ನ್ಯಾನೋ 'ಡಬ್ಬಾ ಪೀಸ್' ಅಂದವರು ಇದನ್ಮೊಮ್ಮೆ ಓದಿ

Written By:

ಕೆಲವು ವರ್ಷಗಳ ಹಿಂದೆ ದೇಶದ ಜನಸಾಮಾನ್ಯರ ಕಾರು ಕನಸನ್ನು ನನಸಾಗಿಸುವ ಏಕ ಮಾತ್ರ ಉದ್ದೇಶದೊಂದಿಗೆ ರತನ್ ಟಾಟಾ ಮುಂದಾಳತ್ವದಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ನ್ಯಾನೋ ಎಂಬ ಅಗ್ಗದ ಕಾರನ್ನು ಬಿಡುಗಡೆಗೊಳಿಸಿತ್ತು.

ವಿಶ್ವದಲ್ಲೇ ಅತ್ಯಂತ ಅಗ್ಗದ ಕಾರಾಗಿರುವ ನ್ಯಾನೋ ರಸ್ತೆ ಪ್ರವೇಶಿಸಿದಂತೆಯೇ ವಿಮರ್ಶಕರಿಂದ ಪರ-ವಿರುದ್ಧ ಆರೋಪಗಳು ಕೇಳಿ ಬಂದಿದ್ದವು. ಇದು ಕೇವಲ ಸಿಟಿಗೆ ಮಾತ್ರ ಸೀಮಿತವಾಗಿದ್ದು, ದೂರ ಪ್ರಯಾಣ ಅಥವಾ ನೈಜ ಕಾರಿನ ಅನುಭವ ಇದರಿಂದ ಸಿಗುವುದಿಲ್ಲವೆಂಬ ಗಂಭೀರವಾದ ಆರೋಪಗಳು ಕೇಳಿಬಂದಿದ್ದವು. ಅಂತವರಿಗಾಗಿ ಈ ಲೇಖನದಲ್ಲಿ ಸ್ಪಷ್ಟ ಉತ್ತರ ದೊರಕಲಿದೆ. ಅಷ್ಟಕ್ಕೂ ನ್ಯಾನೋ ತಾಕತ್ತನ್ನು ಅರಿಯಲು ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

ಹೌದು, ನಾವು ಮಾತನಾಡುತ್ತಿರುವುದು ನ್ಯಾನೋದ ಹೆಮ್ಮೆಯ ಮಾಲಿಕರಾಗಿರುವ ರವಿ ಕುಮಾರ್ ಕೆಎಸ್ ಅವರ ಬಗ್ಗೆ. ನ್ಯಾನೋ ಮೇಲಿನ ಅಪವಾದಗಳು ಸದಾ ಕಾಡುತ್ತಿರುವಂತೆಯೇ ತಮ್ಮ ಕುಟುಂಬದ ಜೊತೆಗೂಡಿ ದಕ್ಷಿಣ ಭಾರತ ಮೂರು ರಾಜ್ಯಗಳಲ್ಲಾಗಿ ಎಂಟು ದಿವಸಗಳ ಪರ್ಯಂತ ಬರೋಬ್ಬರಿ 1,960 ಕೀ.ಮೀ. ದೂರದ ಪ್ರವಾಸವನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

ಉದ್ಯಾನ ನಗರಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ರವಿ ಅವರು ಕರ್ನಾಟಕ ರಾಜಧಾನಿಯಿಂದಲೇ ತಮ್ಮ ಪಯಣ ಆರಂಭಿಸಿದ್ದರು. ಕೇರಳ, ಕರ್ನಾಟಕ ಸೇರಿದಂತೆ ತಮಿಳುನಾಡಿನ ಪ್ರಮುಖ ದೇವಾಸ್ಥಾನಗಳ ದರ್ಶನ ಪಡೆಯುವುದೇ ಇವರ ಹಾಗೂ ಕುಟುಂಬದ ಪ್ರಮುಖ ಉದ್ದೇಶವಾಗಿತ್ತು.

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

ದಕ್ಷಿಣ ಭಾರತದ ಸಂಸ್ಕೃತಿಯಲ್ಲಿ ದೇವಾಸ್ಥಾನಗಳ ಪಾತ್ರ ಮಹತ್ವದಾಗಿದೆ. ಇದರಂತೆ ತಮ್ಮ ಕುಟುಂಬದ ಜೊತೆಗೂಡಿ ನ್ಯಾನೋ ಕಾರಿನಲ್ಲಿ ಪಯಣ ಆರಂಭಿಸಿದ್ದರು. ಅಲ್ಲದೆ ತಮ್ಮ ನ್ಯಾನೋ ಸಾಮರ್ಥ್ಯವನ್ನು ಇಡೀ ದೇಶಕ್ಕೆ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

2011ನೇ ಇಸವಿಯ ನ್ಯಾನೋ ಎಲ್‌ಎಕ್ಸ್ ಮಾದರಿಯಲ್ಲಿ ರವಿ ತಮ್ಮ ಪಯಣ ಹಮ್ಮಿಕೊಂಡಿದ್ದರು. ಪ್ರವಾಸಕ್ಕೂ ಮೊದಲು ಈ ಕಾರು ಆಗಲೇ 27,143 ಕೀ.ಮೀ.ಗಳ ಪಯಣವನ್ನು ಕ್ರಮಿಸಿತ್ತು. ಹಾಗೆಯೇ ಗಂಟೆಗೆ 80ರಿಂದ 110 ಕೀ.ಮೀ. ವೇಗವನ್ನು ಕಾಯ್ದುಕೊಂಡಿರುವ ನ್ಯಾನೋ ಎಸಿಯಲ್ಲೂ ಪ್ರತಿ ಲೀಟರ್‌ಗೆ 21 ಕೀ.ಮೀ. ಮೈಲೇಜ್ ನೀಡುವಲ್ಲಿ ಯಶಸ್ವಿಯಾಗಿತ್ತು.

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ನ್ಯಾನೋ ಕಡಿಮೆ ಎಂಜಿನ್ ಸಾಮರ್ಥ್ಯದ 624 ಸಿಸಿ ಟ್ವಿನ್ ಸಿಲಿಂಡರ್ ಫ್ಲೂಯಲ್ ಇಂಜೆಕ್ಟಡ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿದೆ. ಹಾಗಿದ್ದರೂ ಕೇವಲ ನಗರ ಪ್ರದೇಶ ಮಾತ್ರವಲ್ಲದೆ ಹೆದ್ದಾರಿಯಲ್ಲೂ ಉತ್ತಮ ಚಾಲನಾ ಅನುಭವ ಕಾಯ್ದುಕೊಂಡಿದ್ದು, ಭಾರತೀಯ ರಸ್ತೆಗೆ ಹೇಳಿ ಮಾಡಿಸಿದಂತಿದೆ.

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

ಈ ವಿಶೇಷ ಪಯಣದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಆರು ಮಂದಿ ಪಯಣಿಸಿದ್ದರು. ಚೊಕ್ಕ ಕಾರಾಗಿರುವ ಹೊರತಾಗಿಯೂ ಉತ್ತಮ ಕ್ಯಾಬಿನ್ ಸ್ಥಳಾವಕಾಶವನ್ನು ಹೊಂದಿರುವುದು ಇದರಿಂದಲೇ ಖಚಿತವಾಗಿದೆ. ರವಿ ಪ್ರಕಾರ ಎಸಿ ನಿರ್ವಹಣೆ ಸಹ ಮೆಚ್ಚುಗೆಗೆ ಪಾತ್ರವಾಗಿದೆ.

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

ಇಲ್ಲಿ ಗಮನಾರ್ಹ ಸಂಗತಿ ಏನೆಂದರೆ ರವಿ ಇದೇ ಮೊದಲ ಬಾರಿಯೇನಲ್ಲ ತಮ್ಮ ನೆಚ್ಚಿನ ನ್ಯಾನೋ ಕಾರಿನಲ್ಲಿ ದೂರ ಪ್ರಯಾಣ ಹಮ್ಮಿಕೊಳ್ಳುತ್ತಿರುವುದು. ಇದಕ್ಕೂ ಮೊದಲು ಕರ್ನಾಟಕದ ಹೆಸರಾಂತ ಕಾರ್ಣಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಶ್ರೀಂಗೇರಿ, ಉಡುಪಿ ಹಾಗೂ ಮುರುಡೇಶ್ವರಕ್ಕೆ ಪಯಣ ಬೆಳೆಸಿದ್ದರು. ತದಾ ಬಳಿಕ ಮಹಾನದಿ, ಶ್ರೀಶೈಲಂ ಹಾಗೂ ಹೈದಾರಾಬಾದ್ ಮತ್ತು ಮೂರನೇ ಬಾರಿ ಪಾಂಡಿಚೇರಿ ಪ್ರವಾಸ ಹಮ್ಮಿಕೊಂಡಿದ್ದರು.

ಟಾಟಾ ನ್ಯಾನೋದಲ್ಲೊಂದು ಸುಂದರ ರಸ್ತೆ ಪ್ರಯಾಣ

ಸದ್ಯ ಟಾಟಾ ನ್ಯಾನೋದ ಹೆಮ್ಮೆಯ ಮಾಲಿಕರಾಗಿರುವ ರವಿ, ತಮ್ಮ ಕಾರಿನ ನಿರ್ವಹಣೆ ಬಗ್ಗೆ ಸಂಪೂರ್ಣ ಸಂತೃಪ್ತಿಯನ್ನು ಹೊಂದಿದ್ದಾರೆ. ಅಲ್ಲದೆ ತನ್ನೆಲ್ಲ ಬಯಕೆಗಳನ್ನು ನ್ಯಾನೋ ಕಾರು ಪೂರೈಸಿದೆ ಎಂದು ಬಹಳ ಅಭಿಮಾನಿದಿಂದಲೇ ಹೇಳಿಕೊಳ್ಳುತ್ತಿದ್ದಾರೆ.

English summary
One of our avid readers, Mr. Ravi Kumar KS, has taken his Tata Nano for a 1,960 kilometre trip around south India, with his family. Mr. Ravi travelled three states in his Nano, visiting temples and just absolutely adores the Nano.
Story first published: Saturday, January 10, 2015, 11:28 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more