ಮಹೀಂದ್ರಾ ಎಕ್ಸ್‌ಯುವಿ700 ಪಲ್ಟಿ ಹೊಡೆದರೂ ಓಪನ್ ಆಗದ ಏರ್‌ಬ್ಯಾಗ್: ಕಾರಣ ನೋಡಿ
ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಭೀಕರ ರಸ್ತೆ ಅಪಘಾತದಲ್ಲಿ ಉತ್ತಮ ನಿರ್ಮಾಣ ಗುಣಮಟ್ಟದ ಕಾರುಗಳ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದ ಹಲವರು ಉದಾಹರಣೆಗಳಿವೆ. ರಸ್ತೆ ಅಪಘಾತದಲ್ಲಿ ಕಾರು ಪ್ರಯಾಣಿಕರ ಜೀವ ಉಳಿಸುವಲ್ಲಿ ಸೀಟ್ ಬೆಲ್ಟ್ ಪ್ರಮುಖ ಪಾತ್ರವಹಿಸುತ್ತದೆ.
ಹಲವು ಭೀಕರ ಅಪಘಾತದಲ್ಲಿ ಸೀಟ್ ಬೆಲ್ಟ್ ಧರಿಸಿದಾಗ ಏರ್‌ಬ್ಯಾಗ್‌ಗಳು (Airbags) ಓಪನ್ ಆಗಿ ಪ್ರಾಣಾಪಾಯದಿಂದ ಪಾರಾದ ಉದಾಹರಣೆಗಳಿವೆ. ಇತ್ತ್ತೀಚೆಗೆ ಬಹುಬೇಡಿಕೆಯ ಮಹೀಂದ್ರಾ ಎಕ್ಸ್‌ಯುವಿ700 ಅಪಘಾತದ ನಂತರ ತಮ್ಮ ಕಾರಿನಲ್ಲಿ ಏರ್‌ಬ್ಯಾಗ್‌ಗಳು ಓಪನ್ ಆಗಿಲ್ಲ ಎಂದು ಎಸ್‍ಯುವಿ ಮಾಲೀಕರು ದೂರಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ಅಪಘಾತದ ನಂತರ ಏರ್‌ಬ್ಯಾಗ್‌ಗಳು ಓಪನ್ ಆಗದ ಕಾರಣ ಅವರ ಕುಟುಂಬಕ್ಕೆ ಗಾಯಗಳಾಗಿವೆ ಎಂದು ಮಾಲೀಕರು ಹೇಳಿಕೊಂಡಿದ್ದಾರೆ.

ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿ ಮಾಲೀಕರು ಅಪಘಾತದ ನಂತರ ವಾಹನದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಗಮನಾರ್ಹವಾಗಿ ಎಸ್‍ಯುವಿಯ ಮುಂಭಾಗದಲ್ಲಿ ಹಾನಿಯಾಗಿದೆ. ಕುಟುಂಬದವರು ಸೀಟ್‌ಬೆಲ್ಟ್ ಧರಿಸಿದ್ದರೂ ಏರ್‌ಬ್ಯಾಗ್‌ಗಳು ಓಪನ್ ಆಗಿಲ್ಲ ಎಂದು ಕಾರು ಮಾಲೀಕರು ಹೇಳಿಕೊಂಡಿದ್ದಾರೆ. ವಾಹನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ದೊಡ್ಡ ಗಾಯಗಳಾಗಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದರೂ ಏರ್‌ಬ್ಯಾಗ್‌ಗಳು ಓಪನ್ ಆಗಿಲ್ಲ ಎಂದು ಮಾಲೀಕರು ಹೇಳಿದ್ದಾರೆ. ಪ್ರಸ್ತುತ, ವಾಹನವು ಮಹೀಂದ್ರಾ ಸರ್ವಿಸ್ ಸ್ಟೇಷನ್‌ನಲ್ಲಿದೆ ಮತ್ತು ಏರ್‌ಬ್ಯಾಗ್‌ಗಳ್ಯ್ ಓಪನ್ ಆಗದೆ ಇರಲು ಕಾರಣದ ಬಗ್ಗೆ ಮಾಲೀಕರು ಸರ್ವಿಸ್ ಸೆಂಟರ್ ಅವರ ಉತ್ತರಕ್ಕೆ ಕಾಯುತ್ತಿದ್ದಾರೆ. ಅದೇನೇ ಇದ್ದರೂ, ಏರ್‌ಬ್ಯಾಗ್‌ಗಳು ಓಪನ್ ಆಗಲು ಹಲವಾರು ಕಾರಣಗಳಿರಬಹುದು.

ಅಸಮರ್ಪಕ ಅಕ್ಸೆಲೆರೊಮೀಟರ್: ಅಕ್ಸೆಲೆರೊಮೀಟರ್‌ನಿಂದ ಮಾಹಿತಿಯ ಆಧಾರದ ಮೇಲೆ ಏರ್‌ಬ್ಯಾಗ್‌ಗಳು ಕಾರ್ಯನಿರ್ವಹಿಸುತ್ತವೆ. ವಾಹನದ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ (ECU) ವೇಗವರ್ಧನೆಯಲ್ಲಿ ಹಠಾತ್ ಬದಲಾವಣೆ ಪತ್ತೆಯಾದಾಗ ಒಂದು ಸಂಕೇತವನ್ನು ಕಳುಹಿಸುತ್ತದೆ, ಇದು ಅಪಘಾತವನ್ನು ಸೂಚಿಸುತ್ತದೆ. ಎಕ್ಸೆಲೇಟರ್ ಬದಲಾವಣೆಯ ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಮಾತ್ರ ಈ ಸಂಕೇತವನ್ನು ರಚಿಸಲಾಗುತ್ತದೆ. ಬದಲಾವಣೆಯು ಸಾಕಷ್ಟು ಗಣನೀಯವಾಗಿಲ್ಲದಿದ್ದರೆ, ಏರ್‌ಬ್ಯಾಗ್‌ಗಳು ಓಪನ್ ಆಗುವುದಿಲ್ಲ.
ಇದರಿಂದಾಗಿಯೇ ಕಡಿಮೆ ವೇಗದ ಅಪಘಾತಗಳಲ್ಲಿ ಏರ್‌ಬ್ಯಾಗ್‌ಗಳು ಸಕ್ರಿಯವಾಗುವುದಿಲ್ಲ. ಆರಂಭಿಕ ಕುಸಿತದ ನಂತರ ಕಾರಿಗೆ ದ್ವಿತೀಯ ಪರಿಣಾಮಗಳಿದ್ದಲ್ಲಿ, ಏರ್‌ಬ್ಯಾಗ್‌ಗಳು ಓಪನ್ ಆಗುವುದಿಲ್ಲ.ಕೆಲವು ಸಂದರ್ಭಗಳಲ್ಲಿ, ಚಿಕ್ಕದಾದ, ಕಡಿಮೆ-ಪ್ರಭಾವದ ಘರ್ಷಣೆಗಳು ಏರ್‌ಬ್ಯಾಗ್ ನಿಯೋಜನೆಯ ಅಗತ್ಯವಿರುವುದಿಲ್ಲ, ಏಕೆಂದರೆ ಪ್ರಯಾಣಿಕರನ್ನು ರಕ್ಷಿಸಲು ಸೀಟ್‌ಬೆಲ್ಟ್‌ಗಳು ಮಾತ್ರ ಸಾಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಏರ್‌ಬ್ಯಾಗ್‌ಗಳು ಓಪನ್ ಆಗುತ್ತದೆ.

ಸೀಟ್‌ಬೆಲ್ಟ್‌ಗಳನ್ನು ಧರಿಸದಿರುವುದು: ಕಾರು ಅಪಘಾತಗಳಲ್ಲಿ ಜೀವ ರಕ್ಷಿಸಿಕೊಳ್ಳಲು ಸೀಟ್ ಬೆಲ್ಟ್ ಅತ್ಯಗತ್ಯ. ಏರ್‌ಬ್ಯಾಗ್‌ಗಳು ಹಾಗೂ ಸೀಟ್ ಬೆಲ್ಟ್‌ಗಳು ಒಂದಕ್ಕೊಂದು ಸೆನ್ಸಾರ್‌ನೊಂದಿಗೆ ಬೆಸೆದುಕೊಂಡಿರುತ್ತವೆ. ಸೀಟ್ ಬೆಲ್ಟ್ ಧರಿಸಿದ್ದರೆ ಮಾತ್ರ ಏರ್‌ಬ್ಯಾಗ್ ತೆರೆದುಕೊಳ್ಳುತ್ತವೆ.XUV700 ಕರ್ಟೈನ್ ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಸೀಟ್‌ಬೆಲ್ಟ್‌ಗಳನ್ನು ಧರಿಸದಿದ್ದರೆ, ಏರ್‌ಬ್ಯಾಗ್‌ಗಳು ಓಪನ್ ಆಗುವುದಿಲ್ಲ.
ಆಫ್ಟರ್‌ಮಾರ್ಕೆಟ್ ಅಕ್ಸೆಸರೀಸ್: ಬುಲ್‌ಬಾರ್‌ಗಳಂತಹ ಆಫ್ಟರ್‌ಮಾರ್ಕೆಟ್ ಅಕ್ಸೆಸರೀಸ್ ಅನ್ನು ಅಳವಡಿಸುವುದು ಭಾರತದಲ್ಲಿ ಕಾನೂನುಬಾಹಿರವಾಗಿದೆ. ಬುಲ್‌ಬಾರ್‌ಗಳು ಏರ್‌ಬ್ಯಾಗ್ ಸೆನ್ಸಾರ್‌ನೊಂದಿಗೆ ಹಸ್ತಕ್ಷೇಪ ಮಾಡಬಹುದು, ಘರ್ಷಣೆಯನ್ನು ಪತ್ತೆಹಚ್ಚದಂತೆ ತಡೆಯುತ್ತದೆ. ಅಂತೆಯೇ, ಸೈಡ್ ಏರ್‌ಬ್ಯಾಗ್‌ಗಳನ್ನು ಹೊಂದಿದ ವಾಹನಗಳ ಮೇಲಿನ ಸೀಟ್ ಕವರ್‌ಗಳು ಅದೇ ಪರಿಣಾಮವನ್ನು ಬೀರಬಹುದು. ಈ ಅಕ್ಸೆಸರೀಸ್ ಪ್ರಯಾಣಿಕರ ಸುರಕ್ಷತೆ ಮೇಲೆ ಪರಿಣಾಮ ಬೀರುತ್ತದೆ.
ಅಸಮರ್ಪಕ ಏರ್‌ಬ್ಯಾಗ್: ಏರ್‌ಬ್ಯಾಗ್‌ಗಳು ಎಲೆಕ್ಟ್ರಾನಿಕ್ ಸಾಧನಗಳಾಗಿರುವುದರಿಂದ ವೈಫಲ್ಯಗಳನ್ನು ಅನುಭವಿಸಬಹುದು. ಅತ್ಯಾಧುನಿಕ ವಾಹನಗಳಲ್ಲಿ ಏರ್‌ಬ್ಯಾಗ್ ವಿಫಲವಾದ ಪ್ರಕರಣಗಳು ಈ ಹಿಂದೆ ವರದಿಯಾಗಿವೆ. ಅದು ಅದೇ ಮಾದರಿಯ ಎಲ್ಲಾ ಕಾರುಗಳಲ್ಲಿ ಇರುವುದಿಲ್ಲ. ಪ್ರತ್ಯೇಕವಾದ ಆ ಒಂದು ಮಾದರಿಯಲ್ಲಿ ಕಂಡು ಬಂದ ಕೆಲವು ತಾಂತ್ರಿಕ ತೊಂದರೆಯಿಂದ ಕೂಡ ಹಾಗೇ ಆಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications