ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಬೆಂಟ್ಲಿ ಕಂಪನಿಯು ನೂರು ವರ್ಷಗಳಿಂದ ಐಷಾರಾಮಿ ವಾಹನಗಳ ಉತ್ಪಾದನೆಯಲ್ಲಿ ತೊಡಗಿದೆ. ಮನೆಗಳಲ್ಲಿ ಮಾತ್ರವೇ ಇದ್ದ ಐಷಾರಾಮಿತನವನ್ನು ಕಾರುಗಳಲ್ಲಿಯೂ ನೀಡಿದ ಹೆಗ್ಗಳಿಕೆಯನ್ನು ಬೆಂಟ್ಲಿ ಕಂಪನಿ ಹೊಂದಿದೆ.

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಈಗ ಬೆಂಟ್ಲಿ ಕಂಪನಿಯು ಐಷಾರಾಮಿ ಕಾರುಗಳ ರೀತಿಯಲ್ಲಿಯೇ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಅಪಾರ್ಟ್ ಮೆಂಟ್'ಗಳನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಬೆಂಟ್ಲಿ ಕಂಪನಿಯು ಐಷಾರಾಮಿ ಅಪಾರ್ಟ್'ಮೆಂಟ್'ಗಳನ್ನು ನಿರ್ಮಿಸುವ ವರದಿಯು ಕಂಪನಿಯ ಗ್ರಾಹಕರಲ್ಲಿ ಸಂತಸವನ್ನುಂಟು ಮಾಡಿರುವುದು ಸುಳ್ಳಲ್ಲ.

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಬೆಂಟ್ಲಿ ಕಂಪನಿಯು ರೆಸಿಡೆನ್ಸಸ್ ಎಂಬ ಅಪಾರ್ಟ್'ಮೆಂಟ್ ನಿರ್ಮಿಸಲು ನಿರ್ಧರಿಸಿದೆ. ವರದಿಗಳ ಪ್ರಕಾರ ಈ ಅಪಾರ್ಟ್ ಮೆಂಟ್ ಫ್ಲೋರಿಡಾ ರಾಜ್ಯದ ಪ್ರಸಿದ್ಧ ಸನ್ನಿ ಐಲ್ಸ್ ಬೀಚ್'ನಲ್ಲಿರಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಅಪಾರ್ಟ್ ಮೆಂಟ್ ನಿರ್ಮಿಸಲು ಬೆಂಟ್ಲಿ ಕಂಪನಿಯು ಡೆಂಟ್ ಡೆವಲಪ್‌ಮೆಂಟ್ ಹಾಗೂ ಸೀಗರ್ ಸೌರೆಜ್ ಆರ್ಕಿಟೆಕ್ಚರ್'ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಮೂರು ಕಂಪನಿಗಳು ಜತೆಗೂಡಿ ಬೆಂಟ್ಲಿ ಕಂಪನಿಯ ಮೊದಲ ಐಷಾರಾಮಿ ಅಪಾರ್ಟ್ ಮೆಂಟ್ ನಿರ್ಮಿಸಲು ಸಜ್ಜಾಗಿವೆ.

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಬೆಂಟ್ಲಿ ಕಂಪನಿಯು ನಿರ್ಮಿಸಲಿರುವ ಈ ಅಪಾರ್ಟ್ ಮೆಂಟ್ ವಿಶ್ವಾದ್ಯಂತ ಜನರ ಗಮನವನ್ನು ತನ್ನತ್ತ ಸೆಳೆದಿದೆ. ಬೆಂಟ್ಲಿ ಕಂಪನಿಯು ನಿರ್ಮಿಸಲಿರುವ ಈ ಅಲ್ಟ್ರಾಲಕ್ಷುರಿ ಅಪಾರ್ಟ್ ಮೆಂಟ್ 60 ಮಹಡಿ ಹಾಗೂ 200 ಮನೆಗಳನ್ನು ಹೊಂದಿರಲಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಅಪಾರ್ಟ್ ಮೆಂಟ್ ತನ್ನ ಕಾರುಗಳಲ್ಲಿರುವಂತೆಯೇ ವಿವಿಧ ಐಷಾರಾಮಿ ಹಾಗೂ ತಾಂತ್ರಿಕ ಫೀಚರ್'ಗಳನ್ನು ಹೊಂದಿರಲಿದೆ ಎಂದು ಬೆಂಟ್ಲಿ ಹೇಳಿದೆ. ಈಅಪಾರ್ಟ್ ಮೆಂಟ್'ಗಳಲ್ಲಿ ಇನ್ನೂ ಹೆಚ್ಚು ಐಷಾರಾಮಿ ಫೀಚರ್'ಗಳನ್ನು ನೀಡುವುದಾಗಿ ಕಂಪನಿ ಹೇಳಿದೆ.

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಐಷಾರಾಮಿ ಅಪಾರ್ಟ್ ಮೆಂಟ್ ಬೀಚ್‌ಗೆ ಬಹಳ ಹತ್ತಿರದಲ್ಲಿದೆ ಎಂದು ಬೆಂಟ್ಲಿ ಕಂಪನಿ ಹೇಳಿದೆ. ಇದರಿಂದಾಗಿ ಸೂರ್ಯೋದಯದ ವಿವಿಧ ದೃಶ್ಯಗಳನ್ನು ಕಣ್ಣ್ ತುಂಬಿಕೊಳ್ಳಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಐಷಾರಾಮಿ ಅಪಾರ್ಟ್ ಮೆಂಟ್ ಪ್ರಶಾಂತವಾಗಿರುವುದರ ಜೊತೆಗೆ ಕಣ್ಣುಗಳಿಗೆ ಉಲ್ಲಾಸಕರವಾಗಿರಲಿದೆ. ಈ ಐಷಾರಾಮಿ ಅಪಾರ್ಟ್ ಮೆಂಟ್'ಗಳಲ್ಲಿ ಸ್ವಿಮಿಂಗ್ ಪೂಲ್, ಜಿಮ್, ಪಾರ್ಕ್ ಹಾಗೂ ಸ್ಪೋರ್ಟ್ಸ್ ಹೌಸ್'ನಂತಹ ವಿವಿಧ ವಿಶೇಷ ಸೌಲಭ್ಯಗಳನ್ನು ನೀಡುವುದಾಗಿ ಬೆಂಟ್ಲಿ ತಿಳಿಸಿದೆ.

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಇದರ ಜೊತೆಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳದಂತಹ ಹೆಚ್ಚುವರಿ ಫೀಚರ್'ಗಳನ್ನು ಬೆಂಟ್ಲಿ ನೀಡಲಿದೆ. ಬೆಂಟ್ಲಿ ಕಂಪನಿಯ ಐಷಾರಾಮಿ ಕಾರುಗಳು ಶತಕೋಟಿ ರೂಪಾಯಿ ಬೆಲೆ ಬಾಳುತ್ತವೆ. ಈ ಕಾರಣಕ್ಕೆ ಈ ಐಷಾರಾಮಿ ಅಪಾರ್ಟ್ ಮೆಂಟ್'ಗಳ ಬೆಲೆ ಎಷ್ಟಿರಬಹುದು ಎಂಬುದು ಹಲವರ ಪ್ರಶ್ನೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಆದರೆ ಇದುವರೆಗೂ ಬೆಂಟ್ಲಿ ಕಂಪನಿಯು ಈ ಅಪಾರ್ಟ್ ಮೆಂಟ್ ಬೆಲೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕೆಲವು ಅನಧಿಕೃತ ವರದಿಗಳ ಪ್ರಕಾರ ಬೆಂಟ್ಲಿ ಕಂಪನಿಯ ಐಷಾರಾಮಿ ಅಪಾರ್ಟ್ ಮೆಂಟ್'ಗಳ ಬೆಲೆ ಶತಕೋಟಿ ರೂಪಾಯಿ ಮೌಲ್ಯವನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಐಷಾರಾಮಿ ಅಪಾರ್ಟ್'ಮೆಂಟ್'ಗಳ ನಿರ್ಮಾಣಕ್ಕೆ ಮುಂದಾದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಐಷಾರಾಮಿ ಅಪಾರ್ಟ್ ಮೆಂಟ್'ಗಳ ನಿರ್ಮಾಣವು 2023ರಲ್ಲಿ ಆರಂಭವಾಗಲಿದೆ. ಕಂಪನಿಯು ತನ್ನ ಎಲ್ಲಾ ಕೆಲಸಗಳನ್ನು 2026ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

Most Read Articles

Kannada
English summary
Luxury car company Bentley to build ultra luxury apartment in Florida. Read in Kannada.
Story first published: Saturday, April 10, 2021, 16:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X