ಸಾಲು ಗಟ್ಟಿ ನಿಂತ ಕಾರುಗಳು, ಇದು ಟ್ರಾಫಿಕ್ ಜಾಮ್ ಅಲ್ಲ, ಮತ್ತೇನಿದು?

By Nagaraja

ಕೀಲೋಮೀಟರ್ ಗಳಷ್ಟು ಉದ್ದಕ್ಕೂ ಒಂದರ ಹಿಂದೆ ಒಂದರಂತೆ ಸಾಲು ಗಟ್ಟಿ ನಿಂತಿರುವ ಕಾರುಗಳು. ಬೆಂಗಳೂರಿನಂತಹ ವಾಹನ ದಟ್ಟಣೆಯ ನಗರದಲ್ಲಿ ಇಂತಹ ದೃಶ್ಯಗಳು ಕಾಣಸಿಗುವುದು ಸರ್ವೇ ಸಾಮಾನ್ಯ. ಅತ್ತ ಉತ್ತರ ಅಮೆರಿಕಾದ ಬಲ್ಗೇರಿಯಾದಲ್ಲೂ ಅಚಾನಕ್ ಆಗಿ ಕಂಡುಬಂದ ಇಂತಹ ದೃಶ್ಯಗಳು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು.

ವಿಷಯ ಏನೆಂಬುದನ್ನು ಅರಿಯುವ ಪ್ರಯತ್ನ ಮಾಡಿದಾಗಲೇ ತಿಳಿದು ಬಂದಿರುವುದು ಇದು ಫೋರ್ಡ್ ರಚಿಸಿರುವ ನೂತನ ಗಿನ್ನೆಸ್ ದಾಖಲೆ ಎಂಬುದು. ಅದೇಗೆ ಸಾಧ್ಯವಾಯಿತು ಎಂಬ ಬಗೆಗಿನ ಆಸಕ್ತಿದಾಯಕ ಅಂಶಗಳನ್ನು ಚಿತ್ರಪುಟದಲ್ಲಿ ಹಂಚಿಕೊಂಡಿದ್ದೇವೆ.

ಸಾಲು ಗಟ್ಟಿ ನಿಂತ ಕಾರುಗಳು; ಫೋರ್ಡ್ ನಿಂದ ವಿಶ್ವ ದಾಖಲೆ

ಬಲ್ಗೇರಿಯಾದ ಫೋರ್ಡ್ ಮಾಲಿಕರ ಅಭಿಮಾನಿಗಳ ಬಳಗವು ಒಟ್ಟು ಸೇರಿ 'ವಿಶ್ವದಲ್ಲೇ ಫೋರ್ಡ್ ವಾಹನಗಳ ದೀರ್ಘ ಸಾಲು' (longest queue of Ford vehicles in the world) ಎಂಬ ಗಿನ್ನೆಸ್ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಸಾಲು ಗಟ್ಟಿ ನಿಂತ ಕಾರುಗಳು; ಫೋರ್ಡ್ ನಿಂದ ವಿಶ್ವ ದಾಖಲೆ

ಈ ವಿನೂತನ ದಾಖಲೆಗಾಗಿ 2016 ಜೂನ್ 4ರಂದು ಬ್ಲೂ ಓವಲ್ ಬ್ಯಾಡ್ಜ್ ಹೆದ್ದಾರಿಯಲ್ಲಿ 3.2 ಕೀ.ಮೀ. ಉದ್ದದ ಹಾದಿಯನ್ನು ಒಟ್ಟು 1527 ವಾಹನಗಳು ದಾಟಿ ಬಂದಿದ್ದವು.

ಸಾಲು ಗಟ್ಟಿ ನಿಂತ ಕಾರುಗಳು; ಫೋರ್ಡ್ ನಿಂದ ವಿಶ್ವ ದಾಖಲೆ

ಆಯೋಜಕರ ಪ್ರಕಾರ ನಿಜವಾಗಿಯೂ 2300ರಷ್ಟು ಫೋರ್ಡ್ ವಾಹನಗಳಿದ್ದವು. ಆದರೆ ಇವುಗಳಲ್ಲಿ ಕೆಲವೊಂದು ಕ್ಯಾರಾವನ್ ಆಗಿರುವುದರಿಂದ ಗಿನ್ನೆಸ್ ಅಧಿಕೃತರ ಮನ್ನಣೆಗೆ ಪಾತ್ರವಾಗಿರಲಿಲ್ಲ.

ಸಾಲು ಗಟ್ಟಿ ನಿಂತ ಕಾರುಗಳು; ಫೋರ್ಡ್ ನಿಂದ ವಿಶ್ವ ದಾಖಲೆ

ಈ ಎಲ್ಲ ಫೋರ್ಡ್ ಕಾರುಗಳು ಸರಿ ಸುಮಾರು 20 ಕೀ.ಮೀ. ದೂರದ ವರೆಗೂ ಸಾಲು ಗಟ್ಟಿ ನಿಂತಿದ್ದವು ಎಂದು ಅಧಿಕೃತರು ತಿಳಿಸಿದ್ದಾರೆ.

ಸಾಲು ಗಟ್ಟಿ ನಿಂತ ಕಾರುಗಳು; ಫೋರ್ಡ್ ನಿಂದ ವಿಶ್ವ ದಾಖಲೆ

ಫೋರ್ಡ್ ನ ಅತ್ಯಂತ ಜನಪ್ರಿಯ ಫಿಯೆಸ್ಟಾದಿಂದ ಹಿಡಿದು, ಫೋಕಸ್, ಮೊಂಡೆಯೊ, ಟೌನಸ್, ಪ್ರೋಬ್, ಮರ್ಕ್ಯೂರಿ, ಗ್ರಾನಡ, ಮೆವರಿಕ್, ಕೌಗಾರ್, ಥಂಡರ್ ಬರ್ಡ್, ಕೋಬ್ರಾ ಸೇರಿದಂತೆ 1930ರ ದಶಕದ ಕ್ಲಾಸಿಕ್ ಮಾಡೆಲ್ ಎ ಸಹ ಸೇರಿದ್ದವು.

ಸಾಲು ಗಟ್ಟಿ ನಿಂತ ಕಾರುಗಳು; ಫೋರ್ಡ್ ನಿಂದ ವಿಶ್ವ ದಾಖಲೆ

2014ರಲ್ಲಿ ಉತ್ತರ ಅಮೆರಿಕದಲ್ಲಿ 829 ಫೋರ್ಡ್ ವಾಹನಗಳು ಸಾಲು ಗಟ್ಟಿ ನಿಂತಿರುವುದು ಇದುವರೆಗಿನ ದಾಖಲಾಗಿತ್ತು. ಈಗ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.

ಸಾಲು ಗಟ್ಟಿ ನಿಂತ ಕಾರುಗಳು; ಫೋರ್ಡ್ ನಿಂದ ವಿಶ್ವ ದಾಖಲೆ

ಇನ್ನು ಇತರೆ ಬ್ರಾಂಡ್ ಗಳತ್ತ ಕಣ್ಣಾಯಿಸಿದರೆ 2015ರಲ್ಲಿ ಅಮೆರಿಕದಲ್ಲಿ 2420 ಜೀಪ್ ಮಾದರಿಗಳು, 2015ರಲ್ಲಿ 742ರಷ್ಟು ಟೊಯೊಟಾ ವಾಹನಗಳು, 2008ರಲ್ಲಿ 2325ರಷ್ಟು ಪೋರ್ಷೆ ಕಾರುಗಳು, 2009ರಲ್ಲಿ 1450ರಷ್ಟು ಮಿನಿ ಕಾರುಗಳು ಮತ್ತು 2006ರಲ್ಲಿ 500ರಷ್ಟು ಫಿಯೆಟ್ ಕಾರುಗಳು ಇದೇ ರೀತಿ ಹೆದ್ದಾರಿಯಲ್ಲಿ ಸಾಲು ಗಟ್ಟಿ ನಿಂತು ದಾಖಲೆ ಸ್ಥಾಪಿಸಿದ್ದವು.

Article Published On: Wednesday, June 8, 2016, 11:10 [IST]
English summary
This Is Not A Traffic Jam, It’s A World Record
Read more on ಫೋರ್ಡ್ ford
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+