ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ಕರೋನಾ ವೈರಸ್ ಹರಡುವುದನ್ನು ತಡೆಯಲು ಇಂದಿನಿಂದ ತಮಿಳುನಾಡಿನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಮಾರಾಟವನ್ನು ಸಹ ನಿಷೇಧಿಸಲಾಗಿದೆ.

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಅಧಿಕಾರಿಗಳು ನೂರಾರು ಟಾಟಾ ಏಸ್ ವಾಹನಗಳನ್ನು ಸಿದ್ಧಪಡಿಸಿದ್ದಾರೆ.

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ವಿನಾಕಾರಣ ಮನೆಯಿಂದ ಹೊರ ಬರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಪೊಲೀಸರ ಕ್ರಮದಿಂದ ಪಾರಾಗಲು ಯುವಕನೊಬ್ಬ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದಾನೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ಈ ಯುವಕ ಹಾರಾಟ ನಡೆಸುವ ವಿಮಾನದಲ್ಲಿ ಮದುವೆಯಾಗುವ ಮೂಲಕ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವುದರಿಂದ ಪಾರಾಗಿದ್ದಾನೆ. ಲಾಕ್‌ಡೌನ್ನಿಯಮಗಳನ್ವಯ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರ ಸಂಖ್ಯೆ 50 ಜನರನ್ನು ಮೀರುವಂತಿಲ್ಲ.

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ಆದರೆ ಲಾಕ್‌ಡೌನ್ ಜಾರಿಗೊಳಿಸುವುದಕ್ಕೂ ಮುನ್ನ ವಿವಾಹಗಳನ್ನು ಯೋಜಿಸಲಾಗಿರುವುದರಿಂದ 50ಕ್ಕೂ ಹೆಚ್ಚು ಜನರು ಮದುವೆ ಸಮಾರಂಭಗಳಲ್ಲಿ ಭಾಗಿಯಾಗಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅಧಿಕಾರಿಗಳು ದೂರಿದ್ದಾರೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭಕ್ಕಾಗಿ ಮಾಡುವ ಇ-ನೋಂದಣಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇದರನ್ವಯ ಯಾರು ಮದುವೆಯಲ್ಲಿ ಭಾಗಿಯಾಗುತ್ತಾರೆ ಎಂದು ನಮೂದಿಸಲಾಗಿರುತ್ತದೆಯೋ ಅವರು ಮಾತ್ರ ಭಾಗವಹಿಸಬಹುದು.

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ಉಳಿದವರು ಮದುವೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಲಾಗಿದೆ. ಈಗ ವಿಮಾನದಲ್ಲಿ ಮದುವೆಯಾಗಿರುವ ಮಧುರೈನ ಯುವಕ ತನ್ನ ಮದುವೆಯಲ್ಲಿ ಈ ಪರಿಸ್ಥಿತಿ ಉದ್ಭವಿಸಬಾರದು ಎಂಬ ಕಾರಣಕ್ಕೆ ಹಾರುವ ವಿಮಾನದಲ್ಲಿ ತನ್ನ ಮದುವೆಯನ್ನು ಆಯೋಜಿಸಿದ್ದ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ತನ್ನ ಎಲ್ಲಾ ಸಂಬಂಧಿಕರು ಮದುವೆಯಲ್ಲಿ ಪಾಲ್ಗೊಳಲಿ ಎಂಬ ಕಾರಣಕ್ಕೆ ಆತ ಹಾರುವ ವಿಮಾನದಲ್ಲಿ ತನ್ನ ಮದುವೆಯನ್ನು ಏರ್ಪಡಿಸಿದ್ದ. ಮಧುರೈ-ಬೆಂಗಳೂರು ಮಾರ್ಗದ ಸ್ಪೈಸ್ ಜೆಟ್ ವಿಮಾನದಲ್ಲಿ ಈ ಮದುವೆ ನಡೆಯಿತು.

ವಿಮಾನವು ಮಧುರೈ ಮೀನಾಕ್ಷಿ ದೇವಸ್ಥಾನದ ಮೇಲೆ ಹಾರಾಟ ನಡೆಸುವಾಗ ಯುವಕನು ವಧುವಿಗೆ ತಾಳಿ ಕಟ್ಟಿದ್ದಾನೆ. ಈ ವಿಮಾನದಲ್ಲಿ ಒಟ್ಟು 161 ಜನರು ಭಾಗಿಯಾಗಿದ್ದರು. ಇವರೆಲ್ಲರೂ ವಧುವಿನ ಸಂಬಂಧಿಕರು ಎಂದು ಹೇಳಲಾಗಿದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಲಾಕ್‌ಡೌನ್ ಕಾರಣಕ್ಕೆ ವಿಮಾನದಲ್ಲಿ ಮದುವೆಯಾದ ಯುವಕ

ವಧು, ವರ ಇಬ್ಬರೂ ಮಧುರೈ ಮೂಲದವರು. ಇವರ ವಿಶಿಷ್ಟ ಮದುವೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪ್ ಲೋಡ್ ಆದ ಕೆಲವೇ ಗಂಟೆಗಳಲ್ಲಿ ಈ ವೀಡಿಯೊ 8 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

Most Read Articles

Kannada
English summary
Madurai man gets married in flying plane. Read in Kannada.
Story first published: Monday, May 24, 2021, 20:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X