ದರ್ಶನ್‌ನಿಂದ ಸುದ್ದಿಯಾಗಿದ್ದ ಜೀಪ್ ರಾಂಗ್ಲರ್: ಈ ಎಸ್‍ಯುವಿ ಖರೀದಿಸಿದ ಮತ್ತೊಬ್ಬ ಜನಪ್ರಿಯ ನಟ

ಐಕಾನಿಕ್ ಅಮೇರಿಕನ್ ಎಸ್‍ಯುವಿ ತಯಾರಕರಾದ ಜೀಪ್ (Jeep) ಆಫ್-ರೋಡ್ ಎಸ್‍ಯುವಿಗಳ ನಿರ್ಮಾಣದಲ್ಲಿ ಭಾರೀ ಖ್ಯಾತಿ ಗಳಿಸಿದೆ. ಜೀಪ್ ಕಂಪನಿಯು ಭಾರತದಲ್ಲಿ ಜನಪ್ರಿಯ ರಾಂಗ್ಲರ್ ಎಸ್‍ಯುವಿಯನ್ನು ಮಾರಾಟ ಮಾಡುತ್ತಿದೆ. ಈ ಜನಪ್ರಿಯ ಮಾಡೆಲ್ ರಾಜ್ಯದಲ್ಲೂ ಹೆಚ್ಚು ಸದ್ದು ಮಾಡಿತು. ನಟ ದರ್ಶನ್ ಕೆಂಪು ಬಣ್ಣದ ಜೀಪ್ ರಾಂಗ್ಲರ್ ಎಸ್‍ಯುವಿ ಹೊಂದಿದ್ದಾರೆ. ಈ ರಾಂಗ್ಲರ್ ಎಸ್‍ಯುವಿಯನ್ನು ಕೊಲೆ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗದಲ್ಲಿ ನಟ ಬಾಬುರಾಜ್ (Baburaj) ಅವರು ಐಕಾನಿಕ್ ಜೀಪ್ ರಾಂಗ್ಲರ್ (Jeep Wrangler) ಎಸ್‍ಯುವಿಯನ್ನು ಖರೀದಿಸಿದ್ದಾರೆ.

ನಟ ಬಾಬುರಾಜ್ ಹಲವು ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಹೆಚ್ಚು ಮಿಂಚಿದ್ದಾರೆ. ಸಲ್ಮಾನ್ ಖಾನ್ ರೀತಿ ಬಾಡಿ ಬಿಲ್ಡಿಂಗ್ ಮಾಡಿ ಸ್ಕ್ರೀನ್ ನಲ್ಲಿ ಖಡಕ್ ಡೈಲಾಗ್ ಮೂಲಕ ಸಿನಿ ರಸಿಕರ ಮನಗೆದಿದ್ದಾರೆ. ಇನ್ನು ವಿಲನ್ ಆಗಿ ಮಾತ್ರವಲ್ಲದೇ ಹಾಸ್ಯ ಪಾತ್ರದಲ್ಲೂ ಸೈ ಎನಿಸಿಕೊಂಡಿದ್ದಾರೆ. ನಟ ಬಾಬುರಾಜ್ ಅವರು ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದಾರೆ. ಅವರ ಬಳಿ ಹಲವಾರು ದುಬಾರಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ.

Jeep Wrangler

ಇದೀಗ ನಟ ಬಾಬುರಾಜ್ ಅವರು ದುಬಾರಿ ಜೀಪ್ ರಾಂಗ್ಲರ್ ಎಸ್‍ಯುವಿಯ ರೂಬಿಕಾನ್ ಆವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಟ ಬಾಬುರಾಜ್ ಕೊಚ್ಚಿಯ ಜೀಪ್ ಡೀಲರ್‌ಶಿಪ್‌ನಿಂದ ತೆಗೆದುಕೊಂಡಿದ್ದಾರೆ. ಈ ಚಿತ್ರಗಳನ್ನು ಡೀಲರ್‌ಶಿಪ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಟ ಬಾಬುರಾಜ್ ಅವರು ಬ್ರೈಟ್ ವೈಟ್ ಕಲರ್ ಆಯ್ಕೆಯ ರಾಂಗ್ಲರ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಈ ಜೀಪ್ ರಾಂಗ್ಲರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಅನ್ಲಿಮಿಟೆಡ್ ಮತ್ತು ರೂಬಿಕಾನ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ರಾಂಗ್ಲರ್ ಅನ್ಲಿಮಿಟೆಡ್ ರೂಪಾಂತರದ ಬೆಲೆಯು ರೂ.67.65 ಲಕ್ಷದಿಂದ ಪ್ರಾರಂಭವಾದರೆ, ರಾಂಗ್ಲರ್ ರೂಬಿಕಾನ್ ರೂಪಾಂತರದ ಬೆಲೆಯು ರೂ.71.65 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ನಟ ಬಾಬುರಾಜ್ ಖರೀದಿಸಿದ ಮಾದರಿ ರೂಬಿಕಾನ್ ಆಗಿದೆ.

Jeep Wrangler

ಈ ಜನಪ್ರಿಯ ಜೀಪ್ ರಾಂಗ್ಲರ್ ಎಸ್‍ಯುವಿಯಲ್ಲಿ ಗೊರಿಲ್ಲಾ ಗ್ಲಾಸ್ ವಿಂಡ್‌ಶೀಲ್ಡ್, 12-ವೇ ಹೊಂದಾಣಿಕೆ ಸೀಟುಗಳು, ಟಾಮ್‌ಟಾಮ್ ನ್ಯಾವಿಗೇಷನ್, ಸಾಫ್ಟ್-ಟಚ್ ಪ್ಲಾಸ್ಟಿಕ್‌ಗಳು, ದಪ್ಪವಾದ ಕಾರ್ಪೆಟ್‌ಗಳು, ಅಕೌಸ್ಟಿಕ್ ಫ್ರಂಟ್ ಗ್ಲಾಸ್, ಆಕ್ಟಿವ್ ಸೌಂಡ್ ಡೇಟನಿಂಗ್ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇನ್ನು ಇದು ಉತ್ತಮ ರಸ್ತೆ ಉಪಸ್ಥಿತಿಯನ್ನು ಹೊಂದಿರುವ ಎಸ್‍ಯುವಿಯಾಗಿದೆ.

ಇನ್ನು ಈ ಜನಪ್ರಿಯ ಜೀಪ್ ಆಫ್-ರೋಡ್ ಎಸ್‍ಯುವಿಯಲ್ಲಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಯು ಕನೆಕ್ಟ್ 5 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಲೆವೆಲ್-2 ಎಡಿಎಎಸ್ ಸೇರಿದಂತೆ 85 ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುತ್ತದೆ. ಇನ್ನು ಈ ರಾಂಗ್ಲರ್ ಎಸ್‍ಯುವಿಯಲ್ಲಿ 2.0 ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 270 bhp ಮತ್ತು 400 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Jeep Wrangler

ಈ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ, ಆಫ್-ರೋಡ್ ಸಾಮರ್ಥ್ಯಗಳನ್ನು ಯಾಂತ್ರಿಕವಾಗಿ ಲಾಕ್ ಮಾಡುವ ಮುಂಭಾಗ ಮತ್ತು ಹಿಂಭಾಗದ ವ್ಯತ್ಯಾಸಗಳು, ಪೂರ್ಣ ಫ್ಲೋಟ್ 44 HD ಡಾನಾ ಹಿಂಭಾಗದ ಘನ ಆಕ್ಸಲ್, 4:1 ಕಡಿಮೆ ಅನುಪಾತದೊಂದಿಗೆ ರಾಕ್-ಟ್ರ್ಯಾಕ್ ವರ್ಗಾವಣೆ ಕೇಸ್ ಮತ್ತು BFGoodrich M/T ಟೈರ್‌ಗಳನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 7, 2024, 19:11 [IST]
English summary
Malayalam actor baburaj buys jeep wrangler
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+