ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಬ್ರಿಟಿಷ್ ಮೂಲದ ವಾಹನ ತಯಾರಕ ಸಂಸ್ಥೆ ಫೋರ್ಡ್‍ನ ಮುಸ್ಟಾಂಗ್ ಕಾರು 2018ರಲ್ಲಿ ಪ್ರಪಂಚದಲ್ಲೆ ಉತ್ತಮವಾಗಿ ಮಾರಾಟವಾಗುತ್ತಿರುವ ಸ್ಫೋರ್ಟ್ಸ್ ಕೂಪೆ ಕಾರ್ ಎನ್ನಲಾಗಿದ್ದು, 2017ರಲ್ಲಿ ಬರೊಬ್ಬರಿ 1,25,809 ಯೂನಿಟ್ ಕಾರುಗಳು ಮಾರಾಟವಾಗಿದೆ.

By Rahul Ts

ಮಾರಾಟಗೊಂಡ 1,25,809 ಯೂನಿಟ್‍ ಕಾರುಗಳಲ್ಲಿ 81,866 ಕಾರುಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿಯೆ ರಿಜಿಸ್ಟರ್ ಆಗಿದ್ದವಂತೆ. ಫೋರ್ಡ್ ಸಂಸ್ಥೆಯು ಮುಸ್ಟಾಂಗ್ ಕಾರುಗಳನ್ನು 2015ರಲ್ಲಿ 4,18,000 ಯೂನಿಟ್ ಕಾರುಗಳನ್ನು 146 ದೇಶಗಳಿಗೆ ರಫ್ತು ಮಾಡಲಾಗಿತ್ತು.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಐಹೆಚ್ಎಸ್ ವರದಿಗಳ ಪ್ರಕಾರ ಫೋರ್ಡ್ ಮುಸ್ಟಾಂಗ್ ಕಾರು ಪ್ರಪಂಚದಲ್ಲಿರುವ ಕನ್ವರ್ಟಿಬಲ್ ಮಾಡಲ್ ಹಾಗು ಎರಡು ಬಾಗಿಲುಗಳುಳ್ಳ ಸ್ಪೋರ್ಟ್ಸ್ ಕಾರುಗಳ ಸರಣಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡಿದೆ ಎನ್ನಲಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಜಾಗತಿಕವಾಗಿ ಫೋರ್ಡ್ ಮುಸ್ಟಾಂಗ್ ಕಾರು ಬಿಡುಗಡೆಗೊಂಡಾಗಿನಿಂದ ಜನಪ್ರಿಯತೆಯನ್ನು ಪಡೆದಿದ್ದು, ಮುಸ್ಟಾಂಗ್ ಕಾರುಗಳು ಮೊದಲಿನಲ್ಲಿ ಟಿವಿ ಮತ್ತು ಅಂತರ್ಜಾಲದಲ್ಲಿ ಮಾತ್ರ ಕಾಣಬಹುದಾಗಿತ್ತು ಆದ್ರೆ ಈಗ ಬೀಜಿಂಗ್‍‍ನಿಂದ ಹಿಡಿದು ಸೌ ಪೌಲೊ‍‍ವರೆಗಿನ ದೇಶದ ರಸ್ಥೆಗಳ ಮೇಲೆ ಸಂಚರಿಸುತ್ತಿದೆ. ಎಂದು ಫೋರ್ಡ್ ಸಂಸ್ಥೆಯ ಮಾರಾಟ ವಿಶ್ಲೇಷಕರಾದ ಎರಿಚ್ ಮೆರ್ಕಲ್‍‍ನವರು ಹೇಳಿಕೊಂಡಿದ್ದಾರೆ.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಭಾರತದಲ್ಲಿ ಇನ್ನು ಹಿಂದಿನ ತಲೆಮಾರಿನ ಫೋರ್ಡ್ ಮುಸ್ಟಾಂಗ್ ಕಾರುಗಳು ದೊರೆಯುತ್ತಿದೆ. 5.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಸಹಾಯದಿಂದ 454ಬಿಹೆಚ್‍ಪಿ ಮತ್ತು 569ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಇನ್ನು ಹೊಸ ಫೋರ್ಡ್ ಮುಸ್ಟಾಂಗ್ ಕಾರು ಸ್ಲಿಮ್ ಎಲ್ಇಡಿ ಹೆಡ್‍‍ಲ್ಯಾಂಪ್ಸ್, ಮೂರು ಎಲ್ಇಡಿ ಡಿಆರ್‍‍ಎಲ್ ಸ್ಟ್ರಿಪ್ಸ್, ಇಂಟಿಗ್ರೇಟೆಡ್ ಟರ್ನ್ ಸಿಗ್ನಲ್ಸ್ ಹೊಂದಿರುವ ಮುಂಭಾಗದ ಬಂಪರ್‍‍ಗಳು, C ಆಕಾರದಲ್ಲಿರುವ ಎಲ್ಇಡಿ ಟೈಲ್‍‍ಲ್ಯಾಂಪ್ಸ್, ಮತ್ತು ಕ್ವಾಡ್ ಎಕ್ಸಾಸ್ಟ್ ಸಿಸ್ಟಂ ಅನ್ನು ಪಡೆದುಕೊಂಡಿವೆ.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಇನ್ನು ಕಾರಿನ ಒಳಭಾಗದಲ್ಲಿ 12 ಇಂಚಿನ ಡಿಜಿಟಲ್ ಎಲ್‍ಸಿಡಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಆಪಲ್ ಕಾರ್‍‍‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕೀ ಆಯ್ಕೆಯನ್ನು ಪಡೆದಿರುವ ಇನ್ಫೋಟೈನ್ಮೆಂಟ್ ಸಿಸ್ಟಂ, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟ್ರಾರ್ಟ್, ರಿಯರ್ ವ್ಯೂ ಕ್ಯಾಮೆರಾ, ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಫೋರ್ಡ್ ಮುಸ್ಟಾಂಗ್ ಕಾರುಗಳು ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಸ್ಪೋರ್ಟ್ಸ್ ಕೌಪ್ ಕಾರಾಗಿದೆ. ಭಾರತದಲ್ಲಿ ಈ ಕಾರು 2016ರಲ್ಲಿ ಬಿಡುಗಡೆಗೊಂಡಿದ್ದು ದೆಹಲಿಯ ಎಕ್ಸ್ ಶೋರಂ ಪ್ರಕಾರ 79.54 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಪೋರ್ಟ್ಸ್ ಕೂಪೆ ಕಾರು ಯಾವುದು ಗೊತ್ತಾ.?

ಇನ್ನು ಭಾರತದಲ್ಲಿ ದೊರೆಯುತ್ತಿರುವ ಫೋರ್ಡ್ ಮುಸ್ಟಾಂಗ್ ಕಾರುಗಳು ಇನ್ನು ಹಿಂದಿನ ತಲೆಮಾರಿನದೆಯಾಗಿದ್ದು, ಮುಂಬರುವ ದಿನಗಳಲ್ಲಿ ಸಂಸ್ಥೆಯು 2018ರ ಹೊಸ ಮುಸ್ಟಾಂಗ್ ಕಾರ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆಯೆ ಎಂದು ಕಾಯ್ದು ನೋಡಬೇಕಿದೆ.

Most Read Articles

Kannada
Read more on ford sports car coupe
English summary
Ford Mustang 2018 Best-Selling Sports Coupe In The World — Three Year In A Row!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X