ಹೆಸರಿಗಷ್ಟೇ 5-ಸ್ಟಾರ್ ಸುರಕ್ಷಿತ ಕಾರು, ಜೀವಕ್ಕೆ ಗ್ಯಾರೆಂಟಿ ಇಲ್ಲ... ಕಾರು ಮಾಲೀಕನ ತೀವ್ರ ಅಸಮಾಧಾನ!
ಮಹೀಂದ್ರಾ ಸ್ಕಾರ್ಪಿಯೊ-ಎನ್ ಮತ್ತು ಫೋಕ್ಸ್‌ವ್ಯಾಗನ್ ವರ್ಟಸ್ ನಡುವೆ ಅತಿವೇಗದ ಡಿಕ್ಕಿ ಸಂಭವಿಸಿದೆ. ಈ ಘಟನೆಯು ಎಂದಿನಂತೆ ಮತ್ತೊಮ್ಮೆ ಮಹೀಂದ್ರಾ ವಾಹನಗಳಲ್ಲಿನ ಏರ್‌ಬ್ಯಾಗ್ ವೈಫಲ್ಯದ ಪುನರಾವರ್ತಿತ ಸಮಸ್ಯೆಯತ್ತ ಗಮನ ಸೆಳೆದಿದೆ. ಘಟನೆಯಲ್ಲಿ ಕಾರಿನ ಗುಣಮಟ್ಟದ ಕುರಿತು ಸ್ಕಾರ್ಪಿಯೋ-ಎನ್ ಮಾಲೀಕ ತೀರ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫ್ಲೈಓವರ್ ಒಂದರ ಮೇಲೆ ಈ ಅಪಘಾತ ಸಂಭವಿಸಿದ್ದು, ಸ್ಕಾರ್ಪಿಯೋ-ಎನ್ ನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ. ಸ್ಕಾರ್ಪಿಯೋ-ಎನ್ ಸುಮಾರು 90 ಕಿ.ಮೀ ವೇಗದಲ್ಲಿ ಪ್ರಯಾಣಿಸುತ್ತಿದ್ದಾಗ ಮೇಲ್ಸೇಸೇತುವೆಯಲ್ಲಿ ದೊಡ್ಡ ತಿರುವು ಎದುರಾಗಿದ್ದು, ಇದ್ದಕ್ಕಿದ್ದಂತೆ ಚಾಲಕನಿಗೆ ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಟಾಟಾ ಟಿಯಾಗೊ ರಸ್ತೆಯ ಮಧ್ಯದಲ್ಲಿ ನಿಲ್ಲಿಸಿರುವುದು ಕಾಣಿಸಿದೆ.

ರಸ್ತೆಯಲ್ಲಿ ದಿಢೀರ್ ತಿರುವಿನ ಕಾರಣ, ಸ್ಕಾರ್ಪಿಯೋ-ಎನ್ ಡ್ರೈವರ್‌ಗೆ ಮುಂದಿನ ರಸ್ತೆ ಸ್ಪಷ್ಟವಾಗಿ ಕಂಡಿಲ್ಲ. ಪರಿಣಾಮವಾಗಿ ಕಾರುಗಳು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿರುವುದನ್ನು ಒಮ್ಮಲೇ ಕಂಡು ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಸ್ಕಾರ್ಪಿಯೋ-ಎನ್ ಸುಮಾರು 90 ಕಿ.ಮೀ ವೇಗದಲ್ಲಿ ಡಿಕ್ಕಿ ಹೊಡೆದಿರುವುದಾಗಿ ಚಾಲಕ ತಿಳಿಸಿದ್ದಾನೆ. ಇಷ್ಟಕ್ಕೂ ಫೋಕ್ಸ್‌ವ್ಯಾಗನ್ ವರ್ಟಸ್ ಹಾಗೂ ಟಾಟಾ ಟಿಯಾಗೋ ಏಕೆ ಅಲ್ಲಿ ನಿಂತಿದ್ದವು ಎಂಬುದರ ಬಗ್ಗೆ ಮಾಹಿತಿಯಿಲ್ಲ.
ಅಪಘಾತವಾದ ನಂತರ ಟಾಟಾ ಟಿಯಾಗೊ ಸ್ಥಳದಿಂದ ಹೊರಟುಹೋಗಿದೆ. ಎರಡೂ ಕಾರುಗಳ ಚಾಲಕರು ಫ್ಲೈಓವರ್‌ನ ಮಧ್ಯದಲ್ಲಿ ವಾದದಲ್ಲಿ ತೊಡಗಿರುವ ಸಾಧ್ಯತೆಯಿದೆ. ಇಲ್ಲವೇ ಡ್ರ್ಯಾಗ್ ರೇಸ್‌ಗೆ ತಯಾರಿ ನಡೆಸಿರಬಹುದು ಎನ್ನಲಾಗಿದೆ. ಮಧ್ಯರಾತ್ರಿಯಲ್ಲಿ ಅತಿವೇಗದ ರಸ್ತೆಯಲ್ಲಿ ಈ ರೀತಿ ವಾಹನ ನಿಲುಗಡೆ ಮಾಡುವುದು ಅತ್ಯಂತ ಅಪಾಯಕಾರಿ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಸ್ಕಾರ್ಪಿಯೋ-ಎನ್ ಏರ್‌ಬ್ಯಾಗ್‌ಗಳು ತೆರೆದಿಲ್ಲ: ಅಪಘಾತದ ನಂತರ, ಸ್ಕಾರ್ಪಿಯೋ-ಎನ್ ಅನ್ನು ಹತ್ತಿರದ ಮಹೀಂದ್ರಾ ಸೇವಾ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ತಪಾಸಣೆಯ ನಂತರ, ವಾಹನದ ಚಾಸಿಸ್‌ಗೆ ಹಾನಿಯಾಗಿದೆ ಬದಲಿ ಅಗತ್ಯವಿರುತ್ತದೆ ಎಂದು ಸೇವಾ ಕೇಂದ್ರವು ಬಹಿರಂಗಪಡಿಸಿದೆ. ಏರ್‌ಬ್ಯಾಗ್‌ಗಳು ಏಕೆ ತೆರದುಕೊಂಡಿಲ್ಲ ಎಂಬುದರ ಬಗ್ಗೆ ಸೇವಾಕೇಂದ್ರದ ಪ್ರತಿಕ್ರಿಯೆಗಾಗಿ ಮಾಲೀಕ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಕುತೂಹಲಕಾರಿಯಾಗಿ, ಸ್ಕಾರ್ಪಿಯೋ-ಎನ್ ಅನ್ನು ಹೊಸ ಚಾಸಿಸ್ ಆಧರಿಸಿ ಸುರಕ್ಷಿತ 5-ಸ್ಟಾರ್ ವಾಹನ ಎಂದು ರೇಟ್ ಮಾಡಲಾಗಿದೆ. ವಾಹನದ ನಿರ್ಮಾಣ ಗುಣಮಟ್ಟ ಉತ್ತಮವೇ ಸರಿ, ಆದ್ರೆ ಬೇಕಾದ ಸಮಯದಲ್ಲಿ ಏರ್‌ಬ್ಯಾಗ್‌ಗಳು ತೆರೆಯದಿದ್ದಾಗ ಪ್ರಯೋಜನವೇನು? ಆದರೂ ಸುರಕ್ಷತಾ ಕ್ರ್ಯಾಶ್ ಟೆಸ್ಟ್‌ಗಳು ಸಾಮಾನ್ಯವಾಗಿ ಕಾರಿನ ಚಾಸಿಸ್‌ನ ದುರ್ಬಲತೆಯನ್ನು ಬಹಿರಂಗಪಡಿಸುವುದಿಲ್ಲ.
ಈ ಅಪಘಾತದಲ್ಲಿ ಚಾಸಿಸ್ ಪ್ರಭಾವಿತವಾಗಿದೆ ಎಂಬ ಅಂಶವು ವಿವಿಧ ವಿಷಯಗಳನ್ನು ಸೂಚಿಸುತ್ತದೆ. ಅಲ್ಲದೆ ಮಹೀಂದ್ರಾ ಸ್ಕಾರ್ಪಿಯೊ-ಎನ್‌ನ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಗಮನಾರ್ಹ ದೋಷವನ್ನು ಬಹಿರಂಗಪಡಿಸುತ್ತದೆ. ಈ ಅಪಘಾತವು ನೇರ ಮುಂಭಾಗದ ಘರ್ಷಣೆಯಾಗಿರುವುದರಿಂದ, ಎದೆಯ ಮೇಲೆ ಸಣ್ಣಪುಟ್ಟ ಗಾಯಗಳಿಗೆ ಒಳಗಾಗುವ ಪ್ರಯಾಣಿಕರಿಗಾಗಿ ಕಾರಿನ ಏರ್‌ಬ್ಯಾಗ್‌ಗಳು ಸಕ್ರಿಯವಾಗಿರಬೇಕು ಎಂಬ ನಿಯಮವಿದೆ.
ಇನ್ನು ಅಪಘಾತಕ್ಕೆ ಒಳಗಾದ ಎರಡೂ ಕಾರುಗಳು ಪಂಚತಾರಾ ರೇಟಿಂಗ್‌ಗಳನ್ನು ಹೊಂದಿವೆ. ಆದಾಗ್ಯೂ, Virtus ಇತ್ತೀಚಿನ ಮತ್ತು ಹೆಚ್ಚು ಕಟ್ಟುನಿಟ್ಟಾದ ನಿಯಮಗಳಿಗೆ ಅನುಸಾರವಾಗಿ ಪರೀಕ್ಷೆಗೆ ಒಳಗಾಗಿದೆ. ಆದರೆ ಸ್ಕಾರ್ಪಿಯೋ-ಎನ್ ಮಾತ್ರ ಈ ಹೊಸ ನಿಯಮಗಳ ಅನುಷ್ಠಾನಕ್ಕೆ ಮುಂಚಿತವಾಗಿ ಪರೀಕ್ಷಿಸಲಾಗಿದೆ. ಹೊಸ ನಿಯಮಗಳಿಗೆ ಒಳಗಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಿದ್ರೆ ದೋಷಗಳು ಪತ್ತೆಯಾಗಬಹುದು. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications