ಮಾರಾಟಕ್ಕಿದೆ ವಿಶ್ವದ ಅತಿ ದುಬಾರಿ ಸ್ಪೋರ್ಟ್ಸ್ ಕಾರು!
ವಿಶ್ವದ ಅತಿ ದುಬಾರಿ ಸ್ಪೋರ್ಟ್ಸ್ ಕಾರು ಹಾಗೂ ಸರಿ ಸುಮಾರು 21.48 ಕೋಟಿ ರುಪಾಯಿಗಳಷ್ಟು (3.4 ಮಿಲಿಯನ್ ಅಮೆರಿಕನ್ ಡಾಲರ್) ಬೆಲೆ ಬಾಳುವ ಸೂಪರ್ ಕಾರನ್ನು ದುಬೈನಲ್ಲಿ ಮಾರಾಟಕ್ಕಿಡಲಾಗಿದೆ.
2012ನೇ ಇಸವಿಯಲ್ಲಿ ಸ್ಥಾಪನೆಯಾಗಿರುವ ಲೆಬನನ್ ತಳಹದಿಯ ಡಬ್ಲ್ಯು ಮೋಟಾರ್ಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಈ ಕ್ರೀಡಾ ಕಾರನ್ನು 2013ರಲ್ಲೇ ಪ್ರದರ್ಶನಕ್ಕಿರಿಸಲಾಗಿತ್ತು.
ಈಗ ಸಂಪೂರ್ಣ ನಿರ್ಮಾಣ ಹಂತವನ್ನು ತಲುಪಿರುವ ಅರಬಿ ನಾಡಿನ ಈ ಸೂಪರ್ ಕಾರನ್ನು ಮಾರಾಟಕ್ಕಿಡಲಾಗಿದೆ.

ಜಗತ್ತಿನ ಅತ್ಯಂತ ದುಬಾರಿ ಸೂಪರ್ ಕಾರುಗಳಲ್ಲಿ ಗುರುತಿಸಿಕೊಂಡಿರುವ ಲೈಕನ್ ಹೈಪರ್ ಸ್ಪೋರ್ಟ್ಸ್ ಕಾರಿನಲ್ಲಿ ವಜ್ರದಿಂದ ಆವೃತ್ತವಾಗಿರುವ ಹೆಡ್ ಲೈಟ್ ಜೊತೆಗೆ 420 ವಜ್ರಗಳ ಟೈಟಾನಿಯಂ ಎಲ್‌ಇಡಿ ಸ್ಪರ್ಶ ಕೂಡಾ ಪಡೆದಿದೆ.
ಅಂದ ಹಾಗೆ ಕಾರಿನಡಿಯಲ್ಲಿ 3.7 ಲೀಟರ್, ಟ್ವಿನ್ ಟರ್ಬೊ ಫ್ಲ್ಯಾಟ್ ಸಿಕ್ಸ್ ಎಂಜಿನ್ ಆಳವಡಿಸಲಾಗಿದ್ದು, 740 ಅಶ್ವಶಕ್ತಿ (960 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂತೆಗೆ ಗಂಟೆಗೆ ಗರಿಷ್ಠ 394 ಕೀ.ಮೀ. ಹಾಗೆಯೇ 2.8 ಸೆಕಂಡುಗಳಲ್ಲೇ ಗಂಟೆಗೆ ಗರಿಷ್ಠ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

ಲೈಕನ್ ಹೈಪರ್ ಸ್ಪೋರ್ಟ್ಸ್ ಕಾರು ಆರು ಸ್ಪೀಡ್ ಸಿಕ್ವೇನ್ಸಿಯಲ್ ಗೇರ್ ಬಾಕ್ಸ್ ಅಥವಾ ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಿಂದಲೂ ಲಭ್ಯವಿರುತ್ತದೆ. ಇನ್ನು ಕಾರ್ಬನ್ ಫೈಬರ್ ಚಾಸೀ, ಚಿನ್ನ ಲೇಪಿದ ಲೆಥರ್ ಸೀಟು ಹಾಗೂ ಹೊಲೊಗ್ರಾಫಿಕ್ ಡಿಸ್‌ಪ್ಲೇ ಸಿಸ್ಟಂ ಪಡೆದುಕೊಂಡಿದೆ.


Click it and Unblock the Notifications








