ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ಭಾರತದ ಹಲವು ಪ್ರಮುಖ ನಗರಗಳು ವಾಯುಮಾಲಿನ್ಯದಿಂದ ತತ್ತರಿಸಿವೆ. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳು ಹೊರಸೂಸುವ ಹೊಗೆಯೇ ಈ ವಾಯು ಮಾಲಿನ್ಯಕ್ಕೆ ಮುಖ್ಯ ಕಾರಣ.

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಇದರಿಂದಾಗಿ ವಾತಾವರಣವು ಹೆಚ್ಚು ಕಲುಷಿತಗೊಂಡಿದೆ. ಅದರಲ್ಲೂ ಹಳೆಯ ಪೆಟ್ರೋಲ್, ಡೀಸೆಲ್ ವಾಹನಗಳು ಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತವೆ. ಈ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಳೆಯ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಈಗ ಮಹಾರಾಷ್ಟ್ರ ರಾಜ್ಯ ಸಾರಿಗೆ ಪ್ರಾಧಿಕಾರವು ಹಳೆ ಆಟೋಗಳ ಸಂಚಾರದ ಮೇಲೆ ನಿರ್ಬಂಧವನ್ನು ವಿಧಿಸಲು ಮುಂದಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಅದರಂತೆ ಮುಂಬೈ ಮಹಾನಗರದಲ್ಲಿ 2021ರ ಆಗಸ್ಟ್ 1ರಿಂದ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದಿಲ್ಲ. ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಈ ನಿಯಮವು 2024ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ.

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಸದ್ಯಕ್ಕೆ ಮುಂಬೈನಲ್ಲಿ 16 ವರ್ಷ ಹಳೆಯ ಆಟೊಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದರೆ, ಮಹಾರಾಷ್ಟ್ರದ ಇತರ ಭಾಗಗಳಲ್ಲಿ 20 ವರ್ಷಗಳಷ್ಟು ಹಳೆಯದಾದ ಆಟೊಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಈಗ ಈ ಮಿತಿಯನ್ನು 15 ವರ್ಷಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಮಹಾರಾಷ್ಟ್ರದಲ್ಲಿ ಸದ್ಯಕ್ಕೆ 10 ಲಕ್ಷಕ್ಕೂ ಹೆಚ್ಚು ಆಟೋರಿಕ್ಷಾಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ಈ ನಿರ್ಧಾರವು ನ್ಯಾಯ ಸಮ್ಮತವಲ್ಲವೆಂದು ಆಟೋರಿಕ್ಷಾ ಮಾಲೀಕರ ಸಂಘವು ಪ್ರತಿಭಟನೆ ನಡೆಸಿದೆ.

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಟೋ ಯೂನಿಯನ್ ಪ್ರತಿನಿಧಿಗಳು ಹೊಸ ಯೋಜನೆಯಿಂದಾಗಿ ಕಡಿಮೆ ಆದಾಯವಿರುವ ಆಟೋ ರಿಕ್ಷಾ ಚಾಲಕರಿಗೆ ತೊಂದರೆಯಾಗಲಿದೆ. ಹೆಚ್ಚಿನ ಆದಾಯವಿರುವ ಚಾಲಕರು ಮೊದಲಿನಂತೆಯೇ ಅದೇ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಹಳೆಯ ಆಟೋರಿಕ್ಷಾಗಳ ಮಾಲೀಕರು ಸರ್ಕಾರದ ಈ ನಿರ್ಧಾರದಿಂದ ಆಘಾತಕ್ಕೊಳಗಾಗಿದ್ದಾರೆ. ಅವರ ವಿರೋಧದ ನಡುವೆಯೂ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ವಾಯುಮಾಲಿನ್ಯ ಸಮಸ್ಯೆಯನ್ನು ನಿವಾರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸ್ಥಗಿತವಾಗಲಿದೆ 15 ವರ್ಷಗಳಿಗಿಂತ ಹಳೆಯದಾದ ಆಟೋಗಳ ಸಂಚಾರ

ಭಾರತದಲ್ಲಿನ ವಾಯುಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ರೀತಿಯ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇವುಗಳಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವುದು ಪ್ರಮುಖವಾದುದು.

ಗಮನಿಸಿ: ಈ ಫೋಟೋಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Maharashtra government to stop operations of 15 years old autorickshaws. Read in Kannada.
Story first published: Wednesday, October 7, 2020, 9:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X