ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್- ಇನ್ಮುಂದೆ ಸರ್ಕಾರವೇ ನಿಗದಿಪಡಿಸಲಿದೆ ಕ್ಯಾಬ್ ಶುಲ್ಕ

ಭಾರತದಲ್ಲಿರುವ ಕ್ಯಾಬ್ ಸೇವೆಯಲ್ಲಿ ಹೆಚ್ಚಿನ ಸಂಖ್ಯೆಯ ಖಾಸಗಿ ವಾಹನಗಳನ್ನು ಕಾಣಬಹುದು. ಖಾಸಗಿ ವಾಹನಗಳೇ ಭಾರತದ ಕ್ಯಾಬ್ ಸೇವೆಯಲ್ಲಿ ಪ್ರಾಬಲ್ಯವನ್ನು ಮೆರೆಯುತ್ತಿವೆ. ಸರ್ಕಾರದ ವಾಹನಗಳಿಲ್ಲದ ಕಾರಣಕ್ಕೆ ಜನರೂ ಸಹ ಖಾಸಗಿ ವಾಹನಗಳಿಗೇ ಮೊರೆ ಹೋಗುತ್ತಿದ್ದಾರೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಕ್ಯಾಬ್ ಸೇವೆಯಲ್ಲಿ ಒಲಾ ಹಾಗೂ ಉಬರ್ ಕಂಪನಿಯ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮೊದಲು ರಿಯಾಯಿತಿ ದರದಲ್ಲಿ ಸೇವೆಯನ್ನು ನೀಡುತ್ತಿದ್ದ ಈ ಕಂಪನಿಗಳು ಈ ಹಗಲು ದರೋಡೆಗೆ ಇಳಿದಿವೆ. ಅನಾವಶ್ಯಕ ಶುಲ್ಕವನ್ನು ಗ್ರಾಹಕರಿಗೆ ವಿಧಿಸುತ್ತಿವೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಈ ಕ್ಯಾಬ್ ಸೇವೆಗಳನ್ನು ಬಳಸುವ ಗ್ರಾಹಕರು ಈ ಕುರಿತು ಕಂಪನಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರ ಜೊತೆಗೆ ಈ ಕಂಪನಿಗಳು ಕಸ್ಟಮರ್ ಸರ್ವಿಸ್‍‍ಗಾಗಿ ಪ್ರತ್ಯೇಕವಾದ ಕಾಲ್ ಸೆಂಟರ್ ಹೊಂದಿಲ್ಲ ಎಂಬುದು ಗ್ರಾಹಕರ ಆರೋಪ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಈ ಕಾರಣದಿಂದಾಗಿ ಕ್ಯಾಬ್ ಡ್ರೈವರ್‍‍ಗಳು ವೇಟಿಂಗ್ ಚಾರ್ಜ್, ಸರ್‍‍ಚಾರ್ಜ್ ಎಂದು ಅನಗತ್ಯ ಶುಲ್ಕಗಳನ್ನು ಗ್ರಾಹಕರ ಮೇಲೆ ವಿಧಿಸುತ್ತಿದ್ದಾರೆ. ಒಂದು ಬಾರಿ ಪ್ರಯಾಣ ಮಾಡಿದರೆ ರೂ.60ರಿಂದ ರೂ.100ರವರೆಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತಿದೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಇನ್ನು ರಜಾದಿನಗಳು, ಹಬ್ಬಗಳಂದು, ಇತರ ವಿಶೇಷ ದಿನಗಳಂದು ಹೆಚ್ಚಿನ ದರವನ್ನು ವಿಧಿಸಲಾಗುತ್ತಿದೆ. ಇದರಿಂದಾಗಿ ದುಪ್ಪಟ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸರ್ಕಾರವು ಕ್ಯಾಬ್ ಸೇವೆ ನೀಡುವ ಕಂಪನಿಗಳ ಮೇಲೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ದೂರುತ್ತಿದ್ದ ಸಾರ್ವಜನಿಕರಿಗೆ ಮಹಾರಾಷ್ಟ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಬೇಕಾಬಿಟ್ಟಿ ಶುಲ್ಕ ವಿಧಿಸುತ್ತಿದ್ದ ಕ್ಯಾಬ್ ಕಂಪನಿಗಳಿಗೆ ಕಡಿವಾಣ ಹಾಕಲು ಮಹಾರಾಷ್ಟ್ರ ಸರ್ಕಾರವು ಮುಂದಾಗಿದೆ. ಮಹಾರಾಷ್ಟ್ರದಲ್ಲಿ 75,000ಕ್ಕೂ ಹೆಚ್ಚಿನ ವಾಹನಗಳು ಕ್ಯಾಬ್ ಸೇವೆಯನ್ನು ನೀಡುತ್ತಿವೆ. ಇದರ ಜೊತೆಗೆ 10 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಆಟೋಗಳಿವೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಇವುಗಳು ಹೆಚ್ಚು ಶುಲ್ಕವನ್ನು ವಿಧಿಸುತ್ತಿವೆ ಎಂದು ದೂರು ನೀಡಲಾಗಿತ್ತು. ಈ ದೂರುಗಳನ್ನು ಪರಿಶೀಲಿಸಲು ಕಥುವಾ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು 2017ರಿಂದ ಕಾರ್ಯಾಚರಣೆ ನಡೆಸುತ್ತಿದೆ. ನಾಲ್ಕು ಸದಸ್ಯರನ್ನು ಒಳಗೊಂಡಿರುವ ಈ ಸಮಿತಿಗೆ ನಿವೃತ್ತ ಐ‍ಎ‍ಎಸ್ ಅಧಿಕಾರಿ ಪಿಸಿ ಕಥುವಾ ಮುಖ್ಯಸ್ಥರಾಗಿದ್ದಾರೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

2012ರಲ್ಲಿ ಹಕೀಂ ಸಮಿತಿಯು ಜಾರಿಗೆ ತಂದಿದ್ದ ದರಗಳನ್ನು ಪರಿಶೀಲಿಸುವುದು ಈ ಸಮಿತಿಯ ಮುಖ್ಯ ಕಾರ್ಯವಾಗಿತ್ತು. ಮಹಾರಾಷ್ಟ್ರದದ್ಯಾಂತ ಅಧ್ಯಯನ ನಡೆಸಿದ ನಂತರ ಈ ಸಮಿತಿಯು ಹೊಸ ದರವನ್ನು ನಿಗದಿಪಡಿಸಿದೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಮಹಾರಾಷ್ಟ್ರ ಸರ್ಕಾರವೂ ಸಹ ಕಥುವಾ ಸಮಿತಿಯು ನಿಗದಿಪಡಿಸಿರುವ ಈ ಹೊಸ ದರಕ್ಕೆ ಅನುಮೋದನೆ ನೀಡಿದೆ. ಸರ್‍‍ಚಾರ್ಜ್ ಅನ್ನು ಮೂರರಷ್ಟು ಹೆಚ್ಚಿಸ ಬಹುದೆಂದು ಹೇಳಲಾಗಿದೆ. ಕಥುವಾ ಸಮಿತಿಯು ಹೊಸ ದರವನ್ನು ರೂ.14ಗಳಿಗೆ ನಿಗದಿಪಡಿಸಿದೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಇದಾದ ನಂತರ ಪ್ರತಿ ಕಿ.ಮೀಗೆ ರೂ.16 ಎಂದು ನಿಗದಿಪಡಿಸಲಾಗಿದ್ದು, ಈ ಶುಲ್ಕವು ರೆಗ್ಯುಲರ್ ಕ್ಯಾಬ್, ಮಧ್ಯಮ ಗಾತ್ರದ ಹಾಗೂ ಪ್ರೀಮಿಯಂ ವಾಹನಗಳಿಗೆ ಅನ್ವಯವಾಗಲಿದೆ. ಹೈ ಎಂಡ್ ವಾಹನಗಳ ಆರಂಭಿಕ ಶುಲ್ಕವು ರೂ.26 ಆಗಿರಲಿದೆ. ಶುಲ್ಕವನ್ನು ರೂ.32ರಿಂದ ರೂ.38ಗಳಿಗೆ ಏರಿಕೆ ಮಾಡಲು ಅನುಮತಿ ನೀಡಲಾಗಿದೆ.

ಹಗಲು ದರೋಡೆ ಮಾಡುವ ಕ್ಯಾಬ್‍‍ಗಳಿಗೆ ಬ್ರೇಕ್, ಸರ್ಕಾರವೇ ನಿಗದಿಪಡಿಸಲಿದೆ ಶುಲ್ಕ

ಕಥುವಾ ಸಮಿತಿಯು ಈ ಶುಲ್ಕವು ಎಲ್ಲಾ ಕಮರ್ಶಿಯಲ್ ಕಾರುಗಳಿಗೆ ಹಾಗೂ ಆಟೋಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ. ಸದ್ಯಕ್ಕೆ ಮಹಾರಾಷ್ಟ್ರದಲ್ಲಿರುವ ಕ್ಯಾಬ್‍‍ಗಳಲ್ಲಿ ಆರಂಭಿಕ ಶುಲ್ಕವಾಗಿ ರೂ.18ರಿಂದ ರೂ.22ರವರೆಗೆ ವಿಧಿಸಲಾಗುತ್ತಿದೆ.

Article Published On: Tuesday, March 10, 2020, 13:42 [IST]
English summary
Government to fix fare for cabs. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+