ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಕರೋನಾ ಎಂಬ ಕಣ್ಣಿಗೆ ಕಾಣದ ವೈರಸ್ ಇಡೀ ಜಗತ್ತನ್ನು ಆವರಿಸಿದೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳೂ ಸಹ ಈ ವೈರಸ್ ಅನ್ನು ಎದುರಿಸಲಾರದೇ ಅಸಹಾಯಕವಾಗಿವೆ. ಈ ಮಹಾಮಾರಿ ವೈರಸ್ ಮಾನವ ಜನಾಂಗವು ಹಿಂದೆಂದೂ ಕಂಡಿರದ ಹೊಸ ರೀತಿಯ ವೈರಸ್ ಆಗಿದ್ದು, ಇದಕ್ಕೆ ಯಾವುದೇ ಚಿಕಿತ್ಸೆಯಿಲ್ಲ.

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಈ ವೈರಸ್ ಹರಡದಂತೆ ತಡೆಯುವುದೇ ಇದಕ್ಕಿರುವ ಮದ್ದು. ಈ ಕಾರಣಕ್ಕೆ ಅನೇಕ ದೇಶಗಳು ಜನರನ್ನು ಹೊರಗೆ ಬರದಂತೆ ಸೂಚಿಸಿದ್ದು, ಲಾಕ್‌ಡೌನ್‌ ಜಾರಿಗೊಳಿಸಿವೆ. ವಿಶ್ವದ ಹಲವು ದೇಶಗಳಲ್ಲಿ ಉಂಟಾದ ಸಾವು ನೋವುಗಳ ಹಿನ್ನೆಲೆಯಲ್ಲಿ ಭಾರತವು ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಲ್ಲಿ ಲಾಕ್‌ಡೌನ್ ಸಹ ಸೇರಿದೆ.

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಈ ಹಿಂದೆ ಘೋಷಿಸಲಾಗಿದ್ದ ಲಾಕ್‌ಡೌನ್ ಅನ್ನು ಮೇ 4ರವರೆಗೆ ವಿಸ್ತರಿಸಲಾಗಿದೆ. ರಾಜ್ಯಗಳ ಕೋರಿಕೆಯ ಮೇರೆಗೆ, ವೈದ್ಯಕೀಯ ಸಂಶೋಧಕರ ಸಲಹೆಯ ಮೇರೆಗೆ ಹಾಗೂ ವಿಶ್ವ ಆರೋಗ್ಯ ಇಲಾಖೆಯ ಒತ್ತಾಯದ ಮೇರೆಗೆ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಈ ಲಾಕ್‌ಡೌನ್‌ನಿಂದಾಗಿ ದಿನಗೂಲಿ ಕಾರ್ಮಿಕರು, ಕೆಳವರ್ಗದವರು ಸೇರಿದಂತೆ ಅನೇಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಶ್ರೀಮಂತರು ಮಾತ್ರ ಈ ವೇಳೆಯಲ್ಲೂ ಜಾಲಿ ರೈಡ್‌ನಲ್ಲಿ ತೊಡಗಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ.

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಡಿಎಚ್‌ಎಫ್‌ಎಲ್ ಭಾರತದಲ್ಲಿರುವ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ. ಈ ಕಂಪನಿಯ ಕೆಲವು ಷೇರುದಾರರು ಲಾಕ್‌ಡೌನ್ ಉದ್ದೇಶವನ್ನು ಹಾಳುಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಕಪಿಲ್ ವಾಧ್ವಾನ್ ಮತ್ತು ಧೀರಜ್ ವಾಧ್ವಾನ್ ಡಿಎಚ್‌ಎಫ್‌ಎಲ್‌ನ ಪ್ರವರ್ತಕರಾಗಿದ್ದಾರೆ. ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಅದರಲ್ಲಿ ಮುಂಬೈ ವಿಶೇಷ ನ್ಯಾಯಾಲಯದಲ್ಲಿರುವ ಯೆಸ್ ಬ್ಯಾಂಕ್ ಮನಿ ಲಾಂಡರಿಂಗ್ ಪ್ರಕರಣವೂ ಸೇರಿದ್ದು, ಕೋರ್ಟಿಗೆ ಹಾಜರಾಗದೇ ತಲೆಮರೆಸಿಕೊಂಡಿದ್ದಾರೆ. ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹುಡುಕುತ್ತಿರುವ ಬಗ್ಗೆ ವರದಿಯಾಗಿದೆ.

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿ ವಾಧ್ವಾನ್ ಸಹೋದರರು ಹಾಗೂ ಇತರ 21 ಮಂದಿ ಮಹಾರಾಷ್ಟ್ರದಲ್ಲಿರುವ ಮಹಾಬಲೇಶ್ವರ ಬೆಟ್ಟದಲ್ಲಿರುವ ಫಾರಂ ಹೌಸಿಗೆ ಹೋಗಿದ್ದಾರೆ. ಇವರು ಬಳಸಿದ ಕಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯ ಆದೇಶಿಸಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಮನಿ ಲಾಂಡರಿಂಗ್ ಪ್ರಕರಣದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಪೊಲೀಸರು ಫಾರಂ ಹೌಸಿಗೆ ಧಾವಿಸಿ 2 ಲ್ಯಾಂಡ್ ರೋವರ್ ರೇಂಜ್ ರೋವರ್ ಐಷಾರಾಮಿ ಎಸ್‌ಯುವಿ ಹಾಗೂ 3 ಟೊಯೊಟಾ ಫಾರ್ಚೂನರ್ ಎಸ್‌ಯುವಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ವಾಧ್ವಾನ್ ಸಹೋದರರು ಹಾಗೂ ಅವರ ಜೊತೆಯಲ್ಲಿದ್ದ 21 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಇದನ್ನು ಪ್ರಕರಣದ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿವೆ. ಅದರ ಪ್ರಕಾರ ಪೊಲೀಸರು ವಾಧ್ವಾನ್ ಸಹೋದರರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ವಶಪಡಿಸಿಕೊಳ್ಳಲಾಗಿರುವ ಕಾರುಗಳಲ್ಲಿ ಜಾರ್ಖಂಡ್ ರಾಜ್ಯದ ರಿಜಿಸ್ಟ್ರೇಶನ್ ನಂಬರ್ ಹಾಗೂ ಮಹಾರಾಷ್ಟ್ರದ ರಿಜಿಸ್ಟ್ರೇಶನ್ ನಂಬರ್ ಹೊಂದಿರುವ ಕಾರುಗಳು ಸೇರಿವೆ.

ಲಾಕ್‌ಡೌನ್ ಉಲ್ಲಂಘನೆ: ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ತೆರಿಗೆಯನ್ನು ತಪ್ಪಿಸಲು ಕಾರುಗಳನ್ನು ಜಾರ್ಖಂಡ್ ರಾಜ್ಯದಲ್ಲಿ ನೋಂದಾಯಿಸಲಾಗುತ್ತದೆ. ವಶಪಡಿಸಿಕೊಂಡ ಒಟ್ಟು ಕಾರುಗಳ ಮೌಲ್ಯ ರೂ. 4.5 ಕೋಟಿಗಳಾಗುತ್ತದೆ. ರೇಂಜ್ ರೋವರ್ ಲ್ಯಾಂಡ್ ಕಾರಿನ ಬೆಲೆ ರೂ.1.5 ಕೋಟಿಗಳಾದರೆ, ಫಾರ್ಚೂನರ್ ಎಸ್‌ಯುವಿಯ ರೂ.40 ಲಕ್ಷಗಳಾಗುತ್ತದೆ.

ಚಿತ್ರಕೃಪೆ: ಹಿಂದೂಸ್ತಾನ್ ಟೈಮ್ಸ್

Most Read Articles

Kannada
English summary
Maharashtra cops seized DHFL promoters luxury cars for violating coronavirus lockdown. Read in Kannada.
Story first published: Tuesday, April 14, 2020, 16:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X