ನಡು ರಸ್ತೆಯಲ್ಲಿ ಹೊತ್ತಿ ಉರಿದ ಜನಪ್ರಿಯ 'XUV 700' ಕಾರು: ಮಹೀಂದ್ರಾ ಅಧಿಕೃತ ಹೇಳಿಕೆ.. ಕಾರಣ ಗೊತ್ತಾಯ್ತು!
ಭಾರತದಲ್ಲಿ ಖರೀದಿಗೆ ದೊರೆಯುವ ಮಹೀಂದ್ರಾದ ಕಾರುಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿವೆ. ಅದರಲ್ಲೂ ಕಂಪನಿಯ 'XUV 700' ಎಸ್‌ಯುವಿ ವಿಶ್ವಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದೆ. ಇತ್ತೀಚೆಗೆ ನಡುರಸ್ತೆಯಲ್ಲಿ ಹೊತ್ತಿ ಉರಿದಿದ್ದು, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ, ಘಟನೆ ಬಗ್ಗೆ ಕಂಪನಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ಅದಕ್ಕೂ ಮೊದಲು ಅವಘಡದ ಹಿನ್ನೆಲೆ ಬಗ್ಗೆ ತಿಳಿಯೋಣ. ಕುಲದೀಪ್ ಸಿಂಗ್ ಎಂಬುವವರು ತಮ್ಮ ಕುಟುಂಬದೊಂದಿಗೆ ಆರು ತಿಂಗಳ ಹಿಂದೆಯಷ್ಟೇ ಖರೀದಿಸಿದ್ದ XUV 700ನಲ್ಲಿ ರಾಜಸ್ಥಾನದ ಜೈಪುರದ ಹೆದ್ದಾರಿಯೊಂದರಲ್ಲಿ ಪ್ರಯಾಣಿಸುತ್ತಿದ್ದರು. ಇದಕ್ಕಿದ್ದಂತೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, XUV 700 ಹೇಗೆ ಅಗ್ನಿ ಅವಘಡಕ್ಕೆ ತುತ್ತಾಯಿತು ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತಿದೆ.

XUV 700 ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಸ್ವತಃ ಅದರ ಮಾಲೀಕ ಕುಲದೀಪ್ ಸಿಂಗ್, ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಆನಂದ್ ಮಹೀಂದ್ರಾ ಒಳಗೊಂಡಂತೆ ಮಹೀಂದ್ರಾ ಕಂಪನಿಯ ಎಲ್ಲ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ. 'ನಿಮ್ಮ ಪ್ರೀಮಿಯಂ XUV700ನಲ್ಲಿ ಜೈಪುರ ಹೆದ್ದಾರಿಯಲ್ಲಿ ಹೋಗಬೇಕಾದರೆ ಈ ಘಟನೆ ನಡೆದಿದೆ. ಕಾರು ಓವರ್ ಹಿಟ್ ಆಗಿರಲಿಲ್ಲ. ಮೊದಲು ಹೊಗೆ ಬಂತು, ನಂತರ ಬೆಂಕಿ ಹೊತ್ತಿಕೊಂಡಿತು' ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ಈ ಕಾರಿನಲ್ಲಿ ಯಾವುದೇ ರೀತಿಯ ಎಲೆಕ್ಟ್ರಿಕಲ್ ಮಾಡಿಫಿಕೇಷನ್ ಮಾಡಿಲ್ಲ ಎಂದು ಮಾಲೀಕರು ಹೇಳಿದ್ದಾರೆ. ಘಟನೆ ಸಂಬಂಧಿಸಿದ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹೀಂದ್ರಾ ಕಂಪನಿ ಎಚ್ಚೆತ್ತುಕೊಂಡಿದ್ದು, XUV 700 ಕಾರಿಗೆ ಇದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳಲು ಕಾರಣವೆಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲು ಶುರು ಮಾಡಿದೆ.

ಅಂತಿಮವಾಗಿ ಘಟನೆಗೆ ಸಂಬಂಧಿಸಿದ ಕಾರಣದ ಕುರಿತಂತೆ ಅಧಿಕೃತ ಹೇಳಿಕೆಯನ್ನು ಮಹೀಂದ್ರಾ ಕಂಪನಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. ಆಫ್ಟರ್ ಮಾರ್ಕೆಟ್ ಎಲೆಕ್ಟ್ರಿಕಲ್ ಆಕ್ಸೆಸರಿಗಳನ್ನು ಅಳವಡಿಸಲು ಎಲೆಕ್ಟ್ರಿಕಲ್ ವೈರಿಂಗ್ ಅನ್ನು ಟ್ಯಾಂಪರಿಂಗ್ ಮಾಡಿರುವುದು ಅಗ್ನಿ ಅವಘಡ ಸಂಭವಿಸಲು ಕಾರಣವೆಂಬುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. 'ನಮ್ಮ ವಾಹನ ಅತ್ಯಂತ ಸುರಕ್ಷಿತವಾಗಿದ್ದು, ಗ್ರಾಹಕರು ಅನಧಿಕೃತ ವ್ಯಕ್ತಿಗಳಿಂದ ವಾಹನವನ್ನು ಮಾಡಿಫೈ ಮಾಡುವುದನ್ನು ತಪ್ಪಿಸಿ' ಎಂದು ಸಲಹೆ ನೀಡಿದೆ.
ಮಹೀಂದ್ರಾ XUV 700 ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ NCAPಯಿಂದ ವಯಸ್ಕರ ರಕ್ಷಣೆ ವಿಭಾಗದಲ್ಲಿ 5 ಸ್ಟಾರ್, ಮಕ್ಕಳ ರಕ್ಷಣೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದ್ದು, ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬೇಕಿಂಗ್ ಸಿಸ್ಟ್ಟಮ್), TPMS ( ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360 ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.
ವಾಹನಗಳಲ್ಲಿ ಬೆಂಕಿ ಅವಘಡಗಳು ನಡೆದಾಗ ತೆಗೆದುಕೊಳ್ಳಬೇಕಾದ ಮುನ್ನೆಚರಿಕೆಗಳೇನು: ಮೊದಲಿಗೆ ಇಗ್ನಿಷನ್ ಆಫ್ ಮಾಡಬೇಕು. ತಕ್ಷಣ ಕಾರಿನಿಂದ ಇಳಿದು ದೂರ ಹೋಗಿ, ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ರೆ, ನಿಮ್ಮ ವಾಹನದಲ್ಲೇ ಇರುವ ಅಗ್ನಿ ನಿರೋಧಕ ಸಾಧನ(fire extinguisher)ದಲ್ಲಿ ಅದನ್ನು ನಂದಿಸಲು ಪ್ರಯತ್ನಿಸಿ, ಜೊತೆಗೆ ತಕ್ಷಣವೇ ಅಗ್ನಿಶಾಮಕ/ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಬಾನೆಟ್, ಬೂಟ್ ತೆರೆಯಬೇಡಿ. ಸಂಬಂಧಪಟ್ಟ ಸರ್ವಿಸ್ ಸೆಂಟರ್/ ವಿಮಾ ಕಂಪನಿಯನ್ನು ಸಂಪರ್ಕಿಸಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications