ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಕೋವಿಡ್ 19 ಕಾರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್'ನಿಂದಾಗಿ ಜಗತ್ತಿನ ಎಲ್ಲಾ ವ್ಯಾಪಾರ, ವಹಿವಾಟುಗಳು ತೊಂದರೆಗೀಡಾಗಿವೆ. ಲಾಕ್‌ಡೌನ್ ಭಾರತದಲ್ಲಿಯೂ ಪರಿಣಾಮ ಬೀರಿದೆ.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಅದರಲ್ಲೂ ದೇಶದ ಆಟೋ ಮೊಬೈಲ್ ಉದ್ಯಮವು ಹೆಚ್ಚು ತೊಂದರೆಗೀಡಾಗಿದೆ. ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ವಾಹನ ಉತ್ಪಾದನಾ ಘಟಕಗಳನ್ನು ಮುಚ್ಚಲಾಗಿತ್ತು. ಲಾಕ್‌ಡೌನ್'ನಿಂದಾಗಿ ವಾಹನ ತಯಾರಕ ಕಂಪನಿಗಳು ಹಾಗೂ ಮಾರಾಟಗಾರರು ಭಾರಿ ನಷ್ಟವನ್ನು ಅನುಭವಿಸಿದರು.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಲಾಕ್‌ಡೌನ್ ಕಾರು ಬಾಡಿಗೆ ವ್ಯವಹಾರದ ಮೇಲೂ ಪರಿಣಾಮ ಬೀರಿದೆ. ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದ ಕಂಪನಿಗಳು ಕರೋನಾ ವೈರಸ್ ಕಾರಣದಿಂದಾಗಿ ಭಾರೀ ನಷ್ಟವನ್ನು ಅನುಭವಿಸುತ್ತಿವೆ.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಲುಧಿಯಾನದಲ್ಲಿ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದ ಕಂಪನಿಯ ಐಷಾರಾಮಿ ಕಾರುಗಳು ಗ್ರಾಹಕರು ಬಾರದ ಕಾರಣಕ್ಕೆ ಧೂಳು ಹಿಡಿಯುತ್ತಿವೆ. ಕ್ರಿಸ್ಲರ್ ಲಿಮೋಸಿನ್, ಜಾಗ್ವಾರ್ ಎಕ್ಸ್‌ಎಫ್, ಆಡಿ ಹಾಗೂ ಮರ್ಸಿಡಿಸ್ ಬೆಂಝ್ ಸೇರಿದಂತೆ ಒಟ್ಟು 12 ಐಷಾರಾಮಿ ಕಾರುಗಳು ಧೂಳಿನಿಂದ ತುಂಬಿ ಹೋಗಿವೆ.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಈ ಕಾರುಗಳನ್ನು ಮುಖ್ಯವಾಗಿ ಮದುವೆ ಸಮಾರಂಭಗಳಿಗೆ ಬಾಡಿಗೆಗೆ ನೀಡಲಾಗುತ್ತಿತ್ತು. ಕರೋನಾ ವೈರಸ್ ಹರಡಬಹುದು ಎಂಬ ಭೀತಿಯಿಂದಾಗಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆಗೆ ಮಿತಿ ವಿಧಿಸಲಾಗಿದೆ.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಇದರಿಂದಾಗಿ ಈ ಐಷಾರಾಮಿ ಕಾರುಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಬೇಡಿಕೆ ಇದ್ದ ಸಂದರ್ಭದಲ್ಲಿ ಈ ಕಾರುಗಳಿಗೆ ಒಂದು ದಿನಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಕರೋನಾ ವೈರಸ್'ಗೂ ಮುನ್ನ ಅನಿವಾಸಿ ಭಾರತೀಯರು ಈ ಕಾರುಗಳನ್ನು ಹೆಚ್ಚು ಬಳಸುತ್ತಿದ್ದರು.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಆದರೆ ಈಗ ಹಲವು ದೇಶಗಳಿಗೆ ವಿಮಾನಯಾನವನ್ನು ನಿಷೇಧಿಸಲಾಗಿದೆ. ಇದರಿಂದ ಅನಿವಾಸಿ ಭಾರತೀಯರು ಭಾರತಕ್ಕೆ ಬರುವುದು ಕಡಿಮೆಯಾಗಿದೆ. ಈಗ ಕರೋನಾ ವೈರಸ್ ಮೂರನೇ ಅಲೆಯ ಆತಂಕ ಎದುರಾಗಿದೆ.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಮೂರನೇ ಅಲೆ ಎರಡನೇ ಅಲೆಯಷ್ಟು ಆರ್ಭಟಿಸಿದರೆ ಮತ್ತಷ್ಟು ವ್ಯವಹಾರಗಳು ತತ್ತರಿಸಿ ಹೋಗಲಿವೆ. ಎರಡನೇ ಅಲೆ ಹೆಚ್ಚಾಗಿದ್ದರಿಂದ ಈ ವರ್ಷವೂ ಸಹ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು.

ಇದರಿಂದ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿದ್ದವು. ಕರೋನಾ ಸಾಂಕ್ರಾಮಿಕದಿಂದಾಗಿ ಹಲವು ವಾಹನ ತಯಾರಕ ಕಂಪನಿಗಳು ವಾಹನ ಬಿಡುಗಡೆಯನ್ನು ಮುಂದೂಡಿವೆ.

ಗ್ರಾಹಕರಿಲ್ಲದೇ ಧೂಳು ಹಿಡಿಯುತ್ತಿವೆ ಐಷಾರಾಮಿ ಬಾಡಿಗೆ ಕಾರುಗಳು

ಸೆಮಿ ಕಂಡಕ್ಟರ್‌ಗಳ ಕೊರತೆಯು ಸಹ ಕಾರು ತಯಾರಕ ಕಂಪನಿಗಳಿಗೆ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದಾಗಿ ಕೆಲವು ಕಾರು ತಯಾರಕ ಕಂಪನಿಗಳು ಸಮಯಕ್ಕೆ ಸರಿಯಾಗಿ ಕಾರುಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕೆಲವು ಕಾರು ತಯಾರಕ ಕಂಪನಿಗಳು ಕೆಲವು ಫೀಚರ್'ಗಳಿಲ್ಲದೆ ಕಾರುಗಳನ್ನು ಉತ್ಪಾದಿಸುತ್ತಿವೆ.

ಚಿತ್ರಕೃಪೆ: ಒಟಿವಿ

Most Read Articles

Kannada
English summary
Luxury cars gathering dust without customers. Read in Kannada.
Story first published: Wednesday, July 14, 2021, 19:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X