ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ಇತ್ತೀಚಿಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಕುತ್ತಿದ್ದು, ರಸ್ತೆಯಲ್ಲಿ ಸುರಕ್ಷಿತವಾಗಿರುವುದೇ ದೊಡ್ಡ ಸವಾಲಾಗಿದೆ. ನಮ್ಮದಲ್ಲದ ತಪ್ಪಿಗೂ ಸಹ ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗುತ್ತಿದೆ. ರಸ್ತೆ ಅಪಘಾತಗಳಿಗೆ ತುತ್ತಾಗುವವರು ಅದೃಷ್ಟ ಚೆನ್ನಾಗಿದ್ದರೆ ಯಾವುದೇ ತೊಂದರೆಯಾಗದೇ ಪಾರಾಗುತ್ತಾರೆ.

ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗಿದೆ. ಆ ವೀಡಿಯೊದಲ್ಲಿರುವ ಜೆಸಿಬಿ ನಿಯಂತ್ರಣ ಕಳೆದುಕೊಂಡು ಬದಿಯಲ್ಲಿದ್ದ ಬೈಕ್‌ ಸವಾರನಿಗೆ ಇನ್ನೇನು ಗುದ್ದಬೇಕು ಎನ್ನುವಷ್ಟರಲ್ಲಿ ಆಪದ್ಬಾಂದವನಂತೆ ಅಡ್ಡ ಬಂದ ಮಹೀಂದ್ರಾ ಬೊಲೆರೊಗೆ ಡಿಕ್ಕಿ ಹೊಡೆಯುತ್ತದೆ. ಇದರಿಂದ ಬೈಕ್ ಸವಾರನು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ಈ ವೀಡಿಯೊವನ್ನು ಶೇರ್ ಮಾಡಿರುವ ಆನಂದ್ ಮಹೀಂದ್ರಾರವರು ಬೊಲೆರೊ ಜೀವ ರಕ್ಷಕವಾಗಿ ಬದಲಾಗಿದೆ. ಈ ಬೊಲೆರೊದ ಏಕ ಮಾತ್ರ ಉದ್ದೇಶ ಬೈಕ್ ಸವಾರನನ್ನು ಉಳಿಸುವುದಾಗಿದೆ ಎಂದು ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ಈ ಘಟನೆ ಯಾವಾಗ ಜರುಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ವೀಡಿಯೊವನ್ನು ಸ್ಲೋ ಮೋಷನ್ ನಲ್ಲಿ ನೋಡಿದಾಗ ಜುಲೈ 25ರ ದಿನಾಂಕವನ್ನು ಕಾಣಬಹುದು. ಈ ವೀಡಿಯೊದಲ್ಲಿ ಜೆಸಿಬಿ, ಮಹೀಂದ್ರಾ ಬೊಲೆರೊಗೆ ಗುದಿಯುವುದನ್ನು ಕಾಣಬಹುದು.

ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ವೀಡಿಯೊದಲ್ಲಿ ಬೈಕ್ ಸವಾರ ಯಾವುದೇ ರೀತಿಯ ತೊಂದರೆಯಾಗದಂತೆ ಪಾರಾಗುವುದನ್ನು ಸಹ ಕಾಣಬಹುದು. ಬೈಕ್ ಸವಾರ ಪಾರಾಗಿರುವುದನ್ನು ಪವಾಡವೆಂದೇ ಹೇಳಾಗುತ್ತಿದೆ. ಈ ಅಪಘಾತದಲ್ಲಿ ಮಹೀಂದ್ರಾ ಬೊಲೆರೊದ ಬಂಪರ್ ಗಾರ್ಡ್ ಮುರಿದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ದೇವರು ಯಾರನ್ನಾದರೂ ರಕ್ಷಿಸಲು ಮಹೀಂದ್ರಾ ಬೊಲೆರೊವನ್ನು ಕಳುಹಿಸುತ್ತಾನೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬೈಕ್ ಸವಾರ ನಿಜಕ್ಕೂ ಅದೃಷ್ಟವಂತನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಲಾಗುತ್ತಿದೆ.

ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ಇದೇ ವೇಳೆ ಜೆಸಿಬಿ ಡಿಕ್ಕಿ ಹೊಡೆದ ನಂತರವೂ ಬೊಲೆರೊ ದೃಢವಾಗಿ ನಿಂತಿದೆ ಎಂದು ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೇನು ಅತಿವೇಗದಲ್ಲಿ ಜೆಸಿಬಿ ಡಿಕ್ಕಿ ಹೊಡೆಯಲಿದೆ ಎನ್ನುವಷ್ಟರಲ್ಲಿಯೇ ಬೈಕ್ ಸವಾರ ಬದುಕುಳಿದಿದ್ದಾನೆ. ಬೈಕ್ ಸವಾರನ ಪ್ರಾಣ ಉಳಿಸಲು ಬೊಲೆರೊ ಪ್ರಮುಖ ಪಾತ್ರವನ್ನೇ ವಹಿಸಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕೆಲವು ದಿನಗಳ ಹಿಂದಷ್ಟೇ ವಿಕಾಸ್ ದುಬೆ ಎನ್ ಕೌಂಟರ್ ನಂತರ, ಮಹೀಂದ್ರಾ ಟಿಯುವಿ 300ನ ಸುರಕ್ಷತೆಯ ಬಗೆ ಜನರು ಗೇಲಿ ಮಾಡಿದ್ದರು. ಈಗ ಈ ವೀಡಿಯೊ ಹೊರ ಬಂದ ನಂತರ ಬೊಲೆರೊ ಸುರಕ್ಷತೆಯನ್ನು ಶ್ಲಾಘಿಸುತ್ತಿದ್ದಾರೆ.

ಬೈಕ್ ಸವಾರನ ಪ್ರಾಣ ಉಳಿಸಿ ಜೀವ ರಕ್ಷಕವಾದ ಮಹೀಂದ್ರಾ ಬೊಲೆರೊ

ಮಹೀಂದ್ರಾ ಬೊಲೆರೊ ಹಲವಾರು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮಹೀಂದ್ರಾ ಬೊಲೆರೊ ಭಾರತದ ಅತ್ಯಂತ ಜನಪ್ರಿಯ ಎಸ್ ಯುವಿಗಳಲ್ಲಿ ಒಂದಾಗಿದ್ದು, ಇಂದಿಗೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.

Most Read Articles

Kannada
English summary
Mahindra Bolero saves bike rider's life. Read in Kannada.
Story first published: Monday, July 27, 2020, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X