ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ಜೋಜು ಜಾರ್ಜ್ ಅವರು ಐಷಾರಾಮಿ ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಇತರ ಸಿನಿ ಸೆಲಬ್ರಿಟಿಗಳಂತೆ ಇವರು ಕೂಡ ಐಷಾರಾಮಿ ಕಾರು ಮತ್ತು ಬೈಕ್ ಕ್ರೇಜ್ ಅನ್ನು ಹೆಚ್ಚು ಹೊಂದಿದ್ದಾರೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಜನಪ್ರಿಯ ನಟ ಜೋಜು ಜಾರ್ಜ್ ಅವರ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ವಾಹನಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಇದೀಗ ಇವರ ಐಷಾರಾಮಿ ವಾಹನಗಳ ಗ್ಯಾರೇಜ್‌ಗೆ ಐಕಾನಿಕ್ ಲ್ಯಾಂಡ್ ರೋವರ್ ಡಿಫೆಂಡರ್ ಹೊಸ ಸೇರ್ಪಡೆಯಾಗಿದೆ. ನಟ ಜೋಜು ಜಾರ್ಜ್ ಮಲಯಾಳಂ ಮಾತ್ರವಲ್ಲದೇ ತಮಿಳು ಚಿತ್ರಗಳಲ್ಲಿಯು ಕೂಡ ನಟಿಸಿದ್ದಾರೆ, ಜೋಜು ಜಾರ್ಜ್ ನಟನೆಯ 'ಪೀಸ್' ಮಲಯಾಳಂ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಜನಪ್ರಿಯ ನಟ ಜೋಜು ಜಾರ್ಜ್ ಅವರು ಖರೀದಿಸಿದ ಜನಪ್ರಿಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಬಗ್ಗೆ ಹೇಳುವುದಾದರೆ, ಇದು ಹೊಸ ಡಿ7ಎಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಮೊನೊಕೊಕ್ ಚಾಸಿಸ್ ಅನ್ನು ಹೊಂದಿದೆ. ಹೊಸ ಡಿಫೆಂಡರ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಆಗಿ ಭಾರತಕ್ಕೆ ತರಲಾಗಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಡಿಫೆಂಡರ್ ಎಸ್‍ಯುವಿಯು ಬೇಸ್, ಎಸ್, ಎಸ್ಇ, ಹೆಚ್ಎಸ್ಇ ಮತ್ತು ಫಸ್ಟ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. 3-ಡೋರಿನ ಮಾದರಿಯನ್ನು ಡಿಫೆಂಡರ್ 90 ಆದರೆ 5-ಡೋರಿನ ಮಾದರಿಯು ಡಿಫೆಂಡರ್ 110 ಎಂದು ಕರೆಯಲಾಗುತ್ತದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಈ ಐಕಾನಿಕ್ ಲ್ಯಾಂಡ್ ರೋವರ್ ಡಿಫೆಂಡರ್ 5,018 ಎಂಎಂ ಉದ್ದ, 2,105 ಎಂಎಂ ಅಗಲ ಮತ್ತು 1,967 ಎಂಎಂ ಎತ್ತರವನ್ನು ಹೊಂದಿದೆ. ಈ ಎಸ್‍ಯುವಿಯು 3,022 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ. ಡಿಸಿ 100 ಡಿಫೆಂಡರ್ ಕಾನ್ಸೆಪ್ಟ್ ನಿಂದ ಹೆಚ್ಚು ಪ್ರೇರಿತವಾಗಿದೆ ಮೂಲ ಆವೃತ್ತಿಯಿಂದ ಸಿಲೂಯೆಟ್ ಅನ್ನು ಉಳಿಸಿಕೊಂಡಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಈ ಡಿಫೆಂಡರ್ ಎಸ್‍ಯುವಿಯಲ್ಲಿ 2.0-ಲೀಟರ್, ನಾಲ್ಕು ಸಿಲಿಂಡರ್, ಬಿಎಸ್ 6 ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 92 ಬಿಹೆಚ್‌ಪಿ ಮತ್ತು 400 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತದೆ. ಹೊಸ ಡಿಫೆಂಡರ್ ಲ್ಯಾಂಡ್ ರೋವರ್‌ನ ಟೆರೈನ್ ರೆಸ್ಪಾನ್ಸ್ 2 ಸಿಸ್ಟಂ ಅನ್ನು ಸಹ ಪಡೆಯುತ್ತದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಇದರೊಂದಿಗೆ 3.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 296 ಬಿಹೆಚ್‌ಪಿ ಮತ್ತು 650 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 3.0-ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ನೀಡಲಾಗಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಈ ಎಸ್‌ಯುವಿಯ ಮುಂಭಾಗದಲ್ಲಿ ಡಿಆರ್‌ಎಲ್‌ ಹೊಂದಿರುವ ಎಲ್‌ಇಡಿ ಹೆಡ್‌ಲೈಟ್ ಯುನಿಟ್ ಅಳವಡಿಸಲಾಗಿದೆ. ಟಾಪ್ ಎಂಡ್ ಮಾದರಿಯಲ್ಲಿ ಎಲ್ಇಡಿ ಮ್ಯಾಟ್ರಿಕ್ಸ್ ಹೆಡ್ ಲೈಟ್ ಯುನಿಟ್ ನೀಡಲಾಗುತ್ತದೆ. ಬಂಪರ್ ಕೆಳಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ. ಡಿಫೆಂಡರ್ ಎಸ್‌ಯುವಿಯಲ್ಲಿ ದೊಡ್ಡ ಬಂಪರ್ ಹೊಂದಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಡಿಫೆಂಡರ್ ಎಸ್‌ಯುವಿಯ ಹೊರಭಾಗದಲ್ಲಿ ಒಟ್ಟು ಆರು ಕ್ಯಾಮೆರಾ ಹಾಗೂ ಸುತ್ತಲೂ ಸೆನ್ಸಾರ್'ಗಳಿವೆ. ಈ ಕ್ಯಾಮರಾ 360 ಡಿಗ್ರಿ ನೋಟವನ್ನು ಹೊಂದಿದೆ. ಬೂಟ್‌ನಲ್ಲಿ ಹೆಚ್ಚುವರಿ ಲಗೇಜ್ ಇದ್ದರೆ ಮಿರರ್ ಮೂಲಕ ಹಿಂದೆ ನೋಡಲು ಸಾಧ್ಯವಾಗದಿದ್ದರೆ ಈ ಫೀಚರ್ ನೆರವಿಗೆ ಬರುತ್ತದೆ. ಈ ಎಸ್‌ಯುವಿಯು ಸುಮಾರು 218 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಡಿಫೆಂಡರ್ ಎಸ್‌ಯುವಿಯು ಏರ್ ಸಸ್ಪೆಂಷನ್ ಹೊಂದಿರುವುದರಿಂದ ಆಫ್-ರೋಡ್ ಮೋಡ್‌ನಲ್ಲಿ ಎತ್ತರವನ್ನು 291 ಎಂಎಂಗಳವರೆಗೆ ಹೆಚ್ಚಿಸಬಹುದು. ಈ ಎಸ್‌ಯುವಿಯ ಹಿಂಭಾಗದಲ್ಲಿ ಟೇಲ್‌ಲೈಟ್‌ಗಳಿಗಾಗಿ ಹೊಸ ವಿನ್ಯಾಸವನ್ನು ನೀಡಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಈ ಎಸ್‌ಯುವಿಯ ಕ್ಯಾಬಿನ್ ವಿಶಾಲವಾಗಿದೆ. ಈ ಎಸ್‌ಯುವಿಯಲ್ಲಿರುವ ದೊಡ್ಡ ಪನೋರಾಮಿಕ್ ಸನ್‌ರೂಫ್ ಹಾಗೂ ಸೈಡ್ ಆಲ್ಪೈನ್ ಲೈಟ್ ವಿಂಡೋಗಳು ಹೊಂದಿದೆ. ಡಿಫೆಂಡರ್ ಎಸ್‌ಯುವಿಯಲ್ಲಿ ಒಟ್ಟು 14 ಯುಎಸ್‌ಬಿ ಹಾಗೂ ಚಾರ್ಜಿಂಗ್ ಸಾಕೆಟ್‌ಗಳನ್ನು ನೀಡಲಾಗಿದೆ. ಇದರಲ್ಲಿ ಬೂಟ್‌ನಲ್ಲಿರುವ 230 ವೋಲ್ಟ್ ಚಾರ್ಜರ್ ಸಹ ಸೇರಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಈ ಎಸ್‌ಯುವಿಯಲ್ಲಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಹೊಂದಿರುವ 10 ಇಂಚಿನ ಇನ್ಫೋಟೇನ್ಮೆಂಟ್ ಸಿಸ್ಟಂ ನೀಡಲಾಗಿದೆ. ಇನ್ನು ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 3 ಡಿ ಮೆರಿಡಿಯನ್ ಸರೌಂಡ್ ಸೌಂಡ್ ಸಿಸ್ಟಂ, ಆ ಸ್ಟ್ರೀಮ್ ಕ್ರಾಸಿಂಗ್‌ಗಳಿಗಾಗಿ ವೇಡ್ ಸೆನ್ಸಿಂಗ್, ಡ್ರೈವರ್ ಕಂಡಿಷನ್ ಮಾನಿಟರಿಂಗ್, ಏರ್‌ಬ್ಯಾಗ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಹಲವಾರು ಫೀಚರ್ಸ್ ಗಳನ್ನು ನೀಡಲಾಗಿದೆ.

ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ಖ್ಯಾತ ಮಲಯಾಳಂ ನಟ

ಲ್ಯಾಂಡ್ ರೋವರ್ ಕಂಪನಿಯು ತನ್ನ ಐಕಾನಿಕ್ ಡಿಫೆಂಡರ್ ಎಸ್‍ಯುವಿ ಆಪ್-ರೋಡ್ ಗಾಗಿ ಅಕ್ಸೆಸರೀಸ್ ಗಳನ್ನು ಕೂಡ ಪರಿಚಯಿಸಲಾಗಿದೆ. ಡಿಫೆಂಡರ್ ಎಸ್‍ಯುವಿಗಾಗಿ ಎಕ್ಸ್‌ಪೆಡಿಶನ್ ಪ್ಯಾಕ್, ಕಂಟ್ರಿ ಪ್ಯಾಕ್, ಅರ್ಬನ್ ಪ್ಯಾಕ್ ಮತ್ತು ಅಡ್ವೆಂಚರ್ ಪ್ಯಾಕ್ ಎಂಬ ನಾಲ್ಕು ಅಕ್ಸೆಸರೀಸ್ ಪ್ಯಾಕೇಜ್‌ಗಳನ್ನು ಹೊಂದಿವೆ.

Article Published On: Wednesday, August 4, 2021, 19:31 [IST]
English summary
Malayalam actor joju george gifts himself new land rover defender suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+