ಪ್ರೀತಿ ಸರಿ... ಆದರೆ ಏನಾದರೂ ದುರಂತ ನಡೆದರೆ ಯಾರು ಹೊಣೆ?

ಮಕ್ಕಳಿಗೆ ಕೆಲವೊಂದು ಕಾರಣಕ್ಕೆ ತಮ್ಮ ತಂದೆ 'ಸೂಪರ್ ಹೀರೋ' ಆಗಿರುತ್ತಾರೆ. ತನ್ನ ಪ್ರಿಯನೆಲ್ಲ ಮಕ್ಕಳಿಗೆ ಧಾರೆ ಎರೆಯುವ ಅಪ್ಪ.. ಅವರನ್ನು ಒಬ್ಬ ಆದರ್ಶ ವ್ಯಕ್ತಿಯಾಗಿ ರೂಪಿಸಲು ಪ್ರಯತ್ನ ಮಾಡುತ್ತಾರೆ. ಅದೇರೀತಿ ಮಕ್ಕಳಿಗೆ ಕೊಂಚವೂ ನೋವಾಗದಂತೆ ಆರೈಕೆ ಮಾಡುತ್ತಾರೆ. ಇಲ್ಲೊಬ್ಬ ತಂದೆ ಚಲಿಸುವ ಸ್ಕೂಟರ್‌ನಲ್ಲಿ ಮಗ ನಿದ್ದೆ ಮಾಡುತ್ತಿದ್ದಾಗ ಏನು ಮಾಡಿದ್ದಾರೆ ಗೊತ್ತಾ?

ಸದ್ಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನವೆಂಬರ್‌ನಲ್ಲಿ ಅಭಿಷೇಕ್ ಥಾಪಾ ಎಂಬ ಬಳಕೆದಾರರೊಬ್ಬರು ಈ ವೀಡಿಯೊವನ್ನು ಇಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ವ್ಯಕ್ತಿಯೊಬ್ಬ, ಹಿಂಬದಿ ಆಸನದಲ್ಲಿ ಮಗನನ್ನು ಕೂರಿಸಿಕೊಂಡು ಚಲಾಯಿಸುತ್ತಿದ್ದಾನೆ. ಆ ಹುಡುಗ ಸಂಪೂರ್ಣ ನಿದ್ದೆಗೆ ಜಾರಿದ್ದು, ತಲೆಯು ಒಂದು ಬದಿಗೆ ಬಾಗಿದೆ. ಆದರೂ, ಮಗ ಬೀಳದಂತೆ ತಡೆಯಲು ಆ ವ್ಯಕ್ತಿ ತನ್ನ ಎಡಗೈಯಿಂದ ಆತನನ್ನು ಹಿಡಿದುಕೊಂಡಿದ್ದು, ಬಲಗೈಯಿಂದ ಸ್ಕೂಟರ್‌ ಓಡಿಸುತ್ತಿದ್ದಾರೆ.

ಆ ವ್ಯಕ್ತಿ ಮಗನೊಂದಿಗೆ ವಾಹನವನ್ನು ಚಾಲನೆ ಮಾಡುವಾಗ ಚಂಡೀಗಢ ಪೊಲೀಸರ ಟ್ರಾಫಿಕ್ ಸೈನ್ ಬೋರ್ಡ್‌ಗಳನ್ನು ನೋಡಬಹುದಾಗಿದ್ದು, ಇದು ಅಲ್ಲಿನ ಒಂದು ನಗರವೆಂದು ಸುಲಭವಾಗಿ ಗೊತ್ತಾಗುತ್ತದೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ಈ ವಿಡಿಯೋ ಬರೋಬ್ಬರಿ 32,000ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ 13 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ಪರ-ವಿರೋಧ ಸೇರಿದಂತೆ ಹಲವು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹಲವಾರು ಬಳಕೆದಾರರು 'ಸೂಪರ್‌ಮ್ಯಾನ್' ತಂದೆಯ ಕಾಳಜಿಯುಳ್ಳ ಮನಸ್ಥಿತಿಯನ್ನು ಶ್ಲಾಘಿಸಿದರೆ, ಅನೇಕರು ಅವರ ಕಾರ್ಯವನ್ನು ಅತ್ಯಂತ ಅಪಾಯಕಾರಿ ಮತ್ತು ಅಸಡ್ಡೆಯಿಂದ ಕೂಡಿದೆ ಎಂದು ಟೀಕೆ ಮಾಡಿದ್ದಾರೆ. ನೆಟ್ಟಿಗನೊಬ್ಬ 'ನಿಜವಾಗಿಯೂ! ಅಪ್ಪನ ಕೈ ಇರುವವರೆಗೂ ಭಯವಿಲ್ಲ. ಏಕೆಂದರೆ ತಂದೆ ನಿಮ್ಮ ಹಿಂದೆ ಇದ್ದಾರೆ ಎಂದು ನಿಮಗೆ ತಿಳಿದಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಖಂಡಿತವಾಗಿಯೂ ತಂದೆಯೇ ಪ್ರತಿಯೊಬ್ಬರ ಜೀವನದ ನಿಜವಾದ ಹೀರೋ ಆಗಿರುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ಮತ್ತೊಂದೆಡೆ, ಇನ್ನೊಬ್ಬ ಬಳಕೆದಾರನೊಬ್ಬ, 'ಆ ವ್ಯಕ್ತಿ ತನ್ನ ಮತ್ತು ಮಗನ ಜೀವವನ್ನು ಹೇಗೆ ಅಪಾಯಕ್ಕೆ ತಳ್ಳುತ್ತಾನೆ. ಈ ರೀತಿಯ ಡ್ರೈವಿಂಗ್ ಮಾಡುವುದು ತುಂಬಾ ಅಪಾಯಕಾರಿ ಎಂದು ನಾನು ಭಾವಿಸುತ್ತೇನೆ... ಯಾರೂ ಈ ರೀತಿ ವಾಹನ ಓಡಿಸಬಾರದು' ಎಂದು ಕಾಮೆಂಟ್ ಮಾಡಿದ್ದಾರೆ. ಇತಂಹ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಆದರೆ, ಪ್ರತಿಯೊಬ್ಬರು ವಾಹನ ಚಲಾಯಿಸುವಾಗ ಕೊಂಚ ಜಾಗ್ರತೆ ವಹಿಸಿದರೆ ತುಂಬಾ ಒಳ್ಳೆಯದು.

ದ್ವಿಚಕ್ರ ವಾಹನ ಚಲಾಯಿಸುವಾಗ ಈ ನಿಯಮ ಪಾಲಿಸಿ:

ಪ್ರತಿದಿನ ನಿಮ್ಮ ಸ್ಕೂಟರ್ ಅಥವಾ ಬೈಕ್ ಅನ್ನು ಸ್ಟಾರ್ಟ್ ಮಾಡುವ ಮೊದಲು ಟೈರ್ ಒತ್ತಡ, ಬ್ರೇಕ್‌, ಇಂಡಿಕೇಟರ್ ಲೈಟ್, ಹೆಡ್‌ಲೈಟ್‌ಗಳು, ಹಾರ್ನ್‌ಗಳು, ರಿಯರ್‌ವ್ಯೂ ಮಿರರ್‌ಗಳು ಎಲ್ಲವೂ ಸರಿಯಾಗಿದೆಯೇ ಎಂದು ಪರಿಶೀಲಿಸಿರಿ. ಕಾನೂನಿನ ಪ್ರಕಾರ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದರೂ, ಕೆಲವರು ಹತ್ತಿರದ ಮಾರುಕಟ್ಟೆ ಅಥವಾ ಅಂಗಡಿಗಳಿಗೆ ಹೋಗುವಂತಹ ಕಡಿಮೆ ದೂರದ ಪ್ರಯಾಣಕ್ಕೆ ಹೆಲ್ಮೆಟ್ ಬಳಸುವುದಿಲ್ಲ. ಇದು ತುಂಬಾ ಅಸುರಕ್ಷಿತ. ಪ್ರಯಾಣಿಸುವ ಪ್ರತಿಯೊಂದು ಕಡೆ ಹೆಲ್ಮೆಟ್ ತಪ್ಪದೆ ಧರಿಸಿ.

ನಿಮ್ಮ ಎಡಭಾಗದಿಂದ ಇದ್ದಕ್ಕಿದ್ದಂತೆ ನಿಮ್ಮನ್ನು ಹಿಂದಿಕ್ಕುವ ಬೈಕ್ ಸವಾರರ ಬಗ್ಗೆ ಸಾಕಷ್ಟು ಎಚ್ಚರದಿಂದಿರಿ. ಯಾವಾಗಲೂ ಎಡ ಮತ್ತು ಬಲ ಹಿಂಬದಿ ಮಿರರ್ ಮೇಲೆ ಕಣ್ಣಿಡುವುದನ್ನು ಮರೆಯಬೇಡಿ. ಸಾಕಷ್ಟು ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ಬಸ್ ಅಥವಾ ಲಾರಿಗಳಂತಹ ದೊಡ್ಡ ವಾಹನಗಳನ್ನು ಹಿಂದಿಕ್ಕಲು ಪ್ರಯತ್ನ ಮಾಡಬೇಡಿ. ವಿಶೇಷವಾಗಿ ಈ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಈ ರೀತಿ ಮಾಡಿದರೆ ಅಪಘಾತಕ್ಕೆ ಕಾರಣವಾಗಬಹುದು. ಜೊತೆಗೆ ಮೊಬೈಲ್ ಬಳಕೆ ಮಾಡಬೇಡಿ.

ಸಿಗ್ನಲ್‌ಗಳನ್ನು ಎಂದಿಗೂ ಜಂಪ್ ಮಾಡಬೇಡಿ. ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿರಿ. ಸಿಗ್ನಲ್‌ಗಳಲ್ಲಿ ನಿಲ್ಲಿಸುವಾಗ, ಎಡಕ್ಕೆ ತಿರುಗಬಹುದಾದ ವಾಹನಗಳಿಗೆ ನಿಮ್ಮ ಎಡಭಾಗದಲ್ಲಿ ಜಾಗವನ್ನು ನೀಡಿ. ಇತರೇ ವಾಹನಗಳನ್ನು ಹಿಂದಿಕ್ಕುವಾಗ, ಬೆಳಗಿನ ಸಮಯದಲ್ಲಿ ಫ್ಲ್ಯಾಷ್ ಮಾಡುವುದು ಅಥವಾ ಹೆಡ್‌ಲೈಟ್‌ಗಳನ್ನು ಆನ್ ಮಾಡುವುದು ಯಾವಾಗಲೂ ಸುರಕ್ಷಿತವಾಗಿದೆ ಎಂಬುದನ್ನು ಮರೆಯದಿರಿ. ಓವರ್‌ಟೇಕ್ ಮಾಡುವಾಗ ಯಾವಾಗಲೂ ಹಾರ್ನ್ ಅನ್ನು ತಪ್ಪದೇ ಬಳಕೆ ಮಾಡಿರಿ. ಈ ಮೂಲಕ ಸುರಕ್ಷಿತವಾಗಿ ನಿಮ್ಮ ವಾಹನವನ್ನು ಚಲಾಯಿಸಿರಿ.

Most Read Articles

Kannada
English summary
Love is ok but who is responsible if something tragic happens
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X