ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ರೋಲ್ಸ್ ರಾಯ್ಸ್ ಕಾರುಗಳು ಪ್ರಪಂಚದಲ್ಲಿರುವ ಐಷಾರಾಮಿ ಕಾರುಗಳಲ್ಲಿ ಒಂದಾಗಿವೆ. ಬಿಲಿಯನೇರ್'ಗಳ ಹಾಗೂ ಉದ್ಯಮಿಗಳ ನೆಚ್ಚಿನ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕಾರುಗಳು ಸಹ ಸೇರಿವೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ಇತ್ತೀಚೆಗೆ ರೋಲ್ಸ್ ರಾಯ್ಸ್ ಕಾರುಗಳು ಹೆಚ್ಚು ಸುದ್ದಿಯಾಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಬಾಬ್ಜಿ ಮದನ್ ಅವರ ಪತ್ನಿ ರೋಲ್ಸ್ ರಾಯ್ಸ್ ಕಾರುಗಳು ಮಾತ್ರ ಐಷಾರಾಮಿ ಕಾರುಗಳು, ಆಡಿ ಎ 6 ಸೇರಿದಂತೆ ಇತರ ಕಾರುಗಳು ಐಷಾರಾಮಿ ಕಾರುಗಳಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ತಮ್ಮ ರೋಲ್ಸ್ ರಾಯ್ಸ್ ಐಷಾರಾಮಿ ಕಾರಿನ ಮೇಲೆ ವಿಧಿಸಲಾಗಿರುವ ಪ್ರವೇಶ ತೆರಿಗೆಯನ್ನು ರದ್ದು ಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ತಮಿಳು ನಟ ವಿಜಯ್'ರವರಿಗೆ ಮದ್ರಾಸ್ ಹೈ ಕೋರ್ಟ್ ಎರಡು ದಿನಗಳ ಹಿಂದಷ್ಟೇ ಒಂದು ಲಕ್ಷ ರೂಪಾಯಿಗಳ ದಂಡ ವಿಧಿಸಿತ್ತು.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ಈಗ ರೋಲ್ಸ್ ರಾಯ್ಸ್ ಐಷಾರಾಮಿ ಕಾರು ಹೊಂದಿರುವ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ವಿರುದ್ಧ ವಿದ್ಯುತ್ ಕಳ್ಳತನದ ಆರೋಪ ಕೇಳಿ ಬಂದಿದೆ. ಸಂಜಯ್ ಗಾಯಕ್ವಾಡ್ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿವಸೇನೆ ಪಕ್ಷದ ಸದಸ್ಯರಾಗಿದ್ದಾರೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ಅವರು ಇತ್ತೀಚೆಗೆ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಕಾರು ಖರೀದಿಸುವ ಮೂಲಕ ಮಹಾರಾಷ್ಟ್ರದಾದ್ಯಂತ ಸುದ್ದಿಯಾಗಿದ್ದರು. ಈಗ ಮಹಾರಾಷ್ಟ್ರ ರಾಜ್ಯ ವಿದ್ಯುತ್ ಮಂಡಳಿ (ಎಂಎಸ್‌ಇಡಿಸಿಎಲ್) ಅವರ ವಿರುದ್ಧ ಮಹಾತ್ಮ ಫುಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ಸಂಜಯ್ ಗಾಯಕ್ವಾಡ್ ರೂ.34,640 ಗಳ ಎಲೆಕ್ಟ್ರಿಕ್ ಬಿಲ್ ಪಾವತಿಸಿಲ್ಲ ಎಂದು ದೂರು ದಾಖಲಿಸಲಾಗಿದೆ. ವಿದ್ಯುತ್ ಸರಬರಾಜು ಕಂಪನಿಯು ಅವರಿಗೆ ರೂ.15 ಸಾವಿರಗಳ ದಂಡವನ್ನು ಸಹ ವಿಧಿಸಿದೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳ ತಂಡವು ಪೂರ್ವ ಕಲ್ಯಾಣ್'ನಲ್ಲಿರುವ ಸಂಜಯ್ ಗಾಯಕ್ವಾಡ್'ರವರ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತ್ತು. ಈ ಸ್ಥಳದಲ್ಲಿ ಕಟ್ಟಡದ ಕಾಮಗಾರಿ ನಡೆಯುತ್ತಿದೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ತಪಾಸಣೆ ವೇಳೆ ಸಂಜಯ್ ಗಾಯಕ್ವಾಡ್ ಯಾವುದೇ ಮೀಟರ್'ಗಳನ್ನು ಅಳವಡಿಸದೇ ವಿದ್ಯುತ್ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಸಂಜಯ್ ಗಾಯಕ್ವಾಡ್ ಬಿಲ್ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ಸಂಜಯ್ ಗಾಯಕ್ವಾಡ್ ಅವರ ಬಳಿ ಇರುವ ರೋಲ್ಸ್ ರಾಯ್ಸ್ ಕಾರಿನ ಮಾದರಿ ಯಾವುದು ಎಂಬ ಬಗ್ಗೆ ತಿಳಿದು ಬಂದಿಲ್ಲ. ಆದರೆ ಅವರು ಹೊಂದಿರುವುದು ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಯಾದ ಹೊಸ ತಲೆಮಾರಿನ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಅಲ್ಲ ಎಂದು ಹೇಳಲಾಗಿದೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ಸಂಜಯ್ ಗಾಯಕ್ವಾಡ್, ರೋಲ್ಸ್ ರಾಯ್ಸ್ ಕಾರು ಮಾತ್ರವಲ್ಲದೆ ಟೊಯೊಟಾ ಫಾರ್ಚೂನರ್, ಟೊಯೊಟಾ ಇನೋವಾಗಳಂತಹ ಇತರ ಜನಪ್ರಿಯ ಕಾರುಗಳನ್ನು ಸಹ ಹೊಂದಿದ್ದಾರೆ.

ಕೋಟಿ ಬೆಲೆಯ ಕಾರು ಹೊಂದಿದ್ದರೂ ವಿದ್ಯುತ್ ಕಳ್ಳತನವೆಸಗಿದ ರಾಜಕಾರಣಿ

ರೋಲ್ಸ್ ರಾಯ್ಸ್ ಕಂಪನಿಯು ವಿಶ್ವದ ಅತ್ಯಂತ ದುಬಾರಿ ಕಾರು ಎಂದು ಹೇಳಲಾದ ಬಾಟ್ ಟೇಲ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಕಾರಿನ ಬೆಲೆ ರೂ.202.8 ಕೋಟಿಗಳಾಗಿದೆ.

Most Read Articles

Kannada
English summary
Maharashtra politician who owns Rolls Royce car fails to pay electricity bill. Read in Kannada.
Story first published: Thursday, July 15, 2021, 10:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X