ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಸಿನಿಮಾ ನಟರು ಮಾತ್ರವಲ್ಲದೇ ನಟಿಯರು ಕೂಡ ಕಾರುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಆವರು ತಮ್ಮ ಮೆಚ್ಚಿನ ಐಷಾರಾಮಿ ಬ್ರ್ಯಾಂಡ್‌ನ ಕಾರುಗಳನ್ನು ಖರೀದಿಸುತ್ತಾರೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಇತ್ತೀಚೆಗೆ ಮಲಯಾಳಂ ಚಿತ್ರರಂಗದ ನಟಿ ನವ್ಯಾ ನಾಯರ್ ಹೊಸ ಮಿನಿ ಕಂಟ್ರಿಮ್ಯಾನ್ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ನಟಿ ತಮ್ಮ ಮಗ ಮತ್ತು ಅವರ ಸಂಬಂಧಿಕರೊಂದಿಗೆ ಹೊಸ ಕಾರಿನ ವಿತರಣೆಯನ್ನು ಪಡೆದುಕೊಳ್ಳುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಚಿತ್ರದ ಕೆಳಗೆ ನಟಿಯ ಅಭಿಮಾನಿಗಳು ಮತ್ತು ಹಲವು ಸಿನಿಮಾ ಸೆಲಬ್ರಿಟಿಗಳು ಅಭಿನಂದನೆಗಳನ್ನು ತಿಳಿಸಿ ಕಾಮೆಂಟ್ ಮಾಡಿದ್ದಾರೆ, ಒಂದು ಕಾಲದಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ನವ್ಯಾ ನಾಯರ್. ಇವರು ಮಲಯಾಳಂ ಅಲ್ಲದೇ ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

2001ರಿಂದ 2014ರವರೆಗೆ ಸಾಕಷ್ಟು ಮಲಯಾಳಂ, ಕನ್ನಡ, ತಮಿಳು ಭಾಷೆಯ ಸಿನಿಮಾಗಳಲ್ಲಿ ನವ್ಯಾ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಕೆಲ ಚಿತ್ರದಲ್ಲಿ ಬಣ್ಣ ಹಚ್ಚಿರುವ ನವ್ಯಾ ವಿಷ್ಣುವರ್ಧನ್ ಜೊತೆಗೆ 'ನಮ್ಮ ಯಜಮಾನ್ರು', ರವಿಚಂದ್ರನ್ ಜೊತೆಗೆ 'ದೃಶ್ಯ', ದರ್ಶನ್ ಜೊತೆಗೆ 'ಗಜ', ವಿಜಯ್ ರಾಘವೇಂದ್ರ ಜೊತೆಗೆ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ನಟಿಸಿದ್ದರು.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ನಟಿ ನವ್ಯಾ ನಾಯರ್‌ 2010ರಲ್ಲೇ ಮುಂಬೈ ಮೂಲದ ಉದ್ಯಮಿ ಸಂತೋಷ್ ಮೆನನ್ ಜೊತೆ ಮದುವೆಯಾಗಿದ್ದಾರೆ. ಇವರಿಗೆ ಸಾಯಿಕೃಷ್ಣ ಎಂಬ ಮಗನಿದ್ದಾನೆ. ಸಿನಿಮಾದಿಂದ ದೂರವುಳಿದ ಮೇಲೆ ಅನೇಕ ಡಾನ್ಸ್ ರಿಯಾಲಿಟಿ ಶೋಗಳ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಇನ್ನು ನಟಿ ನಟಿ ನವ್ಯಾ ನಾಯರ್ ಅವರು ಖರೀದಿಸಿದ ಮಿನಿ ಕಂಟ್ರಿಮ್ಯಾನ್ ಐಷಾರಾಮಿ ಕಾರಿನ ಬಗ್ಗೆ ಹೇಳುವುದಾದರೆ, ಈ ಕಾರು KL 07 CX 3223 ಎಂಬ ನಂಬರ್ ಅನ್ನು ಹೊಂದಿದೆ, ಮಲಯಾಳಂ ಚಿತ್ರರಂಗದ ಇತರ ನಟ, ನಟಿಯರು ಕೂಡ ಮಿನಿ ಕಾರನ್ನು ಹೊಂದಿದ್ದಾರೆ. ಇತ್ತೀಚೆಗೆ ಮಲಯಾಳಂ ನಟ ಪೃಥ್ವಿರಾಜ್ ಹೊಸ ಮಿನಿ ಕೂಪರ್ ಜೆಸಿಡಬ್ಲ್ಯೂ ಕಾರನ್ನು ಖರೀದಿಸಿದ್ದಾರೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ನಟಿ ನವ್ಯಾ ನಾಯರ್ ಅವರು ಖರೀದಿಸಿದ ಮಿನಿ ಕಂಟ್ರಿಮ್ಯಾನ್ ಎಸ್‌ಎವಿ (ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್) ಎಂದು ಕರೆಯಲಾಗುತ್ತದೆ. ಈ ಮಿಮಿನಿ ಕಂಟ್ರಿಮ್ಯಾನ್ ನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮತ್ತು ಕಂಟ್ರಿಮ್ಯಾನ್ ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಎಂಬ ಎರಡೂ ವೆರಿಯೆಂಟ್ ಗಳಲ್ಲಿ ಲಭ್ಯವಿದೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

2021ರ ಮಿನಿ ಕಂಟ್ರಿಮ್ಯಾನ್ ಒಂದೇ ರೀತಿಯ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಸಾಗಿಸುವುದರ ಜೊತೆಗೆ ಹಲವಾರು ರಿಫ್ರೆಶ್ ಸ್ಟೈಲಿಂಗ್ ನವೀಕರಣಗಳನ್ನು ಕೂಡ ಪಡೆದುಕೊಂಡಿದೆ. ಈ 2021ರ ಕಂಟ್ರಿಮ್ಯಾನ್‌ನಲ್ಲಿನ ಹೊಸ ಸ್ಟೈಲಿಂಗ್ ವೈಶಿಷ್ಟ್ಯಗಳು ಯೂನಿಯನ್ ಜ್ಯಾಕ್ ವಿನ್ಯಾಸದೊಂದಿಗೆ ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು, ಹೊಸ ರೇಡಿಯೇಟರ್ ಗ್ರಿಲ್ ಮತ್ತು ವ್ಯತಿರಿಕ್ತ ರೂಫ್ ಅನ್ನು ಒಳಗೊಂಡಿವೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಕೂಪರ್ ಎಸ್ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಟ್ ನಲ್ಲಿ 18 ಇಂಚಿನ ಅಲಾಯ್ ವ್ಹೀಲ್ ಗಳು ರನ್-ಫ್ಲಾಟ್ ಟೈರ್ ಮತ್ತು ಹೆಚ್ಚುವರಿ ಏರೋಡೈನಾಮಿಕ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಈ ಮಿನಿ ಕಂಟ್ರಿಮ್ಯಾನ್ ಕೂಪರ್ ಎಸ್ ಮಾದರಿಯಲ್ಲಿ ಒಳಭಾಗದಲ್ಲಿ ಕಾರ್ಬನ್ ಬ್ಲ್ಯಾಕ್ ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಬರುತ್ತದೆ, ಆದರೆ ಸರಣಿಯಲ್ಲಿ ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ಟ್ರಿಮ್ ಸಿಲ್ವರ್ ಟ್ರಿಮ್ ಜೊತೆಗೆ ಪ್ರೀಮಿಯಂ ಲೆದರ್ ಯ್ಕೆಯನ್ನು ಒಳಗೊಂಡಿದೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಕಂಟ್ರಿಮ್ಯಾನ್ ಕಾರಿನಲ್ಲಿ ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರ್ಮನ್ ಕಾರ್ಡನ್ ಆಡಿಯೊ ಸಿಸ್ಟಂ, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ ಪ್ಲೇ, ಆಂಬಿಯೆಂಟ್ ಲೈಟಿಂಗ್ ಮತ್ತು ಇನ್ನೂ ಹಲವು ಫೀಚರ್ ಗಳನ್ನು ಒಳಗೊಂಡಿವೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಮಿನಿ ಕಂಟ್ರಿಮ್ಯಾನ್ ಎರಡೂ ವೆರಿಯೆಂಟ್ ಗಳಲ್ಲಿ ಒಂದೇ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 189 ಬಿಹೆಚ್‍ಪಿ ಪವರ್ ಮತ್ತು 280 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಜೆಸಿಡಬ್ಲ್ಯೂ ಇನ್ಸ್ಪೈರ್ಡ್ ವೆರಿಯೆಂಘ್ ಪ್ಯಾಡಲ್ ಶಿಫ್ಟರ್ ಅನ್ನು ಹೊಂದಿರುತ್ತದೆ.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಹೊಸ ಮಿನಿ ಕಂಟ್ರಿಮ್ಯಾನ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಮಿನಿ ಕಂಟ್ರಿಮ್ಯಾನ್ ಹಲವಾರು ಫೀಚರ್ ಗಳು ಮತ್ತು ಹಲವಾರು ತಂತ್ರಜ್ಙಾನಗಳನ್ನು ಒಳಗೊಂಡಿದೆ. ಇದು ತನ್ನ ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗಿದೆ. ಇನ್ನು ಮಿನಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲು ಸಜ್ಜಾಗಿದೆ. ಮಿನಿ ಇಂಡಿಯಾ ಕಂಪನಿಯು ಹೊಸ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಇತ್ತೀಚೆಗೆ ಪ್ರಾರಂಭಿಸಿತ್ತು. ಈ ಎಲೆಕ್ರ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಟೋಕನ್ ಮೊತ್ತ ರೂ.1 ಲಕ್ಷ ನಿಗದಿಪಡಿಸಲಾಗಿತ್ತು.

ಐಷಾರಾಮಿ Mini Countryman ಕಾರನ್ನು ಖರೀದಿಸಿದ ನಟಿ ನವ್ಯಾ ನಾಯರ್

ಮೊದಲ ಬ್ಯಾಚ್‌ನಲ್ಲಿ ನಿಗದಿಪಡಿಸಿದ ಎಲ್ಲಾ ಮಾದರಿಗಳನ್ನು ಮಾರಾಟ ಮಾಡಲಾಗಿದೆ ಎಂದು ವಾಹನ ತಯಾರಕರು ದೃಢಪಡಿಸಿದ್ದಾರೆ. ಮಿನಿ ಇಂಡಿಯಾ ತನ್ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಎಲ್ಲಾ 30 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಈ ಮಿನಿ ಕೂಪರ್ ಎಸ್‌ಇ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಸಂಪೂರ್ಣ ಲೋಡ್ ಮಾಡಲಾದ ರೂಪಾಂತರದಲ್ಲಿ ಸಿಬಿಯು ಆಗಿ ಭಾರತಕ್ಕೆ ಬರಲಿದೆ. ಮಿನಿ ಕೂಪರ್ ಎಸ್‌ಇ ಬಿಎಂಡಬ್ಲ್ಯು ಗ್ರೂಪ್‌ನಿಂದ ಭಾರತದಲ್ಲಿ ಮಾರಾಟವಾಗುವ ಮೊದಲ ಆಲ್-ಎಲೆಕ್ಟ್ರಿಕ್ ಮಾದರಿಯಾಗಿದೆ.

Most Read Articles

Kannada
English summary
Malayalam actress navya nair bought new mini countryman details
Story first published: Monday, November 22, 2021, 16:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X