ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

By Nagaraja

ನಿಮ್ಮಲ್ಲಿ ಜರ್ಮನಿಯ ಅತ್ಯಂತ ಶಕ್ತಿಶಾಲಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿ ವ್ಯಾಗನ್ ಖರೀದಿಸುವಷ್ಟು ದುಡ್ಡಿಲ್ಲವೇ? ಚಿಂತೆ ಬೇಡ. ಇದಕ್ಕೆ ಪರಿಹಾರ ಇಲ್ಲಿದೆ. ತಲೆಬಿಸಿಯೇ ಬೇಡ, ನಿಮ್ಮ ಬಳಿ ಮಹೀಂದ್ರ ಬೊಲೆರೊ ಕಾರೊಂದು ಇದ್ದರೆ ಸಾಕು. ಉಳಿದೆಲ್ಲ ಕೆಲಸವನ್ನು ನಾವಿಂದು ಹೇಳಿಕೊಡಲಿರುವ ಸಂಸ್ಥೆಯು ನೋಡಿಕೊಳ್ಳಲಿದೆ.

ಹೌದು, ಕೇರಳದ ಕೊಟ್ಟಯಂ ಜಿಲ್ಲೆಯಲ್ಲೊಂದು ಕಾರನ್ನು ಪರಿಷ್ಕರಣೆಗೊಳಿಸುವ ಸಂಸ್ಥೆಯೊಂದಿದೆ. ಅದುವೇ ಆರ್ ಆಂಡ್ ಟಿ ಆಟೋ ಕ್ಯಾಟಲಿಸ್ಟ್ (R&T Auto Catalyst). ನೀವು ಈ ಸಂಸ್ಥೆಯನ್ನು ಸಂರ್ಪಕಿಸಿದರೆ ಸಾಕು. ನಿಮ್ಮ ಬೊಲೆರೊ ಕಾರು ಆಕರ್ಷಕ ಬೆಂಝ್ ಎಎಂಜಿ ಜಿ ವ್ಯಾಗನ್ ಆಗಿ ಮಾರ್ಪಾಡುಗೊಳ್ಳಲಿದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬೆಂಝ್‌ನ ಶಕ್ತಿಶಾಲಿ ಎಎಂಜಿ ವಿಭಾಗವು ಪವರ್ ಫುಲ್ ಜಿ ವ್ಯಾಗನ್ ಕಾರನ್ನು ತಯಾರಿಸುತ್ತಿದೆ. ಇಡೀ ಜಗತ್ತಿನಲ್ಲೇ ಅತ್ಯುತ್ತಮ ಆಫ್ ರೋಡ್ ವಾಹನಗಳಲ್ಲಿ ಇದೂ ಒಂದಾಗಿದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ಭಾರತದಲ್ಲಿ ಪ್ರಮುಖವಾಗಿಯೂ ಆಫ್ ರೋಡ್ ವಾಹನ ಪ್ರೇಮಿಗಳಲ್ಲಿ ಕೋಟಿ ಕೋಟಿ ರುಪಾಯಿಗಳನ್ನು ಖರ್ಚು ಮಾಡುವಷ್ಟು ಆರ್ಥಿಕ ಶಕ್ತಿಯಿರುವುದಿಲ್ಲ. ಹಾಗಿದ್ದರೆ ಏನು ಮಾಡೋಣ ಎಂಬ ಪ್ರಶ್ನೆಗಳಿಗೆ ಈ ಆಟೋಮೋಟಿವ್ ಸಂಸ್ಥೆ ಉತ್ತರ ಕಂಡುಹುಡುಕಿದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ಈಗಾಗಲೇ ಹಲವಾರು ಜನಪ್ರಿಯ ವಾಹನಗಳಿಗೆ ಐಷಾರಾಮಿ ರೂಪ ಕಲ್ಪಿಸಿಕೊಟ್ಟಿರುವ ಆರ್ ಆಂಡ್ ಟಿ ಆಟೋ ಕ್ಯಾಟಲಿಸ್ಟ್ ಸಂಸ್ಥೆಯೀಗ ಬೊಲೆರೊ ಮುಖಾಂತರ ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್ ಕಾರಿನ ನಕಲು ಮಾಡಿದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ಇಲ್ಲಿ ಬೊಲೆರೊ ಹೊರಮೈ ವಿನ್ಯಾಸವನ್ನು ಸಂಪೂರ್ಣವಾಗಿ ಬೆಂಝ್ ಜಿ ವ್ಯಾಗನ್ ರೂಪದಲ್ಲಿ ಪರಿಷ್ಕೃತಗೊಳಿಸಲಾಗುತ್ತದೆ. ಬಳಿಕ ಫಿಟ್ ಆಂಡ್ ಫಿನಿಶಿಂಗ್ ಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ಕಾರಿನ ಹೊರಮೈ ಮಾತ್ರವಲ್ಲದೆ ಒಳಮೈಯಲ್ಲೂ ವಿಶೇಷ ಬೆಂಝ್ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಈ ಎಲ್ಲ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ದೇಶದ ಅತ್ಯುತ್ತಮ ಆಫ್ ರೋಡ್ ವಾಹನಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಮಹೀಂದ್ರ ಬೊಲೆರೊ, ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ಪ್ರಸ್ತುತ ಸಂಸ್ಥೆಯು ಆಫ್ ರೋಡ್ ಆಕ್ಸೆಸರಿಗಳ ಸೇವೆಯನ್ನು ಒದಗಿಸುತ್ತದೆ. ಇನ್ನು 4x4 ವಾಹನಗಳ ಸರ್ವಿಸ್, ಪರಿಷ್ಕರಣೆ ಹಾಗೂ ವಿಶೇಷ ಬಾಡಿ ಕಿಟ್ ಗಳನ್ನು ಒದಗಿಸಲಾಗುತ್ತದೆ.

ಬೆಂಝ್ ಜಿ ವ್ಯಾಗನ್ ನಕಲು ಮಾಡಿದ ಮಹೀಂದ್ರ ಬೊಲೆರೊ

ಅಂದ ಹಾಗೆ ಇದೇ ಸಂಸ್ಥೆಯು ಈಗಾಗಲೇ ಹೋಂಡಾ ಸಿಟಿ ಕಾರಿಗೆ ಜಗತ್ತಿನ ಅತ್ಯಂತ ವೇಗದ ಸೂಪರ್ ಕಾರು ಬುಗಾಟಿ ವೆರೋನ್ ಸ್ಪರ್ಶ ನೀಡಿರುವುದು ಮತ್ತಷ್ಟು ವಿಶಿಷ್ಟವಾಗಿಸಿದೆ.

More from DriveSpark

Article Published On: Thursday, September 3, 2015, 11:09 [IST]
English summary
Mahindra Bolero Replica into Mercedes Benz G Wagon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+