆಯು ಹೀಥ್ರೂ ಮತ್ತು ರೀಡಿಂಗನ್ನು ಶೀನ್ ಫಿಲ್ಡ್ ಹಾಗೂ ಅಬೆ ವುಡ್ಸ್ ನಗರವನ್ನು ಸಂಪರ್ಕಿಸಲಿದ್ದು, ಒಟ್ಟು 40 ಸ್ಟೇಷನ್ ಗಳನ್ನು ಸಂಪರ್ಕಿಸಲಿದೆ.

ಯುರೋಪ್ ನಲ್ಲೇ ಈ ಬೃಹತ್ ಯೋಜನೆಯಲ್ಲಿ ವರ್ಷಂಪ್ರತಿ 200 ಮಿಲಿಯನ್ ಪ್ರಯಾಣಿಕರನ್ನು ಹೊತ್ತೊಯ್ಯುವ ಯೋಜನೆ ಹೊಂದಲಾಗಿದೆ.

ವಿಶ್ಲೇಷಕರ ಪ್ರಕಾರ ಯೋಜನೆ ಆರಂಭವಾದ ಬಳಿಕ ಬ್ರಿಟನ್‌ನ ಅತ್ಯಂತ ಜನನಿಬಿಡ ರೈಲ್ವೆ ಕೇಂದ್ರ ಎಂದೆನಿಸಿಕೊಳ್ಳಲಿದೆ. ಕೇವಲ ಲಂಡನ್ ಪ್ರಯಾಣಿಕರಷ್ಟೇ ಅಲ್ಲದೆ ದಕ್ಷಿಣ ಪೂರ್ವದ ಪ್ರಯಾಣಿಕರು ಇದರ ಲಾಭವನ್ನು ಪಡೆಯಲಿದ್ದಾರೆ.

ಇದು ಮೂರು ಲಂಡನ್ ವಿಮಾನ ನಿಲ್ಧಾಣಗಳ ಜೊತೆಗೆ ಅಂತರಾಷ್ಟ್ರೀಯ ರೈಲ್ವೆ ಸೇವೆಗೆ ನೇರ ಸಂಪರ್ಕ ಕಲ್ಪಿಸಲಿದೆ. ಯೋಜನೆಯ ಸಂಪೂರ್ಣ ಕಾರ್ಯಾಚರಣೆ 2018ರಲ್ಲಿ ಆರಂಭವಾಗಲಿದೆ.

ಈ ಎಲ್ಲ ಯೋಜನೆಗಳಿಗೆ ಒಟ್ಟು 14.8 ಬಿಲಿಯನ್ ಪೌಂಡ್ ಅಂದಾಜು ವೆಚ್ಚ ತಗುಲಿದೆ. ಇದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿದಾಗ ಬರೋಬ್ಬರಿ 1453356453180 ರು. ವೆಚ್ಚ ತಗುಲಲಿದೆ ಅಂದರೆ ನಂಬಬಹುದೇ?


Click it and Unblock the Notifications








