ಸಂಗಾತಿ ಜೊತೆಗೆ ಪ್ರಯಾಣಿಸಬೇಕಾದ ಜಗತ್ತಿನ ಅತಿ ಉದ್ದವಾದ ರೈಲು ಮಾರ್ಗಗಳು

By Nagaraja

ಈಗಲೂ ದೇಶದ ಮಧ್ಯಮ ವರ್ಗದ ಕುಟುಂಬ ವಿಭಾಗವು ಬಸ್ಸಿಗಿಂತಲೂ ಹೆಚ್ಚು ಸುರಕ್ಷಿತ ಮತ್ತು ಸುಖಕರವಾಗಿರುವ ರೈಲು ಯಾನವನ್ನೇ ನೆಚ್ಚಿಕೊಂಡಿದ್ದಾರೆ. ಆರೋಗ್ಯ ದೃಷ್ಟಿಕೋನದಲ್ಲೂ ರೈಲು ಯಾನ ಹೆಚ್ಚು ಅನುಕೂಲಕರವೆನಿಸಿದೆ.

ವಿಮಾನ, ಹಡಗುಯಾನಗಳಂತಹ ಆಧುನಿಕ ಸಂಚಾರ ವ್ಯವಸ್ಥೆಯ ನಡುವೆಯೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳದೇ ಈಗಲೂ ರೈಲು ಯಾನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಪ್ರಕೃತಿಯ ರಮ್ಯ ದರ್ಶನವನ್ನು ನೀಡುವ ರೈಲು ಯಾನವು ಅತಿ ಪುರಾತನ ಸಂಪರ್ಕ ಜಾಲಗಳಲ್ಲಿ ಒಂದಾಗಿದೆ. ಪ್ರಸ್ತುತ ಲೇಖನದಲ್ಲಿ ಜಗತ್ತಿನ ಅತ್ಯಂತ ಉದ್ದವಾದ ರೈಲು ಪ್ರಯಾಣಗಳ ಬಗ್ಗೆ ಮಾಹಿತಿಗಳನ್ನು ಕೊಡಲಿದ್ದೇವೆ. ಸಾಧ್ಯವಾದ್ದಲ್ಲಿ ಜೀವನದಲ್ಲಿ ಒಂದು ಬಾರಿಯಾದರೂ ನಿಮ್ಮ ಸಂಗಾತಿ ಜೊತೆಗೆ ಇಲ್ಲಿನ ಹಾದಿಗಳಲ್ಲಿ ಪ್ರಯಾಣಿಸಿರಿ.

01. ಟ್ರಾನ್ಸ್-ಸೈಬೇರಿಯನ್ ರೈಲ್ವೆ; ಮೋಸ್ಕೋದಿಂದ ವ್ಲಾದಿವೋಸ್ಟಾಕ್

01. ಟ್ರಾನ್ಸ್-ಸೈಬೇರಿಯನ್ ರೈಲ್ವೆ; ಮೋಸ್ಕೋದಿಂದ ವ್ಲಾದಿವೋಸ್ಟಾಕ್

ರಷ್ಯಾದ ಮೋಸ್ಕೋದಿಂದ ಆರಂಭವಾಗುವ ವಿಶ್ವದ ಅತಿ ಉದ್ದದ ರೈಲು ಯಾನವು ವ್ಲಾದಿವೋಸ್ಟಾಕ್ ನಲ್ಲಿ ಕೊನೆಗೊಳ್ಳುತ್ತದೆ. ಹಲವಾರು ಕಾಲ ಚಕ್ರಗಳಲ್ಲಿ ಹಾದು ಹೋಗುವ ಈ ರೈಲು ಸೇವೆಯು ವಿಶ್ವದ ಅತ್ಯಂತ ಮನೋಹರ ದೃಶ್ಯಗಳ ಅನುಭೂತಿಯನ್ನು ಒದಗಿಸುತ್ತದೆ.

ದೂರ: 9258 ಕೀ.ಮೀ.

ಅವಧಿ: ಆರು ದಿನ

 02. ದಿ ಕೆನಿಡಿಯನ್: ಟೊರಂಟೊದಿಂದ ವ್ಯಾಂಕೋವರ್

02. ದಿ ಕೆನಿಡಿಯನ್: ಟೊರಂಟೊದಿಂದ ವ್ಯಾಂಕೋವರ್

ಪ್ರಕೃತಿ ದತ್ತವಾದ ರಮಣೀಯ ದೃಶ್ಯಗಳನ್ನು ಸವಿಯಬೇಕಾದ್ದಲ್ಲಿ ನೀವೊಮ್ಮೆ ಟೊರಂಟೊದಿಂದ ವ್ಯಾಂಕೋವರ್ ತನಕ ಪ್ರಯಾಣಿಸಬೇಕು. ಸುತ್ತಲೂ ಮಂಜಿನಿಂದ ಆವೃತ್ತವಾದ ಹಿಮದ ಬಂಡೆ, ಕಾಡು ಪ್ರದೇಶ, ವಿಸೃತವಾದ ಭೂಪ್ರದೇಶಗಳು ಉಸಿರು ಗಟ್ಟಿಸಲಿದೆ.

ದೂರ: 4465 ಕೀ.ಮೀ.

ಅವಧಿ: ಮೂರು ದಿನ

03. ಶಾಂಘೈನಿಂದ ಲಾಸಾ

03. ಶಾಂಘೈನಿಂದ ಲಾಸಾ

ಜಾಗತಿಕ ಹಣಕಾಸು ಕೇಂದ್ರವಾಗಿರುವ ಶಾಂಘೈನಿಂದ ಆರಂಭವಾಗುವ ರೈಲು ಯಾನವು ಟಿಬೆಟ್ ನ ಲಾಸಾದಲ್ಲಿ ಕೊನೆಗೊಳ್ಳಲಿದೆ. ಟಿಬೆಟ್ ಪ್ರಸ್ಥಭೂಮಿಯ ಈ ಯಾತ್ರೆಯು ಚೀನಾ ಬಯಲು ಪ್ರದೇಶ ಮತ್ತು ಮತ್ತಿತ್ತರ ಪರ್ವತ ಪ್ರದೇಶಗಳನ್ನು ಹಾದು ಹೋಗಲಿದೆ.

ದೂರ: 4372 ಕೀ.ಮೀ.

ಅವಧಿ: ಎರಡು ದಿನ

04. ಕ್ಯಾಲಿಫೋರ್ನಿಯಾ ಝಿಫಿರ್: ಎಮೆರಿವಿಲ್ಲೆದಿಂದ ಚಿಕಾಗೊ

04. ಕ್ಯಾಲಿಫೋರ್ನಿಯಾ ಝಿಫಿರ್: ಎಮೆರಿವಿಲ್ಲೆದಿಂದ ಚಿಕಾಗೊ

ಅಮೆರಿಕದ ಭವ್ಯ ಮನೋಹರವಾದ ರೈಲು ಯಾತ್ರೆಯಾಗಿರುವ ಈ ಯಾನವು ಕೊಲೊರಾಡೊ ನದಿಯಿಂದ, ಪರ್ವತ ಪ್ರದೇಶವನ್ನು ಹಾದು ಹೋಗಲಿದೆ. ಈ ಮೂಲಕ ಅದ್ಭುತ ದೃಶ್ಯ ವಿಸ್ಮಯದ ಸೊಗಸನ್ನು ಒದಗಿಸಲಿದೆ.

ದೂರ: 3923 ಕೀ.ಮೀ.

ಅವಧಿ: ಎರಡು ದಿನ

05. ಇಂಡಿಯನ್ ಫೆಸಿಫಿಕ್: ಸಿಡ್ನಿಯಿಂದ ಪರ್ತ್

05. ಇಂಡಿಯನ್ ಫೆಸಿಫಿಕ್: ಸಿಡ್ನಿಯಿಂದ ಪರ್ತ್

ವಿಸ್ತಾರವಾಗಿ ಹರಡಿರುವ ಭೂಪ್ರದೇಶದಲ್ಲಿರುವ ಕಾಡುಗಳು, ಜಲಪಾತ, ನೀಲಿ ಪರ್ವತ ಮತ್ತು ಚಿನ್ನದ ಗಣಿ ಪ್ರದೇಶಗಳು ದೃಶ್ಯಗಳು ಎಂತವರನ್ನು ತನ್ನತ್ತ ಆಕರ್ಷಿಸಲಿದೆ.

ದೂರ: 4352 ಕೀ.ಮೀ.

ಅವಧಿ: 65 ತಾಸು

06. ವಿವೇಕ್ ಎಕ್ಸ್‌ಪ್ರೆಸ್: ದಿಬ್ರುಘಢ್ ನಿಂದ ಕನ್ಯಾಕುಮಾರಿ

06. ವಿವೇಕ್ ಎಕ್ಸ್‌ಪ್ರೆಸ್: ದಿಬ್ರುಘಢ್ ನಿಂದ ಕನ್ಯಾಕುಮಾರಿ

ವಿಶ್ವದಲ್ಲೇ ಅತಿ ದೊಡ್ಡ ರೈಲು ಸಂಪರ್ಕ ಜಾಲವನ್ನು ಹೊಂದಿರುವ ಭಾರತವು ಸಹ ಅತಿ ಉದ್ದವಾದ ರೈಲು ಸೇವೆಯನ್ನು ಒದಗಿಸುತ್ತದೆ. 82 ತಾಸು ಅಥವಾ ನಾಲ್ಕು ದಿನಗಳ ಈ ಯಾತ್ರೆಯು ಭವ್ಯ ಭಾರತದ ಸೌಂದರ್ಯವನ್ನು ನೀಡಲಿದೆ.

ದೂರ: 4237 ಕೀ.ಮೀ.

ಅವಧಿ: 82 ತಾಸು

 07. ಪ್ಯಾರಿಸ್-ಮೋಸ್ಕೋ ಎಕ್ಸ್‌ಪ್ರೆಸ್

07. ಪ್ಯಾರಿಸ್-ಮೋಸ್ಕೋ ಎಕ್ಸ್‌ಪ್ರೆಸ್

ಫ್ರಾನ್ಸ್ ರಾಜಧಾನಿಯಿಂದ ರಷ್ಯಾ ರಾಜಧಾನಿ ವರೆಗಿನ ರೈಲು ಸಂಪರ್ಕ ಜಾಲವು ಇತ್ತ ದೇಶಗಳ ಅತ್ಯುತ್ತಮ ಬಾಂಧವ್ಯದ ಸಂಕೇತವಾಗಿದೆ. ಎರಡು ವಿಶ್ವಶ್ರೇಷ್ಠ ನಗರಗಳನ್ನು ಸಂಪರ್ಕಿಸುವ ಕೀರ್ತಿ ಈ ರೈಲಿಗಿದೆ.

ದೂರ: 3215 ಕೀ.ಮೀ.

ಅವಧಿ: ಎರಡು ದಿನ

08. ದಿ ಘಾನ್: ಡಾರ್ವಿನ್ ನಿಂದ ಆಡಿಲೇಡ್

08. ದಿ ಘಾನ್: ಡಾರ್ವಿನ್ ನಿಂದ ಆಡಿಲೇಡ್

ಸೂರ್ಯ ಕಿರಣದಂತೆ ಪ್ರಜ್ವಲಿಸುವ ಕೆಂಪು ಭೂ ಪ್ರದೇಶಗಳು ಅದ್ಭುತ ಅನುಭವ ನೀಡಲಿದೆ. ಪ್ರಸ್ತುತ ರೈಲು ಯಾನವು ಇತಿಹಾಸದ ಭಾಗವಾಗಿರುವುದು ಮಗದೊಂದು ವಿಶಿಷ್ಟತೆಯಾಗಿದೆ.

ದೂರ: 2979 ಕೀ.ಮೀ.

ಅವಧಿ: ಎರಡು ದಿನ

09. ಬ್ಯಾಂಕಾಂಕ್ ನಿಂದ ಸಿಂಗಾಪುರ

09. ಬ್ಯಾಂಕಾಂಕ್ ನಿಂದ ಸಿಂಗಾಪುರ

ಕ್ಲಾಸಿಕ್ ರೈಲು ಯಾನಗಳಲ್ಲಿ ಇದೂ ಒಂದಾಗಿದ್ದು, ಅನೇಕ ಪ್ರಕೃತ್ತಿ ದತ್ತವಾದ ದೃಶ್ಯಗಳನ್ನು ಸವಿಯಬಹುದಾಗಿದೆ.

ದೂರ: 2181 ಕೀ.ಮೀ.

ಅವಧಿ: ಮೂರು ದಿನ

10. ಬ್ಲೂ ರೈಲು: ಪೆಟ್ರೋರಿಯಾದಿಂದ ಕೇಪ್ ಟೌನ್

10. ಬ್ಲೂ ರೈಲು: ಪೆಟ್ರೋರಿಯಾದಿಂದ ಕೇಪ್ ಟೌನ್

ದಕ್ಷಿಣ ಆಫ್ರಿಕಾದಲ್ಲಿ ಹಾದು ಹೋಗುವ ಬ್ಲೂ ಟ್ರೈನ್, ಪೆಟ್ರೋರಿಯಾದಿಂದ ಕೇಪ್ ಟೌನ್ ನಗರಗಳ್ನನು ಬಂಧಿಸುತ್ತದೆ. ಇಲ್ಲಿ ಯಾತ್ರಿಕರಿಗೆ ಎಲ್ಲ ವಿಧದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ದೂರ: 1600 ಕೀ.ಮೀ.

ಅವಧಿ: 27 ತಾಸು

ಸಂಗಾತಿ ಜೊತೆಗೆ ಪ್ರಯಾಣಿಸಬೇಕಾದ ಜಗತ್ತಿನ ಅತಿ ಉದ್ದವಾದ ರೈಲು ಮಾರ್ಗಗಳು

ಪ್ರಸ್ತುತ ಪಟ್ಟಿನಲ್ಲಿ ಇನ್ನು ಕೆಲವು ಮಾರ್ಗಗಳನ್ನು ಹೆಸರಿಸಬಹುದಾಗಿದೆ. ಅವುಗಳ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಒಸಾಕಾದಿಂದ ಸ್ಯಾಪೊರೊ - ಜಪಾನ್

ದೂರ: 1508 ಕೀ.ಮೀ.

ಸಂಗಾತಿ ಜೊತೆಗೆ ಪ್ರಯಾಣಿಸಬೇಕಾದ ಜಗತ್ತಿನ ಅತಿ ಉದ್ದವಾದ ರೈಲು ಮಾರ್ಗಗಳು

ಸ್ವೀಡನ್ ನ ಸ್ಟಾಕ್ಹೋಮ್ ನಿಂದ ನಾರ್ವೆಯ ನಾರ್ವಿಕ್

ದೂರ: 1465 ಕೀ.ಮೀ.

ಸಂಗಾತಿ ಜೊತೆಗೆ ಪ್ರಯಾಣಿಸಬೇಕಾದ ಜಗತ್ತಿನ ಅತಿ ಉದ್ದವಾದ ರೈಲು ಮಾರ್ಗಗಳು

ಬ್ರಿಟನ್ ನ ಕ್ರಾಸ್ ಕಂಟ್ರಿ:ಅಬೆರ್ಡೀನ್ ನಿಂದ ಪೆನ್ಜಾನ್ಸ್

ದೂರ: 1162 ಕೀ.ಮೀ.

ಸಂಗಾತಿ ಜೊತೆಗೆ ಪ್ರಯಾಣಿಸಬೇಕಾದ ಜಗತ್ತಿನ ಅತಿ ಉದ್ದವಾದ ರೈಲು ಮಾರ್ಗಗಳು

ಈಜಿಪ್ಟ್ ನ ಅಲೆಕ್ಸಾಂಡ್ರಿಯಾದಿಂದ ಆಸ್ವಾನ್

ದೂರ: 1099 ಕೀ.ಮೀ.

More from DriveSpark

Article Published On: Tuesday, June 14, 2016, 11:47 [IST]
English summary
Longest train services in the World
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+