2 ಕೋಟಿ ಬೆಲೆಯ ಲ್ಯಾಂಡ್ ರೋವರ್ ಅನ್ನು ರಕ್ಷಿಸಿದ ಮಹೀಂದ್ರಾ ಥಾರ್... ವಿಡಿಯೋ

ಅತ್ಯಂತ ಸಮರ್ಥ ಆಫ್ ರೋಡಿಂಗ್ ವಾಹನಗಳು ಕೂಡ ಕೆಲವೊಮ್ಮೆ ಅತಂತ್ರ ಪರಿಸ್ಥಿತಿಗೆ ಸಿಲುಕಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷ್ಯವಾಗಿದೆ. 5-ಡೋರ್ ಲ್ಯಾಂಡ್ ರೋವರ್ ಡಿಫೆಂಡರ್ ಬೀಚ್‌ವೊಂದರ ಮರಳಿನಲ್ಲಿ ಸಿಲುಕಿ ಹೊರಬರಲು ಪರದಾಡುತ್ತಿದ್ದ ವೇಳೆ ರಕ್ಷಣಾ ಕಾರ್ಯಾಚರಣೆಗಾಗಿ ಮಹೀಂದ್ರಾ ಥಾರ್ ಅನ್ನು ಕರೆಸಿ ರಕ್ಷಿಸಲಾಗಿದೆ.

ಲ್ಯಾಂಡ್‌ ರೋವರ್ ಡಿಫೆಂಡರ್‌ನ ಟೈರ್‌ಗಳು ಟ್ರಾಕ್ಷನ್ ಕಳೆದುಕೊಂಡಾಗ ಮಾಲೀಕ ಅಲ್ಲಿಂದ ಹೊರಬರಲು ನಾನಾ ಪ್ರಯತ್ನಗಳನ್ನು ಮಾಡಿದರು. ಕಾರಿಲ್ಲಿದ್ದವರು ಇಳಿದು ಡಿಫೆಂಡರ್ ಹೊರಬರುವಂತೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿತ್ತು. ಕಾರಣ ಡಿಫೆಂಡರ್‌ನ ಹಿಂದಿನ ವೀಲ್‌ಗಳು ಮರಳನ್ನು ಅಗೆಯುತ್ತಲೇ ಇದ್ದುದ್ದರಿಂದ ಕಾರು ಇನ್ನೂ ಆಳಕ್ಕೆ ಇಳಿಯುತ್ತಲೇ ಇತ್ತು.

mahindra-thar-rescued-land-rover-defender-that-gets-stuck-on-beach

SUV ಒಂದು ಆಂಗಲ್‌ದಲ್ಲಿದ್ದ ಕಾರಣ, ಹೆಚ್ಚಿನ ಭಾರ ಹಿಂದಿನ ವೀಲ್‌ಗಳ ಮೇಲೆ ಬಿದ್ದಿತ್ತು. ಅಲ್ಲದೆ, ಟೈರ್‌ಗಳು ಸ್ಟಾಕ್‌ನಂತೆ ತೋರುತ್ತಿದ್ದು ಇವು ಕಡಿಮೆ-ಟ್ರಾಕ್ಷನ್ ಇರುವ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ಕೊನೆಗೂ ಏನೂ ಮಾಡಲಾಗದೆ ಡಿಫೆಂಡರ್ ಅನ್ನು ಮತ್ತೊಂದು ವಾಹನದ ಸಹಕಾರದೊಂದಿಗೆ ಹೊರತರಲು ನಿರ್ಧರಿಸಿದರು.

ಹೊಸ ತಲೆಮಾರಿನ ಮಹೀಂದ್ರಾ ಥಾರ್ ಅನ್ನು ತಂದು ಡಿಫೆಂಡರ್‌ನ ಮುಂಭಾಗದಿಂದ ಎಳೆಯುವ ಬದಲು SUV ಅನ್ನು ಹಿಮ್ಮುಖವಾಗಿ ಎಳೆಯಲು ನಿರ್ಧರಿಸಿದರು. ಥಾರ್‌ನ ನಾಲ್ಕು ವೀಲ್‌ಗಳು ಆರಂಭದಲ್ಲಿ ತುಸು ಪರದಾಡಿದರೂ ಸ್ವಲ್ಪ ಟ್ರಾಕ್ಷನ್ ಸಿಕ್ಕ ಕೂಡಲೇ ಸಲೀಸಾಗಿ ಡಿಫೆಂಡರ್ ಅನ್ನು ಸಿಕ್ಕಿಹಾಕಿಕೊಂಡ ಸ್ಥಳದಿಂದ ಹೊರತೆಗೆಯಿತು.

ಆಫ್‌ರೋಡಿಂಗ್ ಸುಲಭವಲ್ಲ: ಆಫ್-ರೋಡ್ ಟ್ರೇಲ್‌ಗಳನ್ನು ನಿಭಾಯಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ವಿಷಯಗಳಿವೆ. ಬ್ಯಾಕಪ್ ವಾಹನವಿಲ್ಲದೆ ಕಠಿಣ ಆಫ್-ರೋಡಿಂಗ್ ಅನ್ನು ಎಂದಿಗೂ ಪ್ರಯತ್ನಿಸಬಾರದು. ಚಾಲಕನ ಅನುಭವ ಅಥವಾ ವಾಹನದ ಸಾಮರ್ಥ್ಯಗಳ ಹೊರತಾಗಿಯೂ, ಯಾವುದೇ ವಾಹನವಾಗಿರಲಿ ಸಿಲುಕಿಕೊಳ್ಳಬಹುದು. ಹಾಗಾಗಿ ಜೊತೆಗೆ ಇನ್ನೊಂದು ವಾಹನ ಇದ್ದರೇ ಪಾರಾಗಲು ಸಹಕರಿಸುತ್ತದೆ.

ಎಳೆಯುವ ಹಗ್ಗಗಳು, ಟೈರ್ ಇನ್ಫ್ಲೇಟರ್, ಹ್ಯಾಂಡ್ ಡಿಗ್ಗರ್ ಮತ್ತು ಮರಳು ಏಣಿಗಳಂತಹ ಆಫ್-ರೋಡ್ ರಿಕವರಿ ಉಪಕರಣಗಳನ್ನು ಒಯ್ಯುವುದು ಸಹ ಮುಖ್ಯ. ಯಾರೂ ಇಲ್ಲದ ಸ್ಥಳದಲ್ಲಿ ಸಿಲುಕಿಕೊಳ್ಳುವುದು ಅತ್ಯಂತ ಅಪಾಯಕಾರಿ. ನೀವು ಹಲವು ಗಂಟೆಗಳ ಕಾಲ ದೂರದ ಸ್ಥಳಗಳಲ್ಲಿ ಸಿಲುಕಿಕೊಂಡರೆ ಸಹಾಯಕ್ಕೆ ಬರುವವರಿಗೂ ತಡವಾಗುತ್ತದೆ. ಆದ್ದರಿಂದ ನೀರಿನ ಬಾಟಲಿಗಳು ಮತ್ತು ಒಣ ಆಹಾರವನ್ನು ಕೊಂಡೊಯ್ಯುವುದು ಯಾವಾಗಲೂ ಒಳ್ಳೆಯದು.

ಥಾರ್ ಸಮರ್ಥವಾಗಿದೆಯೇ? ಹೌದು ಸಮರ್ಥವಾಗಿದೆ, ಆದರೆ ಡಿಫೆಂಡರ್‌ಗಿಂತ ಹೆಚ್ಚು ಸಮರ್ಥವಾಗಿದೆ ಎಂದು ಅರ್ಥವಲ್ಲ. ಆಫ್-ರೋಡಿಂಗ್ ಎಂಬುದು ಅನಿರಿಕ್ಷಿತ ಅಡಚಣೆಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಇದು ವಾಹನ ಮತ್ತು ಚಾಲಕನ ಮೇಲೆ ಅವಲಂಬಿತವಾಗಿರುತ್ತದೆ. ತಿಳಿಯದ ಸ್ಥಳಗಳಲ್ಲಿ ಆಫ್-ರೋಡ್ ಮಾಡಿದ್ರೆ ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

ಹೊಸ ಥಾರ್‌ನ ಆಫ್-ರೋಡಿಂಗ್ ಸಾಮರ್ಥ್ಯಗಳಿಗೆ ಬರುವುದಾದರೆ, ಹೊಸ ಮಾದರಿಯು ಅದರ ಹಳೆಯ ಜೆನ್‌ಗಿಂತ ಹೆಚ್ಚು ಸಾಮರ್ಥ್ಯವನ್ನು ಹೊಂದಿದೆ. ಮಹೀಂದ್ರಾ ಥಾರ್‌ನಲ್ಲಿ, ಅಪ್ರೋಚ್ ಆಂಗಲ್ ಈಗ 42 ಡಿಗ್ರಿ, ಎಕ್ಸಿಟ್ ಆಂಗಲ್ 37 ಡಿಗ್ರಿ ಮತ್ತು ಬ್ರೇಕ್‌ಓವರ್ ಆಂಗಲ್ 27 ಡಿಗ್ರಿ ಇದೆ. ಇದು ರೂಪಾಂತರವನ್ನು ಅವಲಂಬಿಸಿ 226mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ.

ಲ್ಯಾಂಡ್ ರೋವರ್ ಡಿಫೆಂಡರ್: ಈ ದೈತ್ಯ ಎಸ್‌ಯುವಿ ಆಫ್‌ ರೋಡ್‌ ಸಾಹಸಗಳಿಗೆ ಹೇಳಿ ಮಾಡಿಸಿದ ಕಾರಾಗಿದೆ. ಭಾರತ ಮಾತ್ರಲ್ಲದೇ ವಿದೇಶಗಳಲ್ಲೂ ಈ ವಾಹನದೊಂದಿಗೆ ವಿಪರೀತ ಆಫ್-ರೋಡಿಂಗ್ ಮಾಡುತ್ತಾರೆ. ಆದ್ರೆ ಕೆಲ ಸಂದರ್ಭಗಳಲ್ಲಿ ಎಂಥಹ ವಾಹನವಾದ್ರೂ ಅತಂತ್ರ ಪರಿಸ್ಥಿತಿಗಳಿಗೆ ಸಿಲುಕುವುದು ಸಾಮಾನ್ಯ ಎಂಬುದನ್ನು ಮರೆಯಬಾರದು.

ಲ್ಯಾಂಡ್ ರೋವರ್ ಡಿಫೆಂಡರ್ ಪ್ರಭಾವಶಾಲಿ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿದ್ದು, ಇದು 291mm ಗ್ರೌಂಡ್ ಕ್ಲಿಯರೆನ್ಸ್, 38-ಡಿಗ್ರಿ ಅಪ್ರೋಚ್ ಆಂಗಲ್ ಮತ್ತು 40-ಡಿಗ್ರಿ ಎಕ್ಸಿಟ್ ಆಂಗಲ್ ಅನ್ನು ಹೊಂದಿದೆ. ಇದು 300 ಕೆ.ಜಿ ರೂಫ್ ಹೊರೆ ಸಾಮರ್ಥ್ಯ ಮತ್ತು 3,500 ಕೆ.ಜಿಯಷ್ಟು ಬೃಹತ್ ಟ್ರಾಕ್ಷನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಕ್ಯಾಬಿನ್‌ನಲ್ಲಿ ಪ್ರೀಮಿಯಂ ಅಂಶಗಳನ್ನು ಹೊಂದಿದೆ.

Article Published On: Monday, December 25, 2023, 11:30 [IST]
English summary
Mahindra thar rescued land rover defender that gets stuck on beach
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+