ಅತಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಿವೆ ಹೈಸ್ಪೀಡ್ ಕ್ಯಾಮೆರಾಗಳು

ಭಾರತದ ಹೆದ್ದಾರಿಗಳಲ್ಲಿ ವಾಹನಗಳ ಅತಿ ವೇಗದಿಂದಾಗಿ ಪ್ರತಿವರ್ಷ ಸಾವಿರಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಈ ರಸ್ತೆ ಅಪಘಾತಗಳಲ್ಲಿ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ. ಆದರೂ ಜನರು ವೇಗವಾಗಿ ವಾಹನ ಚಾಲನೆ ಮಾಡುವುದನ್ನು ಬಿಟ್ಟಿಲ್ಲ.

ಅತಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಿವೆ ಹೈಸ್ಪೀಡ್ ಕ್ಯಾಮೆರಾಗಳು

ಈ ಕಾರಣಕ್ಕೆ ವೇಗದ ಚಾಲನೆಗೆ ಕಡಿವಾಣ ಹಾಕಲು ಮಹಾರಾಷ್ಟ್ರ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಹೆದ್ದಾರಿ ಪೊಲೀಸರು ಮುಂದಿನ 90 ದಿನಗಳಲ್ಲಿ ಹೊಸ ಕ್ಯಾಮೆರಾಗಳನ್ನು ಖರೀದಿಸಲಿದ್ದಾರೆ. ಈ ಕ್ಯಾಮೆರಾಗಳಿಂದ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ಪತ್ತೆ ಹಚ್ಚಬಹುದು. ಈ ಹೊಸ ಕ್ಯಾಮೆರಾಗಳು ಅಸ್ತಿತ್ವದಲ್ಲಿರುವ ಕ್ಯಾಮೆರಾಗಳಿಗಿಂತ ಹೆಚ್ಚು ಸುಧಾರಿತವಾಗಿವೆ.

ಅತಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಿವೆ ಹೈಸ್ಪೀಡ್ ಕ್ಯಾಮೆರಾಗಳು

ಈ ಸುಧಾರಿತ ಕ್ಯಾಮೆರಾ ಏಕಕಾಲದಲ್ಲಿ ಎರಡು ಅಥವಾ ಮೂರು ಪಥಗಳಲ್ಲಿ ಬರುವ 32 ವಾಹನಗಳ ಮೇಲ್ವಿಚಾರಣೆ ಮಾಡಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹೊಸ ಕ್ಯಾಮೆರಾಗೆ ರಾಡಾರ್ ಸ್ಪೀಡ್ ಮೆಷಿನ್ (ಆರ್‌ಎಸ್‌ಎಂ) ಎಂದು ಹೆಸರಿಡಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಅತಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಿವೆ ಹೈಸ್ಪೀಡ್ ಕ್ಯಾಮೆರಾಗಳು

ಬೆಂಗಳೂರು ಹಾಗೂ ದೆಹಲಿಯಲ್ಲಿ ತಯಾರಾಗಿರುವ 155 ಆರ್‌ಎಸ್‌ಎಂ ಕ್ಯಾಮೆರಾಗಳನ್ನು ಖರೀದಿಸಲು ಅಧಿಕಾರಿಗಳು ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಮಾಹಿತಿಯ ಪ್ರಕಾರ, ಈ ಹೈಸ್ಪೀಡ್ ಕ್ಯಾಮೆರಾಗಳನ್ನು ಹೆದ್ದಾರಿಯಲ್ಲಿ ಗಸ್ತು ತಿರುಗುವ ಪೊಲೀಸ್ ವಾಹನಗಳಲ್ಲಿ ಅಳವಡಿಸಲಾಗುವುದು. ಇದರಿಂದಾಗಿ ಹೈ-ವೇಗಳ ಮೇಲ್ವಿಚಾರಣೆ ಸುಲಭವಾಗಲಿದೆ.

ಅತಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಿವೆ ಹೈಸ್ಪೀಡ್ ಕ್ಯಾಮೆರಾಗಳು

ಈ ಕ್ಯಾಮೆರಾಗಳನ್ನು ಖರೀದಿಸಲು ಮಹಾರಾಷ್ಟ್ರ ಸರ್ಕಾರವು ರೂ.13.95 ಕೋಟಿ ಬಿಡುಗಡೆಗೊಳಿಸಿದೆ. ಈ ಕ್ಯಾಮರಾಗಳ ಖರೀದಿಗೆ ಹೆದ್ದಾರಿ ಪೊಲೀಸರಿಗೆ ರಸ್ತೆ ಸುರಕ್ಷತಾ ನಿಧಿಯಿಂದ ಹಣ ನೀಡಲಾಗುತ್ತದೆ. ಆರ್‌ಎಸ್‌ಎಂ ಕ್ಯಾಮರಾಗಳು ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಲಿವೆ ಎಂದು ಹೇಳಲಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಅತಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಿವೆ ಹೈಸ್ಪೀಡ್ ಕ್ಯಾಮೆರಾಗಳು

ಮಾಹಿತಿಗಳ ಪ್ರಕಾರ, 2019ರಲ್ಲಿ ಮಹಾರಾಷ್ಟ್ರದಲ್ಲಿ 20,045 ರಸ್ತೆ ಅಪಘಾತಗಳು ಸಂಭವಿಸಿದ್ದು, 8,175 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚಾಲಕರು ಏಕಾಏಕಿಲೇನ್‌ ಬದಲಿಸುವುದು, ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವುದು ಹಾಗೂ ಅಪಾಯಕಾರಿಯಾಗಿ ಓವರ್ ಟೇಕ್ ಮಾಡುವುದೇ ಈ ಅಪಘಾತಗಳಿಗೆ ಕಾರಣವಾಗಿದೆ.

ಅತಿ ವೇಗವಾಗಿ ಚಲಿಸುವ ವಾಹನಗಳ ಪತ್ತೆಗಾಗಿ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳುತ್ತಿವೆ ಹೈಸ್ಪೀಡ್ ಕ್ಯಾಮೆರಾಗಳು

ಆರ್‌ಎಸ್‌ಎಂ ಕ್ಯಾಮೆರಾಗಳು ಅತಿ ವೇಗವಾಗಿ ಚಲಿಸುವ ವಾಹನಗಳ ಚಿತ್ರ, ವೇಗ ಹಾಗೂ ರಿಜಿಸ್ಟರ್ ನಂಬರ್ ಗಳನ್ನು ಸೆರೆಹಿಡಿಯಲಿವೆ. ನಂತರ ಅವುಗಳನ್ನು ಸಾಕ್ಷಿಯಾಗಿ ಬಳಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು. ಪೊಲೀಸರು ಸದ್ಯಕ್ಕೆ ಅತಿ ವೇಗದ ವಾಹನಗಳನ್ನು ಪತ್ತೆ ಹಚ್ಚಲು ಲೇಸರ್ ಯಂತ್ರಗಳನ್ನು ಬಳಸುತ್ತಿದ್ದಾರೆ.

ಮೂಲ: ಮಿಡ್ ಡೇ

Most Read Articles

Kannada
English summary
Maharashtra police adding high speed cameras to trace over speeding vehicles. Read in Kannada.
Story first published: Monday, August 31, 2020, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X