ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಬಿಡುಗಡೆಯಾಗಿರುತ್ತಿರುವ ಪ್ರಮುಖ ಕಾರು ಮಾದರಿಗಳಲ್ಲಿ ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಆವೃತ್ತಿ ಕೂಡಾ ಒಂದಾಗಿದ್ದು, ಈ ಮಧ್ಯೆ ಹೊಸ ಕಾರಿನ ಕುರಿತು ದಿನಕ್ಕೊಂದು ವಿಚಾರಗಳು ಹೊರಬರುತ್ತಿರುವುದು ಮತ್ತಷ್ಟು ಕುತೂಹಲಕ

By Rahul Ts

ಸದ್ಯ ಭಾರತೀಯ ಆಟೋ ಉದ್ಯಮದಲ್ಲಿ ಬಿಡುಗಡೆಯಾಗಿರುತ್ತಿರುವ ಪ್ರಮುಖ ಕಾರು ಮಾದರಿಗಳಲ್ಲಿ ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಆವೃತ್ತಿ ಕೂಡಾ ಒಂದಾಗಿದ್ದು, ಈ ಮಧ್ಯೆ ಹೊಸ ಕಾರಿನ ಕುರಿತು ದಿನಕ್ಕೊಂದು ವಿಚಾರಗಳು ಹೊರಬರುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಸುದ್ದಿ ಮೂಲಗಳ ಪ್ರಕಾರ ಮಾರುತಿ ಸ್ವಿಫ್ಟ್ ಆವೃತ್ತಿಯು ಕಾರ್ ರೇಸ್ ಪ್ರಿಯರಿಗಾಗಿಯೇ ವಿಶೇಷ ತಂತ್ರಜ್ಞಾನ ಬಳಕೆಯ ಸುಧಾರಿತ ಸೀಟುಗಳನ್ನು ಒದಗಿಸಲಾಗುತ್ತಿದ್ದು, ಇದು ಕಾರು ರೇಸ್‌ಗೆ ಸಾಕಷ್ಟು ಅನುಕೂಲಕರವಾಗಲಿದೆ ಎಂದು ಸುಜುಕಿ ಮೋಟಾರ್ ಸಂಸ್ಥೆ ಹೇಳಿಕೊಂಡಿದೆ. ಮಾರುತಿ ಸುಜುಕಿ ಸಂಸ್ಥೆಯು ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಕಹಿ ಸುದ್ದಿ ನೀಡಿದ್ದು, ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಹೌದು, ಸ್ವಿಫ್ಟ್ ಸ್ಪೋರ್ಟ್ ಕಾರು ಇದೇ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಮಾರುತಿ ಸುಜುಕಿ ಸಂಸ್ಥೆಯು ಸುಳಿವು ನೀಡಿತ್ತು. ಆದರೇ ಸಂಸ್ಥೆಯು ಇದೀಗ ಸ್ವಿಫ್ಟ್ ಸ್ಪೋರ್ಟ್ ಕಾರು ಭಾರತೀಯ ಮಾರುಕಟ್ಟೆಗೆ ಸೂಕ್ತವಲ್ಲ ಹಾಗು ಇದರ ಬೆಲೆ ಕೂಡಾ ಅಧಿಕವಾಗಿರುವ ಕಾರಣ ಇಲ್ಲಿನ ಗ್ರಾಹಕರು ಇದನ್ನು ಕೊಳ್ಳಲು ಮುಂದಾಗುವುದಿಲ್ಲ. ಹಾಗಾಗಿ ಸ್ವಿಫ್ಟ್ ಸ್ಪೋರ್ಟ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಿಲ್ಲ ಎಂದು ಹೇಳಲಾಗಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಭಾರತದಲ್ಲಿ ಸ್ವಿಫ್ಟ್ ಸ್ಪೋರ್ಟ್ ಕಾರು ಬಿಡುಗಡೆಗೊಂಡರೆ ಅದು ಕಂಪ್ಲೀಟ್ಲಿ ಬ್ಯುಲ್ಟ್ ಯೂನಿಟ್ ಮುಖಾಂತರ ಭಾರತಕ್ಕೆ ಬರಲಿದ್ದು, ಕಾರಿನ ಬೆಲೆಯು ಸುಮಾರು ರೂ.20 ಲಕ್ಷದಿಂದ 25 ಲಕ್ಷದ ವರೆಗು ಇರಬಹುದೆಂದು ಸಂಸ್ಥೆಯು ಹೇಳಿಕೊಂಡಿದೆ. ಈಗಾಗಲೆ ಮಾರುಕಟ್ಟೆಯಲ್ಲಿ ಈ ಬೆಲೆಯಲ್ಲಿ ಸ್ಕೋಡಾ ಆಕ್ಟೇವಿಯಾ ಮತ್ತು ಜೀಪ್ ಕಾಂಪಾಸ್ ಕಾರುಗಳು ಸಿಗುತ್ತಿವೆ. ಆದ್ದರಿಂದ ಈ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಂಸ್ಥೆಯು ಬ್ರೇಕ್ ಹಾಕಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಈಗಾಗಲೇ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟಗೊಳ್ಳುತ್ತಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೊಂಡ ನಂತರ ಹ್ಯುಂಡೈನ ಬಹುನೀರಿಕ್ಷಿತ ಐ30 ಆವೃತ್ತಿಗೆ ತೀವ್ರ ಪೈಪೋಟಿ ನೀಡತಿತ್ತು.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಇದರೊಂದಿಗೆ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳಲ್ಲೇ ವಿಶೇಷ ಎನ್ನಿಸಲಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಕಾರುಗಳು ಸ್ಪೈಡರ್ ಇಂಟಿರಿಯರ್ ಹಾಗೂ ಎಕ್ಸ್‌ಟಿರಿಯರ್‌ನೊಂದಿಗೆ ವಿಭಿನ್ನತೆಯನ್ನು ಪಡೆದುಕೊಂಡಿರುವುದು ರೇಸ್ ಪ್ರಿಯರ ಸೆಳೆಯುವಲ್ಲಿ ಸಹಕಾರಿಯಾಗಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಬೇಡಿಕೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಸುಜುಕಿ ಸ್ಪೀಫ್ಟ್ ಸ್ಪೋರ್ಟ್ ಕೂಡಾ ಖರೀದಿಗೆ ಲಭ್ಯವಿರಲಿದ್ದು, ಡ್ಯುಯಲ್ ಏರ್‌ಬ್ಯಾಗ್ ಕಿಟ್, ಸ್ಪೆಷಲ್ ಅಲಾಯ್ ವೀಲ್ಹ್ ಮತ್ತು ಸ್ಪೋರ್ಟ್ ಸ್ಟೈನ್‌ಲೆಸ್ ಸ್ಟಿಲ್ ಪೆಡಲ್ ಅಳವಡಿಕೆ ಮಾಡಲಾಗಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ವಿದೇಶದಲ್ಲಿ ಮಾತ್ರ ಲಭ್ಯವಿರುವ ಈ ಕಾರು ಸ್ಪೋರ್ಟ್ ಆವೃತ್ತಿಯ ಚಿಹ್ನೆ ಕೂಡಾ ಹೊಸ ಕಾರಿನ ಲುಕ್‌ನ್ನು ಮತ್ತಷ್ಟು ಹೆಚ್ಚಳ ಮಾಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್, 1.4-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್ ಕೆ14ಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಲಭ್ಯವಿರಲಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಇದರೊಂದಿಗೆ ರೇಸ್ ಪ್ರಿಯರು ನೀರಿಕ್ಷೆ ಮಾಡುವ 138-ಬಿಎಚ್‌ಪಿ ಪವರ್ ಉತ್ಪಾದನೆ ಮಾಡಲಿದ್ದು, ಕೇವಲ 8.1 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ(ಪ್ರತಿ ಗಂಟೆಗೆ) ವೇಗ ಪಡೆದುಕೊಳ್ಳುವ ಚಾಲನಾ ಕೌಶಲ್ಯ ಹೊಂದಿದೆ.

ಸ್ವಿಫ್ಟ್ ಸ್ಪೋರ್ಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಮಾರುತಿ ಸುಜುಕಿ..

ಕಾರಿನ ಉದ್ದಳತೆ

ಸುಜುಕಿ ಸ್ಪಿಫ್ಟ್ ಸ್ಪೋರ್ಟ್ ಕಾರುಗಳು 3,890ಎಂಎಂ ಉದ್ದ, 1,735ಎಂಎಂ ಅಗಲ, 1,495ಎಂಎಂ ಎತ್ತರ ಹೊಂದಿದ್ದು, 120ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಹೊಸ ಕಾರುಗಳು 970 ಕೆ.ಜೆ ತೂಕ ಪಡೆದುಕೊಂಡಿವೆ.

Most Read Articles

Kannada
English summary
Maruti Swift Sport will not launch in India.
Story first published: Wednesday, August 22, 2018, 10:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X